Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Aadhaar gives dignity to marginalised sections, which outweighs the harm says Supreme Court

ಆಧಾರ್ ಮಾಹಿತಿ ಕಳವು ಸಂವಿಧಾನಕ್ಕೆ ವಿರುದ್ಧ; ಆಧಾರ್ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

Supreme Court allows live streaming of court proceedings, says,

ನ್ಯಾಯಾಲಯಗಳ ಕಲಾಪ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ

Asia Cup 2018: worst Umpiring Costs india

ಏಷ್ಯಾ ಕಪ್ 2018: ಅಂಪೈರ್ ತಪ್ಪು ತೀರ್ಪಿನಿಂದಾಗಿ ಭಾರತಕ್ಕೆ ತಪ್ಪಿದ ಜಯ!

Saina Nehwal, Parupalli Kashyap

ಡಿಸೆಂಬರ್‌ನಲ್ಲಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ - ಕಶ್ಯಪ್ ಮದುವೆ!

Narendra Modi-Ramya

ಪ್ರಧಾನಿ ಮೋದಿಯನ್ನು ಟೀಕಿಸುವ ಭರದಲ್ಲಿ 'ಕಳ್ಳ' ಎಂದು ಟ್ವೀಟ್ ಮಾಡಿದ್ದ ರಮ್ಯಾ ಮೇಲೆ ಬಿತ್ತು ಕೇಸ್!

Representational image

ಸಾಲದ ಶೂಲ: ಹಣ ವಾಪಸ್ ನೀಡದ್ದಕ್ಕೆ ಸ್ನೇಹಿತನ ಪತ್ನಿಯನ್ನೇ ಹೊತ್ತೊಯ್ದು ಮದುವೆಯಾದ ಭೂಪ!

Three storey building collapses,

ದೆಹಲಿಯಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ: ಇಬ್ಬರು ಮಕ್ಕಳ ಸಾವು, 7 ಮಂದಿ ರಕ್ಷಣೆ

No need to collect data on SC/ST in reservation in promotion in government services Says Supreme Court

ಸರ್ಕಾರಿ ಉದ್ಯೋಗದ ಮುಂಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್

Tanushree Dutta

ಬಾಲಿವುಡ್ ನಟ ನಾನಾ ಪಾಟೇಕರ್ ​ವಿರುದ್ಧ ತನುಶ್ರೀ ದತ್ತಾ 'ಲೈಂಗಿಕ ಕಿರುಕುಳ’ ಬಾಂಬ್​!

ಸಂಗ್ರಹ ಚಿತ್ರ

ಮುಸ್ಲಿಂ ವ್ಯಕ್ತಿ ವಿವಾಹವಾದ ಕೋಪ; ತಮ್ಮನಿಂದ 13 ವರ್ಷ ಬಳಿಕ ಮನೆಗೆ ಬಂದ ಅಕ್ಕ-ಬಾವನ ಬರ್ಬರ ಕೊಲೆ!

The abandoned ancestral house of Rajkumar in Gajanur that was to be converted into a memorial

ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಡಾ. ರಾಜ್ ಗೆ ನ್ಯಾಯ ಸಿಗಲಿಲ್ಲ!

Representational image

ಲಿವ್ ಇನ್ ಪಾರ್ಟನರ್ ಜೊತೆ ಜಗಳ: ಮನನೊಂದ ಟೆಕಿ ಆತ್ಮಹತ್ಯೆ

40 Kashmir Cops Quit In 4 Days Amid Hizbul Mujahideen

ಹಿಜ್ಬುಲ್ ಮುಜಾಹಿದ್ದೀನ್ ಎಚ್ಚರಿಕೆ: ಕಾಶ್ಮೀರದಲ್ಲಿ ಈ ವರೆಗೂ 40 ಪೊಲೀಸರ ರಾಜಿನಾಮೆ!

ಮುಖಪುಟ >> ಕ್ರಿಕೆಟ್

'ನನ್ನನ್ನು ಕ್ಷಮಿಸಿ, ನಿಷೇಧ ಹೇರಬೇಡಿ'; ರೆಫರಿ ಬಳಿ ಗೋಗರೆದಿದ್ದ ವಿರಾಟ್ ಕೊಹ್ಲಿ!

2012ರ ಸಿಡ್ನಿ ಟೆಸ್ಟ್ ವೇಳೆ ಪ್ರೇಕ್ಷಕರ ಗ್ಯಾಲರಿಯತ್ತ ಮಧ್ಯದ ಬೆರಳು ತೋರಿಸಿ ವಿವಾದಕ್ಕೀಡಾಗಿದ್ದ ಟೀಂ ಇಂಡಿಯಾ ನಾಯಕ
Virat Kohli Recalls Sydney Test Row: I

ಸಂಗ್ರಹ ಚಿತ್ರ

ಸಿಡ್ನಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲೇ ಅತ್ಯಂತ ಕೆಟ್ಟ ರೀತಿಯಲ್ಲಿ ಎದುರಿಸಿದ್ದ ಮುಜುಗರ ಸನ್ನಿವೇಶವನ್ನು ಮತ್ತೆ ನೆನಪು ಮಾಡಿಕೊಂಡಿದ್ದು, ಅಂದು ಕೊಹ್ಲಿ ಮ್ಯಾಚ್ ರೆಫರಿ ಬಳಿ 'ನನ್ನನ್ನು ಕ್ಷಮಿಸಿ, ನಿಷೇಧ ಹೇರಬೇಡಿ' ಎಂದು ಕೇಳಿಕೊಂಡಿದ್ದರು.

ಇಷ್ಟಕ್ಕೂ ಭಾರತ ತಂಡದ ಅಕ್ರಮಣಕಾರಿ ನಾಯರ ವಿರಾಟ್ ಕೊಹ್ಲಿ ಈ ರೀತಿ ಮನವಿ ಮಾಡಿಕೊಂಡಿದ್ದು ಏಕೆ, ಯಾರ ಬಳಿ ಅವರು ಮನವಿ ಮಾಡಿದ್ದರು ಗೊತ್ತಾ..? 

2012ರ ಸಿಡ್ನಿ ಟೆಸ್ಟ್ ವಿವಾದ ಬಹುಶಃ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮರೆತಿರಬಹುದು. ಆದರೆ ಅಂದಿನ ಸನ್ನಿವೇಶವನ್ನು ಹಾಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮರೆಯಲು ಸಾಧ್ಯವೇ ಇಲ್ಲ. ಕಾರಣ ಅಂದು ಅವರ ಮಾಡಿದ್ದ ಒಂದು ಒಂದು ಎಡವಟ್ಟು ಅವರನ್ನು ನಿಷೇಧದ ಅಂಚಿಗೆ ತಂದು ನಿಲ್ಲಿಸಿತ್ತು. ಇದೀಗ ಆ ಕಹಿ ಘಟನೆ ಕೊಹ್ಲಿ ನೆನಪಿಸಿಕೊಂಡಿದ್ದಾರೆ.

ಹೌದು.. 2012ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಸಿಡ್ನಿಯಲ್ಲಿ ನಡೆಯುತ್ತಿದ್ದ ಟೆಸ್ಟ್ ಪಂದ್ಯದ ವೇಳೆ ಕಾಂಗರೂ ಪಡೆ ಬ್ಯಾಟಿಂಗ್ ನಡೆಸುತ್ತಿತ್ತು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದಾಗ, ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಆಸಿಸ್ ಕ್ರಿಕೆಟ್ ಅಭಿಮಾನಿಗಳು ಕೊಹ್ಲಿಯನ್ನು ಛೇಡಿಸಿದ್ದರು. ಕೊಹ್ಲಿಯನ್ನು ಅಸಹ್ಯವಾಗಿ ನಿಂದಿಸುತ್ತಿದ್ದರು. ಕೆಲ ಕ್ಷಣಗಳ ಬಳಿಕ ಅಸಮಾಧಾನಗೊಂಡ ವಿರಾಟ್ ಕೊಹ್ಲಿ, ಮೈದಾನದಲ್ಲಿಯೇ ಪ್ರೇಕ್ಷಕರಿಗೆ ತಮ್ಮ ಮಧ್ಯದ ಬೆರಳು ತೋರಿ ಅಸಭ್ಯ ವರ್ತನೆ ತೋರಿದ್ದರು. 

ಈ ವೇಳೆ ಅಲ್ಲಿದ್ದ ಕೆಲವರು ಅದನ್ನು ಫೋಟೋ ತೆಗೆದುಕೊಂಡಿದ್ದರು. ಅಲ್ಲದೆ ಬಳಿಕ ಈ ವಿಚಾರ ಸುದ್ದಿ ಪತ್ರಿಕೆಗಳಲ್ಲೂ ಪ್ರಸಾರವಾಗಿತ್ತು. ಇದನ್ನು ಗಮನಿಸಿದ್ದ ಅಂದಿನ ಮ್ಯಾಚ್ ರೆಫರಿ ರಂಜನ್ ಮದುಗಲೆ ಅವರು, ತಮ್ಮ ಕೊಠಡಿಗೆ ವಿರಾಟ್ ಕೊಹ್ಲಿ ಅವರನ್ನು ಕರೆಸಿಕೊಂಡಿದ್ದರು. ಬಳಿಕ ವಿರಾಟ್ ಕೊಹ್ಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿನ್ನೆ ಮೈದಾನದಲ್ಲಿ ಏನಾಯಿತು ಎಂದು ಕೇಳಿದರು. ಈ ವೇಳೆ ಕೊಹ್ಲಿ ಏನೂ ಆಗಿಲ್ಲ. ಕೇವಲ ಪ್ರೇಕ್ಷಕರು ಕಿರುಚಾಡುತ್ತಿದ್ದರು ಎಂದು ಹೇಳಿದರು. ಕೊಹ್ಲಿ ಉತ್ತರಕ್ಕೆ ತೀವ್ರ ಅಸಮಾಧಾನಗೊಂಡ ಮ್ಯಾಚ್ ರೆಫರಿ ರಂಜನ್ ಮದುಗಲೆ ಅವರು ತಮ್ಮ ಬಳಿ ಇದ್ದ ಸುದ್ದಿ ಪತ್ರಿಕೆಯನ್ನು ಕೊಹ್ಲಿಯತ್ತ ಎಸೆದರು.

ಪತ್ರಿಕೆಯಲ್ಲಿ ಕೊಹ್ಲಿ ಪ್ರೇಕ್ಷಕರತ್ತ ಮಧ್ಯದ ಬೆರಳು ತೋರಿಸುತ್ತಿರುವ ಚಿತ್ರ ಪ್ರಕಟವಾಗಿತ್ತು. ಕೂಡಲೇ ನಾನು ನನ್ನ ತಪ್ಪಿನ ಅರಿವಾಗಿ ಅಂದಿನ ಕ್ಷಣಗಳ ಮಾಹಿತಿ ನೀಡಿದೆ. ಅಲ್ಲದೆ ನನ್ನನ್ನು ಕ್ಷಮಿಸಿ, ನನ್ನನ್ನು ನಿಷೇಧಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದೆ. ಅಂದಿನ ಪರಿಸ್ಥಿತಿ ಅರ್ಥ ಮಾಡಿಕೊಂಡ ರಂಜನ್ ಮದುಗಲೆ ಯಾವುದೇ ಕಠಿಣ ನಿರ್ಧಾರ ತಳೆಯಲಿಲ್ಲ. ನನ್ನ ವಯಸ್ಸನ್ನು ಪರಿಗಣಿಸಿದ್ದ ರಂಜನ್ ಅವರು ಮೃದು ಧೋರಣೆ ತಳೆದಿದ್ದರು. ಅಂತೆಯೇ ಕೊಹ್ಲಿ ಇದೇ ವೇಳೆ ತಮ್ಮ ಆಪ್ತ ಸ್ನೇಹಿತ ಮತ್ತು ಕೋಚ್ ರಾಜ್ ಕುಮಾರ್ ಶರ್ಮಾ ಅವರನ್ನು ನೆನೆಯುತ್ತಾ ನನ್ನ ವೃತ್ತಿ ಜೀವನವನ್ನು ಸರಿಯಾದ ರೀತಿಯಲ್ಲಿ ಕೆತ್ತಿದ ಶಿಲ್ಪಿ ಈತ ಎಂದು ಅಭಿನಂದನೆ ಸಲ್ಲಿಸಿದ್ದಾರೆ.

ಬಳಿಕ ನನ್ನ ತಂಗಿ, ನನ್ನ ಅಕ್ಕ, ನನ್ನ ತಾಯಿ ಕುರಿತು ಅಸಭ್ಯವಾಗಿ ಮಾತನಾಡಿದಾಗ ನಾನು ಶಾಂತವಾಗಿರಲು ಹೇಗೆ ಸಾಧ್ಯ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ. 
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Sydney, Cricket Offbeat, Team India, Virat Kohli, Sydney Test Row, Ranjan Madugalle, ಸಿಡ್ನಿ, ಕ್ರಿಕೆಟ್ ಸ್ವಾರಸ್ಯ, ಟೀಂ ಇಂಡಿಯಾ, ಸಿಡ್ನಿ ಟೆಸ್ಟ್ ವಿವಾದ, ರಂಜನ್ ಮದುಗಲೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS