Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Rahul gandhi

ಬಿಜೆಪಿಯನ್ನು ಮಹಾಭಾರತದ ಕೌರವರಿಗೆ ಹೋಲಿಸಿದ ರಾಹುಲ್ ಗಾಂಧಿ

Nidahas Trophy Final: India have won the toss and have opted to field

ನಿಡಹಾಸ್ ಟ್ರೋಫಿ ಫೈನಲ್: ಬಾಂಗ್ಲಾ ವಿರುದ್ಧ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ

Nirmala sitharaman

ಸೋತವರ ಹತಾಶೆಯ ನುಡಿಯಂತಿದೆ : ರಾಹುಲ್ ಹೇಳಿಕೆಗೆ ನಿರ್ಮಲಾ ತಿರುಗೇಟು

Representational image

ದೇಶಾದ್ಯಂತ ಒಲಾ, ಉಬರ್ ಕ್ಯಾಬ್ ಚಾಲಕರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ : ಸೇವೆಯಲ್ಲಿ ವ್ಯತ್ಯಯ

casual photo

2016ರಲ್ಲಿ ಒಂದು ಲಕ್ಷ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ದಾಖಲು : ಸುಪ್ರೀಂಕೋರ್ಟ್

Rahul gandhi

'ಗಬ್ಬರ್ ಸಿಂಗ್ ತೆರಿಗೆ 'ಯನ್ನ ಜಗತ್ತೇ ಹೊಗಳುತ್ತಿದೆ - ಮೋದಿಗೆ ರಾಹುಲ್ ಟಾಂಗ್

Nidahas Trophy: Shakib, Nurul fined for breaching ICC code of conduct

ಮೈದಾನದಲ್ಲಿ ಅನುಚಿತ ವರ್ತನೆ: ಶಕೀಬ್ ಅಲ್ ಹಸನ್, ನೂರುಲ್ ಹಸನ್‌ಗೆ ಐಸಿಸಿ ದಂಡ

Three AIIMS Doctors Killed In Yamuna Expressway Accident

ಮಥುರಾ: ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ಭೀಕರ ಅಪಘಾತ, 3 ಏಮ್ಸ್ ಆಸ್ಪತ್ರೆ ವೈದ್ಯರ ಸಾವು, 4 ವೈದ್ಯರು ಗಂಭೀರ

Sasikala

ಶಶಿಕಲಾ ಪತಿ ನಟರಾಜನ್ ಗೆ ಮತ್ತೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು!

Goa CM Manohar Parrikar likely to return to India next month

ಪರಿಕ್ಕರ್ ಆರೋಗ್ಯದಲ್ಲಿ ಚೇತರಿಕೆ: ಏಪ್ರಿಲ್ ನಲ್ಲಿ ಭಾರತಕ್ಕೆ ಮರಳುವ ಸಾಧ್ಯತೆ

RBI

ನಿಷೇಧಿತ ನೋಟುಗಳನ್ನು ಪುಡಿ ಮಾಡಲಾಗುತ್ತಿದೆ: ಆರ್ ಬಿಐ

Mangala Mani

ಕೊರೆವ ಚಳಿಯ ಅಂಟಾರ್ಟಿಕಾದಲ್ಲಿ 403 ದಿನಗಳನ್ನು ಕಳೆದ ಇಸ್ರೋ ಮಹಿಳೆ!

India developed as much in 30 years as Britain did in 150 years: Nobel laureate Paul Krugman

ಬ್ರಿಟನ್ 150 ವರ್ಷಗಳಲ್ಲಿ ಸಾಧಿಸಿದ್ದನ್ನು ಭಾರತ ಕೇವಲ 30 ವರ್ಷಗಳಲ್ಲಿ ಸಾಧಿಸಿದೆ: ನೊಬೆಲ್ ಪ್ರಶಸ್ತಿ ವಿಜೇತ ಪಾಲ್ ಕ್ರುಗ್ಮನ್

ಮುಖಪುಟ >> ಕ್ರಿಕೆಟ್

ಕಾನ್ಸ್ ಟೇಬಲ್ ಹುದ್ದೆಯ ಆಕಾಂಕ್ಷಿಯಾಗಿದ್ದ ಕ್ರಿಕೆಟಿಗ ಉಮೇಶ್ ಯಾದವ್ ಈಗ ಆರ್ ಬಿಐ ಆಧಿಕಾರಿ!

ಸರ್ಕಾರಿ ಉದ್ಯೋಗಸ್ಥನಾಗಬೇಕು ಎಂಬ ಅಪ್ಪನ ಕನಸು ನನಸು ಮಾಡಿದ ಟೀಂ ಇಂಡಿಯಾ ಆಟಗಾರ
Once an aspiring constable, Cricketer Umesh Yadav now RBI officer

ಸಂಗ್ರಹ ಚಿತ್ರ

ನವದೆಹಲಿ: ಒಂದು ಕಾಲದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯ ಆಕಾಂಕ್ಷಿಯಾಗಿದ್ದ ಕ್ರಿಕೆಟಿಗ ಉಮೇಶ್ ಯಾದವ್ ಇದೀಗ ಆರ್ ಬಿಐ ಅಧಿಕಾರಿಯಾಗಿ ನೇಮಕವಾಗಿದ್ದಾರೆ...

ಹೌದು.. ಟೀಂ ಇಂಡಿಯಾದ ಖ್ಯಾತ ವೇಗಿ ಉಮೇಶ್ ಯಾದವ್ ಅವರ ತಂದೆಯ ಕನಸಿನಂತೆ ಸರ್ಕಾರಿ ನೌಕರಿ ಗಿಟ್ಟಿಸಿದ್ದು, ಇದೀಗ ಆರ್ ಬಿಐ ಆಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಹತ್ತು ವರ್ಷಗಳ ಹಿಂದೆ ಉಮೇಶ್ ಯಾದವ್  ಅವರ ತಂದೆ ತಿಲಕ್ ಯಾದವ್, ತಮ್ಮ ಕಿರಿಯ ಮಗ ಉಮೇಶ್ ಯಾದವ್ ಸರ್ಕಾರಿ ಕೆಲಸದಲ್ಲಿರಬೇಕು ಎಂದು ಬಯಸಿದ್ದರಂತೆ. ಇದೇ ಕಾರಣಕ್ಕಾಗಿ ಉಮೇಶ್ ಕೂಡ ಪೊಲೀಸ್ ಇಲಾಖೆಯಲ್ಲಿ ಕಾನ್​ಸ್ಟೇಬಲ್ ಹುದ್ದೆಗೆ ನಡೆದ  ಪರೀಕ್ಷೆಯನ್ನೂ ಬರೆದಿದ್ದರು. ದುರದೃಷ್ಟವಶಾತ್, ಉಮೇಶ್ ಪರೀಕ್ಷೆ ಪಾಸ್ ಮಾಡಲು ಆಗಿರಲಿಲ್ಲ.

ಆದರೆ ಹತ್ತು ವರ್ಷಗಳ ಬಳಿಕ ಹಾಲಿ ವಿಶ್ವ ಕ್ರಿಕೆಟ್ ನ ಪ್ರಮುಖ ವೇಗದ ಬೌಲರ್​ಗಳ ಪೈಕಿ ಒಬ್ಬರೆನಿಸಿಕೊಂಡಿರುವ ಉಮೇಶ್, ಪೊಲೀಸ್ ಪೇದೆಗಿಂತ ದೊಡ್ಡ ಮಟ್ಟದ ಸರ್ಕಾರಿ ನೌಕರಿಯನ್ನು ಸಂಪಾದಿಸಿದ್ದಾರೆ. ಮೂಲಗಳ ಪ್ರಕಾರ  ಭಾರತೀಯ ರಿಸರ್ವ್ ಬ್ಯಾಂಕ್​ನ (ಆರ್​ಬಿಐ) ನಾಗ್ಪುರ ಕಚೇರಿಯಲ್ಲಿ 29 ವರ್ಷದ ಉಮೇಶ್ ಯಾದವ್​ ಗೆ ಸಹಾಯಕ ವ್ಯವಸ್ಥಾಪಕ ಹುದ್ದೆ ಲಭಿಸಿದೆ. ಶ್ರೀಲಂಕಾ ಪ್ರವಾಸಕ್ಕಾಗಿ ತೆರಳಲಿರುವ ಭಾರತ ತಂಡವನ್ನು ಕೂಡಿಕೊಳ್ಳುವ  ಮುನ್ನ ಸೋಮವಾರ ಆರ್​ಬಿಐ ಕಚೇರಿಗೆ ತೆರಳಿ, ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

‘ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮಾತುಕತೆ ನಡೆಸುತ್ತಿದ್ದೆವು. ಕಳೆದ ಮೇ ತಿಂಗಳಿನಲ್ಲಿ ಇಂಗ್ಲೆಂಡ್​ ಗೆ ಹೊರಡುವ ಮುನ್ನ ಆರ್​ ಬಿಐ ಅಧಿಕಾರಿಗಳೊಂದಿಗೆ ಉಮೇಶ್ ಮಾತನಾಡಿದ್ದರು. ಅಧಿಕಾರಿಗಳು ಕ್ರೀಡಾ ಕೋಟಾದಡಿಯಲ್ಲಿ  ಉಮೇಶ್​ ಗೆ ಹುದ್ದೆ ನೀಡಲು ಒಪ್ಪಿದ್ದಾರೆ. ಆದರೆ, ರಾಷ್ಟ್ರೀಯ ತಂಡದೊಂದಿಗೆ ಕ್ರಿಕೆಟ್ ಸರಣಿ ಇದ್ದ ಕಾರಣ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ’ ಎಂದು ಆರ್ ಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2008ರಲ್ಲಿ ವಿದರ್ಭ ತಂಡದ ಪರವಾಗಿ ಶಿಬಿರದಲ್ಲಿ ಪಾಲ್ಗೊಂಡಿದ್ದ ವೇಳೆ ತಂಡದ ನಾಯಕ ಪ್ರೀತಮ್ ಗಂಧೆ, ಉಮೇಶ್​ ರನ್ನು ಏರ್ ಇಂಡಿಯಾ ಕಚೇರಿಗೆ ಕರೆದುಕೊಂಡು ಹೋಗಿ ಕೆಲಸ ಕೊಡಿಸಿದ್ದರು. ಆದರೆ, ಉತ್ತಮ ನಿರ್ವಹಣೆ  ನಡುವೆಯೂ ಏರ್ ಇಂಡಿಯಾ ಹುದ್ದೆಯನ್ನು ಪರ್ಮನೆಂಟ್ ಮಾಡಿರಲಿಲ್ಲ. ‘ರಾಜ್ಯ ತಂಡವನ್ನು ಪ್ರತಿನಿಧಿಸಿದ ಬೆನ್ನಲ್ಲಿಯೇ ಅವರು ಪರ್ಮನೆಂಟ್ ಸರ್ಕಾರಿ ಹುದ್ದೆ ಪಡೆದುಕೊಳ್ಳಬಹುದಿತ್ತು. ಆದರೆ, ಅದು ಕೂಡ ಸಾಧ್ಯವಾಗಿರಲಿಲ್ಲ.  ಹೀಗಾಗಿ ಇದಕ್ಕಿಂತಲೂ ಮಿಗಿಲಾದ ಗೌರವಾನ್ವಿತ ಸಂಸ್ಥೆಯನ್ನು ಪ್ರತಿನಿಧಿಸಬೇಕು ಎನ್ನುವ ಬಯಕೆ ಅವರಲ್ಲಿತ್ತು. ಹಾಗಾಗಿ ಕೆಲಸಕ್ಕೆ ಯಾವುದೇ ಆತುರ ತೋರಿರಲಿಲ್ಲ. ಈಗ ಅವರು ಆಸೆ ಪಟ್ಟಂತಹ ಕೆಲಸ ಸಿಕ್ಕಿದ್ದು, ಆರ್ ​ಬಿಐ  ನಿಂದ ಕೆಲಸ ಗಿಟ್ಟಿಸಿದ್ದಾರೆ ಎಂದು ಗಂಧೆ ಹೇಳಿದ್ದಾರೆ

Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : New Delhi, Cricket Offbeat, Umesh Yadav, RBI, Team India, ನವದೆಹಲಿ, ಕ್ರಿಕೆಟ್ ಸ್ವಾರಸ್ಯ, ಉಮೇಶ್ ಯಾದವ್, ಆರ್ ಬಿಐ, ಟೀಂ ಇಂಡಿಯಾ
English summary
A decade ago, Tilak Yadav wanted his youngest son - Umesh Yadav - to get a government job. Umesh had prepared for an examination for post of constable in police department.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement