Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Not seeking money, power or position for children: Murthy to Infy board

ಮಕ್ಕಳಿಗೆ ಹಣ, ಅಧಿಕಾರ ಅಥವಾ ಸ್ಥಾನಮಾನ ಕೇಳುತ್ತಿಲ್ಲ: ಇನ್ಫಿ ಮಂಡಳಿ ಆರೋಪಕ್ಕೆ ಮೂರ್ತಿ ಪ್ರತಿಕ್ರಿಯೆ

ಚೀನಾ-ಭಾರತ ಯೋಧರು

ಆಗಸ್ಟ್ 15ರಂದು ಲಡಾಕ್‌ನಲ್ಲಿ ಭಾರತ-ಚೀನಾ ಯೋಧರ ನಡುವೆ ಜಟಾಪಟಿ ನಡೆದಿತ್ತು: ಭಾರತ

ನೂತನ ನೋಟಿನ ಮಾದರಿ

ಹೊಸ 50 ರುಪಾಯಿ ಮುಖಬೆಲೆ ನೋಟಿನ ಮಾದರಿ ಬಿಡುಗಡೆ ಮಾಡಿದ ಆರ್‌ಬಿಐ

Rahul Gandhi

ರಾಹುಲ್ ಗಾಂಧಿಗೆ ಭಾರೀ ಹಿನ್ನಡೆ: ಪಕ್ಷದ ಚುನಾವಣಾ ವ್ಯವಸ್ಥಾಪಕ ಆಶಿಶ್ ಕುಲಕರ್ಣಿ ರಾಜಿನಾಮೆ

Indian Army to Get six Apache Attack Helicopters in Deal Worth Rs 4,168 Crore With US

ಭಾರತೀಯ ಸೇನೆಯ ಬತ್ತಳಿಕೆ ಸೇರಲಿವೆ ಅಮೆರಿಕದ ವಿಧ್ವಂಸಕ 6 ಆಪಾಚೆ ಹೆಲಿಕಾಪ್ಟರ್!

CM Ibrahim gets Congress ticket for Legislative Council bypolls

ವಿಧಾನ ಪರಿಷತ್ ಉಪ ಚುನಾವಣೆ: ಕಾಂಗ್ರೆಸ್ ನಿಂದ ಸಿಎಂ ಇಬ್ರಾಹಿಂಗೆ ಟಿಕೆಟ್

Bantwal Violence Case: Karnataka High Court Stalls All Legal Proceeding on Leaders of Hindu Outfits

ಬಂಟ್ವಾಳ ಕಲ್ಲುತೂರಾಟ ಪ್ರಕರಣ; ಹಿಂದೂ ಮುಖಂಡರ ವಿರುದ್ಧದ ಎಫ್ ಐಆರ್ ಗೆ ಹೈಕೋರ್ಟ್ ತಡೆ

ಸಂಗ್ರಹ ಚಿತ್ರ

ದೆಹಲಿಯಲ್ಲಿ ಮಹಿಳಾ ಸಿಬ್ಬಂದಿ ಸೀರೆ ಎಳೆದು ಲೈಂಗಿಕ ಕಿರುಕುಳ: ಕೀಚಕನ ಬಂಧನ

Virat Kohli

ಐಸಿಸಿ ಏಕದಿನ ರ್ಯಾಂಕಿಂಗ್: ನಂಬರ್ 1 ಸ್ಥಾನ ಕಾಯ್ದುಕೊಂಡ ವಿರಾಟ್ ಕೊಹ್ಲಿ

Mugulunage Movie Still

ಯೋಗಿ-ಗಣಿ ಜೋಡಿಯ 'ಮುಗುಳುನಗೆ' ಚಿತ್ರ ಸೆಪ್ಟೆಂಬರ್ 1ಕ್ಕೆ ಬಿಗ್ ರಿಲೀಸ್

Toxic froth from Bengaluru

ಕಡಿಮೆಯಾದ ಬೆಳ್ಳಂದೂರು ಕೆರೆ ನೊರೆ, ಮಳೆಯಿಂದ ಚೇತರಿಸಿಕೊಳ್ಳುತ್ತಿರುವ ಬೆಂಗಳೂರು

Playback singer LN Shastri

ಖ್ಯಾತ ಹಿನ್ನೆಲೆ ಗಾಯಕ ಎಲ್ಎನ್ ಶಾಸ್ತ್ರಿಗೆ ಕರುಳಿನ ಕ್ಯಾನ್ಸರ್

Enagi Balappa

ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ ಇನ್ನಿಲ್ಲ

ಮುಖಪುಟ >> ಭವಿಷ್ಯ-ಆಧ್ಯಾತ್ಮ

ಭೀಷ್ಮರ ನಿಜವಾದ ಹೆಸರು ಗೊತ್ತಾ? ಭೀಷ್ಮ ಎಂಬ ಹೆಸರು ಬಂದಿದ್ದು ಹೇಗೆ?

Bhishma

ಭೀಷ್ಮ

ಭಾರತದ ಮಹಾಪುರಾಣ ಮಹಾಭಾರತದಲ್ಲಿ ಭೀಷ್ಮರ ವ್ಯಕ್ತಿತ್ವ ಮಹೋನ್ನತವಾದದ್ದು, ಭೀಷ್ಮ ಪಿತಾಮಹ ಮುತ್ಸದ್ದಿಯಷ್ಟೇ ಅಲ್ಲದೇ ಓರ್ವ ಅಸಾಧಾರಣ ಬಿಲ್ವಿದ್ಯಾ ಪ್ರವೀಣರೂ ಆಗಿದ್ದವರು. ಹಸ್ತಿನಾಪುರಕ್ಕಾಗಿ ತನ್ನೆಲ್ಲವನ್ನೂ ತ್ಯಾಗ ಮಾಡಿದವರು, ಶಪಥಕ್ಕೆ ಮತ್ತೊಂದು ಹೆಸರೇ ಭೀಷ್ಮ, ಆದ್ದರಿಂದಲೇ ಇಂದಿಗೂ ಶಪಥದ ಹೆಸರು ಬಂದಾಗಲೆಲ್ಲಾ ಭೀಷ್ಮ ಶಪಥ ಎಂಬ ಪದ ಬಳಕೆಯಲ್ಲಿದೆ. 

ಶಂತನು ಹಾಗೂ ಗಂಗೆಯ ಪುತ್ರನಾಗಿ ಹುಟ್ಟಿದ ಭೀಷ್ಮರ ಮೂಲ ಹೆಸರು ದೇವವ್ರತ ಎಂದು. ಬಾಲ್ಯವನ್ನು ತಾಯಿಯೊಂದಿಗೆ ಕಳೆದ ದೇವವ್ರತನಿಗೆ ಭರತ ವರ್ಷದ ಋಷಿ ಶ್ರೇಷ್ಠರಾದ ವಸಿಷ್ಠರು, ದೇವತೆಗಳಿಗೆ ಗುರುವಾಗಿರುವ ಬೃಹಸ್ಪತಿ, ಶುಕ್ರಾಚಾರ್ಯ, ಪರಶುರಾಮರಿಂದ ಶಿಕ್ಷಣ ದೊರೆಯಿತು. ಶಿಕ್ಷಣ ಮುಕ್ತಾಯಗೊಳಿಸುತ್ತಿದ್ದಂತೆಯೇ, ತಾಯಿ ಗಂಗೆ ದೇವವ್ರತನನ್ನು ಮಹಾರಾಜ ಶಂತನುವಿಗೆ ಒಪ್ಪಿಸಿದಳು. ಶಂತನುವಿನ ನಂತರ ದೇವವ್ರತನೇ ಹಸ್ತಿನಾಪುರದ  ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಿಯೂ ನಿಯೋಜಿತನಾದ. ಸ್ವತಃ ಶಂತನು ತನ್ನ ಮಗ ದೇವವ್ರತನನ್ನು ಹಸ್ತಿನಾವತಿಯ ಉತ್ತರಾಧಿಕಾರಿ ಎಂದು ಘೋಷಿಸುತ್ತಾನೆ. ಆದರೆ ವಿಧಿಯ ಆಟವೇ ಬೇರೆ ಇರುತ್ತದೆ.

ಒಮ್ಮೆ ಶಂತನು ಬೇಟೆಗೆ ತೆರಳಿದ್ದಾಗ ದೋಣಿ ಚಾಲನೆ ಮಾಡುತ್ತಿದ್ದ ಸತ್ಯವತಿ ಎಂಬ ಯುವತಿಯನ್ನು ನೋಡುತ್ತಾನೆ, ಆಕೆಯ ಸೌಂದರ್ಯಕ್ಕೆ ಆಕರ್ಷಿತನಾದ ಶಂತನು ಸತ್ಯವತಿಯನ್ನು ವಿವಾಹವಾಗಲು ಬಯಸುತ್ತಾನೆ ಅಂತೆಯೇ ಸತ್ಯವತಿಯ ತಂದೆಯನ್ನು ಭೇಟಿ ಮಾಡಿ ತನ್ನ ಇಂಗಿತವನ್ನು ತಿಳಿಸಿದ. ಆದರೆ "ತನ್ನ ಮಗಳನ್ನು ವಿವಾಹವಾಗಬೇಕಾದರೆ ಅವಳ ಮಕ್ಕಳಿಗೇ ಹಸ್ತಿನಾವತಿಯ ಸಿಂಹಾಸನ ಸಿಗಬೇಕು" ಎಂದು ಸತ್ಯವತಿಯ ತಂದೆ ಷರತ್ತು ವಿಧಿಸುತ್ತಾನೆ. ಆದರೆ ದೇವವ್ರತನನ್ನು ಅದಾಗಲೇ ಹಸ್ತಿನಾವತಿಯ ಸಿಂಹಾಸನದ ಉತ್ತರಾಧಿಕಾರಿಯನ್ನಾಗಿ ಘೋಷಿಸಿದ್ದ ರಾಜ ಶಂತನು ಸತ್ಯವತಿ ತಂದೆ ವಿಧಿಸಿದ ಷರತ್ತನ್ನು ಒಪ್ಪಲು ನಿರಾಕರಿಸುತ್ತಾನಾದರೂ ಸತ್ಯವತಿಯನ್ನು ಮರೆಯುವುದಕ್ಕೆ ಸಾಧ್ಯವಾಗದೇ ದ್ವಂದ್ವದಲ್ಲಿ ಸಿಲುಕುತ್ತಾನೆ. 

ದೇವವ್ರತನಿಗೆ ಈ ಎಲ್ಲಾ ವಿಷಯಗಳೂ ತಿಳಿಯುತ್ತದೆ. ತಂದೆಯ ದ್ವಂದ್ವವನ್ನು ಹೋಗಲಾಡಿಸಲು ನಿರ್ಧರಿಸಿ ಹಸ್ತಿನಾವತಿಯ ಸಿಂಹಾಸನವನ್ನು ತಾನು ಅಧಿಷ್ಠಿಸುವುದಿಲ್ಲ, ಸತ್ಯವತಿ-ಶಂತನುವಿನ ಮಕ್ಕಳಿಗೇ ಸಿಂಹಾಸನ ಸಿಗಲಿದೆ ಎಂದು ಸತ್ಯವತಿಯ ತಂದೆಗೆ ಮನವರಿಕೆ ಮಾಡಿ ತಾನು ಆಜನ್ಮ ಬ್ರಹ್ಮಚಾರಿಯಾಗಿ ಉಳಿಯುತ್ತೇನೆಂದು ಪ್ರತಿಜ್ಞೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಮುಂದೆ ರಾಜರಾಗುವ ಶಂತನುವಿನ ಮಕ್ಕಳಿಗೆ ತಾನು ನಿಷ್ಠನಾಗಿರುವುದಾಗಿಯೂ ಶಪಥ ಮಾಡುತ್ತಾರೆ. ದೇವವ್ರತ ಈ ರೀತಿ ಶಪಥ ಮಾಡಿದ್ದರಿಂದಲೇ ಅವರಿಗೆ ಭೀಷ್ಮ ಎಂಬ ಹೆಸರು ಬಂದಿತ್ತು, ಹಾಗಾಗಿಯೇ ಶಪಥವನ್ನು ಭೀಷ್ಮ ಪ್ರತಿಜ್ಞೆ ಎನ್ನುತ್ತಾರೆ. 
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Mahabharat, Bhishma Pitamaha, Hastinapur, ಮಹಾಭಾರತ, ಭೀಷ್ಮ, ಹಸ್ತಿನಾಪುರ
English summary
Bhishma Pitamaha – was an exceptionally skilled archer, an able statesman and a devout nationalist, who sacrificed his all for Hastinapur and the future of Bharatvarsha.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement