Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Delhi High Court

ಮರಣದಂಡನೆ ಶಿಕ್ಷೆ ಅತ್ಯಾಚಾರ ತಡೆಯುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರ ಇದೆಯೇ?: ಕೇಂದ್ರಕ್ಕೆ ಹೈಕೋರ್ಟ್ ಪ್ರಶ್ನೆ

Rs 15 lakh promised by PM Modi does not come under definition of information under RTI Act: PMO

ಪ್ರಧಾನಿ ಮೋದಿಯ 15 ಲಕ್ಷ ರು.ಭರವಸೆ ಆರ್ ಟಿಐ ಅಡಿ ಬರುವುದಿಲ್ಲ: ಪಿಎಂಒ

CJI

ಸಿಜೆಐ ಮಹಾಭಿಯೋಗ: ವೆಂಕಯ್ಯ ನಾಯ್ಡು ಆದೇಶ ಪ್ರಶ್ನಿಸಿ 'ಸುಪ್ರೀಂ' ಕೋರಲು ಕಾಂಗ್ರೆಸ್ ತೀರ್ಮಾನ

Country may burn but Modi is only interested in becoming PM again: Rahul Gandhi at Congress

ದ್ವೇಷದ ದಳ್ಳುರಿಯಲ್ಲಿ ದೇಶ ಬೆಂದರೂ, ಮತ್ತೊಮ್ಮೆ ಪ್ರಧಾನಿಯಾಗುವುದರತ್ತ ಮೋದಿ ಚಿತ್ತ: ರಾಹುಲ್ ಗಾಂಧಿ

IPL 2018: Kings XI Punjab prevail as Delhi Daredevils continue to lose

ಐಪಿಎಲ್: ಡೆಲ್ಲಿ ವಿರುದ್ಧ ಪಂಜಾಬ್ ಗೆಲುವು

Situation created by Modi government worse than emergency: Sinha

ಮೋದಿ ಸರ್ಕಾರ ತುರ್ತು ಪರಿಸ್ಥಿತಿಗಿಂತ ಕೆಟ್ಟ ಸ್ಥಿತಿ ಸೃಷ್ಟಿಸಿದೆ: ಯಶವಂತ್ ಸಿನ್ಹಾ

MS Dhoni

ಕೊನೆಯ ಓವರ್‌ನಲ್ಲಿ ಸಿಕ್ಸರ್ ಬಾರಿಸುವಂತೆ ಧೋನಿ ಸಲಹೆ ನೀಡಿದ್ದು ಯಾವ ಎದುರಾಳಿ ಆಟಗಾರನಿಗೆ ಗೊತ್ತಾ!

Noida: Gangster Balraj Bhati gunned down in STF encounter; wanted in 19 cases across four states

ನೊಯ್ಡಾ: ಗ್ಯಾಂಗ್ ಸ್ಟರ್ ಬಾಲರಾಜ್‌ ಭಾಟಿ ಎಸ್ ಟಿಎಫ್ ಎನ್ ಕೌಂಟರ್ ಗೆ ಬಲಿ

Britain Prince William, Kate Middleton blessed with a baby boy

ಮೂರನೇ ಮಗುವಿಗೆ ಜನ್ಮ ನೀಡಿದ ಕೇಟ್ ಮಿಡ್ಲ್​ಟನ್

KL Rahul

ಗುರು, ಹೋಗಿ ಹೇಳು 'ಈ ಸಲ ಕಪ್ ನಮ್ದೆ' ಎಂದ ಕೆಎಲ್ ರಾಹುಲ್; ಫೇಸ್ಬುಕ್ ವಿಡಿಯೋ ವೈರಲ್

Karunakara Reddy

ಬಳ್ಳಾರಿಯಲ್ಲಿ ಪುನಃ ಅಧಿಕಾರ ಸ್ಥಾಪಿಸಲು ರೆಡ್ಡಿ ಸಹೋದರರನ್ನು ನಂಬಿಕೊಂಡಿರುವ ಬಿಜೆಪಿ

AFSPA removed from Meghalaya completely, partly in Arunachal Pradesh

ಮೇಘಾಲಯದಲ್ಲಿ ಎಎಫ್ಎಸ್ ಪಿಎ ಸಂಪೂರ್ಣ ರದ್ದು, ಅರುಣಾಚಲದಲ್ಲಿ ಭಾಗಶಃ ರದ್ದು

Sania Mirza

ತಾಯಿ ಆಗುವ ಸುಳಿವು ನೀಡಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ

ಮುಖಪುಟ >> ಕೃಷಿ-ಪರಿಸರ

ಜಾಗತಿಕ ತಾಪಮಾನ ಏರಿಕೆಯಾದರೆ ಕಾಲು ಭಾಗ ಭೂಮಿ ಒಣಗುತ್ತದೆ: ವರದಿ

ಭವಿಷ್ಯದಲ್ಲಿ ತೀವ್ರ ಬರಗಾಲ, ಕಾಡ್ಗಿಚ್ಚಿನ ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ
Quarter of land on earth will be drier under 2 degrees Celsius due to global warming

ಸಾಂದರ್ಭಿಕ ಚಿತ್ರ

ಪ್ಯಾರಿಸ್: ಜಾಗತಿಕ ಸರಾಸರಿ ತಾಪಮಾನ 2 ಡಿಗ್ರಿಯಷ್ಟು ಏರಿಕೆಯಾದರೂ ಜಗತ್ತಿನ ಕಾಲುಭಾಗ ಭೂಮಿ ಒಣಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ತಾಪಮಾನ ಏರಿಕೆ ಸಂಬಂಧ ವಿಜ್ಞಾನಿಗಳು ಎಷ್ಟೇ ಎಚ್ಚರಿಕೆ ನೀಡಿದರೂ ತಾಪಮಾನ ಮಾತ್ರ ಇಳಿಕೆಯಾಗುತ್ತಿಲ್ಲ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಖ್ಯಾತ ಹವಾಮಾನ ಪತ್ರಿಕೆಯೊಂದು ಈ ಬಗ್ಗೆ ಎಚ್ಚರಿಕೆ ನೀಡಿದ್ದು,   ಕೇವಲ 2 ಡಿಗ್ರಿ ಜಾಗತಿಕ ತಾಪಮಾನ ಏರಿಕೆಯಾದರೂ ಭೂಮಿಯ ಶೇ.25ರಷ್ಟು ಪ್ರದೇಶ ಒಣಗಿ ಹೋಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಂತೆಯೇ ಇದರ ಪರಿಣಾಮ ಭೂಮಿಯ ಸಾಕಷ್ಟು ಭಾಗಗಳಲ್ಲಿ ಆಗಲಿದ್ದು, ಈ  ಹಿಂದೆಂದಿಗಿಂತಲೂ ಭೂಮಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಾದೇಶಿಕ ತಾಪಮಾನ ಏರಿಕೆ, ಬರಗಾಲ ಮತ್ತು ಕಾಡ್ಗಿಚ್ಚಿನ ಪ್ರಮಾಣ ಅಧಿಕವಾಗಲಿದೆ ಎಂದು ಹೇಳಲಾಗಿದೆ.

ಇಂಗ್ಲೆಂಡ್‌ ನ ಈಸ್ಟ್‌ ಆಂಗ್ಲಿಯಾ ವಿಶ್ವವಿದ್ಯಾಲಯ, ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯಗಳ ಸಂಶೋಧಕರು 27 ಜಾಗತಿಕ ಹವಾಮಾನ ಮಾದರಿಗಳನ್ನು ಅಧ್ಯಯನಕ್ಕೆ ಒಳಪಡಿಸಿ ಜಂಟಿ ವರದಿ ನೀಡಿದ್ದಾರೆ.  ವಿಜ್ಞಾನಿಗಳ ಈ ತಂಡದಲ್ಲಿ ಭಾರತದ ವಿಜ್ಞಾನಿ ಮನೋಜ್ ಜೋಷಿ ಇದ್ದಾರೆ. ವರದಿಯಲ್ಲಿರುವಂತೆ ಹವಾಮಾನ ವೈಪರಿತ್ಯದಿಂದ ಆಗುವ ಈ ಬದಲಾವಣೆಯು ಬರಗಾಲ ಹಾಗೂ ಕಾಳ್ಗಿಚ್ಚಿಗೆ ಕಾರಣವಾಗಲಿದೆ. ಆದರೆ ಸರಾಸರಿ  ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್‌ ಗೆ ಸೀಮಿತಗೊಳಿಸಿದರೂ ಸಾಕು ಇಂತಹ ವಿಪತ್ತುಗಳಿಂದ ಭೂಮಿಯನ್ನು ರಕ್ಷಿಸಬಹುದು. ಸದ್ಯ ಜಾಗತಿಕ ತಾಪಮಾನವು ಸರಾಸರಿಗಿಂತ 1 ಡಿಗ್ರಿ ಸೆಲ್ಸಿಯಸ್‌ ನಷ್ಟು ಹೆಚ್ಚಿದೆ ಎಂದು  ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರ್ಷದಿಂದ ವರ್ಷಕ್ಕೆ ಜಗತ್ತಿನಲ್ಲಿ ಕೆಲ ಭಾಗಗಳ ತೇವಾಂಶದಲ್ಲಿ ಬದಲಾವಣೆಯಾಗುತ್ತಿರುವುದನ್ನು ವಿಜ್ಞಾನಿಗಳು ಗುರುತಿಸಿದ್ದು, ಭೂಮಿಯ ಮೇಲ್ಮೈ ಒಣಗುವಿಕೆಯನ್ನು ಶುಷ್ಕತೆ ಮೂಲಕ ಅಳೆಯಲಾಗುತ್ತದೆ. ಇದರಲ್ಲಿ ಮಳೆ ಹಾಗೂ  ನೀರು ಆವಿಯಾಗುವ ಪ್ರಮಾಣಗಳೂ ಸೇರಿವೆ. ಒಂದು ವೇಳೆ ಭೂಮಿ ಪ್ರಸ್ತುತ ಇರುವ ಒಣಗುವಿಕೆ ಪ್ರಕ್ರಿಯೆ ಇದೇ ರೀತಿ ಮುಂದುವರೆದರೆ ಖಂಡಿತ ಜಾಗತಿಕ ತಾಪಮಾನ ಕನಿಷ್ಠ 2 ಡಿಗ್ರಿಯಷ್ಟು ಏರಿಕೆಯಾಗಲಿದೆ. ಹಾಗೆ ಆಗಿದ್ದೇ  ಆದರೆ ಖಂಡಿತಾ ಭೂಮಿಯ ಕಾಲು ಭಾಗ ಭೂ ಪ್ರದೇಶ ನೀರಿಲ್ಲದೇ ಒಣಗಿ ಹೋಗುತ್ತದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.

‘20ನೇ ಶತಮಾನದಲ್ಲಿ ಮೆಡಿಟರೇನಿಯನ್, ಆಫ್ರಿಕಾದ ದಕ್ಷಿಣ ಭಾಗ ಮತ್ತು ಆಸ್ಟ್ರೇಲಿಯಾದ ಪೂರ್ವ ಕರಾವಳಿಯು ತೀವ್ರ ಬರದ ಭೀತಿಯನ್ನು ಎದುರಿಸಿವೆ. ಅರೆ–ಶುಷ್ಕ ವಾತಾವರಣ ಇರುವ ಮೆಕ್ಸಿಕೊ, ಬ್ರೆಜಿಲ್, ದಕ್ಷಿಣ ಆಫ್ರಿಕಾ  ಹಾಗೂ ಆಸ್ಟ್ರೇಲಿಯಾದ ಕೆಲ ಭಾಗಗಳು ತಾಪಮಾನ ಏರಿಕೆಯಾದ ವೇಳೆ ಸಂಕಷ್ಟ ಎದುರಿಸಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಸಂಬಂಧಿಸಿದ್ದು...
Posted by: SVN | Source: PTI

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : Paris Agreement, Environment, Global Warming, Earth, ಪ್ಯಾರಿಸ್ ಒಪ್ಪಂದ, ಪರಿಸರ, ಜಾಗತಿಕ ತಾಪಮಾನ, ಭೂಮಿ, ಬರಗಾಲ
English summary
More than a quarter of Earth's land surface will become "significantly" drier even if humanity manages to limit global warming to two degrees Celsius, the goal espoused in the Paris Agreement, scientists said. But if we contain average warming to 1.5 C (2.7 degrees Fahrenheit), this will be limited to about a tenth -- sparing two-thirds of the land projected to parch under 2 C, they concluded in a study published in Nature Climate Change.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement