Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Congress chief Rahul Gandhi addressing the plenary session of the party in New Delhi on Saturday

ದೇಶವನ್ನು ಮುನ್ನಡೆಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ: ರಾಹುಲ್ ಗಾಂಧಿ

Andra Pradesh CM N.Chandrababu Naidu

ನಮ್ಮ ನಿರೀಕ್ಷೆಗಳನ್ನು ನೀವು ಈಡೇರಿಸಿಲ್ಲ: ಬಿಜೆಪಿ ಅಧ್ಯಕ್ಷರಿಗೆ ಪತ್ರ ಬರೆದ ಆಂಧ್ರ ಸಿಎಂ

RCB

ಐಪಿಎಲ್ ಸಮರಕ್ಕೆ ಆರ್‌ಸಿಬಿ ಸಜ್ಜು: ಬೆಂಗಳೂರಿನಲ್ಲಿ ಆಟಗಾರರಿಗೆ ತರಬೇತಿ ಶುರು

Mohammed Shami, Hasin jahan

ಪತ್ನಿ ಹಸೀನ್ ಜಹಾನ್ ಜತೆ ಸಂಬಂಧ ಮುಗಿದ ಅಧ್ಯಾಯ: ಮೊಹಮ್ಮದ್ ಶಮಿ

Bangladesh Players

ಲಂಕಾ ವಿರುದ್ಧ ಸೋಲುವ ಭೀತಿಯಿಂದ ಹೈಡ್ರಾಮಾ ಮಾಡಿದ್ರಾ ಬಾಂಗ್ಲಾ ಕ್ರಿಕೆಟಿಗರು!

ಸಾಂಗ್ಲಿಯಾನ-ಡಿ ರೂಪಾ-ಆಶಾದೇವಿ

ನಿಭರ್ಯಾ ತಾಯಿಯ ಅಂದ ಚೆಂದ ವರ್ಣಿಸಿ ವಿವಾದಕ್ಕೀಡಾದ ಸಾಂಗ್ಲಿಯಾನ

Veerappa Moily

ರಾಜಕೀಯ ಸಂಚಲನ ಮೂಡಿಸಿದ ವೀರಪ್ಪ ಮೊಯ್ಲಿ ಟ್ವೀಟ್; ಕಾಂಗ್ರೆಸ್ ನಾಯಕರಲ್ಲಿ ತಳಮಳ

Representational imge

ಬೇಸಿಗೆ ಶಿಬಿರದಲ್ಲಿ ಭಾಗವಹಿಸುವ ಸರ್ಕಾರಿ ಶಾಲೆ ಮಕ್ಕಳಿಗೆ ಈ ವರ್ಷ ಮಜ್ಜಿಗೆ ಪೂರೈಕೆ

Nidahas Trophy: Bangladesh Beat SriLanka, Enters Final to Face India

ನಿಡಹಾಸ್ ಟ್ರೋಫಿ: ಶ್ರೀಲಂಕಾ ಮಣಿಸಿದ ಬಾಂಗ್ಲಾದೇಶ ಫೈನಲ್ ಗೆ!

Siddaramaiah govt has betrayed the people of Karnataka, says BS Yeddyurappa

ಬಿಎಸ್ ವೈ ಬ್ರೇಕಿಂಗ್ ನ್ಯೂಸ್: ಸಿದ್ದರಾಮಯ್ಯ ವಚನಭ್ರಷ್ಟ, ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ

Jaggesh

ಕವಿರಾಜ್ ನಿರ್ದೇಶನದ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಎನ್‌‍ಕೌಂಟರ್ ಸ್ಪೆಷಲಿಸ್ಟ್!

casual photo

ಹುಟ್ಟಹಬ್ಬ ಪಾರ್ಟಿಗೆ ಹೋಗೊದು ಬೇಡ ಎಂದ ತಾಯಿ ಮಾತಿನಿಂದ ಬೇಸತ್ತ ಮಗಳು ಆತ್ಮಹತ್ಯೆ

Yeddyurappa incompetence Exposed: Karnataka Congress

ಯಡಿಯೂರಪ್ಪ ಬ್ರೇಕಿಂಗ್ ನ್ಯೂಸ್ ಠುಸ್: ಕರ್ನಾಟಕ ಕಾಂಗ್ರೆಸ್ ವ್ಯಂಗ್ಯ

ಮುಖಪುಟ >> ಕ್ರಿಕೆಟ್

ಕ್ಯಾಪ್ಟನ್ ಕೊಹ್ಲಿ ಮುಡಿಗೆ ಮತ್ತೊಂದು ದಾಖಲೆ, ಸ್ಟೀವ್ ವಾ ದಾಖಲೆ ಪತನ!

ಶ್ರೀಲಂಕಾ ನೆಲದಲ್ಲಿ 2 ಬಾರಿ ಟೆಸ್ಟ್ ಸರಣಿ ಗೆದ್ದ ಭಾರತದ ಮೊದಲ ನಾಯಕ ವಿರಾಟ್ ಕೊಹ್ಲಿ!
Virat Kohli becomes first Indian captain to win two Test series in Sri Lanka

ಸಂಗ್ರಹ ಚಿತ್ರ

ಕೊಲಂಬೋ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಮತ್ತೊಂದು ದಾಖಲೆಯ ಗರಿ ಮುಡಿಗೇರಿದ್ದು, ಲಂಕಾ ನೆಲದಲ್ಲಿ ಸತತ ಎರಡು ಟೆಸ್ಟ್ ಸರಣಿ ಗೆದ್ದ ಮೊದಲ ಭಾರತ ತಂಡದ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

1993ರಲ್ಲಿ ಭಾರತ ತಂಡ ಶ್ರೀಲಂಕಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು. ಬಳಿಕ 2015ರಲ್ಲಿ ಇದೇ ಕೊಹ್ಲಿ ಪಡೆ ಲಂಕಾ ತಂಡದ ವಿರುದ್ಧ ಟೆಸ್ಟ್ ಸರಣಿ ಜಯಿಸಿತ್ತು. ಇನ್ನು ಈ ಬಾರಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತ  ಲಂಕಾ ವಿರುದ್ಧ 2-0 ಅಂತರದಲ್ಲಿ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಅಂತೆಯೇ ಲಂಕಾ ನೆಲದಲ್ಲಿ ಕೊಹ್ಲಿ ಪಡೆ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು ಕೊಲಂಬೋದಲ್ಲಿ ನಡೆದ ಸತತ ಮೂರು ಟೆಸ್ಟ್ ಪಂದ್ಯಗಳನ್ನು ಗೆದ್ದ  ತಂಡ ಎಂಬ ಕೀರ್ತಿಗೂ ಟೀಂ ಇಂಡಿಯಾ ಭಾಜನವಾಗಿದೆ.

ನಾಯಕ ಕೊಹ್ಲಿ ಪಾಲಿಗೆ 8ನೇ ಟೆಸ್ಟ್ ಸರಣಿ ಜಯ

ಇನ್ನು ನಾಯಕ ಕೊಹ್ಲಿ ಪಾಲಿಗೆ ಇದು 8ನೇ ಟೆಸ್ಟ್ ಸರಣಿ ಜಯವಾಗಿದ್ದು, ಇಂಗ್ಲೆಂಡ್ ತಂಡ 1884ರಿಂದ 1892ರ ಅವಧಿಯಲ್ಲಿ 9 ಟೆಸ್ಟ್ ಸರಣಿಯನ್ನು ಜಯಿಸಿತ್ತು. ಇನ್ನು 2005 ಮತ್ತು 2008ರ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡ ಕೂಡ 9  ಟೆಸ್ಟ್ ಪಂದ್ಯಗಳನ್ನು ಜಯಿಸಿತ್ತು.

ಸ್ಟೀವ್ ವಾ ದಾಖಲೆ ಪತನ

ಇನ್ನು ಈ ಟೆಸ್ಟ್ ಸರಣಿ ಜಯದೊಂದಿಗೆ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಸ್ಟೀವ್ ವಾ ಅವರ ದಾಖಲೆಯನ್ನು ಮುರಿದಿದ್ದು, ಸ್ಟೀವ್ ವಾ ನೇತೃತ್ವದಲ್ಲಿ ಆಸಿಸ್ ಪಡೆ 7 ಸರಣಿಗಳನ್ನು ಜಯಿಸಿತ್ತು. ಶ್ರೀಲಂಕಾ  ಟೆಸ್ಟ್ ಸರಣಿ ಜಯ ಕೊಹ್ಲಿ ಪಾಲಿಗೆ 8ನೇ ಸರಣಿ ಜಯವಾಗಿದೆ.

ರಿಕ್ಕಿ ಪಾಟಿಂಗ್ ದಾಖಲೆ ಬೆನ್ನು ಹತ್ತಿದ ಭಾರತದ ರನ್ ಮೆಷಿನ್

ಅಂತೆಯೇ ವಿರಾಟ್ ಕೊಹ್ಲಿ ಮತ್ತದೇ ಆಸ್ಟ್ರೇಲಿಯಾ ತಂಡದ ದಾಖಲೆ ಹಿಂದೆ ಬಿದ್ದಿದ್ದು, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಟಿಂಗ್ ಹೆಸರಿನಲ್ಲಿರುವ ದಾಖಲೆ ಹಿಂದಿಕ್ಕಲು ಕೊಹ್ಲಿ ಇನ್ನು ಕೇವಲ 1 ಟೆಸ್ಟ್ ಸರಣಿ ಜಯದ  ಅವಶ್ಯಕತೆ ಇದೆ. ರಿಕ್ಕಿ ಪಾಟಿಂಗ್ ಒಟ್ಟು 9 ಟೆಸ್ಟ್ ಸರಣಿ ಜಯಿಸಿದ್ದಾರೆ.

ಇನ್ನು ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡ ಒಟ್ಟು 28 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ಪೈಕಿ 18ರಲ್ಲಿ ಜಯಗಳಿಸಿದೆ. 3 ಪಂದ್ಯವನ್ನು ಸೋತಿದ್ದು, 6 ಪಂದ್ಯಗಳು ಡ್ರಾನಲ್ಲಿ ಮುಕ್ತಾಯವಾಗಿದೆ. ಸೌರವ್ ಗಂಗೂಲಿ 21 ಪಂದ್ಯಗಳನ್ನು  ಜಯಿಸಿಕೊಟ್ಟಿದ್ದು, ಎಂಎಸ್ ಧೋನಿ 27 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರು.

ಸಂಬಂಧಿಸಿದ್ದು...
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Colombo, Cricket Offbeat, Virat Kohli, Record, Team India, Sri Lanka, ಕೊಲಂಬೋ, ಕ್ರಿಕೆಟ್ ಸ್ವಾರಸ್ಯ, ವಿರಾಟ್ ಕೊಹ್ಲಿ, ಟೀಂ ಇಂಡಿಯಾ, ಶ್ರೀಲಂಕಾ
English summary
Kohli also became the first Indian captain to win two Test series in Sri Lanka. Virat Kohli-led side registered their eighth consecutive Test victories, standing one behind England's record of nine, recorded back in 1884 to 1892 and also the Australian team, back in the period between 2005 and 2008. Virat as a captain has now edged past Aussie legend Steve Waugh with most consecutive Test series win by a captain. He is, however, one behind Ricky Ponting. Going by overall stats, out of 28 Test matches that India played under Virat's captaincy, the Men in Blue gathered 18 victories, lost three and drew six. He is four wins short of Sourav Ganguly's record of 21 victories and still six short of MS Dhoni's 27

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement