Kannadaprabha Sunday, April 20, 2014 11:52 PM IST
The New Indian Express

ಪೇಟೆ ಬಾಣಾವರ- 1ರಲ್ಲಿ ಮರು ಮತದಾನ ಸಾಧ್ಯತೆ

ಹಾಸನ: ಅರಸೀಕೆರೆ ವಿಧಾನಸಭಾ ಕ್ಷೇತ್ರದ ಪೇಟೆ ಬಾಣಾವರ-1ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಕ್ಷಿಣ ಪಾರ್ಶ್ವದ ಮತಗಟ್ಟೆ ಸಂಖ್ಯೆ 72ರಲ್ಲಿ ತಾಂತ್ರಿಕ ದೋಶದಿಂದ ಮತಯಂತ್ರ ಕೆಟ್ಟಿದ್ದ ಹಿನ್ನೆಲೆಯಲ್ಲಿ ಮರು ಮತದಾನ ನಡೆಯುವ ಸಾಧ್ಯತೆಗಳಿವೆ. ಈ ಮತಗಟ್ಟೆಯಲ್ಲಿ ಬೆಳಗಿನಿಂದ ಮಧ್ಯಾಹ್ನ 4ರವರೆಗೆ 332 ಮತಗಳು ಚಲಾವಣೆಗೊಂಡ ನಂತರ ತಾಂತ್ರಿಕ ದೋಷ ಕಂಡು ಬಂದಿತ್ತು....

ಸಿಡಿಲು ಸಹಿತ ಮಳೆಗೆ ಅಪಾರ ನಷ್ಟ  Apr 20, 2014

ಅರಸೀಕೆರೆ: ತಾಲ್ಲೂಕಿನ ಹಾರನಹಳ್ಳಿ ಸಮೀಪ ಬೋರನಕೊಪ್ಪಲು ಗ್ರಾಮದಲ್ಲಿ ಸಿಡಿಲು ಬಡಿದು ಎತ್ತಿನಗಾಡಿ, ಹತ್ತಾರು ತೆಂಗಿನ ಮರಗಳು ಹಾಗೂ ಅಪಾರ ಪ್ರಮಾಣದ ಜಾನುವಾರು ಮೇವು ಸುಟ್ಟು ಕರಕಲಾದ ಘಟನೆ ತೋಟದ ಮನೆಯ ಸಮೀಪ ನಡೆದಿದ್ದು ಲಕ್ಷಾಂತರ ರು. ನಷ್ಟ ಸಂಭವಿಸಿದ್ದರೆ ತಾಲ್ಲೂಕಿನ ಕಣಕಟ್ಟೆ ಹೋಬಳಿ ಸುತ್ತಮುತ್ತ ಮಿಂಚು, ಗುಡುಗು, ಆಲಿಕಲ್ಲು ಮಳೆಗೆ ಲಕ್ಷಾಂತರ ರು....

ಚಿಗುರುವುದೇ ಉದ್ಯಾವನದ ಕನಸು  Apr 20, 2014

ಅರಸೀಕೆರೆ: ಸಾರ್ವಜನಿಕರಿಗಾಗಿ ಸುಂದರ ಉದ್ಯಾನವನ ನಿರ್ಮಿಸುವ ಪುರಸಭೆಯ ಯೋಜನೆ ರೂಪುಗೊಂಡು ಮೂರ್ನಾಲ್ಕು ವರ್ಷಗಳೇ ಕಳೆದರೂ ಇನ್ನೂ ಕಾರ್ಯರೂಪಕ್ಕೆ ಬಾರದಿರುವುದು ಇಲ್ಲಿನ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.  
ಪಟ್ಟಣದ 15 ನೇ ವಾರ್ಡ್ನ ಸುಭಾಷ್ ನಗರದ ಶ್ರೀಕೆಂಗಲ್ ಸಿದ್ದೇಶ್ವರ ದೇವಾಲಯ ಸಮೀಪ ವ್ಯವಸ್ಥಿತವಾದ ಸುಂದರ ಉದ್ಯಾನವನ ನಿಮಿಂಸಲು ಪುರಸಭಾ...

ರಾಮೋತ್ಸವದ ಪ್ರಯುಕ್ತ ಸಂಗೀತ ಕಾರ್ಯಕ್ರಮ  Apr 20, 2014

ಹೊಳೆನರಸೀಪುರ: ಪಟ್ಟಣದ ಶ್ರೀ ಸೀತಾರಾಮ ಮಂದಿರದ ಆಶ್ರಯದಲ್ಲಿ ಶ್ರೀ ಏಕಾಂತರಾಮೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ರಾಮೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ರಾಮೋತ್ಸವದ ಅಂಗವಾಗಿ ಇಲ್ಲಿನ ಮಹಿಳಾ ಹರಿದಾಸ ಸಂಘದ ಸದಸ್ಯರಾದ ಸುಧಾಮಣಿಗುರುರಾಜ್, ಭವಾನಿ ಪ್ರಹ್ಲಾದ್, ಪಾರ್ವತಮ್ಮ, ಇಂದಿರಾ ಬಾರಾಸು, ಪದ್ಮಿನಿ ಶ್ರೀನಿವಾಸ್, ವಾಸುಕಿ, ಮಧು...

ದುರಂತ ನಡೆಯೋಕೆ ಕಾಯ್ತಾ ಇದೀರಾ ?  Apr 20, 2014

-ಎಚ್.ಡಿ. ಗುರುಪ್ರಸಾದ್
ಹೊಳೆನರಸೀಪುರ: ಪಟ್ಟಣದ ಅರಕಲಗೂಡು ರಸ್ತೆಯಲ್ಲಿನ ಮುಖ್ಯ ಪಂಪ್ ಹೌಸ್ ಬಳಿಯೇ ಇರುವ ಮೂರು ದಶಕಗಳಿಗೂ ಹಳೆಯದಾದ ನೀರಿನ ಟ್ಯಾಂಕ್ ಶಿಥಿಲಗೊಳ್ಳುತ್ತಿರುವುದಲ್ಲದೇ, ನೀರು ಸೋರ ತೊಡಗಿ ಅಪಾಯದ ಮುನ್ಸೂಚನೆ ನೀಡುತ್ತಿದೆ.
ಸುಮಾರು ಮೂರು ದಶಕಗಳಿಗೂ ಹಳೆಯದಾದ ಅರಕಲಗೂಡು ರಸ್ತೆಯಲ್ಲಿನ 1 ಲಕ್ಷ ಗ್ಯಾಲನ್ ನೀರು ಸಂಗ್ರಹಣಾ ಸಾಮರ್ಥ್ಯದ...