Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Triple talaq

ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ: ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

Can break your leg, says Babul Supriyo at event for differently abled

ನಿನ್ನ ಕಾಲು ಮುರಿದು, ವೀಲ್ ಚೇರ್ ಕೊಡುತ್ತೇನೆ: ಅಂಗವಿಕಲರ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವನ ದರ್ಪ!

Higher education minister G T Deve Gowda

ಇಲ್ಲಿ ಸಚಿವರದ್ದು ಏನೂ ಇಲ್ಲ ಕಾರುಬಾರು, ಅಧಿಕಾರಿಗಳದ್ದೇ ಎಲ್ಲ ದರ್ಬಾರು!

Cubbon Park police Station,

ಆಪರೇಷನ್ ಕಮಲ 'ಕಿಂಗ್ ಪಿನ್' ಮನೆ ಮೇಲೆ ಪೊಲೀಸರ ದಾಳಿ; ದಾಖಲೆ ವಶ

ಬೇಕಿದ್ರೆ ಶೂಟ್ ಮಾಡಿ, ಆದ್ರೆ ಸೇನಾ ಮಾಹಿತಿ ಕೇಳಬೇಡಿ: ಉಗ್ರರಿಂದ ಹತ್ಯೆಯಾದ ವೀರ ಯೋಧನ ಕೊನೆಯ ಮಾತು!

Amit Shah

ಗೋವಾ ಸರ್ಕಾರ ರಚನೆಗೆ ಕಾಂಗ್ರೆಸ್ ಕಸರತ್ತು: ಬಿಜೆಪಿ ಏನು ಮಾಡಲಿದೆ ಎಂಬುದು ಅಮಿತ್ ಶಾ ಗೆ ಮಾತ್ರ ಗೊತ್ತು!

If Muslims are unwanted, then there is no Hindutva: Mohan Bhagwat at RSS event

ಮುಸ್ಲಿಮರಿಗೆ ಇಲ್ಲಿ ಅವಕಾಶವ ಇಲ್ಲವಾದರೆ ಹಿಂದುತ್ವವೇ ಅಪೂರ್ಣ: ಮೋಹನ್ ಭಾಗವತ್

A still from kgf

ಯಶ್ ಅಭಿಮಾನಿಗಳಿಗೆ ಸಿಹಿಸುದ್ದಿ: ಪಂಚ ಭಾಷೆಗಳಲ್ಲಿ 'ಕೆಜಿಎಫ್' ನವೆಂಬರ್ ನಲ್ಲಿ ರಿಲೀಸ್!

Representational image

ಕಳ್ಳತನ ಮಾಡಿದ್ದ ಚಿನ್ನವನ್ನು ಖರೀದಿಸಿದ ಆರೋಪದ ಮೇಲೆ ಅಟ್ಟಿಕಾ ಗೋಲ್ಡ್ ಕಂಪೆನಿ ಮಾಲಿಕ ಬಂಧನ

Restrictions in Srinagar to prevent Muharram procession

ಮೊಹರಂ ಮೆರವಣಿಗೆಗೆ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ನಿರ್ಬಂಧ ಹೇರಿಕೆ

Congress to meet CAG today over Rafale row

ರಾಫೆಲ್ ಹಗರಣ: ಸಿಎಜಿಗೆ ದೂರು ನೀಡಲು ಕಾಂಗ್ರೆಸ್ ಸಜ್ಜು

Christian Michel, AgustaWestland Middleman, To Be Extradited says Dubai Court

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣ: ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕಲ್‌ ಗಡಿಪಾರಿಗೆ ದುಬೈ ಕೋರ್ಟ್ ಆದೇಶ

Representational image

ದೆಹಲಿ ಮಾದರಿ ಶಾಲೆ ಕ್ರಮ ಅನುಸರಿಸಲು ರಾಜ್ಯ ಸರ್ಕಾರ ನಿರ್ಧಾರ

ಮುಖಪುಟ >> ಕ್ರಿಕೆಟ್

ಟೀಂ ಇಂಡಿಯಾವನ್ನು ಆಸ್ಟ್ರೇಲಿಯಾ ವೈಟ್ ವಾಶ್ ಮಾಡಲಿದೆ: ಮೆಗ್ರಾತ್

'ಕೊಹ್ಲಿ ವಿಶ್ವಶ್ರೇಷ್ಠ ಬ್ಯಾಟ್ಸಮನ್ ನಿಜ, ಆದರೆ ಒತ್ತಡದ ಸಂದರ್ಭದಲ್ಲಿ ಅವರ ಆಟವನ್ನು ನಾನು ನೋಡಬೇಕು'
Australia would blank India 4-0: McGrath

ಸಂಗ್ರಹ ಚಿತ್ರ

ಸಿಡ್ನಿ: ಟೀಂ ಇಂಡಿಯಾದ ಆಸ್ಟ್ರೇಲಿಯಾ  ಪ್ರವಾಸಕ್ಕೆ ಇನ್ನೂ 4 ತಿಂಗಳು ಬಾಕಿ ಇದ್ದು, ಈಗಾಗಲೇ ಈ ಪ್ರವಾಸದ ಕುರಿತು ಸಾಕಷ್ಟು ಕುತೂಹಲ ಕೆರಳಿದೆ.

ಇದಕ್ಕೆ ಇಂಬು ನೀಡುವಂತೆ ಆಸ್ಟ್ರೇಲಿಯಾ ದ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಮುಂಬರುವ ಬಹು ನಿರೀಕ್ಷಿತ ಟೂರ್ನಿಯ ಕುರಿತು ಅಲ್ಲಲ್ಲಿ ಮಾತನಾಡಿ ಟೂರ್ನಿಯ ರೋಚಕತೆ ಹೆಚ್ಚಿಸುತ್ತಿದ್ದಾರೆ. ನಿನ್ನೆಯಷ್ಟೇ ಆಸಿಸ್ ವೇಗಿ ಪ್ಯಾಟ್ ಕಮ್ಮಿನ್ಸ್ ಕೊಹ್ಲಿ ಕುರಿತು ಮಾತನಾಡಿ ಸುದ್ದಿಗೆ ಗ್ರಾಸವಾಗಿದ್ದರು. ಇದೀಗ ಈ ಪಟ್ಟಿಗೆ ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಗ್ಲೇನ್ ಮೆಗ್ರಾತ್ ಕೂಡ ಸೇರ್ಪಡೆಯಾಗಿದ್ದು, ಟೀಂ ಇಂಡಿಯಾ ತನ್ನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಹೀನಾಯ ಸೋಲು ಅನುಭವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಈ ಬಗ್ಗೆ ಖಾಸಗಿ ಕ್ರೀಡಾ ಮಾಧ್ಯಮದೊಂದಿಗೆ ಮಾತನಾಡಿರುವ ಮಾಜಿ ಆಸಿಸ್ ವೇಗಿ ಮೆಗ್ರಾತ್, ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಾಣಲಿದ್ದು, ಆಸಿಸ್ ಬಳಗ 4-0 ಅಂತರದಲ್ಲಿ ಭಾರತ ತಂಡವನ್ನು ವೈಟ್ ವಾಶ್ ಮಾಡಲಿದೆ ಎಂದು ಹೇಳಿದ್ದಾರೆ. 

ಅಂತೆಯೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕುರಿತು ಮಾತನಾಡಿರುವ ಮೆಗ್ರಾತ್, ಪ್ರಸ್ತುತ ಕೊಹ್ಲಿ ವಿಶ್ವಕ್ರಿಕೆಟ್ ನ ಶ್ರೇಷ್ಠ ಬ್ಯಾಟ್ಸಮನ್ ನಿಜ. ಆದರೆ ಆಸಿಸ್ ನೆಲದಲ್ಲಿ ಅವರ ಆರ್ಭಟ ನಡೆಯುವುದಿಲ್ಲ. ಒತ್ತಡದ ಸಂದರ್ಭದಲ್ಲಿ ಅವರು ಹೇಗೆ ಆಡುತ್ತಾರೆ ಎಂಬುದನ್ನು ನೋಡಲು ನಾನು ಕೂಡ ಕುತೂಹಲಕಾರಿಯಾಗಿದ್ದೇನೆ. ಭಾರತ ತಂಡಕ್ಕೆ ಬ್ಯಾಟಿಂಗೇ ಜೀವಾಳ. ಅದರ ಮೇಲೆ ನಾವು ನಮ್ಮ ಯೋಜನೆ ರೂಪಿಸಬೇಕು. ಒಂದು ವೇಳೆ ಅದರಲ್ಲಿ ನಾವು ಯಶಸ್ವಿಯಾಗಿದ್ದೇ ಆದರೆ ಖಂಡಿತಾ ಸರಣಿ ನಮ್ಮ ಕೈವಶವಾಗುತ್ತದೆ ಎಂದು ಮೆಗ್ರಾತ್ ಹೇಳಿದ್ದಾರೆ.

ಇನ್ನು  ನವೆಂಬರ್ ತಿಂಗಳಿನಲ್ಲಿ ಭಾರತ ತಂಡ ಆಸ್ಚ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 3 ಟಿ20 ಪಂದ್ಯಗಳು, 4 ಟೆಸ್ಟ್ ಪಂದ್ಯಗಳು ಮತ್ತು 3  ಏಕದಿನ ಪಂದ್ಯಗಳನ್ನಾಡಲಿದೆ.

ಆಸಿಸ್ ನೆಲದಲ್ಲಿ ಭಾರತ ತಂಡದ ಪ್ರದರ್ಶನ ಅಷ್ಟಕ್ಕಷ್ಟೇ.. 12ನೇ ಬಾರಿಗೆ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತಿದ್ದು, ಈ ಪೈಕಿ ಒಟ್ಟು 44 ಟೆಸ್ಟ್ ಪಂದ್ಯಗಳನ್ನಾಡಿದೆ, ಆದರೆ 5 ಪಂದ್ಯಗಳಲ್ಲಿ ಮಾತ್ರ ಭಾರತ ತಂಡ ಜಯ ಸಾಧಿಸಿದೆ. ಇನ್ನು 1981, 1985 ಮತ್ತು 2003ರಲ್ಲಿ ಮಾತ್ರ ಭಾರತ ತಂಡ ಸರಣಿ ಸಮಬಲ ಸಾಧಿಸಿತ್ತು. ಉಳಿದೆಲ್ಲಾ ಸರಣಿಗಳನ್ನು ಕೈ ಚೆಲ್ಲಿತ್ತು.

ಇನ್ನು ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮತ್ತು ಆ ತಂಡದ ಸ್ಚಾರ್ ಬ್ಯಾಟ್ಸಮನ್ ಸ್ಟೀವೆನ್ ಸ್ಮಿತ್ ಮತ್ತು ಸ್ಫೋಟಕ ಬ್ಯಾಟ್ಸಮನ್ ಡೇವಿಡ್ ವಾರ್ನರ್ ನಿಷೇಧಕ್ಕೆ ಒಳಗಾಗಿ ತಂಡದಿಂದ ದೂರ ಉಳಿದಿದ್ದಾರೆ. ಹೀಗಾಗಿ ಆಸಿಸ್ ನೆಲದಲ್ಲಿ 4-0 ಅಂತರದಲ್ಲಿ ಸರಣಿ ಗೆಲಲ್ಲು ಟೀಂ ಇಂಡಿಯಾಗೆ ಸುವರ್ಣಾವಕಾಶವಿದೆ. ಇದೇ ಕಾರಣಕ್ಕೆ ಮುಂಬರುವ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ ಕದನ ಕುತೂಹಲ ಕೆರಳಿಸಿದೆ. 

ಆದರೆ ಈ ಬಾರಿಯ ಪ್ರವಾಸ ಟೀಂ ಇಂಡಿಯಾ ಮಹತ್ವದ ಪ್ರವಾಸವಾಗಿದ್ದು, ಪ್ರಸ್ತುತ ಭಾರತ ತಂಡ ಅದ್ಬುತ ಫಾರ್ಮ್ ನಲ್ಲಿದೆ.  ಇದೇ ಪ್ರದರ್ಶನವನ್ನು ಆಸ್ಟ್ರೇಲಿಯಾದಲ್ಲೂ ಮುಂದುವರೆಸಿದರೆ ಐತಿಹಾಸಿಕ ಸರಣಿ ಜಯದ ಮೂಲಕ ಭಾರತ ತಂಡ ದಾಖಲೆ ನಿರ್ಮಾಣ ಮಾಡಲಿದೆ.
ಸಂಬಂಧಿಸಿದ್ದು...
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Sydney, Cricket, India, Australia, Virat Kohli, Pat Cummins, ಸಿಡ್ನಿ, ಕ್ರಿಕೆಟ್, ಭಾರತ, ಆಸ್ಟ್ರೇಲಿಯಾ, ವಿರಾಟ್ ಕೊಹ್ಲಿ, ಪ್ಯಾಟ್ ಕುಮಿನ್ಸ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS