Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Patidars, Congress workers clash soon after

ಗುಜರಾತ್ ಚುನಾವಣೆ: ಕಾಂಗ್ರೆಸ್ ಟಿಕೆಟ್ ಗಾಗಿ ಪಟೇಲ್ ಸಮುದಾಯ, ಕೈ ಕಾರ್ಯಕರ್ತರ ಮಾರಾಮಾರಿ!

Mugabe ends first TV speech since coup without declaring resignation

ಪ್ರಜಾಪ್ರಭುತ್ವಕ್ಕೆ ಮನ್ನಣೆ ನೀಡಬೇಕು: ಜಿಂಬಾಂಬ್ವೆ ಸೇನೆಗೆ ಅಧ್ಯಕ್ಷ ಮುಗಾಬೆ!

Padmavati

ವಿವಾದಿತ 'ಪದ್ಮಾವತಿ' ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ

CM Siddaramaiah

ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರುವ ಸುದ್ದಿಯನ್ನು ತಳ್ಳಿಹಾಕಿದ ಮುಖ್ಯಮಂತ್ರಿ

Jammu And Kashmir Police

ಜಮ್ಮು ಮತ್ತು ಕಾಶ್ಮೀರ: 3 ಭಯೋತ್ಪಾದಕರನ್ನು ಬಂಧಿಸಿದ ಜಮ್ಮು ಪೊಲೀಸರು

RJD chief Lalu Prasad

ಸಿಂಹ ನೋಡಿ ಹೆದರುತ್ತಿದ್ದ ಜನರು ಇಂದು ಮೋದಿಯಿಂದಾಗಿ ಹಸು ನೋಡಿ ಹೆದರುತ್ತಿದ್ದಾರೆ: ಲಾಲೂ

Bharatsinh Solanki

ಗುಜರಾತ್ ಚುನಾವಣೆ: ಸ್ಪರ್ಧೆಯಿಂದ ಹಿಂದೆ ಸರಿದ ಕಾಂಗ್ರೆಸ್ ಅಧ್ಯಕ್ಷ!

File photo

ಕೆಪಿಎಂಇ ಕಾಯ್ದೆ ವಿವಾದ: ಇಂದು ಉಭಯ ಸದನಗಳಲ್ಲಿ ಮಂಡನೆ

Actor turned politician Ramya

ಬಿಜೆಪಿಗೆ ಪ್ರಬಲ ಸ್ಪರ್ಧೆಯೊಡ್ಡಲು ರಮ್ಯರನ್ನು ಬೆಂಗಳೂರಿಂದ ಸ್ಪರ್ಧಾ ಕಣಕ್ಕಿಳಿಸಲು ಸಿದ್ದು ಒಲವು?

UIDAI

ಕೇಂದ್ರ, ರಾಜ್ಯ ಸರ್ಕಾರದ 210 ವೆಬ್ ಸೈಟ್ ಗಳಿಂದ ಆಧಾರ್ ವಿವರಗಳು ಬಹಿರಂಗ: ಯುಐಡಿಎಐ

Dhawan-KL Rahul

ಮೊದಲ ಟೆಸ್ಟ್: ಧವನ್, ಕೆಎಲ್ ರಾಹುಲ್ ಅರ್ಧಶತಕ, 2ನೇ ಇನ್ನಿಂಗ್ಸ್‌ನಲ್ಲಿ ಭಾರತ 171/1

Indian Army

ಕಾಶ್ಮೀರ ಕಣಿವೆಯಲ್ಲಿ ಎಲ್ಇಟಿ ಉನ್ನತ ನಾಯಕತ್ವವನ್ನು ಸದೆಬಡಿಯಲಾಗಿದೆ: ಭಾರತೀಯ ಸೇನೆ

Hackers from China break into secret Indian government video chat

ಭಾರತದ ಉನ್ನತಮಟ್ಟದ ಅಧಿಕಾರಿಗಳ ರಹಸ್ಯ ವಿಡಿಯೋ ಚಾಟ್ ಸೋರಿಕೆ; ಚೀನಾ ಹ್ಯಾಕರ್ ಗಳಿಂದ ದಾಳಿ!

ಮುಖಪುಟ >> ಅಂಕಣಗಳು

ಗಂಗಾವತರಣ - ಓದುಗರಲ್ಲಿ ಒಂದಿಷ್ಟು ಮನವಿ

ರಾಮಾಯಣ ಅವಲೋಕನ-97
River Ganga representational image

ಗಂಗಾ ನದಿ (ಸಂಗ್ರಹ ಚಿತ್ರ)

"ಅಯೋಧ್ಯೆಗೆ ಬರದಿದ್ದರೇನು, ಭಾರತಕ್ಕೆ ಒಳಿತಾಯಿತಲ್ಲ?! ನೆರೆಹೊರೆಯ ರಾಜ್ಯಗಳಲ್ಲಿ ಗಂಗೆ ಹರಿದು ಜನರಿಗೆ ಸುಖ ಸಿಕ್ಕಿತಲ್ಲ? ಅವರು ಗಂಗೆ ಕಂಡಾಗಲೆಲ್ಲ ನಮ್ಮ ವಂಶದ ಭಗೀರಥನನ್ನು ನೆನೆಸಿಕೊಳ್ಳುವರಲ್ಲ, ಅಷ್ಟು ಸಾಕು. ಭಾರತೀಯರಿಗೆ ಉಪಕಾರವಾಯಿತಲ್ಲ; ನಮ್ಮ ಜನಕ್ಕೆ ಊಟ ಕೊಟ್ಟಳಲ್ಲ ಆ ತಾಯಿ, ಆಕೆಗೆ ನಾವು ಎಂದಿಗೂ ಋಣಿಯಾಗಿರಬೇಕು. " ಹೀಗೆ ನುಡಿದ ರೋಮಾಂಚಿತ ರಾಮರು ಕೇಳಿದರು; " ಮೂರು ದಾರಿಯ ದೇವಿ ಎಂದು ಕರೆಯುತ್ತಾರಲ್ಲ ಜನ, ಏಕೆ? " ವಿಶ್ವಮಿತ್ರರು ಅದಕ್ಕೆ ಎರಡು ಕಾರಣಗಳನ್ನು ಹೇಳುತ್ತಾರೆ.  " ಒಂದು, ಆಕೆ ಭಗೀರಥನ ಹಿಂದೆ ಬಂದಂತೆಯೇ ಪೂರ್ವಕ್ಕೆ ಮೂರು, ಪಶ್ಚಿಮಕ್ಕೆ ಮೂರು ಶಾಖೆಗಳಾಗಿ ಹರಿದಳು. ಎಂದರೆ, ಪೂರ್ವಕ್ಕೆ ಹ್ಲಾದಿನಿ, ಪಾವನಿ, ಮತ್ತು ನಲಿನಿ ಎಂಬ ಮೂರು ಗಂಗಾನದಿಗಳು 
(ಹ್ಲಾದಿನಿ ಪಾವನೀ ಚೈವ ನಲಿನೀ ಚ ತಥಾ ಪರ
ತಿಸ್ರಃ ಪ್ರಾಚೀದಿಶಂ ಜಗ್ಮುರ್ಗಂಗಾಃ ಶಿವಜಲಾಃ ಶುಭಾಃ)

ಹಾಗೆಯೇ ಪಶ್ಚಿಮಕ್ಕೆ ಹರಿದ ಮೂರು ನದಿಗಳೆಂದರೆ ಸೀತಾ, ಸುಚಕ್ಷು, ಮತ್ತು ಸಿಂಧು 
(ಸುಚಕ್ಷುಶ್ಚೈವ ಸೀತಾಚ ಸಿಂಧುಶ್ಚೈವ ಮಹಾನದೀ
ತ್ರಿಸ್ರಸ್ತ್ವೇತಾ ದಿಶಂ ಜಗ್ಮುಃ ಪ್ರತೀಚೀಂತು ಶುಭೋದಕಾಃ)

ಅಂತೆಯೇ ಭಗೀರಥನನ್ನು ಅನುಸರಿಸಿ ಬಂದದ್ದು ಭಾಗೀರಥಿ . ಅವಳಿಗೆ ಮತ್ತೊಂದು ಹೆಸರೇ ಅಲಕನಂದೆ.
(ತಥೈವ ಅಲಕನಂದಾಚ ವಿಶ್ರುತಾ ಲೋಕಪಾವನಿ 
ಸಪ್ತಮೀಚ ಅನ್ವಗತ್ತಾಸಾಂ ಭಗೀರಥಮಥೋ ನೃಪಂ)

ಇದು ಕಾರಣ ಮೂರು ದಿಕ್ಕಿಗೆ ಆಕೆ ಹರಿದದ್ದರಿಂದ ಜನರು ಆಕೆಯನ್ನು ಮೂರು ದಾರಿಯ ದೇವಿ ಎಂದರು. ಎರಡನೆಯ ಕಾರಣವೆಂದರೆ, ಆಕೆ ಇದ್ದದ್ದು ಸ್ವರ್ಗದಲ್ಲಿ, ಬಂದದ್ದು ಮರ್ತ್ಯಕ್ಕೆ, ಕೊನೆಗೆ ಇಳಿದದ್ದು ಪಾತಾಳಕ್ಕೆ. ಎಂದರೆ ಈ ಮೂರು ಸ್ಥಳಗಳಲ್ಲೂ ಆಕೆ ಸಂಚಾರ ಮಾಡಿದ್ದರಿಂದ ಆಕೆಯನ್ನು ತ್ರಿಪಥಗಾ ಎಂದು ಕರೆದರು. "ವಿಶ್ವಮಿತ್ರರು ಕಥೆ ಮುಗಿಸಿ ಮೇಲೆದ್ದರು, ಎಲ್ಲರೂ ವಿಶ್ರಮಿಸಲು ತಮ್ಮ ತಮ್ಮ ಕುಟೀರಗಳಿಗೆ ತೆರಳಿದರು. ಈ ಗಂಗಾವತರಣದ ಫಲಶ್ರುತಿಯನ್ನು ಹೇಳಿ ಈ ಪ್ರಕರಣ ಮುಗಿಸೋಣವೇ?

" ಗಂಗಾವತರಣದ ಕಥೆಯನ್ನು ಯಾರು ಕೇಳುತ್ತಾರೋ, ಅವರು ಪುಣ್ಯವಂತರು. ಅವರೇ ಧನ್ಯರು. ಅವರೇ ಕೀರ್ತಿಶಾಲಿಗಳು. ಅವರಿಗೇ ದೀರ್ಘಾಯುಷ್ಯ. ಅವರಿಗೆ ಸಂತಾನ ಪ್ರಾಪ್ತಿಯಾಗಿ, ನಾಲ್ಕು ವರ್ಣದವರಿಗೂ ಮುಂದೆ ಸ್ವರ್ಗ ಸಿಗುತ್ತದೆ. ಗಂಗಾವತರಣ ಪಾರಾಯಣ ಮಾಡಿಸಿದರೆ, ಪಿತೃ ದೇವತೆಗಳಿಗೆ ಆನಂದವಾಗುತ್ತದೆ. ದೇವತೆಗಳಿಗೂ ಸಂತಸವಾಗುತ್ತದೆ. ಅಂತಹ ಪಾಪಹಾರಿಣಿಯಾದ ಗಂಗಾವತರಣದ ಶ್ರವಣ ಶುಭಕರವಾದುದು". 
(ಧನ್ಯಂ ಯಶಸ್ಯ ಮಾಯುಷ್ಯಂ ಪುತ್ರ್ಯಂ ಸ್ವರ್ಗ್ಯ ಮತೀವಚ 
ಯಃ ಶ್ರಾವಯತಿ ವಿಪ್ರೇಷು ಕ್ಷತ್ರಿಯೇಷ್ವಿತರೇಷು ಚ 
ಪ್ರೀಯಂತೇ ಪಿತರಸ್ತಸ್ಯ ಪ್ರೀಯಂತೇ ದೈವತಾನಿ ಚ
ಇದಮಾಖ್ಯಾನಮವ್ಯಗ್ರೋ ಗಂಗಾವತರಣಂ ಶುಭಂ)

ಭಾರತೀಯರಿಗೆ ಭಾಗ್ಯ ವಿಧಾತೆಯಾದ ಗಂಗಾ ನದಿ ಈಗ ಜೀವ ನದಿಯಾಗಿ, ವರ್ಷ ಪೂರ ಹರಿಯುತ್ತಿದ್ದು, ಉತ್ತರ ಭಾರತವನ್ನೆಲ್ಲ ಕ್ಷಾಮ ರಹಿತವನ್ನಾಗಿ, ನಿತ್ಯ ಹರಿದ್ವರ್ಣದ ನಗರಿಯನ್ನಾಗಿ ಮಾಡಿಬಿಟ್ಟಿದ್ದಾಳೆ. ಜನರಿಗೆ ಗಂಗೆಯೆಂದರೆ ತಾಯಿಯಿದ್ದಂತೆ! ಅದು ಕಾರಣವೇ ಹರಿದ್ವಾರವನ್ನು ಗಂಗಾದ್ವಾರವೆಂದು ಕರೆದು ಪ್ರತಿ ಸಂಜೆ ಆಕೆಗೆ ಗಂಗಾರತಿಯೆಂಬ ಒಂದು ಆಕರ್ಷಕ ಕಾರ್ಯಕ್ರಮವನ್ನೇರ್ಪಡಿಸುತ್ತಾರೆ.

ಈ ಗಂಗಾರತಿಯನ್ನು ನೋಡಲೇ, ಆ ಗಂಗಾತಟಕ್ಕೆ ಪ್ರತಿ ನಿತ್ಯ ಲಕ್ಷ-ಲಕ್ಷ ಜನ ಆಗಮಿಸುತ್ತಾರೆಂಬುದೇ, ನಮ್ಮಲ್ಲಿ ಗಂಗಾ ಶ್ರದ್ಧೆ - ಗೌರವಗಳು ಎಷ್ಟಿವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ. ಸಾಯುವ ಮುನ್ನ ಗಂಗಾಜಲವನ್ನು ಕುಡಿದು ಸಾಯಲು ಬಯಸುತ್ತಾರೆ ಹಿಂದೂಗಳು. ಆಕೆಯಲ್ಲಿ ಮುಳುಗೆದ್ದರೆ ನಮ್ಮ ಪಾಪವೆಲ್ಲ ಕೊಚ್ಚಿ ಹೋಗುವುದೆಂದು ನಂಬುತ್ತೇವೆ ನಾವು. ಸತ್ತ ಮನುಷ್ಯನ ಅಸ್ಥಿಗಳನ್ನು ಆಕೆಯಲ್ಲಿ ವಿಸರ್ಜಿಸಿದರೆ ಮುಕ್ತಿ ದೊರೆಯುವುದೆಂಬುದನ್ನು ಅಪಾರ್ಥವಾಗಿ ಭಾವಿಸಿ, ಸತ್ತ ಹೆಣಗಳನ್ನೇ ಆಕೆಯಲ್ಲಿ ವಿಸರ್ಜಿಸಿ ಗಂಗೆಯನ್ನು ಹೊಲಸು ಮಾಡುತ್ತಿದ್ದೇವೆ !! ಎಂತಹ ಅನಾಹುತವೆಂದರೆ, ಪುಣ್ಯಶಾಲಿಯಾದ ಗಂಗೆಯನ್ನು ನಾವು ನಮ್ಮೆಲ್ಲ ಧರ್ಮಶ್ರದ್ಧೆಗಳಿಂದ ಅರೆಬೆಂದ ಹೆಣಗಳಿಂದ ಪುಣ್ಯನಾಶಿನಿಯನ್ನಾಗಿ ಮಾಡುತ್ತಿದ್ದೇವೆ. ಅಂತೆಯೇ ಕಾರ್ಖಾನೆಗಳ ಹೊಲಸನ್ನೆಲ್ಲ ತುಂಬಿ ಕೊಚ್ಚೆ ಗಂಗೆಯನ್ನಾಗಿ ಮಾಡುತ್ತಿದ್ದೇವೆ. 

(ಆತ್ಮೀಯರೆ, ಒಂದು ವಿನಂತಿ. ಈ ಗಂಗಾವತರಣ ಪ್ರಕರಣದಲ್ಲಿ ಒಂದು ಅಂಶವನ್ನು ಬಿಟ್ಟಿದ್ದೇನೆ, ಮತ್ತು ಒಂದು ಅಂಶವನ್ನು ಬದಲಿಸಿದ್ದೇನೆ. ಮೂಲದಲ್ಲಿ ಸಗರನ ಯಙ್ಞ, ಆ ಯಙ್ಞ ಪ್ರತಿನಿಧಿಯಾದ ಯಙ್ಞಾಶ್ವ, ಅದನ್ನು ಇಂದ್ರ ಅಪಹರಿಸುವುದು, ಆ ಅಶ್ವವನ್ನು ಹುಡುಕಲು ಸಗರ ಪುತ್ರರು ನೆಲವನ್ನು ಅಗೆದು ಪಾತಾಳಕ್ಕೆ ಹೋಗುವುದು, ಅಲ್ಲಿ ಅದು ಕಪಿಲ ಮಹರ್ಷಿಯ ಬಳಿ ಇರುವುದನ್ನು ಕಂಡು ಆ ಋಷಿಯ ಮೇಲೆ ಆಕ್ರಮಣ ಮಾಡಲು ನುಗ್ಗಿದಾಗ ಕಪಿಲರ ಹೂಂಕಾರ ಮಾತ್ರದಿಂದ ಅವರೆಲ್ಲ ಸುಟ್ಟು ಬೀಳುವುದು, ಕೊನೆಗೆ ಅಂಶುಮಂತ ಬಂದು, ಅವರ ನಾಶವನ್ನು ಕಂಡು, ಅವರಿಗೆ ತರ್ಪಣ ಕೊಡಲು ಹೋದಾಗ ಗರುತ್ಮಂತ ಬಂದು" ದೇವಲೋಕದ ಗಂಗೆ ಇವರ ಮೇಲೆ ಹರಿದರೆ ಮಾತ್ರ ಇವರಿಗೆ ಸದ್ಗತಿ" ಎಂಬುದು, ಈ ವಿಭಾವದಿಂದಾಗಿ ಅಂಶುಮಂತ, ದಿಲೀಪ, ಭಗೀರಥರು ಗಂಗೆಗಾಗಿ ತಪಸ್ಸು ಮಾಡುವುದು... ಇವೆಲ್ಲ ವಿವರವಾಗಿ ಬಂದಿದೆ.

ಆದರೆ ಸಗರ ಪುತ್ರರು ತೋಡಿದ ತಗ್ಗಿನಲ್ಲಿ (ಅದೆಷ್ಟೇ ದೊಡ್ಡದಿರಲಿ!!!!! ) ಮುಂದೆ ಗಂಗೆ ತುಂಬಿದ್ದರಿಂದ ಅದಕ್ಕೆ ಸಾಗರ ಎಂಬ ಹೆಸರು ಬಂದಿತು ಎಂಬುದು ಸಾಗರದ ವಿಸ್ತಾರದ ಕಲ್ಪನೆ ಇಲ್ಲದೇ, ಸಮುದ್ರಕ್ಕೆ ಮಾಡಿದ ಅವಮಾನವಾಗುತ್ತದೆ. ಸಗರ ಪುತ್ರರು ಪಾತಾಳಕ್ಕೆ ಹೋಗುವ ದಾರಿಯಲ್ಲಿ ಈ ಭೂಮಿಯನ್ನು ಹೊತ್ತಿರುವ ಆನೆಗಳು, ಹಾಗೂ ಅವುಗಳ ತಲೆ ಕೊಡಹುವುದರಿಂದ ಉಂಟಾಗುವ ಭೂಕಂಪ ಕಾರಣಗಳು, ಭೂಮಿ ದುಂಡಗಿದೆಯೆಂದು ಗೊತ್ತಿಲ್ಲದಾಗ ಮತ್ತು ಈ ಭೂಮಿಯನ್ನು ಅಷ್ಟ ದಿಗ್ಗಜಗಳು ಹೊತ್ತಿವೆ ಎಂಬ ಅಙ್ಞಾನದಿಂದ ಮಾತ್ರವೇ ಒಪ್ಪುವ ಪೌರಾಣಿಕ ವಿವರಣೆಯನ್ನು ನಂಬುವವರಿಗೆ ಮಾತ್ರ ಸರಿ ಕಾಣುತ್ತದೆ. ಅದು ಕಾರಣ ಈ ಸಗರೋಪಾಖ್ಯಾನವನ್ನು ಪೂರ್ಣ ಬಿಟ್ಟಿರುವೆ. 

ಇನ್ನು ಅಗಸ್ತ್ಯರು ಸಮುದ್ರವನ್ನು ಕುಡಿದರೆಂಬ ಪ್ರಕರಣ. ನಿಜಕ್ಕೂ ಇದು ಸಾಧ್ಯವೇ ಇಲ್ಲದ ಕಲ್ಪನೆ. ಅಕಸ್ಮಾತ್ ಹಾಗೊಮ್ಮೆ ಆ ಉಪ್ಪು ನೀರನ್ನೆಲ್ಲ, ಎಂದರೆ ಭೂಮಿಯ ಮೇಲಿರುವ ನೀರನ್ನೆಲ್ಲ ಒಬ್ಬ ವ್ಯಕ್ತಿ, ಮಹಾತ್ಮ, ಮಹಾನ್ ಋಷಿ, ಏನೆಲ್ಲ ಶಕ್ತಿಗಳನ್ನು ಅನ್ವಯಿಸಿದರೂ ಅವನಿಗೆ ಸಾಧ್ಯವೇ ಆಗದ ಆ ನೀರು ಕುಡಿವ ಸಾಮರ್ಥ್ಯವನ್ನು ಅಕಸ್ಮಾತ್ ಒಪ್ಪಿದರೂ, (!!!) ಭೂಮಿಯ ಮೇಲಿನ ನೀರೆಲ್ಲ ಮಾಯವಾದರೆ ಮಾರನೇಯ ದಿನದಿಂದಲೇ ನೀರಿಗೇನು ಗತಿ? ಕುಡಿವ, ಬಳಸುವ, ನೀರಿಗೇನು ಮಾಡಬೇಕು? ಇಡೀ ಭೂಮಿಯಲ್ಲಿ ನೀರೇ ಇಲ್ಲದೇ ಕೆಲವೇ ದಿನಗಳಲ್ಲಿ ಮನು ಕುಲವೇ ಸತ್ತು ಬೀಳಬೇಕು.

ಅಗಸ್ತ್ಯರ ಸಮುದ್ರ ಪ್ರಾಶನಾ ನಂತರ ಅಂಶುಮಂತ ಹಾಗೂ ದಿಲೀಪ, ಎಂದರೆ ಎರಡು ತಲೆಮಾರುಗಳು ಬಹು ಕಡಿಮೆ ಎಂದರೂ ನಮ್ಮ ಪುಟ್ಟ ಆಯುಃಪ್ರಮಾಣದ ಲೆಕ್ಕಾಚಾರ ಹಾಕಿದರೂ ಐವತ್ತು ವರ್ಷಗಳು. ಮತ್ತು ಭಗೀರಥನ ಅರ್ಧ ಆಯುಃಕಾಲ ಹನ್ನೆರಡು ಹದಿಮೂರು, ಒಟ್ಟು ಅರುವತ್ತೆರಡು ಅರುವತ್ಮೂರು ವರ್ಷಗಳ ಕಾಲ ಈ ಭೂಮಿಯ ಮೇಲೆ ನೀರೇ ಇರುವುದಿಲ್ಲ!!! ಬೇರೆ ಬೇರೆಯ ನದಿಗಳು ಇದ್ದವಲ್ಲಾ ಎಂಬ ಸಮಾಧಾನ ಪಡಲೂ ಸಾಧ್ಯವಿಲ್ಲ. ಏಕೆಂದರೆ ಸಮುದ್ರವೇ ಇಲ್ಲದಾಗ, ಯಾವ ನೀರು ಆವಿಯಾದಾತು; ಯಾವ ಮೋಡಗಳು ಹುಟ್ಟಾತು; ಯಾವ ನದೀ ಪಾತ್ರಗಳಲ್ಲಿ ಸುರಿದು ನದಿಗಳು ಹರಿದಾತು? ಹೀಗಾಗಿ ಭಾರತದಲ್ಲಿ (ಪ್ರಪಂಚಕ್ಕೇ ಅನ್ವಯಿಸಬಹುದು!!!) ಅಷ್ಟು ದೀರ್ಘ ಕಾಲ ನಿರ್ಜಲ ಸ್ಥಿತಿ ಇತ್ತೆಂಬುದು ಅವಾಸ್ತವ ಹಾಗೂ ಅನೂಹ್ಯ. ಈ ಕಾರಣಗಳಿಂದಾಗಿ, ಸಮುದ್ರ ಕುಡಿಯುವುದನ್ನು ಸಂಪೂರ್ಣವಾಗಿ ಬದಲಿಸಿಕೊಂಡಿರುವುದನ್ನು ಓದುಗರು ಒಪ್ಪುವರೆಂದು ಭಾವಿಸುವೆ- ಲೇ)

-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com
ಸಂಬಂಧಿಸಿದ್ದು...

ಲೇಖಕರ ಕುರಿತು : ವಿದ್ವಾನ್ ಡಾ.ಪಾವಗಡ ಪ್ರಕಾಶ್ ರಾವ್ ಪ್ರಸಿದ್ಧ, ಬಹುಶೃತ ವಿದ್ವಾಂಸರು. 2003 ರಿಂದ ಚಂದನ ವಾಹಿನಿಯಲ್ಲಿ ಇವರು ನಡೆಸಿಕೊಡುತ್ತಿದ್ದ 'ಸತ್ಯದರ್ಶನ' ಕಾರ್ಯಕ್ರಮ 1,111 ಸಂಚಿಕೆಗಳನ್ನು ಪೂರೈಸಿ ಮುಕ್ತಾಯಗೊಂಡಿದ್ದು ಧರ್ಮ, ಧರ್ಮ ಗ್ರಂಥ, ಆಚರಣೆಗಳಿಗೆ ಸಂಬಂಧಿಸಿದಂತೆ ಜನರ ಸಂಶಯಗಳ ನಿವಾರಣೆಗೆ ಅಪಾರ ಜನಪ್ರಿಯತೆ ಗಳಿಸಿದೆ. ಸತ್ಯದರ್ಶನದೊಂದಿಗೆ ಭಗವದ್ಗೀತೆಯ 712 ಉಪನ್ಯಾಸಗಳು ಸೇರಿ ಒಟ್ಟು ದಾಖಲೆಯ 1823 ಉಪನ್ಯಾಸಗಳನ್ನು ನೀಡಿದ್ದು, ನಾಡಿದ ಪ್ರಸಿದ್ಧ ಸಂಸ್ಥೆಗಳು ಜ್ಞಾನ ಪ್ರಕಾಶ, ವಿದ್ಯಾ ವಿಶಾರದ, ಜ್ಞಾನ ಭಾಸ್ಕರ ಎಂಬ ಬಿರುದುಗಳನ್ನು ನೀಡಿ ಗೌರವಿಸಿವೆ. ತುಮಕೂರು ಹಾಗೂ ಮೈಸೂರು ವಿಶ್ವ ವಿದ್ಯಾನಿಲಯಗಳಿಂದ ಪಿಹೆಚ್ ಡಿ ಪದವಿ (ಡಾಕ್ಟೊರೇಟ್ ಗಳನ್ನು) ಗಳಿಸಿದ್ದಾರೆ.
Posted by: SBV | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ಉಚಿತ ನೋಂದಣಿ !

Topics : Ramayana avalokana, Ganga, Tripathaga, ರಾಮಾಯಣ ಅವಲೋಕನ, ಗಂಗೆ, ತ್ರಿಪಥಗಾ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement