Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Madhu Koda

ಕಲ್ಲಿದ್ದಲು ಹಗರಣ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾಗೆ 3 ವರ್ಷ ಜೈಲು ಶಿಕ್ಷೆ

Karnataka decides not to permit Sunny Leone New Year eve event

ಬೆಂಗಳೂರು: ಸನ್ನಿ ಲಿಯೋನ್ ಹೊಸ ವರ್ಷಾಚರಣೆ ಕಾರ್ಯಕ್ರಮಕ್ಕೆ ಅನುಮತಿ ನೀಡದಿರಲು ಸರ್ಕಾರ ನಿರ್ಧಾರ

Ravindra Jadeja

6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ರವೀಂದ್ರ ಜಡೇಜಾ ದಾಖಲೆ!

Mobile phones-TV

ಇನ್ನು ಮೊಬೈಲ್, ಟಿವಿ ದುಬಾರಿ; ಕೇಂದ್ರ ಸರ್ಕಾರದಿಂದ ಆಮದು ಸುಂಕ ಹೆಚ್ಚಳ ನಿರ್ಧಾರ!

US may stop spouses of H-1B visa holders from working

ಎಚ್ 1ಬಿ ವೀಸಾ ಹೊಂದಿರುವವರ ಪತ್ನಿಯರ ಕೆಲಸಕ್ಕೆ ಕತ್ತರಿ ಹಾಕಲು ಅಮೆರಿಕಾ ಚಿಂತನೆ

Rashmika Mandanna

ರಶ್ಮಿಕಾ ಮಂದಣ್ಣ ನಿಜವಾದ ಆಟ ಈಗ ಶುರು!

National Council for Education Research and Training (NCERT),

ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕಗಳು ವಿದ್ಯಾರ್ಥಿ ಸ್ನೇಹಿಯಾಗಿಲ್ಲ: ಎನ್ ಸಿಇಆರ್ ಟಿ

PM Modi inaugurates Tuirial hydropower project in Mizoram, North-East

ಮಿಜಾರಾಂ: ತುಯಿರಿಯಲ್ ಜಲವಿದ್ಯುತ್ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ

India Is Afghanistan

ಭಾರತ ಆಫ್ಘಾನಿಸ್ತಾನದ ಅತ್ಯಂತ ವಿಶ್ವಾಸಾರ್ಹ ಪ್ರಾದೇಶಿಕ ಪಾಲುದಾರ: ಪೆಂಟಗನ್ ಶ್ಲಾಘನೆ

P.V. Sindhu,

ದುಬೈ ವಿಶ್ವ ಸೂಪರ್‌ ಸೀರಿಸ್‌: ಯಮಗುಚಿಯನ್ನು ಮಣಿಸಿದ ಸಿಂಧು, ಶ್ರೀಕಾಂತ್ ಗೆ ಸೋಲು

ಸಿಗರೇಟ್

2014ರ ಸಿಗರೇಟ್, ತಂಬಾಕು ಉತ್ಪನ್ನಗಳ ತಿದ್ದುಪಡಿ ಅಧಿನಿಯಮ ರದ್ದು ಪಡಿಸಿದ ಕರ್ನಾಟಕ ಹೈಕೋರ್ಟ್

Kamal Nath,

ಮಧ್ಯ ಪ್ರದೇಶ: ಕಾಂಗ್ರೆಸ್ ಮುಖಂಡ ಕಮಲ್‌ನಾಥ್‌ಗೆ ಬಂದೂಕು ತೋರಿಸಿದ ಪೊಲೀಸ್ ಪೇದೆ

15-month-old girl falls to death from 3rd floor

ಬೆಂಗಳೂರು: ಆಟವಾಡುತ್ತಿದ್ದ ಮಗು ಮೂರನೇ ಮಹಡಿಯಿಂದ ಬಿದ್ದು ಸಾವು

ಮುಖಪುಟ >> ಕ್ರಿಕೆಟ್

ಮಾಜಿ ನಾಯಕ ಮಹಮದ್ ಅಜರುದ್ದೀನ್ ದಾಖಲೆ ಮುರಿದ ವಿರಾಟ್ ಕೊಹ್ಲಿ!

ಗಾಲೆ ಟೆಸ್ಟ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಯ ಶತಕ
Virat Kohli break

ಕ್ರಿಕ್ ಇನ್ಫೋ ಚಿತ್ರ

ಗಾಲೆ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆ ಹಿಂದಿಕ್ಕುವ ಸರಣಿ ಮುಂದುವರೆದಿದ್ದು, ತಮ್ಮ ಅಮೋಘ ಬ್ಯಾಟಿಂಗ್ ಮುಂದುವರೆಸಿರುವ ಕೊಹ್ಲಿ ಇದೀಗ ಮಾಜಿ ನಾಯಕ ಮಹಮದ್ ಅಜರುದ್ದೀನ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಕೊಹ್ಲಿ ಆಕರ್ಷಕ ಶತಕ ಗಳಿಸಿದ್ದು, ಇದು ಅವರ ವೃತ್ತಿ ಜೀವನದ 17 ಟೆಸ್ಟ್ ಶತಕವಾಗಿದೆ. ಅಂತೆಯೇ ನಾಯಕನಾಗಿ ಕೊಹ್ಲಿ  ಗಳಿಸಿದ 10ನೇ ಶತಕ ಕೂಡ ಇದಾಗಿದ್ದು, ಈ ಮೂಲಕ ಕೊಹ್ಲಿ ಮಾಜಿ ಅಜರುದ್ದೀನ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ತಂಡದ ನಾಯಕನಾಗಿ ಅಜರುದ್ದೀನ್ ಒಟ್ಟು 9 ಶತಕಗಳನ್ನು ಸಿಡಿಸಿದ್ದು, ಈ ದಾಖಲೆಯನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.

ಅಜರುದ್ದೀನ್ ಒಟ್ಟು 68 ಇನ್ನಿಂಗ್ಸ್ ಗಳಲ್ಲಿ 9 ಶತಕ ಸಿಡಿಸಿದ್ದರೆ, ಕೊಹ್ಲಿ 44 ಇನ್ನಿಂಗ್ಸ್ ಗಳಲ್ಲಿ 10 ಶತಕ ಸಿಡಿಸಿದ್ದಾರೆ. ಇನ್ನು ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅವರ ದಾಖಲೆಯ ಸಮೀಪದಲ್ಲಿಯೇ ಕೊಹ್ಲಿ ಇದ್ದು, ಗವಾಸ್ಕರ್ ಒಟ್ಟು  34 ಟೆಸ್ಟ್ ಶತಕ ಸಿಡಿಸಿದ್ದಾರೆ. ಈ ಪೈಕಿ 11 ಶತಕಗಳನ್ನು ತಾವು ತಂಡದ ನಾಯಕರಾಗಿ ಗಳಿಸಿದ್ದು, ಕೊಹ್ಲಿ ಇನ್ನೊಂದು ಶತಕ ಗಳಿಸಿದರೆ ಗವಾಸ್ಕರ್ ದಾಖಲೆಯನ್ನೂ ಹಿಂದಿಕ್ಕಲಿದ್ದಾರೆ.

ಇನ್ನು ಅತ್ಯಂತ ಕಡಿಮೆ ಇನ್ನಿಂಗ್ಸ್ ನಲ್ಲಿ 10 ಶತಕ ಸಿಡಿಸಿದ ನಾಯಕರ ಪಟ್ಟಿಯಲ್ಲಿ ಕೊಹ್ಲಿ 5ನೇ ಸ್ಥಾನದಲ್ಲಿದ್ದು, ಪಟ್ಟಿಯಲ್ಲಿ ವಿಶ್ವ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಅಗ್ರ ಸ್ಥಾನದಲ್ಲಿದ್ದಾರೆ. ಬ್ರಾಡ್ಮನ್ ಕೇವಲ 26 ಇನ್ನಿಂಗ್ಸ್ ಗಳಲ್ಲಿ 10  ಶತಕ ಸಿಡಿಸಿದ್ದರೆ, 36 ಇನ್ನಿಂಗ್ಸ್ ಗಳಲ್ಲಿ 10 ಶತಕ ಸಿಡಿಸಿರುವ ಶ್ರೀಲಂಕಾದ ಮಹೇಲಾ ಜಯವರ್ಧನೆ 2ನೇ ಸ್ಥಾನದಲ್ಲಿದ್ದಾರೆ. ಅಂತೆಯೇ 37 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿರುವ ಆಸ್ಟ್ರೇಲಿಯಾದ ಸ್ಟೀವೆನ್ ಸ್ಮೀತ್ 3ನೇ  ಸ್ಥಾನದಲ್ಲಿದ್ದು, 34 ಇನ್ನಿಂಗ್ಸ್ ಗಳಲ್ಲಿ 10 ಶತಕ ಸಿಡಿಸಿರುವ ಆಸ್ಟ್ರೇಲಿಯಾದ ಸ್ಟೀವ್ ವಾ 4ನೇ ಸ್ಥಾನದಲ್ಲಿದ್ದಾರೆ.

ಸಂಬಂಧಿಸಿದ್ದು...
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Galle, Cricket Offbeat, India, Srilanka, Virat Kohli, ಗಾಲೆ, ಕ್ರಿಕೆಟ್ ಸ್ವಾರಸ್ಯ, ಭಾರತ, ಶ್ರೀಲಂಕಾ, ವಿರಾಟ್ ಕೊಹ್ಲಿ
English summary
Indian skipper Virat Kohli added yet another feather to his illustrious career hat on Saturday as he notched up his 17th Test ton at Galle International Stadium.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement