Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
External Affairs Minister Sushma Swaraj addresses a press conference over the death of 39 Indians who were killed in Iraq in New Delhi on Tuesday.

ಇಸೀಸ್ ನಿಂದ ಭಾರತೀಯರ ಹತ್ಯೆ ವಿಷಯದ ಘೋಷಣೆ: ಸರ್ಕಾರದ ನಡೆಗೆ ಸಚಿವೆ ಸುಷ್ಮಾ ಸ್ವರಾಜ್ ಸಮರ್ಥನೆ

Supreme Court

ಎಸ್ಸಿ/ ಎಸ್ಟಿ ಕಾಯ್ದೆಯಡಿ ಸರ್ಕಾರಿ ನೌಕರರ ತತ್‌ಕ್ಷಣದ ಬಂಧನ ಸಲ್ಲದು: ಸುಪ್ರೀಂ ಕೋರ್ಟ್

Rahul gandhi

ಕಾಂಗ್ರೆಸ್ ಸರ್ಕಾರ 8 ಸಾವಿರ ಕೋಟಿ ರೂ. ಮೊತ್ತದ ರೈತರ ಸಾಲ ಮನ್ನಾ ಮಾಡಿದೆ: ರಾಹುಲ್ ಗಾಂಧಿ

Casual photo

ಕರ್ನಾಟಕ ವಿಧಾನಸಭೆ ಚುನಾವಣೆ: ಆಮ್ ಆದ್ಮಿ ಪಕ್ಷದ 18 ಅಭ್ಯರ್ಥಿಗಳ ಘೋಷಣೆ

plants

ರಾಜಸ್ತಾನದ ಈ ಹಳ್ಳಿಯಲ್ಲಿ ಹೆಣ್ಣು ಮಗು ಜನಿಸಿದರೆ 111 ಸಸಿಗಳನ್ನು ನೆಡುತ್ತಾರೆ ಯಾಕೆ ಗೊತ್ತಾ?

You misled hostages

7 ಬಾರಿ ಒತ್ತೆಯಾಳುಗಳ ಕುಟುಂಬದವರನ್ನು ದಾರಿ ತಪ್ಪಿಸಿದ್ದೀರ: ಸುಷ್ಮಾ ಸ್ವರಾಜ್ ವಿರುದ್ಧ ಕಾಂಗ್ರೆಸ್ ಕಿಡಿ

ಲಂಕಾ ಅಭಿಮಾನಿಯಿಂದ ನಾಗಿನ್ ಡ್ಯಾನ್ಸ್

ಬಾಂಗ್ಲಾ ವಿರುದ್ಧ ಕೊನೆ ಎಸೆತದಲ್ಲಿ ದಿನೇಶ್ ಸಿಕ್ಸರ್; ಲಂಕಾ ಅಭಿಮಾನಿ ನಾಗಿನ್ ಡ್ಯಾನ್ಸ್! ವಿಡಿಯೋ ವೈರಲ್

ಉತ್ತರಪತ್ರಿಕೆಯಲ್ಲಿ ಗರಿ ಗರಿ ನೋಟುಗಳು

ಯುಪಿ ಬೋರ್ಡ್ ಪರೀಕ್ಷೆ: ಉತ್ತರ ಪತ್ರಿಕೆಯಲ್ಲಿ 50, 100ರ ನೋಟುಗಳು ಕಂಡು ದಂಗಾದ ಮೌಲ್ಯಮಾಪಕರು!

Shashikala natarajan

ಪತಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಶಶಿಕಲಾಗೆ 15 ದಿನಗಳ ಜಾಮೀನು ಮಂಜೂರು

Shantaram Naik

ರಾಹುಲ್ ಕರೆಗೆ ಓಗೊಟ್ಟು ಗೋವಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಶಾಂತಾರಾಮ್ ನಾಯ್ಕ್!

Dinesh Karthik-Amitabh Bachchan

ಅಮಿತಾಬ್ ಬಚ್ಚನ್ ನಿಡಾಹಸ್ ಸರಣಿ ಗೆಲುವಿನ ಹೀರೋ ದಿನೇಶ್ ಕಾರ್ತಿಕ್ ಕ್ಷಮೆ ಕೇಳಲು ಕಾರಣ!

ಭಾರತೀಯ ವಾಯುಪಡೆ ವಿಮಾನ

ಜಾರ್ಖಂಡ್: ಭಾರತೀಯ ವಾಯುಸೇನೆಯ ವಿಮಾನ ಪತನ; ಪೈಲಟ್ ಸುರಕ್ಷಿತ

Karnataka CM Siddaramaiah’s masterstroke or a big gamble?

ಲಿಂಗಾಯತ ಪ್ರತ್ಯೇಕ ಧರ್ಮ: ಸಿಎಂ ಸಿದ್ದರಾಮಯ್ಯನವರ ರಾಜಕೀಯ ತಂತ್ರ ಫಲಿಸಲಿದೆಯೇ?

ಮುಖಪುಟ >> ಕೃಷಿ-ಪರಿಸರ

ಭಾರತದ 29 ನಗರಗಳು ದುರ್ಬಲ, ಭೂಕಂಪನ ತಡೆದುಕೊಳ್ಳುವ ಸಾಮರ್ಥ್ಯವಿಲ್ಲ!

ದೆಹಲಿ, ಪಾಟ್ನಾ, ಶ್ರೀನಗರ, ಪುದುಚೇರಿ ದುರ್ಬಲ ನಗರಗಳು, ಕರ್ನಾಟಕ ಎಷ್ಟು ಸುರಕ್ಷಿತ?
29 Indian Cities And Towns Highly Vulnerable To Earthquakes: NSC

ಸಂಗ್ರಹ ಚಿತ್ರ

ನವದೆಹಲಿ: ರಾಜಧಾನಿ ದೆಹಲಿ ಸೇರಿದಂತೆ ಭಾರತದ 29 ಪ್ರಮುಖ ನಗರಗಳಿಗೆ ಭೂಕಂಪನವನ್ನು ತಡೆದುಕೊಳ್ಳುವ ಸಾಮರ್ಥ್ಯವೇ ಇಲ್ಲ ಎಂದು ರಾಷ್ಟ್ರೀಯ ಭೂಕಂಪನ ಮಾಪನ ಕೇಂದ್ರ ಮಾಹಿತಿ ನೀಡಿದೆ.

ರಾಜಧಾನಿ ದೆಹಲಿ ಸೇರಿದಂತೆ ಭಾರತದ 9 ರಾಜಧಾನಿ ನಗರಗಳಿಗೆ ಭೂಕಂಪನವನ್ನು ತಡೆದುಕೊಳ್ಳುವ ಸಾಮರ್ಥ್ಯವಿಲ್ಲ ಎಂದು ರಾಷ್ಟ್ರೀಯ ಭೂಕಂಪನ ಮಾಪನ ಕೇಂದ್ರ ಮಾಹಿತಿ ನೀಡಿದ್ದು, ಈ 29 ನಗರಗಳಲ್ಲಿ ಕೆಲವು ಅಲ್ಪ  ಪ್ರಮಾಣದಲ್ಲಿ ದುರ್ಬಲವಾಗಿದ್ದರೆ, ಮತ್ತೆ ಕೆಲವು ಮಧ್ಯಮ ದುರ್ಬಲ, ಇನ್ನೂ ಕೆಲವು ನಗರಗಳು ತೀರಾ ದುರ್ಬಲವಾಗಿವೆ ಎಂದು ತಿಳಿದುಬಂದಿದೆ.

ಪ್ರಮುಖ ವಿಚಾರವೆಂದರೆ ಭೂಕಂಪನ ತಡೆಯಲಾಗದ ಮತ್ತು ತೀರಾ ದುರ್ಬಲವಾಗಿರುವ ನಗರಗಳು ಬಹುತೇಕ ಹಿಮಾಲಯ ತಪ್ಪಲಿನಲ್ಲಿದ್ದು, ಹಿಮಾಲಯ ಪರ್ವತ ಶ್ರೇಣಿ ವಿಶ್ವದಲ್ಲೇ ಅತೀ ಹೆಚ್ಚು ಭೂಕಂಪನ ಸಂಭವಿಸುವ  ಪ್ರದೇಶಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಭೂಕಂಪನ ಮಾಪನ ಕೇಂದ್ರ ಭೂಕಂಪನ ಪೀಡಿತ ಪ್ರದೇಶಗಳನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಿದ್ದು, ಈ ಪೈಕಿ ರಾಜಧಾನಿ ದೆಹಲಿ, ಬಿಹಾರದ ಪಾಚ್ನಾ, ಜಮ್ಮು ಮತ್ತು ಕಾಶ್ಮೀರದ  ಶ್ರೀನಗರ, ನಾಗಾಲ್ಯಾಂಡ್ ನ ಕೊಹಿಮಾ, ಪುದುಚೇರಿ, ಅಸ್ಸಾಂನ ಗುವಾಹತಿ, ಸಿಕ್ಕಿಂನ ಗ್ಯಾಂಗ್ಟಕ್, ಹಿಮಾಚಲ ಪ್ರದೇಶದ ಶಿಮ್ಲಾ, ಉತ್ತರಾಖಂಡ್ ನ ಡೆಹ್ರಾಡೂನ್, ಮಣಿಪುರದ ಇಂಫಾಲ ಮತ್ತು ಚಂಡೀಘಡ ಜಿಲ್ಲೆಗಳು ಝೋನ್ 4  ಮತ್ತು ಝೋನ್ 5 ಅಡಿಯಲ್ಲಿ ಬರುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ.

ದೇಶದ ವಿವಿಧ ಪ್ರದೇಶಗಳಲ್ಲಿ ಸಂಭವಲಿಸಿರುವ ಭೂಕಂಪನಗಳ ಆಧಾರದ ಮೇರೆಗೆ ರಾಷ್ಟ್ರೀಯ ಭೂಕಂಪನ ಮಾಪನ ಕೇಂದ್ರ ಝೋನ್ 2 ಯಿಂದ ಝೋನ್ 5 ವರೆಗೆ ಐದು ವಿಭಾಗಗಳಾಗಿ ವಿಂಗಡಿಸಿದ್ದು, ಝೋನ್-2 ಮತ್ತು  ಝೋನ್ 3 ಪ್ರದೇಶಗಳು ಅಲ್ಪ ಪ್ರಮಾಣದ ದುರ್ಬಲ ಪ್ರದೇಶಗಳ ಅಡಿಯಲ್ಲಿ ಬರುತ್ತವೆ. ಝೋನ್ 4 ಮತ್ತು ಝೋನ್ 5 ಪ್ರದೇಶಗಳ ತೀರಾ ದುರ್ಬಲ ಪ್ರದೇಶಗಳೆಂದು ಗುರುತಿಸಲಾಗಿದೆ. ಈ ಪೈಕಿ ಸಂಪೂರ್ಣ ಈಶಾನ್ಯ ಭಾರತ,  ಜಮ್ಮು ಮತ್ತು ಕಾಶ್ಮೀರದ ಕೆಲ ಭಾಗಗಳು, ಹಿಮಾಚಲ ಪ್ರದೇಶ, ಉತ್ತರಾಖಂಡ, ಗುಜರಾತ್ ನ ರಣ್ ಮರುಭೂಮಿ, ಉತ್ತರ ಬಿಹಾರದ ಕೆಲ ಭಾಗಗಳು, ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶಗಳು ಝೋನ್ 5 ಅಂದರೆ ತೀರಾ  ದುರ್ಬಲ ಪ್ರದೇಶಗಳ ಅಡಿಯಲ್ಲಿ ಬರುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇನ್ನು ದಕ್ಷಿಣ ಜಮ್ಮು ಮತ್ತು ಕಾಶ್ಮೀರ, ದೆಹಲಿ, ಸಿಕ್ಕಿಂ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಹಾರಾಷ್ಟ್ರದ ಕೆಲ ಭಾಗಗಳು ಝೋನ್ 4 ಅಡಿಯಲ್ಲಿ ಬರಲಿದ್ದು, ಇವು ಮಧ್ಯಮ ದುರ್ಬಲ ಪ್ರದೇಶಗಳಾಗಿವೆ ಎಂದು  ತಿಳಿದುಬಂದಿದೆ. 2011ರಲ್ಲಿ ಭುಜ್ ನಲ್ಲಿ ಸಂಭವಿಸಿದ ಭೀಕರ ಭೂಕಂಪನದಲ್ಲಿ ಸುಮಾರು 20000 ಮಂದಿ ಸಾವನ್ನಪ್ಪಿದ್ದರು. ಹೀಗಾಗಿ ಭುಜ್ ಹಾಗೂ ಚಂಡೀಗಢ, ಅಂಬಾಲಾ, ಅಮೃತಸರ್, ಲೂಧಿಯಾನಾ ಮತ್ತು ರೂರ್ಕಿ  ಪ್ರದೇಶಗಳನ್ನು ಝೋನ್-4 ಮತ್ತು ಝೋನ್ 5 ಆಗಿ ಗುರುತಿಸಲಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಮಾಪನ ಕೇಂದ್ರದ ನಿರ್ದೇಶಕ ವಿನೀತ್ ಗಾಹ್ಲಾತ್ ಹೇಳಿದ್ದಾರೆ.

ಕರ್ನಾಟಕ ಎಷ್ಟು ಸುರಕ್ಷಿತ?

ಇನ್ನು ವರದಿಯಲ್ಲಿ ದಕ್ಷಿಣ ಭಾರತದ ನಗರಗಳ ಕುರಿತು ವರದಿಯಾಗಿಲ್ಲ. ಹೀಗಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ನಗರಗಳು ಭೂಕಂಪನ ಸುರಕ್ಷಿತ ಪ್ರದೇಶಗಳು ಅಥವಾ ಅಲ್ಪ ಭೂಕಂಪನ ಪೀಡಿತ ಪ್ರದೇಶಗಳು ಎಂದು ಹೇಳಲಾಗುತ್ತಿದೆ.

ಮಾರ್ಚ್ ವೇಳೆಗೆ 31 ಹೊಸ ಭೂಕಂಪನ ಮಾಪನ ಕೇಂದ್ರಗಳ ಸ್ಥಾಪನೆ: ಕೇಂದ್ರ ಸರ್ಕಾರ

ಇದೇ ವೇಳೆ ಮುಂದಿನ ವರ್ಷ ಮಾರ್ಚ್ ತಿಂಗಳ ವೇಳೆಗೆ ದೇಶದ 31 ಕಡೆಗಳಲ್ಲಿ 31 ಹೊಸ ಭೂಕಂಪನ ಮಾಪನ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ ಎಂ ರಾಜೀವನ್ ಹೇಳಿದ್ದಾರೆ.  ದೇಶದಲ್ಲಿ ಪ್ರಸ್ತುತ 84 ಭೂಕಂಪನ ಮಾಪನ ಕೇಂದ್ರಗಳಿದ್ದು, ಈ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Posted by: SVN | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : New Delhi, Earthquake, National Centre for Seismology, Environment, ನವದೆಹಲಿ, ಭೂಕಂಪನ, ರಾಷ್ಟ್ರೀಯ ಭೂಕಂಪನ ಮಾಪನ ಕೇಂದ್ರ, ಪರಿಸರ
English summary
29 Indian cities and towns, including Delhi and capitals of nine states, fall under "severe" to "very severe" seismic zones - highly vulnerable to earthquakes

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement