Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
BMC polls 2017 results: Shiv Sena maintains grip on Mumbai

ಬಿಎಂಸಿ ಚುನಾವಣೆ ಫಲಿತಾಂಶ: ಶಿವಸೇನೆ, ಬಿಜೆಪಿ ಮೇಲುಗೈ, ಕಾಂಗ್ರೆಸ್ ಗೆ ಮುಖಭಂಗ

BBMP involved in 3 Thousand Crore rupees scam alleges BS Yeddyurappa

ಬಿಬಿಎಂಪಿಯಲ್ಲಿ 3 ಸಾವಿರ ಕೋಟಿ ಹಗರಣ, ನಾಳೆ ದಾಖಲೆ ಬಹಿರಂಗ: ಬಿಎಸ್ ವೈ

ನರೇಂದ್ರ ಮೋದಿ

ಪ್ರಧಾನಿ ಮೋದಿ ಫೇಸ್‍ಬುಕ್‍ನಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವದ ಮೊದಲ ನಾಯಕ!

Deepak Jayakumar stakes claim to aunt Jayalalithaa’s Poes garden home and properties

ಪೋಯಸ್ ಗಾರ್ಡನ್ ಬಂಗಲೆ, ಆಸ್ತಿ ನನಗೆ ಸೇರಿದ್ದು: ಜಯಾ ಅಳಿಯ ದೀಪಕ್ ಜಯಕುಮಾರ್

Freedom251 phone: Ringing Bells MD Goel detained for

ಫ್ರೀಡಂ 251 ಫೋನ್ ವಂಚನೆ: ರಿಂಗಿಂಗ್ ಬೆಲ್ಸ್ ಎಂಡಿ ಗೋಯಲ್ ಬಂಧನ

arrest

ಲಂಚ ಪ್ರಕರಣ: ದೆಹಲಿ ಪೊಲೀಸರನ್ನು ಬಂಧಿಸಿದ ಸಿಬಿಐ

Umesh Yadav

ವೇಗಿ ಉಮೇಶ್ ಮಾರಕ ದಾಳಿಗೆ ಆಸ್ಟ್ರೇಲಿಯಾ ತತ್ತರ, 9 ವಿಕೆಟ್ ನಷ್ಟಕ್ಕೆ 256 ರನ್

Super Hercules aircraft

ಭಾರತೀಯ ವಾಯು ಸೇನೆಗೆ ಹಿನ್ನಡೆ: ಮತ್ತೊಂದು "ಸೂಪರ್ ಹರ್ಕ್ಯುಲಸ್" ವಿಮಾನ ಜಖಂ

Military Helicopter

ಮಾರ್ಗ ತಿಳಿಯಲು ಸೇನಾ ಹೆಲಿಕಾಫ್ಟರನ್ನೆ ರಾಷ್ಟ್ರೀಯ ಹೆದ್ದಾರಿಗೆ ಇಳಿಸಿದ ಪೈಲಟ್!

NASA Has Found A New Solar System With seven Earth-Size Planets

ನಮ್ಮ ಸೌರವ್ಯೂಹದ ಸಮೀಪದಲ್ಲೇ 7 "ಭೂಮಿ" ಪತ್ತೆ, 3 "ವಾಸಯೋಗ್ಯ": ನಾಸಾ

Narendra Modi spoke at Rally

ಕತ್ತೆಗಳು ದಣಿವರಿಯದಂತೆ ದುಡಿಯುತ್ತವೆ: ಅಖಿಲೇಶ್ ಯಾದವ್ ಗೆ ಪ್ರಧಾನಿ ಮೋದಿ ಟಾಂಗ್

Feeling lonely in the absence of Jayalalithaa, says Sasikala

ಜಯಲಲಿತಾ ಇಲ್ಲದೆ ಏಕಾಂಗಿಯಾಗಿದ್ದೇನೆ: ಶಶಿಕಲಾ

There is no bigger ‘Kasab’ than BJP’s Amit Shah: Mayawati

ಅಮಿತ್ ಶಾಗಿಂತ ದೊಡ್ಡ 'ಕಸಬ್' ಮತ್ತೊಬ್ಬರಿಲ್ಲ: ಮಾಯಾವತಿ

ಮುಖಪುಟ >> ಸಿನಿಮಾ >> ಸಿನಿಮಾ ಸಮಾಚಾರ

ಬೆಂಗಳೂರು: ಶೂಟಿಂಗ್ ವೇಳೆ ಸಹ ಕಲಾವಿದೆಯ ನಿಗೂಢ ಸಾವು

ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ಶೂಟಿಂಗ್ ವೇಳೆ ಘಟನೆ
Police inspect the underconstruction apartment where film artiste Padmavathi (inset),

ಅಪಾರ್ಟ್ ಮೆಂಟ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಪದ್ಮಾವತಿ

ಬೆಂಗಳೂರು: ಮಾಸ್ತಿಗುಡಿ ಸಿನಿಮಾ ಶೂಟಿಂಗ್ ವೇಳೆ ಇಬ್ಬರು ಖಳನಟರು ದುರಂತ ಸಾವಿಗೀಡಾದ ದುರ್ಘಟನೆ ಸಾರ್ವಜನಿಕರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದು ಸಿನಿಮಾ ಶೂಟಿಂಗ್ ವೇಳೆ ಸಹ ಕಲಾವಿದಯೊಬ್ಬರು ಲಿಫ್ಟ್ ನ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ.

ನಗರದ ಹೊರವಲಯದ ರಾಜಾನುಕುಂಟೆ ಸಮೀಪದ ಅವಲಹಳ್ಳಿಯಲ್ಲಿ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ ಕಟ್ಟಡದಲ್ಲಿ ಸಿನಿಮಾ ಶೂಟಿಂಗ್‌ ನಡೆಯುತ್ತಿದ್ದ ವೇಳೆ 18ನೇ ಮಹಡಿಯಿಂದ ಬಿದ್ದು ಸಹ ಕಲಾವಿದೆ ಪದ್ಮಾವತಿ(44) ಮೃತಪಟ್ಟಿದ್ದಾರೆ.

ನಂದ ಕಿಶೋರ್‌ ನಿರ್ದೇಶನ, ರವಿಚಂದ್ರನ್‌ ಪುತ್ರ ಮನೋರಂಜನ್‌ ನಾಯಕ ನಟನಾಗಿರುವ ವಿಐಪಿ ಸಿನಿಮಾ ಶೂಟಿಂಗ್‌ ವೇಳೆ ಸೋಮವಾರ ಮಧ್ಯಾಹ್ನ 3.30ರ ವೇಳೆ ಕಟ್ಟಡದ ಲಿಫ್ಟ್‌ ಪ್ಯಾಸೇಜ್‌ನಿಂದ ಸಹ ಕಲಾವಿದೆ ಬಿದ್ದಿದ್ದಾರೆ. ಆದರೆ, ಶೂಟಿಂಗ್‌ ಮುಗಿದು ತುಂಬಾ ಹೊತ್ತು ಕಳೆದರೂ ಸಹ ಕಲಾವಿದೆ ನಾಪತ್ತೆಯಾಗಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ.

ಸಂಜೆ ನಂತರ ಪದ್ಮಾವತಿ ಕಾಣಿಸದ ಕಾರಣ ಜತೆಗಿದ್ದ ಸಹ ಕಲಾವಿದೆಯೊಬ್ಬರು ಹುಡುಕಾಟ ನಡೆಸಲು ಆರಂಭಿಸಿದರು. ಕೊನೆಗೆ ಕಟ್ಟಡದಲ್ಲಿದ್ದ ಸೆಕ್ಯುರಿಟಿ ಗಾರ್ಡ್‌ ಸೇರಿದಂತೆ ಇತರರು ಹುಡುಕಾಟ ನಡೆಸಿದಾಗ ಪದ್ಮಾವತಿ ಅವರ ಶವ ಕಟ್ಟಡದ ನೆಲ ಮಹಡಿಯಲ್ಲಿರುವ ಲಿಫ್ಟ್‌ ಪ್ಯಾಸೇಜ್‌ನಲ್ಲಿ ಪತ್ತೆಯಾಗಿದೆ. ಪದ್ಮಾವತಿ ಜತೆಗಿದ್ದ ಇತರ ಕಲಾವಿದರು ಪೊಲೀಸರಿಗೆ ನೀಡಿದ್ದಾರೆ. ಪದ್ಮಾವತಿ ಜಕ್ಕೂರು ನಿವಾಸಿಯಾಗಿದ್ದಾರೆ.

ಸುಮಾರು 120 ಸಿಬ್ಬಂದಿ ಸಂಜೆ 5.30ರ ವೇಳೆಗೆ ಶೂಟಿಂಗ್ ಪ್ಯಾಕ್ ಅಪ್ ಮಾಡಿದ್ದಾರೆ. ಅವರಿಗೆ ಪೇಮೆಂಟ್ ನೀಡುವ ವೇಳೆ ಪದ್ಮಾವತಿ ನಾಪತ್ತೆಯಾಗಿರುವುದು ತಿಳಿದು ಬಂದಿದೆ.  ಆವಲಹಳ್ಳಿ ಕೆರೆ ಮುಂಭಾಗದಲ್ಲಿ ಪ್ರೆಸ್ಟೀಜ್‌ ಕಂಪನಿಗೆ ಸೇರಿದ ಅಪಾರ್ಟ್‌ಮೆಂಟ್‌ ನಿರ್ಮಾಣವಾಗುತ್ತಿದೆ. ಲಿಫ್ಟ್‌ ಗುಂಡಿಗೆ ಅಡ್ಡವಾಗಿ ಸಿಮೆಂಟ್‌ ಶೀಟ್‌ ಇಡಲಾಗಿತ್ತು. ಇದರ ಮೇಲೆ ಆಯತಪ್ಪಿ ಬಿದ್ದು ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ.

ನಾನು ಆಕೆಯನ್ನು ಮಧ್ಯಾಹ್ನ 3 ಗಂಟೆ ವೇಳೆಗೆ ನೋಡಿದ್ದೆ ಕೊನೆ ಎಂದು ಪದ್ಮಾವತಿ ಸ್ನೇಹಿತೆ ತಿಳಿಸಿದ್ದಾರೆ. ಆದರೆ ನಮಗೆ ರಾತ್ರಿ 9 ಗಂಟೆ ವೇಳೆಗೆ ನಮಗೆ ವಿಷಯ ತಿಳಿಯಿತು ಎಂದು ಪೊಲೀಸರು ಹೇಳಿದ್ದಾರೆ. ನಾವು ಸಿನಿಮಾ ನಿರ್ದೇಶಕರನ್ನು ಈ ಸಂಬಂಧ ವಿಚಾರಿಸಲು ಸಂಪರ್ಕಿಸಿದರೇ ಯಾರೋಬ್ಬರು ಸಂಪರ್ಕಕ್ಕೆ ಸಿಗಲಿಲ್ಲ ಎಂದು ಹೇಳಿದ್ದಾರೆ.

ಸಿನಿಮಾ ತಂಡಕ್ಕೆ ಸಂಜೆ 5 ಗಂಟೆ ವೇಳೆಗೆ ವಿಷಯ ತಿಳಿದಿದೆ, ಆದರೆ ನಮಗೆ ತಡವಾಗಿ ವಿಷಯ ತಿಳಿಸಿದ್ದಾರೆ. ಕರೆ ಮಾಡಿ ಯಲಹಂಕ ಸರ್ಕಾರಿ ಆಸ್ಪತ್ರೆ ಬಳಿ ಬರಲು ಹೇಳಿದರು, ಅಲ್ಲಿ ಹೋದರೆ ಆಸ್ಪತ್ರೆ ಬಳಿ ಯಾರೋಬ್ಬರು ಇರಲಿಲ್ಲ. ನಂತರ ಘಟನೆ ನಡೆದ ಸ್ಥಳಕ್ಕೆ ಹೋದರೆ ಶವವನ್ನು ಅಲ್ಲಿಯೇ ಬಿಟ್ಟು ತೆರಳಿದ್ದರು.

ಕಟ್ಟಡದಲ್ಲಿ ಶೂಟಿಂಗ್‌ ಮಾಡಲು ವಿಐಪಿ ಸಿನಿಮಾ ತಂಡ ಅಧಿಕೃತವಾಗಿ ಅನುಮತಿ ಪಡೆದಿರಲಿಲ್ಲ. ಕೇವಲ ಕಟ್ಟಡದ ಪ್ರಾಜೆಕ್ಟ್ ಮ್ಯಾನೇಜರ್ ಅವರಿಂದ ಅನುಮತಿ ಪಡೆದುಕೊಂಡಿದೆ ಎಂದು ಹೇಳಲಾಗಿದೆ.

Posted by: SD | Source: TNIE

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Padmavathi, Yelahanka, Junior artiste, Found dead, ಪದ್ಮಾವತಿ, ಯಲಹಂಕ, ಸಹ ಕಲಾವಿದೆ, ಶವ ಪತ್ತೆ
English summary
Even before the ‘Masti Gudi’ movie tragedy fades away from the public memory, another junior artiste has been found dead under mysterious circumstances. The incident happened on Monday evening when she was working for a Tamil movie remake. Body of the victim, identified as Padmavathi, was found in an underconstruction building in Avalahalli, Yelahanka.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement