Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Supreme Court

ಚುನಾವಣೆಯಲ್ಲಿ ಕಳಂಕಿತರ ಸ್ಪರ್ಧೆ ನಿರ್ಬಂಧಿಸಲಾಗದು: ಸಂಸತ್ತಿನಲ್ಲಿ ನೀವೇ ಕಾನೂನು ರೂಪಿಸಿ ಎಂದ 'ಸುಪ್ರೀಂ'

Rahul gandhi

ರಫೇಲ್ ಒಪ್ಪಂದ ವಿಷಯ ಕೇವಲ ಆರಂಭವಷ್ಟೇ: ಪ್ರಧಾನಿ ಮೋದಿಗೆ ಕಠಿಣ ಸಂದೇಶ ರವಾನಿಸಿದ ರಾಹುಲ್

ಬಾಲಭಾಸ್ಕರ್ ಕುಟುಂಬ

ಭೀಕರ ಅಪಘಾತ: ಖ್ಯಾತ ಗಾಯಕ ಬಾಲಭಾಸ್ಕರ್, ಪತ್ನಿ ಸ್ಥಿತಿ ಚಿಂತಾಜನಕ, ಮುದ್ದಾದ ಮಗು ದುರ್ಮರಣ!

Instagram founders Mike Krieger (L) and Kevin Systrom. (Photo | File/ Reuters)

ಫೇಸ್ ಬುಕ್ ಸಂಸ್ಥೆ ತೊರೆದ ಇನ್ಸ್ಟಾಗ್ರಾಮ್ ಸಹ ಸಂಸ್ಥಾಪಕರಾದ ಕೆವಿನ್ ಸಿಸ್ಟ್ರೋಮ್, ಮೈಕ್ ಕ್ರೆಗರ್

Cricket is a captain

ಇದು ಕ್ರಿಕೆಟ್.. ಫುಟ್ಬಾಲ್ ಅಲ್ಲ.. ಕೋಚ್ ಗೆ ಹಿಂದಿನ ಕುರ್ಚಿಯೇ ಉತ್ತಮ: ಸೌರವ್ ಗಂಗೂಲಿ ಹೇಳಿದ್ದು ಯಾರಿಗೆ?

Lance Naik Sandeep Singh

ಉಗ್ರರ ಜೊತೆ ಕಾದಾಟ: ಸರ್ಜಿಕಲ್ ಸ್ಟ್ರೈಕ್ ಹೀರೋ ಲಾನ್ಸ್ ನಾಯಕ್ ಸಂದೀಪ್ ಸಿಂಗ್ ಹುತಾತ್ಮ

Sushil Modi

ಪಿತೃಪಕ್ಷದ ವೇಳೆ ಅಪರಾಧಗಳಿಂದ ದೂರವಿರಿ: ಕ್ರಿಮಿನಲ್ ಗಳಿಗೆ ಸುಶೀಲ್ ಮೋದಿ ಸಲಹೆ

Trishna Shakhya

ಮೊದಲ ಬಾರಿಗೆ ಸಾರ್ವಜನಿಕರಿಗೆ ಕಾಣಿಸಿಕೊಂಡ ನೇಪಾಳದ 'ಜೀವಂತ ದೇವತೆ' ತ್ರಿಶ್ನಾ ಶಕ್ಯ

China says hard to proceed on trade talks with US putting

'ಕತ್ತಿಯನ್ನ ಕುತ್ತಿಗೆ ಬಳಿ ಇಟ್ಟುಕೊಳ್ಳಲು ಸಾಧ್ಯವಿಲ್ಲ': ಅಮೆರಿಕದೊಂದಿಗೆ ವಾಣಿಜ್ಯ ಸಂಬಂಧ ಕುರಿತು ಚೀನಾ ಹೇಳಿಕೆ

File photo

ವಿರಳಾತಿ ವಿರಳ ಹೊಸ ಪ್ರಭೇದದ ಹಾವು ಹಂಪಿಯಲ್ಲಿ ಪತ್ತೆ!

ಪಾಕ್ ಕ್ರಿಕೆಟ್ ತಂಡ-ಟಿವಿ ಆ್ಯಂಕರ್ಸ್

ಪಾಕ್ ಗೆಲುವನ್ನು 'ಮಧ್ಯದ ಬೆರಳು' ತೋರಿಸಿ ವಿಕೃತಿ ಮೆರೆದ ಪಾಕ್ ಆ್ಯಂಕರ್, ನೆಟಿಗರಿಂದ ಆಕ್ರೋಶ!

B S Yeddyurappa

ವಿಧಾನ ಪರಿಷತ್ ಚುನಾವಣೆ : ಕೊನೆ ಕ್ಷಣದಲ್ಲಿ ಕಣದಿಂದ ಬಿಜೆಪಿ ಹಿಂದೆ ಸರಿಯಲು ಕಾರಣವೇನು?

Dr. Raj kumar with Veerappan

ವರನಟ ಡಾ.ರಾಜ್ ಕುಮಾರ್ ಕಿಡ್ನಾಪ್ ಕೇಸ್: 9 ಆರೋಪಿಗಳು ಖುಲಾಸೆ

ಮುಖಪುಟ >> ಕ್ರಿಕೆಟ್

ಐಪಿಎಲ್ 2019: ಆರ್ ಸಿಬಿಗೆ ಮೇಜರ್ ಅಲ್ಲ, ಭರ್ಜರಿ ಸರ್ಜರಿ.. ಕೊಹ್ಲಿ ನಾಯಕತ್ವಕ್ಕೇ ಬಂತು ಕುತ್ತು!

ಎಬಿಡಿವಿಲಿಯರ್ಸ್ ಗೆ ನಾಯಕತ್ವ ಜವಾಬ್ಧಾರಿ ಹೊರಿಸಲು ಆರ್ ಸಿಬಿ ಫ್ರಾಂಚೈಸಿ ಚಿಂತನೆ
IPL 2019: Should AB de Villiers captain the Royal Challengers Bangalore next season?

ಸಂಗ್ರಹ ಚಿತ್ರ

ಬೆಂಗಳೂರು: 2019ರ ಐಪಿಎಲ್ ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಂಡದಲ್ಲಿ ಭರ್ಜರಿ ಬದಲಾವಣೆ ತರಲು ಮುಂದಾಗಿದೆ.

ಈಗಾಗಲೇ ತಂಡದಲ್ಲಿ ಸಾಕಷ್ಟು ಬದಲಾವಣೆ ತರಲಾಗಿದ್ದು, ಈ ಹಿಂದಿನ ಕೋಚ್ ಡೇನಿಯಲ್ ವೆಟೋರಿ ಅವರನ್ನು ಕೈ ಬಿಟ್ಟು ಅವರ ಸ್ಥಾನಕ್ಕೆ ಗ್ಯಾರಿ ಕರ್ಸ್ಟರ್ನ್ ಮತ್ತು ಬೌಲಿಂಗ್ ಕೋಚ್ ಆಗಿ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಅವರನ್ನು ನೇಮಕ ಮಾಡಲಾಗಿದೆ. ಅಂತೆಯೇ ಕೋಚಿಂಗ್ ಸಿಬ್ಬಂದಿಗಳನ್ನೂ ಕೂಡ ಬದಲಾವಣೆ ಮಾಡಲಾಗಿದೆ. ಇದೀಗ ಇವೆಲ್ಲವನ್ನೂ ಮೀರಿದ ಭರ್ಜರಿ ಸರ್ಜರಿಗೆ ಆರ್ ಸಿಬಿ ಫ್ರಾಂಚೈಸಿಗಳು ಮುಂದಾಗಿದ್ದು, ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಯನ್ನೇ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಸುವ ಕುರಿತು ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಆರ್ ಸಿಬಿ ತಂಡದ ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ಅವರಿಗೆ ಬ್ಯಾಟಿಂಗ್ ಜೊತೆಗೆ ನಾಯಕತ್ವದ ಜವಾಬ್ದಾರಿ ಕೂಡ ಹೊರೆಯಾಗುತ್ತಿದ್ದು, ಇದೇ ಕಾರಣಕ್ಕೆ ಅವರಿಂದ ನಾಯಕತ್ವ ಜವಾಬ್ದಾರಿಯನ್ನು ಹಿಂಪಡೆಯಲು ಚರ್ಚೆ ನಡೆಸಲಾಗುತ್ತಿದೆ. ಅಂತೆಯೇ ಆರ್ ಸಿಬಿ ನಾಯಕ ಸ್ಥಾನಕ್ಕೆ ಇತ್ತೀಚೆಗೆ ನಿವೃತ್ತಿಯಾದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸಮನ್ ಎಬಿ ಡಿವಿಲಿಯರ್ಸ್ ಹೆಸರು ಬಲವಾಗಿ ಕೇಳಿಬರುತ್ತಿದೆ. ಡಿವಿಲಿಯರ್ಸ್ ಗೇ ನಾಯಕತ್ವ ನೀಡಲು ಆರ್ ಸಿಬಿ ಪ್ರಾಂಚೈಸಿಗಳು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೇಳಲಾಗಿದೆ.

 2008ರಿಂದಲೂ ಆರ್’ಸಿಬಿ ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ವಿರಾಟ್ ಕೊಹ್ಲಿ 2013ರಲ್ಲಿ ಬೆಂಗಳೂರು ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಆದರೆ ಕೊಹ್ಲಿ ನೇತೃತ್ವದಲ್ಲಿ ಇದುವರೆಗೆ ಆರ್’ಸಿಬಿ ಒಮ್ಮೆಯೂ ಕಪ್ ಎತ್ತಿಹಿಡಿಯಲು ಸಫಲವಾಗಿಲ್ಲ. ಕಳೆದ ಎರಡು ಆವೃತ್ತಿಗಳಲ್ಲಂತೂ ಹೀನಾಯ ಪ್ರದರ್ಶನ ನೀಡಿದೆ.  ಇದುವರೆಗೂ ಐಪಿಎಲ್‌ನಲ್ಲಿ ಆರ್‌ಸಿಬಿ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ. ಇದರಿಂದಾಗಿ ಕೊಹ್ಲಿ, ನಾಯಕತ್ವದ ಕುರಿತು ಪ್ರಶ್ನೆಗಳು ಎಂದಿದ್ದವು. ಈ ಹಿನ್ನೆಲೆಯಲ್ಲಿ ಡಿವಿಲಿಯರ್ಸ್‌ಗೆ ನಾಯಕ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Bengaluru, Cricket, IPL 2019, AB de Villiers, Royal Challengers Bangalore, Virat Kohli, ಬೆಂಗಳೂರು, ಕ್ರಿಕೆಟ್, ಐಪಿಎಲ್ 2019, ಎಬಿ ಡಿವಿಲಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಿರಾಟ್ ಕೊಹ್ಲಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS