Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Mamata Banerjee

ಯಾರಾದರೂ ನನ್ನ ಕುತ್ತಿಗೆ ಕತ್ತರಿಸಬಹುದು, ಆದರೆ ನಾನು ಏನು ಮಾಡಬೇಕು ಎಂಬುದನ್ನು ಹೇಳಬೇಡಿ: ಮಮತಾ ಪ್ರತಿಕ್ರಿಯೆ

Rajnath Singh

ರೋಹಿಂಗ್ಯಾಗಳು ಅಕ್ರಮ ವಲಸಿಗರು, ನಿರಾಶ್ರಿತರಲ್ಲ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್

Draft constitution: SC expresses anguish over

ಬಿಸಿಸಿಐ ಅಧಿಕಾರಿಗಳ 'ಹಠಮಾರಿ ವರ್ತನೆ'ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ!

MS Dhoni

ವಿಕೆಟ್ ಹಿಂದೆ ತಾವೇ 'ಕಿಂಗ್' ಎಂಬುದನ್ನು ಮತ್ತೆ ಸಾಬೀತು ಪಡಿಸಿದ ಎಂಎಸ್ ಧೋನಿ!

Hardik Pandya

ಭುವನೇಶ್ವರ್ ಬಾರಿಸಿದ ಚೆಂಡು ಬಡಿದು ಮೈದಾನದಲ್ಲೆ ಕುಸಿದು ಬಿದ್ದ ಹಾರ್ದಿಕ್ ಪಾಂಡ್ಯ

Virat Kohli

ಕೊನೆಯ ಓವರ್‌ಗಳಲ್ಲಿ ಕುಸಿದ ಟೀಂ ಇಂಡಿಯಾ; 252 ರನ್‍ಗಳಿಗೆ ಆಲೌಟ್

Baba Ramdev

ಗುರ್ದಾಸ್ಪುರ್ ಉಪ ಚುನಾವಣೆ: ಬಾಬಾ ರಾಮ್ ದೇವ್ ಸೂಚಿತ ಸ್ವರಣ್ ಸಲಾರಿಯಾ ಬಿಜೆಪಿ ಅಭ್ಯರ್ಥಿ

parrot

ಒಡತಿಯನ್ನು ಮಿಮಿಕ್ರಿ ಮಾಡಿ ಅಮೆಜಾನ್ ನಲ್ಲಿ ಆನ್ ಲೈನ್ ಶಾಂಪಿಗ್ ಮಾಡಿದ ಗಿಳಿ

Centre plans to loosen fiscal deficit target for spending ₹50,000 cr. more

ಆರ್ಥಿಕ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರದಿಂದ 50 ಸಾವಿರ ಕೋಟಿ ರು.ಪ್ಯಾಕೇಜ್‌

Dawood Ibrahim

ಸ್ವದೇಶಕ್ಕೆ ಮರಳಲು ಕೇಂದ್ರದ ಜತೆ ದಾವೂದ್ ಇಬ್ರಾಹಿಂ ಮಾತುಕತೆ: ರಾಜ್ ಠಾಕ್ರೆ ಆರೋಪ

World famous Nada Habba Dasara Kick started in Mysuru

ವೈಭವದ ನಾಡ ಹಬ್ಬ ದಸರಾಗೆ ಚಾಲನೆ; ನಿತ್ಯೋತ್ಸವ ಕವಿಯಿಂದ ಉದ್ಘಾಟನೆ

Delhi CM Arvind Kejriwal urges actor Kamal Haasan to enter politics

ರಾಜಕೀಯಕ್ಕೆ ಬರುವಂತೆ ಕಮಲ್ ಹಾಸನ್ ಗೆ ಅರವಿಂದ್ ಕೇಜ್ರಿವಾಲ್ ಒತ್ತಾಯ

ಹುಲಿಗಳ ಕಾದಾಟ

ಬನ್ನೇರುಘಟ್ಟ: ಬೆಂಗಾಲ್ ಟೈಗರ್ಸ್ ದಾಳಿಗೆ ಬಿಳಿ ಹುಲಿ ಸಾವು; ವಿಡಿಯೋ ವೈರಲ್

ಮುಖಪುಟ >> ಅಂಕಣಗಳು

ದೇವತೆಗಳ ನಾಶಕ್ಕಾಗಿ ಭೂರಿ ಯೋಜನೆ

ರಾಮಾಯಣ ಅವಲೋಕನ-92
Sage Agastya

ಅಗಸ್ತ್ಯರು

ಅದೊಂದು ಎರಡು ಘಟನೆಗಳ, ಆ ಘಟನಾ ಪರಂಪರೆಗಳ ಸಂಯೋಗ. ಒಂದು, ದೇವತೆಗಳ ನಾಶಕ್ಕಾಗಿ ದಾನವರ ಭೂರಿ ಯೋಜನೆ. ಎರಡು, ಭೂಮಿಯಿಂದ ಮಾಯವಾದ ನೀರನ್ನು ಮತ್ತೆ ಸಂಗ್ರಹಿಸುವ ಪ್ರಯತ್ನ. 

ದೇವತೆಗಳು ಅಮರರು. ಅಂದರೆ ಅರ್ಥ ಅವರು ಸಾಯುವುದಿಲ್ಲ. ಎಂದಮಾತ್ರಕ್ಕೇ ಅವರು ಸರ್ವಶಕ್ತರೆಂದೇನೂ ಅರ್ಥವಲ್ಲ. ಅವರಿಗೆ ಶಕ್ತಿ ಬರಬೇಕಿದ್ದರೆ, ಇಲ್ಲಿ ಜನರು ಮಾಡುವ ಪೂಜೆ, ವ್ರತ, ಯಙ್ಞಗಳಿಂದ! ಹೇಗೆ? ಈ ಕಾರ್ಯಗಳಲ್ಲಿ ಅವರು ನೀಡುವ ನೈವೇದ್ಯ ದೇವತೆಗಳಿಗೆ ಆಹಾರ. ಹಾಗಾದರೆ ಈ ಆಹಾರವನ್ನೇ ಅವರಿಗೆ ಸಿಗದಂತೆ ಮಾಡಿದರೆ? ಆಗ ದೇವತೆಗಳು ದುರ್ಬಲರು. ಅವರನ್ನು ನಿರ್ವೀರ್ಯರನ್ನಾಗಿ ಮಾಡಿ, ಸೋಲಿಸಿ, ಬಂದಿಗಳನ್ನಾಗಿ ಮಾಡಿ, ಸ್ವರ್ಗವನ್ನು ನಮ್ಮ ಅಧೀನಕ್ಕೆ ತೆಗೆದುಕೊಳ್ಳಬಾರದೇಕೆ?.... ಇದು ದಾನವರ, ರಾಕ್ಷಸರ, ಅಸುರರ, ದೈತ್ಯರ, ಸಂಯುಕ್ತ ಸಂಘದಲ್ಲಿ ತೇಲಿ ಬಂದ ಯೋಜನೆ. ಕಾರ್ಯರೂಪಕ್ಕೆ ತರಲು ಅಂದಿನ ಅಸುರಾಧಿಪತಿಗಳಾದ ಭಯೇಂದ್ರ ಮತ್ತು ಭೀಕರೇಂದ್ರರಿಗೆ ಅಧಿಕಾರ ಕೊಟ್ಟರು. 

ಯೋಜನೆ ಬಹಳ ಸರಳ. ಸಾಮಾನ್ಯರನ್ನು ಬಿಡಿ, ಅವರ ಪೂಜೆ, ಅದರಲ್ಲವರಿಗಿರುವ ಭಕ್ತಿ, ತನ್ಮೂನಕ ನೈವೇದ್ಯ ಎಂದೂ ಗರಿಷ್ಠವಲ್ಲ. ಆದರೆ ನಿಜವಾಗಿಯೂ ದೇವತೆಗಳು ಕೊಬ್ಬಿರುವುದು ಆಗಾಗ ನಡೆಯುವ ಯಙ್ಞಗಳಿಂದ. ಈ ಯಾಗಗಳನ್ನೇ ನಡೆಯದಂತೆ ಮಾಡಿದರೆ ಹೇಗೆ? ಹೇಗೂ ಈಗ ಯಾಗಗಳು ಹೆಚ್ಚು ನಡೆಯುವುದು ಋಷ್ಯಾಶ್ರಮಗಳಲ್ಲಿ. ಋಷಿಗಳನ್ನೇ ಸಾಯಿಸಿಬಿಟ್ಟರೆ ಯಾಗಗಳು ಹೇಗೆ ನಡೆಯುತ್ತವೆ? ಆದರೆ.... ಅಷ್ಟು ಸುಲಭವಲ್ಲ ಅದು. ವಸಿಷ್ಠರೋ, ವಿಶ್ವಮಿತ್ರರೋ, ಸೂತ್ರಕರೋ, ಸೋಮಕರೋ, ವಾಮದೇವರೋ, ಸುಮದನರೋ, ಅತ್ರಿ ಮಹರ್ಷಿಗಳೋ, ಇಂತಹ ದೊಡ್ಡವರ ಹತ್ತಿರ ಹೋಗಲು ಸಾಧ್ಯವೇ? ಅವರು ಹೂಂಕರಿಸಿದರೆ ಸಾಕು, ನಾವು ಸುಟ್ಟು ಹೋಗುತ್ತೇವೆ.

ಎಂದಮೇಲೆ ಅವರನ್ನು ಸಾಯಿಸುವ ಮಾತೆಲ್ಲಿ ಬಂತು? ಹಾಗಲ್ಲ, ಇಂತಹ ಮಹಾಮಾನ್ಯರು ಎಷ್ಟು ಮಂದಿ ಇದ್ದಾರೆ? ಹತ್ತು? ಇಪ್ಪತ್ತು? ಐದು ನೂರು? ಅಷ್ಟೇ. ಅವರನ್ನು ಬಿಡೋಣ. ಉಳಿದ ಸಾಮಾನ್ಯ ಸಾಧಾರಣ ಸಾವಿರಾರು ಋಷಿಗಳು ನಿತ್ಯ ಯಾಗ ಮಾಡುತ್ತಾರಲ್ಲ; ಅವರ ಸಂಖ್ಯೆಯೇ ದೊಡ್ಡದು. ಮೊದಲು ಅವರನ್ನು ಮುಗಿಸೋಣ. ಅದರಿಂದ ಸಾಕಷ್ಟು ಆಹಾರ ದೇವತೆಗಳಿಗೆ ಕಡಿಮೆಯಾಗುತ್ತದೆ. ಮುಂದೆ ನೋಡೋಣ. ಅಲ್ಲಿಗೆ ಒಂದು ಯೋಜನೆ ಸಿದ್ಧವಾಯಿತು.
**********
ವಸಿಷ್ಠರ ಮುಂದೆ ಋಷಿಗಳ ದಂಡು. ಮೊರೆ. " ನಮ್ಮ ಆಶ್ರಮಗಳಿಗೆ ರಾತ್ರಿ ಹೊತ್ತು ಯಾರೋ ನುಗ್ಗುತ್ತಿದ್ದಾರೆ . ಯಙ್ಞಕುಂಡಕ್ಕೆ ರಕ್ತ ಸುರಿಯುತ್ತಾರೆ. ಮುನಿಗಳ ಮೈ ಮುರಿಯುತ್ತಾರೆ. ನಿದ್ದೆಯಲ್ಲೇ ಇದೆಲ್ಲ ನಡೆದುಹೋಗುತ್ತದೆ. ಬೆಳಗೆದ್ದು ನೋಡಿದಾಗ ಯಾರು ಮಾಡಿದ್ದು, ಎಲ್ಲಿಂದ ಬಂದದ್ದು, ಒಂದೂ ಗೊತ್ತಾಗುತ್ತಿಲ್ಲ. ಬೆಳಿಗ್ಗಿನ ಹೊತ್ತು ಅವರು ಕಾಣುವುದೇ ಇಲ್ಲ. " ಗೋಳನ್ನು ಕೇಳಿ ವಸಿಷ್ಠರು ಕ್ಷಣಕಾಲ ಕಣ್ಣು ಮುಚ್ಚಿ ಹೇಳಿದರು; " ಇದು ರಾಕ್ಷಸ ಕೃತ್ಯ. ಅಯೋಧ್ಯೆಯ ಬಳಿಯ ಸರೋವರ ಒಂದರಲ್ಲಿ ಅಡಗಿದ್ದಾರೆ. ಅದು ದೊಡ್ಡ ಸಮುದ್ರವಲ್ಲದಿದ್ದರೂ, ಅಸಲು ಸಮುದ್ರವೇ ಅಲ್ಲದಿದ್ದರೂ, ಅದೊಂದು ಬಹಳ ದೊಡ್ಡ ಕೊಳವಾಗಿದ್ದರೂ, ಅದರ ವೈಶಾಲ್ಯದಿಂದ ಅದನ್ನು ಸಮುದ್ರ ಎಂದು ಕರೆದರು. ಎಂಟು - ಹತ್ತು ಮಳೆಗಾಲದ ನದಿಗಳಿಂದ ಮಾತ್ರ ನೀರು ಹರಿದರೂ, ವರ್ಷವೆಲ್ಲ ತುಂಬಿರುವ ಸಿಹಿನೀರಿನ ಕೊಳ ಅದು. ಅದರ ತಳದಲ್ಲಿದ್ದಾರವರು. "

ವಸಿಷ್ಠರ ಮಾತಿಗೆ ದಿಗ್ಭ್ರಮಿತ ಋಷಿಗಳು ಕೇಳಿದರು, " ಕ್ಷತ್ರಿಯ ರಾಜರು ಹಲವರು ನಮಗಾಗಿ ಅವರನ್ನು ತರಿದು ಹಾಕಲು ಸಿದ್ಧರಿದ್ದಾರೆ. ಆದರೆ ಆ ಕೊಳದ ಕೆಳಕ್ಕೆ ಹೋಗುವುದು ಹೇಗೆ? " ಈ ಪ್ರಶ್ನೆಯನ್ನು ನಿರೀಕ್ಷಿಸಿದ ವಸಿಷ್ಠರು ಹೇಳಿದರು; " ಸಮುದ್ರ ಮಧ್ಯದಲ್ಲಿ ಬಡಬಾಗ್ನಿ ಇರುವುದು ಎಲ್ಲರೂ ಕೇಳಿದ್ದೀರಿ. ಆದರೆ ನೀವಾರೂ ನೋಡಿಲ್ಲ. ನಮ್ಮ ಋಷಿಗಳಲ್ಲಿ ಅಗಸ್ತ್ಯರೊಬ್ಬರಿಗೆ ಆ ಬಡಬಾಗ್ನಿಯನ್ನೊಲಿಸಿಕೊಳ್ಳುವ ಮಂತ್ರ ಗೊತ್ತಿದೆ. ಅವರದನ್ನು ಪ್ರಯೋಗಿಸಿದರೆ, ಆ ಸರೋವರದ ನೀರನ್ನೆಲ್ಲ ಆವಿ ಮಾಡಿಯಾರು. ಅವರಲ್ಲಿ ಪ್ರಾರ್ಥಿಸಿ. "
****
ಅದೊಂದು ಅಪೂರ್ವ ದೃಶ್ಯ. ಋಷಿಗಳ ಮಾತಿಗೆ ಮನ್ನಣೆಯಿತ್ತು ಬಂದ ಅಗಸ್ತ್ಯರು, ಸರೋವರದ ತಟಿಯಲ್ಲಿ ಕುಳಿತು ಆಗ್ನೇಯ ಮಂತ್ರವನ್ನಾಹ್ವಾನಿಸಿ ಬಡಬಾಗ್ನಿಯನ್ನು ಕರದಿದ್ದಾರೆ. ತೆಂಗಿನ ಮರದೆತ್ತೆರದ ಬೆಂಕಿಯ ಮಾನವಾಕೃತಿಯೊಂದು ಬಂದಿದೆ. " ಅಗಸ್ತ್ಯರೇ, ಸಮುದ್ರ ಗರ್ಭದಲ್ಲಿದ್ದ ನನ್ನನ್ನೇಕೆ ಕರೆದಿರಿ? ಇಲ್ಲಿವರೆಗೆ ನಾನು ಸಮುದ್ರ ಬಿಟ್ಟು ಹೊರ ಬಂದುದೇ ಇಲ್ಲ. ಹೇಳಿ ಏನಾಗಬೇಕು ನನ್ನಿಂದ? " ಪರಿಸ್ಥಿತಿಯನ್ನು ವಿವರಿಸಿದ ಋಷಿಗಳು ಬಡಬಾಗ್ನಿಯಲ್ಲಿ ಪ್ರಾರ್ಥಿಸಿದರು. " ಹೇ ಸಪ್ತಜ್ವಾಲಾ ಗುಪ್ತ ಹವ್ಯ ವಾಹನ! ನಿನ್ನಿಂದೊಂದು ಉಪಕಾರವಾಗಬೇಕಿದೆ. ನೀರಿನೋಳಗಿರುವ ನೀನು, ಇಂದು ಆ ನೀರನ್ನೇ ಸುಡಬೇಕಿದೆ. ನಿನ್ನ ಶಾಖದಿಂದ, ನಿನ್ನ ಬಿಸಿಯಿಂದ, ನಿನ್ನ ಸಾಮರ್ಥ್ಯದಿಂದ ನೀರೆಲ್ಲ ಆವಿಯಾಗಿ ಹೋಗಿ, ಈ ಸರೋವರದ ತಳ ಕಾಣಬೇಕಿದೆ. ಅದರಲ್ಲಿರುವ ದೈತ್ಯರನ್ನು ಸದೆಬಡಿಯಲು ಸಾವಿರಾರು ಕ್ಷತ್ರಿಯರು ಕಾದಿದ್ದಾರೆ. ಈ ಉಪಕಾರವನ್ನು ಮಾಡಲಾರೆಯಾ?"

ಹಿಂದೊಮ್ಮೆ ಅಗಸ್ತ್ಯರಿಂದ ಉಪಕೃತನಾಗಿದ್ದ ಬಡಬಾಗ್ನಿ ಈಗ ವಿಸ್ತರಿಸಿದ; ಕೊಳದಷ್ಟು ಉಬ್ಬಿದ; ನೀರನ್ನೆಲ್ಲ ಆವರಿಸಿದ. ಇದೀಗ ನೀರು ಕುದಿಯ ತೊಡಗಿತು. ಆವಿಯಾಗಿ ಮೇಲೇರ ತೊಡಗಿತು. ಗಾಳಿ ಬೀಸಿ ಆವಿಯನ್ನು ಚದುರಿಸಿತು. ಸುಮಾರು ತಿಂಗಳುಗಳು ಕಾಲ ನಡೆದ ಈ ಸತತ ಅಗ್ನಿಯ ಆರ್ಭಟದಿಂದ ಅಂತೂ ಸರೋವರದ ನೀರೆಲ್ಲ ಮಾಯವಾಯಿತು. ಅತಲಕ್ಕಿಳಿದ ಋಷಿಗಳು, ರಾಜರು ರಕ್ಕಸರನ್ನು ಹೊರಗೆಳೆದು ದಂಡಿಸಿದರು; ಸೆರೆ ಹಿಡಿದರು; ದಸ್ಯುಗಳನ್ನಾಗಿ ಮಾಡಿಕೊಂಡರು. 

ಅಂತೂ ರಾಕ್ಷಸರ ಬೃಹತ್ ಯೋಜನೆ ಮುರಿದು ಬಿತ್ತು. ದೇವತೆಗಳು, ಮುನಿಗಳು ಅಗಸ್ತ್ಯರ ಸಾಹಸವನ್ನು ಕಂಡು ಅವರನ್ನು ಬಾಯಿ ತುಂಬ ಹೊಗಳಿದರು, ಪ್ರಶಂಸಿಸಿದರು. ಸಮುದ್ರದಂತಿದ್ದ ಸರೋವರವನ್ನೇ ಮಾಯ ಮಾಡಿದ ಅಗಸ್ತ್ಯರ ಸಾಹಸದ ವರ್ಣನೆ ನಡೆಯಿತು. " ಸಮುದ್ರವನ್ನೇ ಆಪೋಶನವನ್ನಾಗಿ ತೆಗೆದುಕೊಂಡರು! " ಎಂದು ಆಲಂಕಾರಿಕವಾಗಿ ಹೇಳ ತೊಡಗಿದರು. ಅದು ಬರ-ಬರುತ್ತ" ಸಮುದ್ರವನ್ನೇ ಅಗಸ್ತ್ಯರು ನಿಜವಾಗಿ ಕುಡಿದರಂತೆ! " ಎಂಬ ಕಥೆಯಾಗಿಬಿಟ್ಟಿದೆ. " ಕುತೂಹಲದಿಂದ ಕೇಳುತ್ತಿದ್ದ ಮಂದಿಯ ಮಧ್ಯದ ಶ್ರೀರಾಮರಿಗೆ ತಾವು ಕೇಳಿದ ಪ್ರಶ್ನೆಗೂ, ಇದಕ್ಕೂ ಎಲ್ಲಿಯ ಸಂಬಂಧ , ಎಂದು ಯೋಚಿಸುತ್ತಿದ್ದಂತೆಯೇ ವಿಶ್ವಮಿತ್ರರು ಹೇಳ ತೊಡಗಿದರು...(ಮುಂದುವರೆಯುವುದು...)

-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com
ಸಂಬಂಧಿಸಿದ್ದು...

ಲೇಖಕರ ಕುರಿತು : ವಿದ್ವಾನ್ ಡಾ.ಪಾವಗಡ ಪ್ರಕಾಶ್ ರಾವ್ ಪ್ರಸಿದ್ಧ, ಬಹುಶೃತ ವಿದ್ವಾಂಸರು. 2003 ರಿಂದ ಚಂದನ ವಾಹಿನಿಯಲ್ಲಿ ಇವರು ನಡೆಸಿಕೊಡುತ್ತಿದ್ದ 'ಸತ್ಯದರ್ಶನ' ಕಾರ್ಯಕ್ರಮ 1,111 ಸಂಚಿಕೆಗಳನ್ನು ಪೂರೈಸಿ ಮುಕ್ತಾಯಗೊಂಡಿದ್ದು ಧರ್ಮ, ಧರ್ಮ ಗ್ರಂಥ, ಆಚರಣೆಗಳಿಗೆ ಸಂಬಂಧಿಸಿದಂತೆ ಜನರ ಸಂಶಯಗಳ ನಿವಾರಣೆಗೆ ಅಪಾರ ಜನಪ್ರಿಯತೆ ಗಳಿಸಿದೆ. ಸತ್ಯದರ್ಶನದೊಂದಿಗೆ ಭಗವದ್ಗೀತೆಯ 712 ಉಪನ್ಯಾಸಗಳು ಸೇರಿ ಒಟ್ಟು ದಾಖಲೆಯ 1823 ಉಪನ್ಯಾಸಗಳನ್ನು ನೀಡಿದ್ದು, ನಾಡಿದ ಪ್ರಸಿದ್ಧ ಸಂಸ್ಥೆಗಳು ಜ್ಞಾನ ಪ್ರಕಾಶ, ವಿದ್ಯಾ ವಿಶಾರದ, ಜ್ಞಾನ ಭಾಸ್ಕರ ಎಂಬ ಬಿರುದುಗಳನ್ನು ನೀಡಿ ಗೌರವಿಸಿವೆ. ತುಮಕೂರು ಹಾಗೂ ಮೈಸೂರು ವಿಶ್ವ ವಿದ್ಯಾನಿಲಯಗಳಿಂದ ಪಿಹೆಚ್ ಡಿ ಪದವಿ (ಡಾಕ್ಟೊರೇಟ್ ಗಳನ್ನು) ಗಳಿಸಿದ್ದಾರೆ.
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Ramayana avalokana, Dr.Pavagada Prakash Rao, Sage Agasthya, waters of the oceans, ರಾಮಾಯಣ ಅವಲೋಕನ, ಡಾ.ಪಾವಗಡ ಪ್ರಕಾಶ್ ರಾವ್, ಅಗಸ್ತ್ಯ, ಸಮುದ್ರ, ಆಪೋಶನ
English summary
It's a combination of two events, those events. One, plan for the destruction of the goddess's land. Two, trying to recover the water that has vanished from the ground.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement