Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Congress chief Rahul Gandhi addressing the plenary session of the party in New Delhi on Saturday

ದೇಶವನ್ನು ಮುನ್ನಡೆಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ: ರಾಹುಲ್ ಗಾಂಧಿ

Andra Pradesh CM N.Chandrababu Naidu

ನಮ್ಮ ನಿರೀಕ್ಷೆಗಳನ್ನು ನೀವು ಈಡೇರಿಸಿಲ್ಲ: ಬಿಜೆಪಿ ಅಧ್ಯಕ್ಷರಿಗೆ ಪತ್ರ ಬರೆದ ಆಂಧ್ರ ಸಿಎಂ

RCB

ಐಪಿಎಲ್ ಸಮರಕ್ಕೆ ಆರ್‌ಸಿಬಿ ಸಜ್ಜು: ಬೆಂಗಳೂರಿನಲ್ಲಿ ಆಟಗಾರರಿಗೆ ತರಬೇತಿ ಶುರು

Mohammed Shami, Hasin jahan

ಪತ್ನಿ ಹಸೀನ್ ಜಹಾನ್ ಜತೆ ಸಂಬಂಧ ಮುಗಿದ ಅಧ್ಯಾಯ: ಮೊಹಮ್ಮದ್ ಶಮಿ

Bangladesh Players

ಲಂಕಾ ವಿರುದ್ಧ ಸೋಲುವ ಭೀತಿಯಿಂದ ಹೈಡ್ರಾಮಾ ಮಾಡಿದ್ರಾ ಬಾಂಗ್ಲಾ ಕ್ರಿಕೆಟಿಗರು!

ಸಾಂಗ್ಲಿಯಾನ-ಡಿ ರೂಪಾ-ಆಶಾದೇವಿ

ನಿಭರ್ಯಾ ತಾಯಿಯ ಅಂದ ಚೆಂದ ವರ್ಣಿಸಿ ವಿವಾದಕ್ಕೀಡಾದ ಸಾಂಗ್ಲಿಯಾನ

Veerappa Moily

ರಾಜಕೀಯ ಸಂಚಲನ ಮೂಡಿಸಿದ ವೀರಪ್ಪ ಮೊಯ್ಲಿ ಟ್ವೀಟ್; ಕಾಂಗ್ರೆಸ್ ನಾಯಕರಲ್ಲಿ ತಳಮಳ

Representational imge

ಬೇಸಿಗೆ ಶಿಬಿರದಲ್ಲಿ ಭಾಗವಹಿಸುವ ಸರ್ಕಾರಿ ಶಾಲೆ ಮಕ್ಕಳಿಗೆ ಈ ವರ್ಷ ಮಜ್ಜಿಗೆ ಪೂರೈಕೆ

Nidahas Trophy: Bangladesh Beat SriLanka, Enters Final to Face India

ನಿಡಹಾಸ್ ಟ್ರೋಫಿ: ಶ್ರೀಲಂಕಾ ಮಣಿಸಿದ ಬಾಂಗ್ಲಾದೇಶ ಫೈನಲ್ ಗೆ!

Siddaramaiah govt has betrayed the people of Karnataka, says BS Yeddyurappa

ಬಿಎಸ್ ವೈ ಬ್ರೇಕಿಂಗ್ ನ್ಯೂಸ್: ಸಿದ್ದರಾಮಯ್ಯ ವಚನಭ್ರಷ್ಟ, ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ

Jaggesh

ಕವಿರಾಜ್ ನಿರ್ದೇಶನದ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಎನ್‌‍ಕೌಂಟರ್ ಸ್ಪೆಷಲಿಸ್ಟ್!

casual photo

ಹುಟ್ಟಹಬ್ಬ ಪಾರ್ಟಿಗೆ ಹೋಗೊದು ಬೇಡ ಎಂದ ತಾಯಿ ಮಾತಿನಿಂದ ಬೇಸತ್ತ ಮಗಳು ಆತ್ಮಹತ್ಯೆ

Yeddyurappa incompetence Exposed: Karnataka Congress

ಯಡಿಯೂರಪ್ಪ ಬ್ರೇಕಿಂಗ್ ನ್ಯೂಸ್ ಠುಸ್: ಕರ್ನಾಟಕ ಕಾಂಗ್ರೆಸ್ ವ್ಯಂಗ್ಯ

ಮುಖಪುಟ >> ಕ್ರಿಕೆಟ್

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಡಕ್ ಔಟ್ ಮೂಲಕ ದಾಖಲೆ ಬರೆದ ದಕ್ಷಿಣ ಆಫ್ರಿಕಾ!

ಇಂಗ್ಲೆಂಡ್ ತಂಡದ ಮೋಯಿನ್ ಅಲಿ ಮಾರಕ ಬೌಲಿಂಗ್, ನಾಲ್ಕು ಮಂದಿ ಆಟಗಾರರಿಂದ ಶೂನ್ಯ ಸಾಧನೆ
England vs South Africa: Proteas make Test golden duck history

ಕ್ರಿಕ್ ಇನ್ಫೋ ಚಿತ್ರ

ಲಂಡನ್: ಲಂಡನ್ ನ ಓವಲ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ದ.ಆಫ್ರಿಕಾ ಕಳಪ ಪ್ರದರ್ಶನದಲ್ಲೂ ದಾಖಲೆಯೊಂನ್ನು ನಿರ್ಮಿಸಿದೆ.

ನಿನ್ನೆ ಮುಕ್ತಾಯವಾದ ಮೂರನೇ ಟೆಸ್ಟ್ ನ ಎರಡನೆ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರು ಶೂನ್ಯ ಸಾಧನೆ ಮೂಲಕ ಇತಿಹಾಸದ ಪುಟ ಸೇರಿದ್ದು, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿ ನಾಲ್ವರು ದಾಂಡಿಗರು ಸೊನ್ನೆ  ಸುತ್ತಿದ್ದಾರೆ. ದಕ್ಷಿಣ ಆಫ್ರಿಕ ವಿರುದ್ಧ ಆಲ್‌ರೌಂಡರ್ ಮೊಯಿನ್ ಅಲಿ ಹ್ಯಾಟ್ರಿಕ್ ಸೇರಿದಂತೆ 45ಕ್ಕೆ 4 ವಿಕೆಟ್ ಉರುಳಿಸಿ ಇಂಗ್ಲೆಂಡ್‌ ಗೆ ಮೂರನೆ ಟೆಸ್ಟ್‌ನಲ್ಲಿ 239 ರನ್‌ಗಳ ಭರ್ಜರಿ ಜಯ ದಾಖಲಿಸಲು ನೆರವಾಗಿದ್ದರು.

ಲಂಡನ್ ನ ಪ್ರತಿಷ್ಟಿತ ಓವಲ್‌ನಲ್ಲಿ ಕ್ರೀಡಾಂಗಣದಲ್ಲಿ ನಡೆದ 100ನೇ ಟೆಸ್ಟ್ ಪಂದ್ಯ ಇದಾಗಿದ್ದು, ಈ ಐತಿಹಾಸಿಕ ಪಂದ್ಯದಲ್ಲಿ ಮೋಯಿನ್ ಅಲಿ ಮೊದಲವ ಬಾರಿಗೆ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಇದು ಓವಲ್ ಕ್ರೀಡಾಂಗಣದಲ್ಲಿ  ದಾಖಲಾದ ಮೊದಲ ಹ್ಯಾಟ್ರಿಕ್ ಎಂಬ ದಾಖಲೆಯನ್ನು ಬರೆದಿದೆ. ಇಂಗ್ಲೆಂಡ್ ನ ಮೋಯಿನ್ ಅಲಿ ಅವರು 76ನೆ ಓವರ್‌ ನ 5 ಮತ್ತು 6ನೆ ಎಸೆತದಲ್ಲಿ ದಕ್ಷಿಣ ಆಫ್ರಿಕದ ಡೀನ್ ಎಲ್ಗರ್ (136), ಕಾಗಿಸೊ ರಬಾಡ(0) ಅವರನ್ನು  ಪೆವಿಲಿಯನ್‌ಗೆ ಅಟ್ಟಿದರು. ಬಳಿಕ 78ನೆ ಓವರ್‌ನ ಮೊದಲ ಎಸೆತದಲ್ಲಿ ಮೊರ್ನೆ ಮೊರ್ಕೆಲ್(0)ರನ್ನು ಬಂದ ದಾರಿಯಲ್ಲೇ ಹಿಂದಕ್ಕೆ ಕಳುಹಿಸುವ ಮೂಲಕ ಹ್ಯಾಟ್ರಿಕ್ ಪಡೆದಿದ್ದಾರೆ.

ಇದಕ್ಕೂ ಮೊದಲು ಅಲಿ ಅವರು ಕ್ರಿಸ್ ಮೋರಿಸ್ ವಿಕೆಟ್‌ನ್ನು ಪಡೆದಿದ್ದರು. ಅಲಿ 1938ರ ಬಳಿಕ ಓವಲ್ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ ಇಂಗ್ಲೆಂಡ್‌ನ ಮೊದಲ ಸ್ಪಿನ್ನರ್ ಎನಿಸಿಕೊಂಡಿದ್ದಾರೆ. ಚೊಚ್ಚಲ  ಟೆಸ್ಟ್ ಆಡಿದ ಇಂಗ್ಲೆಂಡ್‌ ನ ಬೌಲರ್ ಟೊಬೈ ರೊನಾಲ್ಡ್-ಜೊನ್ಸ್ ಎರಡನೆ ಇನಿಂಗ್ಸ್‌ನಲ್ಲಿ 2 ವಿಕೆಟ್ ಪಡೆಯುವ ಮೂಲಕ ಈ ಟೆಸ್ಟ್‌ನಲ್ಲಿ 129ಕ್ಕೆ 8 ವಿಕೆಟ್ ಪಡೆದಿದ್ದಾರೆ. ಈ ಅವಿಸ್ಮರಣೀಯ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ  ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.

Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : London, Cricket Offbeat, England vs South Africa, golden duck history, ಲಂಡನ್, ಕ್ರಿಕೆಟ್ ಸ್ವಾರಸ್ಯ, ಇಂಗ್ಲೆಂಡ್ ವರ್ಸಸ್ ದಕ್ಷಿಣ ಆಫ್ರಿಕಾ, ಶೂನ್ಯ ದಾಖಲೆ
English summary
The Test was filled with historical significance - this was the 100th Test at The Oval - and saw Ali also create some of his own.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement