Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Jammu and Kashmir: Three LeT terrorists neutralised in Handwara, one IAF offices loses life

ಹಂದ್ವಾರ ಎನ್ ಕೌಂಟರ್: 3 ಎಲ್ ಇಟಿ ಉಗ್ರರ ಹತ್ಯೆ, ವಾಯುಸೇನೆ ಅಧಿಕಾರಿ ಹುತಾತ್ಮ

Only One Taj,

ತಾಜ್ ಮಹಲ್ ಒಂದೇ, ಅದನ್ನು ಮತ್ತೆ ನಿರ್ಮಿಸಲಾಗದು: ಯೋಗಿ ಸರ್ಕಾರಕ್ಕೆ 'ಸುಪ್ರೀಂ' ಚಾಟಿ

Don

'ನಾನು ಮತ್ತು ವಾದ್ರಾ ರಾಜಕೀಯ ಬಲಿಪಶು' ಎಂದ ಮಲ್ಯಾಗೆ ಸೋನಿಯಾ ಗಾಂಧಿ ಅಳಿಯನ ತಿರುಗೇಟು!

Deepika Padukone

ಪ್ರಧಾನಿ ಮೋದಿ, ಇವಾಂಕ ಟ್ರಂಪ್ ಭಾಗವಹಿಸುವ ಶೃಂಗಸಭೆಯಲ್ಲಿ ಪಾಲ್ಗೊಳ್ಳದಿರಲು ದೀಪಿಕಾ ನಿರ್ಧಾರ

BBC Hails India

ರಾಜ್ಯ ಸರ್ಕಾರದ ಇಂದಿರಾ ಕ್ಯಾಂಟೀನ್‌ ಗೆ ಬಿಬಿಸಿ ಮನ್ನಣೆ

Terrorists

ಎಲ್ಇಟಿ, ಜೆಇಎಂನ ವಿಶೇಷ ಉಗ್ರ ವಲಯ ಅಂತ್ಯಗೊಳ್ಳಬೇಕು: ಭಾರತ

Representational photo of BMTC bus

ಮಹಿಳೆಗೆ ದಂಡ ಹಾಕಿದ ಬಿಎಂಟಿಸಿಗೆ 100 ಪಟ್ಟು ಹೆಚ್ಚು ಪರಿಹಾರ ನೀಡಲು ಹೇಳಿದ ನ್ಯಾಯಾಲಯ!

Dropped from tourism booklet, Uttar Pradesh pitches Taj Mahal as top film shooting location at IFFI

ತಾಜ್ ಮಹಲ್ ಪ್ರಮುಖ ಚಿತ್ರೀಕರಣ ಸ್ಥಳವೆಂದ ಉತ್ತರ ಪ್ರದೇಶ

Saamna article compares BJP rule with British Raj

ಮೋದಿ ಸರ್ಕಾರವನ್ನು ಬ್ರಿಟೀಷ್ ರಾಜ್ ಗೆ ಹೋಲಿಸಿದ ಶಿವಸೇನೆ

Bihar Dalit woman sells mangalsutra to build toilet at hom

ಬಿಹಾರ: ಮಂಗಳಸೂತ್ರ ಮಾರಿ ಶೌಚಾಲಯ ಕಟ್ಟಿದ ದಲಿತ ಮಹಿಳೆ

Darshan

ದರ್ಶನ್ 'ಕುರುಕ್ಷೇತ್ರ' ಚಿತ್ರೀಕರಣ ಅಂತಿಮ ಹಂತಕ್ಕೆ

Director Suri

'ಕೆಂಡಸಂಪಿಗೆ' ದಿನಗಳಿಗೆ ಮರಳಿದ ಸೂರಿ!

Five killed, seven injured in brutal accident

ಕಲಬುರಗಿ: ಟ್ಯಾಂಕರ್ ಗೆ ಕ್ರೂಸರ್ ಡಿಕ್ಕಿ, 5 ಸಾವು, 7 ಮಂದಿ ಗಂಭೀರ!

ಮುಖಪುಟ >> ಕ್ರಿಕೆಟ್

ಅಲ್ಲಿ ಬೇಲ್... ಇಲ್ಲಿ ಸಿಡಿದೆದ್ದ ಕ್ರಿಸ್ ಗೇಯ್ಲ್: ಗುಜರಾತ್ ವಿರುದ್ದ ಆರ್ ಸಿಬಿಗೆ ಭರ್ಜರಿ ಜಯ!

ಐಪಿಎಲ್ 2017: ಸರಣಿಯಲ್ಲಿ ಜೀವಂತವಾಗಿ ಉಳಿದ ವಿರಾಟ್ ಕೊಹ್ಲಿ ಪಡೆ, ಚಾಹಲ್ ಮಾರಕ ಸ್ಪಿನ್
IPL 2017: Royal challengers Bengaluru thrash Gujarat lions in Rajkot

ಕ್ರಿಕ್ ಇನ್ಫೋ ಚಿತ್ರ

ರಾಜ್ ಕೋಟ್: ಗುಜರಾತ್ ಲಯನ್ಸ್ ತಂಡದ ವಿರುದ್ಧ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್, ನಾಯಕ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ಹಾಗೂ ಚಾಹಲ್ ಅವರ ಅದ್ಬುತ ಬೌಲಿಂಗ್ ನೆರವಿನಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ  ಭರ್ಜರಿ ಗೆಲುವು ಸಾಧಿಸಿದೆ.

ರಾಜ್ ಕೋಟ್ ನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ ನೀಡಿದ್ದ 214 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಗುಜರಾತ್ ಲಯನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 192 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಬೆಂಗಳೂರು ತಂಡ 21 ರನ್ ಗಳ  ಭರ್ಜರಿ ಜಯ ದಾಖಲಿಸಿತು. ಈ ಹಿಂದಿನ ನಾಲ್ಕು ಪಂದ್ಯಗಳ ಸೋಲಿನಿಂದಾಗಿ ಇಂದಿನ ಪಂದ್ಯ ಆರ್ ಸಿಬಿ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿತ್ತು. ಆದರೆ ಕ್ರಿಸ್ ಗೇಯ್ಲ್, ಕೊಹ್ಲಿ ಅದ್ಬುತ ಬ್ಯಾಟಿಂಗ್ ಮತ್ತು ಚಾಹಲ್ ಚಾಣಾಕ್ಷತನದ ಬೌಲಿಂಗ್ ನಿಂದಾಗಿ ಆರ್ ಸಿಬಿ ಗೆಲುವು  ಸಾಧಿಸುವ ಮೂಲಕ ಸರಣಿಯಲ್ಲಿ ಜೀವಂತವಾಗಿ ಉಳಿದಿದೆ.

ಬೃಹತ್ ಮೊತ್ತವನ್ನು ಬೆನ್ನು ಹತ್ತಿದೆ ಗುಜರಾತ್ ಲಯನ್ಸ್ ತಂಡಕ್ಕೆ ಚಾಹಲ್ ಮೊದಲ ಆಘಾತ ನೀಡಿದರು. ಕೇವಲ 1 ರನ್ ಗಳಿಸಿದ್ದ ಸ್ಮಿತ್ ಅವರನ್ನು ಔಟ್ ಮಾಡುವ ಮೂಲಕ ಆರ್ ಸಿಬಿ ಮೊದಲ ಮುನ್ನಡೆ ತಂದುಕೊಟ್ಟರು. ಗುಜರಾತ್ ತಂಡ ಆರಂಭಿಕ ಆಘಾತದಿಂದ  ಚೇತರಿಸಿಕೊಳ್ಳುಷ್ಟರಲ್ಲಿಯೇ ಮತ್ತೊಂದು ವಿಕೆಟ್ ಉರುಳಿಸಿದ ಚಾಹಲ್ 23 ರನ್ ಗಳಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ರೈನಾ ಅವರನ್ನು ಔಟ್ ಮಾಡಿದರು. ಆದರೆ ಮತ್ತೊಂದು ತುದಿಯಲ್ಲಿದ್ದ ಮೆಕ್ಕಲಮ್ ಮಾತ್ರ ಎಂದಿನಂತೆ ತಮ್ಮ ನೈಜ ಆಟ ಮುಂದುವರೆಸಿದ್ದರು.  ಫಿಂಚ್ ಜೊತೆಗೂಡಿದ ಮೆಕ್ಕಲಮ್ ನೋಡ ನೋಡುತ್ತಿದ್ದಂತೆಯೇ ಅರ್ಧ ಶತಕ ಸಿಡಿಸಿದರು. ಈ ವೇಳೆ 19 ರನ್ ಗಳಿಸಿದ್ದ ಫಿಂಚ್ ಗೆ ನೇಗಿ ಪೆವಿಲಿಯನ್ ದಾರಿ ತೋರಿದರು. ಬಳಿಕ ಬಂದ ಕಾರ್ತಿಕ್ ಕೂಡ 1 ರನ್ ಗಳಿಸಿ ಅರವಿಂದ್ ಬೌಲಿಂಗ್ ನಲ್ಲಿ ಔಟ್ ಆದರು. 

ಮತ್ತೊಂದು ತುದಿಯಲ್ಲಿ ಭರ್ಜರಿ ಆಟವಾಡುತ್ತಿದ್ದ ಮೆಕ್ಕಲಮ್ ಗೆ ಮತ್ತದೇ ಚಾಹಲ್ ಪೆವಿಲಿಯನ್ ದಾರಿ ತೋರಿದರು. ಆದರೆ ಅಷ್ಟರಲ್ಲಾಗಲೇ ಮೆಕ್ಕಲಮ್ 75 ರನ್ ಗಳಿಸಿದ್ದರು. ಬಳಿಕ ಬಂದ ಜಡೇಜಾ ಕೊಂಚ ಪ್ರತಿರೋಧ ತೋರಿದರಾದರೂ 23 ರನ್ ಗಳಿಸಿ ರನ್ ಔಟ್ ಆದರು. ಅಂತಿಮ  ಓವರ್ ನಲ್ಲಿ 39 ರನ್ ಗಳಿಸಿ ಗುಜರಾತ್ ಗೆ ಗೆಲುವಿನ ಆಸೆ ಚಿಗುರಿಸಿದ್ದ ಇಶಾಂತ್ ಕಿಶನ್ ಔಟ್ ಆಗುವುದರೊಂದಿಗೆ ಗುಜರಾತ್ ಗೆಲುವಿನ ಆಸೆ ಕಮರಿತು. ಆರ್ ಸಿಬಿ ಪರ ಚಾಹಲ್ 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರೆ, ಕುಲಕರ್ಣಿ, ಅರವಿಂದ್ ಮತ್ತು ಮಿಲ್ನೆ ತಲಾ 1  ವಿಕೆಟ್ ಗಳಿಸಿದರು. ಅಂತಿಮವಾಗಿ ಗುಜರಾತ್ ಲಯನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 192 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಮೂಲಕ ಆರ್ ಸಿಬಿ ಎದುರು 21 ರನ್ ಗಳ ಅಂತರದಲ್ಲಿ ಸೋಲು ಕಂಡಿತು.
ಸಂಬಂಧಿಸಿದ್ದು...
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ಉಚಿತ ನೋಂದಣಿ !

Topics : Rajkot, Cricket, IPL 2017, Royal challengers Bengaluru, Gujarat lions, ರಾಜ್ ಕೋಟ್, ಕ್ರಿಕೆಟ್, ಐಪಿಎಲ್ 2017, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಲಯನ್ಸ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement