Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
TTV Dhinakaran

ಚುನಾವಣಾ ಆಯೋಗಕ್ಕೆ ಲಂಚ ಆರೋಪ: ದೆಹಲಿ ಪೊಲೀಸರಿಂದ ಟಿಟಿವಿ ದಿನಕರನ್ ಬಂಧನ

Counting for Delhi Municipal Corporation polls 2017 begins

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಮತ ಎಣಿಕೆ ಆರಂಭ

Yoga guru Baba Ramdev

ನಾನು ಆರೋಗ್ಯವಾಗಿದ್ದೇನೆ ವದಂತಿಗಳನ್ನು ನಂಬಬೇಡಿ: ಯೋಗ ಗುರು ಬಾಬಾ ರಾಮ್'ದೇವ್

U T Khader

ಹೋಟೆಲ್ ಗಳಲ್ಲಿ ಸೇವಾಶುಲ್ಕ ವಿಧಿಸಿದರೆ ಕಾನೂನು ಕ್ರಮ: ಯು.ಟಿ ಖಾದರ್ ಎಚ್ಚರಿಕೆ

Actor ramya

ದೇಶದಲ್ಲಿ ಗೋವುಗಳಿಗೆ ರಕ್ಷಣೆಯಿದೆ, ಯೋಧರಿಗಿಲ್ಲ: ಕೇಂದ್ರದ ವಿರುದ್ಧ ನಟಿ ರಮ್ಯಾ ಕಿಡಿ

Royal Challengers Bangalore

ಮಳೆಯಿಂದಾಗಿ ಬೆಂಗಳೂರು ಪಂದ್ಯ ರದ್ದು: ಆರ್ಸಿಬಿ ಪ್ಲೇ-ಆಫ್ ಕನಸು ಕ್ಷೀಣ!

Anil Kumble

ಜಹೀರ್ ಖಾನ್ ನಿಶ್ಚಿತಾರ್ಥ: ಟ್ವಿಟ್ಟರ್ ನಲ್ಲಿ ಶುಭಾಶಯ ಹೇಳುವಾಗ ಅನಿಲ್ ಕುಂಬ್ಳೆ ಯಡವಟ್ಟು

Yogi Adityanath

ಉತ್ತರ ಪ್ರದೇಶ: ಶಾಲೆಗಳ 15 ರಜೆ ರದ್ದು ಪಡಿಸಿದ ಯೋಗಿ ಆದಿತ್ಯನಾಥ್ ಸರ್ಕಾರ

Representational image

ಕರ್ನಾಟಕ: 5 ಹೊಸ ಮಾರ್ಗಗಳಲ್ಲಿ ಸ್ಥಳೀಯ ವಿಮಾನ ಸೇವೆಗಳು ಆರಂಭ

Congress vice-president Rahul Gandhi

ಸುಕ್ಮಾ ದಾಳಿ: ಕೇಂದ್ರದ ನಕ್ಸಲ್ ವಿರೋಧಿ ತಂತ್ರ ವಿರುದ್ಧ ರಾಹುಲ್ ಗಾಂಧಿ ಕಿಡಿ

Representational image

ಡಬಲ್ ಟ್ರ್ಯಾಕ್ ನಂತರ ಬೆಂಗಳೂರು-ಮೈಸೂರು ಮಾರ್ಗಕ್ಕೆ ಹೆಚ್ಚುವರಿ ರೈಲುಗಳಿಲ್ಲ: ರೈಲ್ವೆ ಇಲಾಖೆ

Former finance minister Yashwant Sinha

'ಕಾಶ್ಮೀರ ಸಮಸ್ಯೆ'ಗೆ ಪ್ರಧಾನಿ ಮೋದಿ ತಮ್ಮದೇ ಆದ ಕಾರ್ಯತಂತ್ರವನ್ನು ಹೊಂದಿದ್ದಾರೆ: ಸಿನ್ಹಾಗೆ ಬಿಜೆಪಿ ಭರವಸೆ

Siddaramaiah  at a meeting in Vidhana Soudha

ಸುಳ್ಳು ಜಾತಿ ಪ್ರಮಾಣ ಪತ್ರ: ಅಧಿಕಾರಿಗಳ ವಿರುದ್ಧ ಸಿಎಂ ಕೆಂಡಾಮಂಡಲ

ಮುಖಪುಟ >> ಕೃಷಿ-ಪರಿಸರ

ನೇಪಾಳ ಭೂಕಂಪನದಿಂದಾಗಿ ವಿಶ್ವದ ಅತೀ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ ಎತ್ತರ ಕುಸಿತ?

ಎವರೆಸ್ಟ್ ಎತ್ತರದ ಲೆಕ್ಕಾಚಾರಕ್ಕೆ ಸಿದ್ಧವಾದ ವಿಜ್ಞಾನಿಗಳ ತಂಡ, ಊಹಾಪೋಹಗಳಿಗೆ ಶೀಘ್ರದಲ್ಲೇ ತೆರೆ!
Doubt over Everest

ಮೌಂಟ್ ಎವರೆಸ್ಟ್ (ಸಂಗ್ರಹ ಚಿತ್ರ)

ನವದೆಹಲಿ: 2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ ವಿಶ್ವದ ಅತೀ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಎತ್ತರ ಕುಸಿದಿರುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುವಂತೆಯೇ ಇತ್ತ ವಿಜ್ಞಾನಿಗಳ  ತಂಡವೊಂದು ಮೌಂಟ್ ಎವರೆಸ್ಟ್ ನ ನಿಖರ ಎತ್ತರವನ್ನು ಅಳತೆ ಮಾಡುವುದಾಗಿ ಹೇಳಿದೆ.

ಮೂಲಗಳ ಪ್ರಕಾರ 2015ರಲ್ಲಿ ಸಂಬಂಸಿದ ಬರೊಬ್ಬರಿ 7.8 ತೀವ್ರತೆಯ ಪ್ರಬಲ ಭೂಕಂಪನದಿಂದಾಗಿ ಮೌಂಟ್ ಎವರೆಸ್ಟ್ ನ ಎತ್ತರ ಕುಸಿತವಾಗಿರುವ ಕುರಿತು ಶಂಕೆ ಮೂಡುತ್ತಿದ್ದು, ಇದೇ ಕಾರಣಕ್ಕೆ ಭಾರತದ ವಿಜ್ಞಾನಿಗಳ  ತಂಡವೊಂದು ಈ ವಿಶ್ವದ ಅತೀ ಎತ್ತರದ ಶಿಖರದ ಎತ್ತರವನ್ನು ಅಳೆತೆ ಮಾಡುವುದಾಗಿ ಹೇಳಿಕೊಂಡಿದೆ. ನೇಪಾಳ ಭೂಕಂಪನದಿಂದಾಗಿ ಹಿಮಾಲಯ ತಪ್ಪಲಿನ ಶಿಖರಗಳ ಮೇಲೂ ಪರಿಣಾಮವಾಗಿರುವ ಸಾಧ್ಯತೆಗಳಿದ್ದು,  ಪ್ರಮುಖವಾಗಿ ಮೌಂಟ್ ಎವರೆಸ್ಟ್ ನ ಎತ್ತರೆ ಕೆಲ ಇಂಚಿಗಳ ವರೆಗೆ ಕುಸಿತವಾಗಿರುವ ಸಾಧ್ಯತೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಭೂಕಂಪನದ ಬಳಿಕದ ಕೆಲ ಸ್ಯಾಟಲೈಟ್ ಚಿತ್ರಗಳಲ್ಲಿಯೂ ಕೂಡ ಮೌಂಟ್ ಎವರೆಸ್ಟ್ ನ ಎತ್ತರ ಕುಸಿತವಾಗಿರುವ ಕುರಿತು ಶಂಕೆ ಮೂಡಿತ್ತು. ಪ್ರಸ್ತುತ ಮೌಂಟ್ ಎವರೆಸ್ಟ್ ನ ಎತ್ತರ ಸಮುದ್ರ ಮಟ್ಟದಿಂದ 8,848 ಮೀಟರ್  (29,029 ಅಡಿಗಳು) ಗಳಾಗಿದ್ದು, ಭೂಕಂಪನದಿಂದಾಗಿ ಈ ಎತ್ತರದಲ್ಲಿ ಕೆಲ ಇಂಚುಗಳು ಕಡಿತವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಕೆಲ ನುರಿತ ವಿಜ್ಞಾನಿಗಳ ತಂಡ ಮೌಂಟ್ ಎವರೆಸ್ಟ್ ನ ಎತ್ತರವನ್ನು  ಲೆಕ್ಕಾಚಾರ ಮಾಡಲು ತೊಡಗಿದ್ದಾರೆ ಎಂದು ಭಾರತದ ಖ್ಯಾತ ಸಮೀಕ್ಷಕರಾದ ಸ್ವರ್ಣ ಸುಬ್ಬಾರಾವ್ ಅವರು ತಿಳಿಸಿದ್ದಾರೆ.

"ನೇಪಾಳ ಭೂಕಂಪನ ಸಂಭವಿಸಿ 2 ವರ್ಷಗಳು ಗತಿಸಿದ್ದು, ಈಗ ಮೌಂಟ್ ಎವರೆಸ್ಟ್ ಎತ್ತರವನ್ನು ನಾವು ಅಳೆಯಲಿದ್ದೇವೆ. ಈ ಪ್ರಕ್ರಿಯೆಗೆ ಸುಮಾರು 1.5 ತಿಂಗಳು ಕಾಲಾವಕಾಶ ಬೇಕಿದ್ದು, 30 ದಿನಗಳ ಕಾಲ ಶಿಖರದ ಅವಲೋಕನ  ಹಾಗೂ ಇನ್ನೊಂದು 15 ದಿನಗಳ ದತ್ತಾಂಶ ಸಂಗ್ರಹಿಸಲಾಗುತ್ತದೆ ಎಂದು ಹೇಳಿದ್ದಾರೆ. ಈ ಕಾರ್ಯಕ್ಕಾಗಿ ಐದು ಮಂದಿ ನುರಿತ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಚಳಿಗಾಲದ ಅಂತ್ಯದ ವೇಳೆಯಲ್ಲಿ ಈ ತಂಡ ಶಿಖರಕ್ಕೆ  ಪಯಣ ಬೆಳೆಸಲಿದ್ದು, ಅತ್ಯಾಧುನಿಕ ಉಪಕರಣಗಳ ಮೂಲಕ ಶಿಖರವನ್ನು ಅಳೆಯಲಿದ್ದಾರೆ ಎಂದು ರಾವ್ ತಿಳಿಸಿದರು.

2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪನದಲ್ಲಿ ಸಾವಿರಾರು ಮಂದಿ ಮೃತಪಟ್ಟು, ಸಾವಿರಾರು ಕೋಟಿ ಮೌಲ್ಯದ ಆಸ್ತಿಪಾಸ್ತಿಗೆ ನಷ್ಚವಾಗಿತ್ತು, ನೇಪಾಳದ ಸುಮಾರು 80 ವರ್ಷ ಇತಿಹಾಸದಲ್ಲಿ ಇಷ್ಟು ಭಾರಿ ಪ್ರಮಾಣದ  ಭೂಕಂಪನ ಸಂಭವಿಸಿರಲಿಲ್ಲ. ಹೀಗಾಗಿ ಭೂಕಂಪನ ಮೌಂಟ್ ಎವರೆಸ್ಟ್ ಶಿಖರದ ಎತ್ತರದ ಮೇಲಿ ಪರಿಣಾಮ ಬೀರಿರಬಹುದು ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ, ಅಂತೆಯೇ ನೇಪಾಳ ರಾಜಧಾನ ಕಂಠ್ಮಂಡು ಕೂಡ ದಕ್ಷಿಣದತ್ತ  ಸರಿದಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Posted by: SVN | Source: AFP

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : New Delhi, Mount Everest, Nepal Earthquake, scientists, ನವದೆಹಲಿ, ಮೌಂಟ್ ಎವರೆಸ್ಟ್, ನೇಪಾಳ ಭೂಕಂಪನ, ವಿಜ್ಞಾನಿಗಳು
English summary
Scientists will take the tape measure to Mount Everest to determine whether a massive earthquake in Nepal really did knock an inch off the world's tallest peak. India's top surveyor said Tuesday a team of scientists would be sent to neighbouring Nepal to measure Everest in the hope of putting to rest a debate about the true height of the towering mountain.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement