Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Asia Cup 2018: India beat Bangladesh by 7 wickets

ಏಷ್ಯಾಕಪ್: ರೋಹಿತ್ ಶರ್ಮಾ ರನ್ ಸುರಿಮಳೆ, ಬಾಂಗ್ಲಾ ವಿರುದ್ಧ ಭಾರತಕ್ಕೆ 7 ವಿಕೆಟ್ ಗೆಲುವು!

ಸುಷ್ಮಾ ಸ್ವರಾಜ್-ಶಾ ಮೆಹ್ಮೂದ್ ಕುರೇಷಿ

ಉಗ್ರರಿಂದ ಪೊಲೀಸರ ಹತ್ಯೆ: ಪಾಕ್ ನೊಂದಿಗೆ ಮಾತುಕತೆ ರದ್ದುಗೊಳಿಸಿದ ಭಾರತ!

India chose Anil Ambani for Rafale deal, says ex-French President Francois Hollande

ರಾಫೆಲ್ ಡೀಲ್ ಗೆ ಅನಿಲ್ ಅಂಬಾನಿಯನ್ನು ಆಯ್ಕೆ ಮಾಡಿದ್ದು ಭಾರತ: ಫ್ರಾನ್ಸ್ ಮಾಜಿ ಅಧ್ಯಕ್ಷ

ಪಾಕ್ ಬೆಡಗಿ-ಶಿಖರ್ ಧವನ್

ಭಾರತ ವಿರುದ್ಧ ಪಾಕ್ ಸೋತರು, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಗೆದ್ದ ಪಾಕ್ ಬೆಡಗಿ!

Asia Cup 20018: Pakistan beat Afghanistan by 3 wickets

ಏಷ್ಯಾಕಪ್ 20018: ಅಫ್ಘಾನ್ ವಿರುದ್ಧ ಪಾಕಿಸ್ತಾನಕ್ಕೆ ಪ್ರಯಾಸದ ಜಯ

After 3 days of questioning, Bishop Franco Mulakkal arrested in nun rape case

ಕೇರಳ ನನ್ ಅತ್ಯಾಚಾರ ಪ್ರಕರಣ: ಬಿಷಪ್ ಫ್ರಾಂಕೊ ಮುಲಕ್ಕಲ್ ಬಂಧನ

Love Yatri

ಲವ್ ಯಾತ್ರಿ ವಿವಾದ: ಸಲ್ಮಾನ್ ಖಾನ್ ವಿರುದ್ಧ ಎಫ್ಐಆರ್ ದಾಖಲು!

Tanzania ferry disaster: Death toll reaches 136 with scores missing

ತಾಂಜೇನಿಯ ದೋಣಿ ದುರಂತ: 136 ಮಂದಿ ಸಾವು, ಹಲವರು ನಾಪತ್ತೆ

ವಿಶ್ವದ ದೊಡ್ಡಣ್ಣನಿಗೇ ಎಚ್ಚರಿಕೆ ನೀಡಿದ ಚೀನಾ!

ವಿಶ್ವದ ದೊಡ್ಡಣ್ಣನಿಗೇ ಎಚ್ಚರಿಕೆ ನೀಡಿದ ಚೀನಾ!

Rahul Gandhi

ರಾಫೆಲ್ ಡೀಲ್ ಮೂಲಕ ಪ್ರಧಾನಿ ಭಾರತಕ್ಕೆ ದ್ರೋಹವೆಸಗಿದ್ದಾರೆ: ಹೊಲಾಂಡ್‌ ಹೇಳಿಕೆಗೆ ರಾಹುಲ್ ಪ್ರತಿಕ್ರಿಯೆ

Jet Airways fiasco: Complaint against crew for attempt to murder after passengers on board fall sick

ಜೆಟ್ ಏರ್ವೇಸ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು!

Pakistan releases postage stamps glorifying slain terrorist Burhan Wani

ಉಗ್ರ ಬುರ್ಹಾನ್ ವನಿ ಅಂಚೆ ಚೀಟಿ ಬಿಡುಗಡೆ ಮಾಡಿದ ಪಾಕ್

Supreme Court

ನಾವೇನೂ 'ನರಭಕ್ಷಕ ಹುಲಿ'ಗಳಲ್ಲ: ಸುಪ್ರೀಂ ಕೋರ್ಟ್

ಮುಖಪುಟ >> ಭವಿಷ್ಯ-ಆಧ್ಯಾತ್ಮ

ಸಪ್ತಪದಿ: ಪತಿ-ಪತ್ನಿ ಜೊತೆಯಾಗಿಡುವ ಆ ಏಳು ಹೆಜ್ಜೆಗಳ ಅರ್ಥವೇನು ಗೊತ್ತಾ?

ಏಳು ಜನ್ಮಗಳ ಅನುಬಂಧ ಬೆಸೆಯುವ ಸಪ್ತಪದಿ ಮಹತ್ವ ಅರಿತ ದಂಪತಿಗಳ ಜೀವನ ಸುಖಕರವಾಗಿರುತ್ತದೆ
File photo

ಸಂಗ್ರಹ ಚಿತ್ರ

ಮದುವೆ ಎಂದರೆ ಒಂದು ದಿನದ ಸಂಭ್ರಮ. ಮೊದಲನೆಯ ಸಂಗಮ. ಎರಡು ಮನೆಗಳ ಮನಗಳ ಬೆಸುಗೆ. ಮೂರು ಗಂಟಿನ ಬಂಧ ಅನುಬಂಧ. ಹಿರಿಯರ ಆಶೀರ್ವಾದ, ಅಕ್ಷತೆಯ ಆಶೀರ್ವಾದ. ಐದು ಪಂಚಭೂತಗಳ ಸಾಕ್ಷಿ. ಆರು ರುಚಿಯ ಭೋಜನ, ಏಳು ಹೆಜ್ಜೆಗಳನ್ನು ಏಳೇಳು ಜನ್ಮಗಳಿಗೆ ಹಾಕುವುದು ಎಂದು ಅರ್ಥ. 

ಮದುವೆಯ ವಿಧಿ ವಿಧಾನಗಳು ವೈದಿಕ ಧರ್ಮದಲ್ಲಿ ಮಾತ್ರ ಕಾಣಿಸುತ್ತವೆ. ಮದುವೆಯ ವಿಧಿ ವಿಧಾನಗಳಲ್ಲಿ ಹೇಳುವ ಮಂತ್ರಗಳು ಮಂಗಳಕರವಾಗಿ, ಅರ್ಥಗರ್ಭಿತವಾಗಿ, ಭಾವಯುಕ್ತವಾಗಿ, ಪ್ರತಿಜ್ಞಾಪೂರ್ವಕವಾಗಿ ಇರುವುದನ್ನು ನಾವು ನೋಡಬಹುದು. ಹೆಂಡತಿ ಎಂದರೆ, ಗಂಡನ ಪ್ರಾಣದಲ್ಲಿ ಸ್ನೇಹದಲ್ಲಿ ಜೀವನದಲ್ಲಿ ಕೊನೆಗೆ ಆತ್ಮದಲ್ಲಿಯೂ ಅರ್ಧಭಾಗವೆಂದು ಶ್ರುತಿಗಳು ಹೇಳುತ್ತವೆ. 

ಪ್ರಾಣವಾಯು ಇಲ್ಲದೆ, ಯಾವದ ಪ್ರಾಣಿಯೂ ಬದುಕುವುದಿಲ್ಲ. ಅದೇ ರೀತಿ ಗೃಹಸ್ಥಾಶ್ರಮವು ಇಲ್ಲದೆ ಇನ್ನಿತರ ಆಶ್ರಮಗಳಾದ ಬ್ರಹ್ಮಚರ್ಯ, ವಾನಪ್ರಸ್ಥ, ಸಂನ್ಯಾಸ ಆಶ್ರಮಗಳು ನಿರರ್ಥಕವಾಗುತ್ತವೆ. ಆದ್ದರಿಂದ ಜವಾಬ್ದಾರಿಯುತವಾದ ಜೀವನಕ್ಕೆ ವಿವಾಹವನ್ನು ನಾಂದಿ ಎಂದು ಗುರುತಿಸಬೇಕು. 

ಮದುವೆ ಎಂಬುದು ಪ್ರತೀಯೊಬ್ಬರ ಜೀವನದಲ್ಲಿಯೂ ಪ್ರಮುಖ ಘಟ್ವವಾಗಿದ್ದು, ಹಿಂದೂ ಧರ್ಮದಲ್ಲಿ ನಡೆಸಲಾಗುವ ವಿವಾಹದಲ್ಲಿ ಸಪ್ತಪದಿಗೆ ತನ್ನದೇ ಆದ ವಿಶೇಷ ಮಹತ್ವವನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ ವಿವಾಹವಾಗುವ ಪ್ರತೀ ಜೋಡಿಯೂ ಸಪ್ತಪದಿ ತುಳಿಯಲೇಬೇಕು. ಮದುವೆಯ ಸಂದರ್ಭದಲ್ಲಿ ವಧು ಹಾಗೂ ವರ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿಯುತ್ತಾರೆ. ಆದರೆ, ಇದರ ಅರ್ಥ ಹಾಗೂ ಮಹತ್ವ ಅದಷ್ಟೋ ಜನರಿಗೆ ತಿಳಿದೇ ಇರುವುದಿಲ್ಲ. 

ಅಗ್ನಿ ದೇವರನ್ನು ಸಾಕ್ಷಿಯಾಗಿಸಿಕೊಂಡು ಇಡುವ ಪ್ರತೀಯೊಂದು ಹೆಜ್ಜಿಗೂ ಅದರದ್ದೇ ಆದ ಮಹತ್ವ ಹಾಗೂ ವಿಶೇಷತೆ ಇದೆ. 
ಸಪ್ತಪದಿಯಲ್ಲಿ ಇಡುವ ಪ್ರತೀ ಹೆಜ್ಜೆಗೂ ಇರುವ ಅರ್ಥ ಹಾಗೂ ವಿಶೇಷತೆಗಳನ್ನು ಪ್ರತೀಯೊಬ್ಬರೂ ತಿಳಿದುಕೊಳ್ಳಲೇಬೇಕು. ಇದರ ಅರ್ಥ ತಿಳಿದು ಜೀವನದಲ್ಲಿ ಅಳವಡಿಸಿಕೊಂಡ ಸತಿ-ಪತಿಗಳು ಸುಖಕರ ಹಾಗೂ ಸಾಮರಸ್ಯ ಜೀವನ ನಡೆಸಲು ಸಾಧ್ಯವಾಗುತ್ತದೆ. 

ವಧುವರರಿಬ್ಬರೂ ಪ್ರದಕ್ಷಿಣೆ ಮಾಡುತ್ತಾ ಏಳು ಹೆಜ್ಜೆಗಳನ್ನಿಡುವುದನ್ನು ಸಪ್ತಪದಿ ಎಂದು ಹೇಳಲಾಗುತ್ತದೆ. ಈ ಏಳು ಹೆಜ್ಜೆಗಳು ಏಳು ಬಯಕೆಗಳಿಗೆ ಸಂಕೇತವಾಗಿರುತ್ತವೆ. 

ವಧುವರರಿಬ್ಬರೂ ಒಂದಾಗಿ ಮೊದಲನೆ ಹೆಜ್ಜೆಯನ್ನು ಇಡುವುದರಿಂದ ತಿನ್ನುವುದಕ್ಕೆ ಅನ್ನವನ್ನು, ಎರಡನೆಯ ಹೆಜ್ಜೆಯನ್ನು ಇಡುವುದರಿಂದ ತಿಂದ ಅನ್ನದಿಂದ ಬಲವನ್ನು, ಮೂರನೆಯ ಹೆಜ್ಜೆ ಇಡುವುದರಿಂದ ಬಲದಿಂದ ಒಳ್ಳೆಯ ಕೆಲಸಗಳನ್ನು, ನಾಲ್ಕನೆಯ ಹೆಜ್ಜೆ ಇಡುವುದರಿಂದ ಒಳ್ಳೆಯ ಕೆಲಸಗಳಿಂದ ಸುಖವನ್ನು, ಐದನೇ ಹೆಜ್ಜೆ-ಸುಖದಿಂದ ಸಮೃದ್ಧಿಯನ್ನು, ಆರನೇ ಹೆಜ್ಜೆ-ಋತು ಸಂಪತ್ತನ್ನು, ಏಳನೇ ಹೆಜ್ಜೆ-ಏಳೇಳು ಜನ್ಮಕ್ಕೂ ನಾವಿಬ್ಬರೂ ಗಂಡ ಹೆಂಡತಿಯಾಗಿರಬೇಕೆಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುವುದು ಉದ್ದೇಶವಾಗಿದೆ. 
Posted by: MVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Astrology, Saptapadi, Marriage, Hindu, ಭವಿಷ್ಯ, ಸಪ್ತಪದಿ, ವಿವಾಹ, ಹಿಂದೂ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS