Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Representational image

ಉತ್ತರ ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಓರ್ವ ಉಗ್ರ ಹತ್ಯೆ, ಮುಂದುವರಿದ ದಾಳಿ

Ramya And Smriti Iranis Tweet War Goes Viral In Social Media

ರಾಹುಲ್ ಟ್ವಿಟರ್ ಜನಪ್ರಿಯತೆ: ವೈರಲ್ ಆಯ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಮ್ಯಾ ಟ್ವೀಟ್ ವಾರ್

A Day Before PM Modi

ಗುಜರಾತ್ ಪಟೇಲ್ ಚಳುವಳಿಗೆ ಹಿನ್ನಡೆ; ಬಿಜೆಪಿ ಸೇರಿದ ಇಬ್ಬರು ಹಾರ್ದಿಕ್ ಪಟೇಲ್ ಸಹವರ್ತಿಗಳು

2-wheelers with less than 100cc engines won’t have pillion seats

100 ಸಿಸಿ ಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನ, ಹಿಂಬದಿ ಸವಾರರಿಗೆ ಅವಕಾಶವಿಲ್ಲ

We are ready for any kind of probe: DK Shiva Kumar On BJP

ಬಿಎಸ್ ವೈರಿಂದ ಹಾದಿ ತಪ್ಪಿಸುವ ಯತ್ನ, ಕಲ್ಲಿದ್ದಲು ಪ್ರಕರಣ ಸಂಬಂಧ ಯಾವುದೇ ತನಿಖೆಗೂ ಸಿದ್ಧ: ಡಿಕೆ ಶಿವಕುಮಾರ್

Shuttle Badminton: Kidambi Srikanth in Demark final

ಡೆನ್ಮಾರ್ಕ್ ಓಪನ್: ಫೈನಲ್ ಗೇರಿದ ಭಾರತದ ಕಿಡಾಂಬಿ ಶ್ರೀಕಾಂತ್

Police Martyrs day in Bengaluru yesterday

ಹುತಾತ್ಮ ಪೊಲೀಸ್ ಸ್ಮಾರಕ ನಿರ್ಮಾಣ, ಪೊಲೀಸ್ ಸಿಬ್ಬಂದಿ ವೇತನ ಏರಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

Yogi Aditya Nath

ತಾಜ್ ಮಹಲ್ ಭೇಟಿ: ಷಾ ಜಹಾನ್ ಸಮಾಧಿ ಬಳಿ 30 ನಿಮಿಷ ಕಳೆಯಲಿದ್ದಾರೆ ಯೋಗಿ!

Occasional picture

ಆಸ್ಪತ್ರೆಯಲ್ಲಿ ಅತ್ಯಾಚಾರ: ಮಹಿಳೆಯ ನೈತಿಕತೆಯನ್ನು ಪ್ರಶ್ನಿಸಿದ ಪೋಲೀಸರು

Union minister Ananth Kumar Hegde

ಶಿಷ್ಟಾಚಾರಕ್ಕೆ ಹೆಸರು ಹಾಕಿದರೆ, ವೇದಿಕೆಯಲ್ಲೇ ಟಿಪ್ಪು ಇತಿಹಾಸ ಬಿಚ್ಚಿಡುತ್ತೇನೆ: ಹೆಗ್ಡೆ ಎಚ್ಚರಿಕೆ

India

ಏಷ್ಯಾ ಕಪ್ ಟೂರ್ನಿ: ಬದ್ಧವೈರಿ ಪಾಕ್ ವಿರುದ್ಧ ಗೆದ್ದ ಭಾರತ ಫೈನಲ್‌ಗೆ ಲಗ್ಗೆ

Opposing the Tippu Jayanthi celebration is not correct says HD Devegowda

25 ಕೋಟಿ ಮುಸ್ಲಿಮರನ್ನು ದೇಶದಿಂದ ಹೊರಹಾಕಬೇಕೆ?: ಟಿಪ್ಪು ಜಯಂತಿ ಪರ ದೇವೇಗೌಡ ಬ್ಯಾಟಿಂಗ್

RBI says linking Aadhaar number to bank accounts mandatory

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ: ಆರ್‏ಬಿಐ ಸ್ಪಷ್ಟನೆ

ಮುಖಪುಟ >> ಸಿನಿಮಾ >> ಸಿನಿಮಾ ವಿಮರ್ಶೆ

ಪುಂಡ ಪ್ರಚಂಡನೋ, ಬಲ್ಲಿದರಿಗೆ ಭಂಟನೋ ಈ ಪಂಟ

ನಾ ಪಂಟ ಕಣೋ ಚಿತ್ರ ವಿಮರ್ಶೆ
Naa Pantaa Kano Kannada movie Review

ನಾ ಪಂಟ ಕಣೋ ಸಿನೆಮಾ ವಿಮರ್ಶೆ

ಕನ್ನಡ ಭಾಷೆಯಲ್ಲಿ ಪಂಟ ಪದದ ಪ್ರಾಚೀನತೆ ನಿಗದಿಪಡಿಸುವುದು ತುಸು ಕಷ್ಟದ ಕೆಲಸವೇ! ಜನಪ್ರಿಯ ಆಡುಪದವಾಗಿ ಬಳಕೆಯಲ್ಲಿರುವ ಇದು ಈಗ ನಿಘಂಟುಗಳಲ್ಲಿ ಸೇರ್ಪಡೆಯಾಗಿರುವುದು ಕೂಡ ಅನುಮಾನವೇ! ಆದುದರಿಂದ ಇದರ ನಿಖರ ಅರ್ಥವನ್ನು ನಿರ್ಧರಿಸಲು ಮತ್ತು ಈ ಅರ್ಥಕ್ಕೆ ಋಣಾತ್ಮಕ ಲಕ್ಷಣಗಳಿವೆಯೇ ಅಥವಾ ಧನಾತ್ಮಕವೋ ಎಂದು ಕಂಡುಹಿಡಿಯುವುದು ಕೂಡ ತ್ರಾಸವೇ! ಈ ನಿಟ್ಟಿನಲ್ಲಿ ಸಂಕೀರ್ಣತೆಯನ್ನು ತುಂಬಿಕೊಂಡ ಈ ಪದವನ್ನು ಒಳಗೊಂಡ 'ನ ಪಂಟ ಕಣೋ' ಸಿನೆಮಾವನ್ನು ನೋಡಲು ಪ್ರೇಕ್ಷಕರು ಕೂಡ ಕೊಂಚ ಪಂಟರಾಗಿರಬೇಕೇ ಎಂಬ ಅನುಮಾನ ಹುಟ್ಟುವುದು ಸಹಜವೇ. ತಮಿಳಿನ 'ರಾಜತಂಧಿರಂ' ಸಿನೆಮಾವನ್ನು ಕನ್ನಡಕ್ಕೆ ರಿಮೇಕ್ ಮಾಡಿದ್ದಾರೆ ಕಲಾಸಾಮ್ರಾಟ್ ಎಸ್ ನಾರಾಯಣ್. 'ಲಕ್ಷ್ಮಣ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದ್ದ ಅನೂಪ್ ರೇವಣ್ಣ ಪಂಟನಾಗಿ ಮೆರೆದಿದ್ದು, ಈ ಸಿನೆಮಾ ಪ್ರೇಕ್ಷಕರಿಗೆ ಮತ್ತೆ ಮತ್ತೆ ನೋಡಲು ಆಹ್ವಾನಿಸುವಂತಿದೆಯೇ?

ಕಿಲಾಡಿತನದಲ್ಲಿ ಸಣ್ಣಪುಟ್ಟ ಕಳ್ಳತನದ ಕೆಲಸಗಳನ್ನು ಮಾಡಿ ಬದುಕುವ ಪಂಟ ಅರ್ಜುನ್ (ಅನೂಪ್ ರೇವಣ್ಣ). ಇವನ ಕೆಲಸದ ಜೊತೆಗೆ, ಬದುಕುವ ಕೋಣೆ, ಬಟ್ಟೆ ಬರೆಗಳನ್ನು ಹಂಚಿಕೊಳ್ಳುವ ಇವನ ಇಬ್ಬರು ಗೆಳೆಯರು ದೇವರಾಜ್ ಮತ್ತು ಪ್ರಕಾಶ್ ಅಕಾ ಕೋಳಿ. ಹೀಗೆ ಹೇಗೋ 'ಬಡವ ನೀ ಮಡಗ್ದಂಗೆ ಇರು' ಅಂತ ಬದುಕುತ್ತಿರುವ ಈ ಪುಡಿಗಳ್ಳರ ನಾಯಕನಾದ ಅರ್ಜುನ್ ಗೆ ಚಿನ್ನದಂಗಡಿಯನ್ನು ದೋಚುವ ಅವಕಾಶ ಬಂದರೂ ಹೆಚ್ಚಿನ ಅಪಾಯದ ಕಾರಣ ನೀಡಿ ನಿರಾಕರಿಸುತ್ತಾನೆ. ಆದರೆ ಗೆಳತಿ ಮಿಶೆಲ್ಲ ಬೆಮೆಲ್ಲೊ ಹಣಕಾಸಿನ ತೊಂದರೆಯಲ್ಲಿರುವುದನ್ನು ತಿಳಿದು, ಆಕೆಗೆ ಸಹಾಯ ಮಾಡಲು ದೊಡ್ಡ ಮೊತ್ತದ ಹಣವನ್ನು ಕಳ್ಳತನ ಮಾಡಲು ಮುಂದಾಗುತ್ತಾನೆ. ಇದು ಮುಂದೆ ಸೃಷ್ಟಿಸುವ ಅವಾಂತರಗಳೇನು? ಇವೆಲ್ಲದರಿಂದ ಪಂಟ ಪಾರಾಗುವ ಪರಿಯೇನು?

ಅತಿ ಚಮತ್ಕಾರದ ಕಥೆಯಿದು ಎಂಬ ಮುಖವಾಡ ಹೊದ್ದ, ಅತಿ ದಡ್ಡತನದಿಂದ ಕೂಡಿದ ಈ ತಮಿಳು ಸಿನೆಮಾದ ರಿಮೇಕ್ ಮಾಡಲು ಮನಸ್ಸು ಮಾಡಿರುವ ನಿರ್ಧಾರವನ್ನೇ ಬಹುಷಃ 'ಪಂಟತನ' ಎಂದು ಕರೆಯಬಹುದೇನೋ! ಇರಲಿ, ಸಿನೆಮಾ ಒಳಗೊಂಡಿರುವ ಒಂದೆರಡು ಸಂಗತದ ವಿಷಯಗಳನ್ನು ಮೊದಲಿಗೆ ನೆನಪಿಸಿಕೊಳ್ಳೋಣ. ಆರ್ಥಿಕ ಒತ್ತಡದಲ್ಲಿರುವ ನಾಯಕನಟಿ, ಅತ್ಯಲ್ಪ ಮತ್ತು ಬಿಡುವಿನ ಸಮಯದಲ್ಲಿಯೇ ಹೆಚ್ಚೆಚ್ಚು ಗಳಿಕೆ ಮಾಡಬಹುದು ಎಂಬ 'ನೆಟ್ವರ್ಕಿಂಗ್ ಸಂಸ್ಥೆ'ಯ ಸದಸ್ಯೆಯಾಗಿ ಕಂಡ ಕಂಡವರನ್ನೆಲ್ಲಾ ಅದರ ಜಾಲಕ್ಕೆ ಸೇರಿಸುವ ಉಪಕಥೆ ಬಹಳ ರಿಲೆವೆಂಟ್ ಆಗಿದ್ದು ಆಪ್ತವಾಗಿ ಮೂಡಿದೆ. ಚಿಟ್ ಫಂಡ್ ಹಗರಣವನ್ನು ಕೂಡ ಒಳಗೊಳ್ಳಲು ಪ್ರಯತ್ನಿಸಿರುವ ಎಳೆ ಕೂಡ ಒಂದು ಮಟ್ಟಕ್ಕೆ ಫಲ ನೀಡಿದೆ. 

ಇನ್ನುಳಿದಂತೆ ಸಿನೆಮಾದಲ್ಲಿ ನಾಯಕನಟನ ಹೀರೋಯಿಸಂನ ವೈಭವಕ್ಕಾಗಿಯೇ ಕಥೆ ಹೆಣೆದಿರುವಂತೆ ಕಂಡು, ಒಂದು ಕಡೆ ಒಡವೆ ಅಂಗಡಿಯ ಮಾಲೀಕನಿಗೂ, ಮತ್ತೊಂದು ಕಡೆ ಪೊಲೀಸರಿಗೂ ವಿಷಯ ತಿಳಿಸಿ ಕನ್ನ ಹಾಕಿ ಚಮತ್ಕಾರದಿಂದ ತಪ್ಪಿಸಿಕೊಂಡು, ಕೆಡುಕರನ್ನೇ ಬಲೆಗೆ ಬೀಳಿಸುವ ವ್ಯೂಹಕ್ಕೆ ನಗಬೇಕೋ, ಪಂಟರ ವಿಷಯ ನಮಗೇಕಪ್ಪಾ ಎಂದು ಕಡೆಗಣಿಸಬೇಕಾ ಎಂಬ ಗೊಂದಲವನ್ನು ಪ್ರೇಕ್ಷಕರಲ್ಲಿ ಯಶಸ್ವಿಯಾಗಿ ಮೂಡಿಸುತ್ತದೆ ಸಿನೆಮಾ. ಒಂದು ಹಂತಕ್ಕೆ ಯಾವುದೋ ರೋಚಕ ಕಥೆಯನ್ನು ಹೇಳಲು ನಿರ್ದೇಶಕ ಹೊರಟಿದ್ದಾರೆ ಎಂದೆನಿಸಿದರೂ, ಕೊನೆಗೆ ಚಮತ್ಕಾರತೆಯನ್ನು ಮೇಲು ಮಾಡಿ ಜಾಳು ಜಾಳಾದ ವಿಜೃಂಭಣೆಯನ್ನು ಮೆರೆದಿರುವುದಕ್ಕೆ ನಿರಾಶೆ ಮೂಡುತ್ತದೆ. 'ಪಂಟ'ನ ತಂತ್ರಗಾರಿಕೆಯ ಕನ್ನದ ಕಾರ್ಯಗಳು ಸಮಯದಲ್ಲಿ ಹಿಗ್ಗಿದಂತೆ ಭಾಸವಾಗಿ ಸಮಯ ಎಂಬುದು ಸಾಪೇಕ್ಷ ಎಂಬುದನ್ನು ಸಾಬೀತುಪಡಿಸುತ್ತವೆ. 

ತಾಂತ್ರಿಕವಾಗಿಯೂ ಸಿನೆಮಾದಲ್ಲಿ ಮಾಂತ್ರಿಕತೆಯ ಸ್ಪರ್ಶವಿಲ್ಲ. ಸಾಧಾರಣವಾಗಿ ಮೂಡಿರುವ ಛಾಯಾಗ್ರಹಣಕ್ಕೆ, ನಿರ್ದೇಶಕ ಎಸ್ ನಾರಾಯಣ್ ಅವರೇ ಸಂಗೀತ ನೀಡಿರುವ ಹಾಡುಗಳು ಮನಸ್ಸಿನಲ್ಲಿ ನಿಲ್ಲದೆ ಜಾರಿ ಮಾಯವಾಗುತ್ತವೆ. ಇನ್ನು ಗ್ರಾಫಿಕ್ಸ್ ನಲ್ಲಿ ಮೂಡಿರುವ ಒಂದು ಹಾಡಂತೂ ಈ ಚಿತ್ರತಂಡಕ್ಕೆ ಕಂಪ್ಯೂಟರ್ ಗ್ರಾಫಿಕ್ಸ್ ಬಳಕೆಯ ಇರಾದೆಯೇ ತಿಳಿದಿಲ್ಲವೆಲ್ಲ ಎಂಬ ವ್ಯಸನಕ್ಕೆ ದೂಡುತ್ತದೆ. 

ಎರಡನೇ ಸಿನೆಮಾದಲ್ಲಿ ನಟಿಸುತ್ತಿರುವ ಅನೂಪ್ ರೇವಣ್ಣ, ಸಿನಿಮಾದುದ್ದಕ್ಕೂ ಒಂದೇ ಮುಖಭಾವ ಮತ್ತು ಒಂದೇ ರೀತಿಯಲ್ಲಿ ಸಂಭಾಷಣೆಯನ್ನು ಉಲಿಯುವ ಪರಿ ಅವರಿನ್ನೂ ಪಳಗಬೇಕಾಗಿರುವುದನ್ನು ಸೂಚಿಸಿದರೆ, ಜೊತೆಗೆ ಆಗಾಗ ನಗುಮುಖವನ್ನು ಕೂಡ ನಟಿಸಿರುವುದು ಸ್ವಲ್ಪ ಸಮಾಧಾನ ನೀಡುತ್ತದೆ. ಚೊಚ್ಚಲ ಬಾರಿಗೆ ನಟಿಸಿರುವ ರಿತೀಕ್ಷ ಆಗಾಗ ಬಂದು ಹೋದರೆ, ರವಿ ಕಾಳೆ, ಕರಿಸುಬ್ಬು ಸೇರಿದಂತೆ ಉಳಿದ ತಾರಾಗಣವು ಶ್ರಮವಹಿಸಿ ನಟಿಸಿದೆ. 

ರಿಮೇಕ್ ನಿಪುಣರಾದ ನಿರ್ದೇಶಕ ಕಲಾಸಾಮ್ರಾಟ್ ಎಸ್ ನಾರಾಯಣ್ ಆಯ್ಕೆ, ಅವರೇ ಆಗಾಗ ಹೇಳಿಕೊಳ್ಳುವಂತೆ 'ಇಲ್ಲಿನ ಮಣ್ಣಿಗೆ ತಕ್ಕಂತೆ' ಅಳವಡಿಸಿಕೊಳ್ಳುವಿಕೆ, ತಾರಾಗಣದಿಂದ ಒಳ್ಳೆಯ ನಟನೆಯನ್ನು ತೆಗೆಯುವ ಶಕ್ತಿ, ಇನ್ನಷ್ಟು ಚೊಕ್ಕವಾಗಿ ಥ್ರಿಲ್ಲರ್ ರೂಪದಲ್ಲಿ ಜಾಣ್ಮೆಯಿಂದ ಮೂಡಿಸಬಹುದಾಗಿದ್ದ ಅವಕಾಶ ಎಲ್ಲವು ಎಲ್ಲೋ ಎಡವಿ ಸಾಧಾರಣ ರಿಮೇಕ್ ಒಂದನ್ನು ನಿರ್ದೇಶಿಸಿ ಮುಗಿಸಿದ್ದಾರೆ.

Posted by: GN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ಉಚಿತ ನೋಂದಣಿ !

Topics : Naa Pantaa Kano, Review, Kannada, Remake, ನಾ ಪಂಟ ಕಣೋ, ವಿಮರ್ಶೆ, ಚಿತ್ರವಿಮರ್ಶೆ, ಅನೂಪ್ ರೇವಣ್ಣ
English summary
Naa Pantaa Kano Kannada remake of Tamil flick Rajathandhiram is released today. Illogical story, average acting from lead pair makes it a difficult watch.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement