Kannadaprabha The New Indian Express
3ನೇ ವಾರಕ್ಕೆ 350 ಕೋಟಿ ಗಳಿಸಿದ 'ದಂಗಲ್' 
By select 
11 Jan 2017 02:00:00 AM IST

ಮುಂಬೈ: ಆಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಅತಿ ವೇಗವಾಗಿ 350 ಕೋಟಿ ಗಳಿಸಿದ ಚಿತ್ರ ಎಂಬ ದಾಖಲೆಗೆ ಪಾತ್ರವಾಗಿದೆ. 

ದಂಗಲ್ ಚಿತ್ರ ಬಿಡುಗಡೆಯಾಗಿ 3ನೇ ವಾರಕ್ಕೆ 353 ಕೋಟಿ ಗಳಿಕೆ ಮಾಡಿದೆ. ಮೂರನೇ ವಾರದ ಮೊದಲ ಶುಕ್ರವಾರ 6.66 ಕೋಟಿ, ಶನಿವಾರ 10.80 ಕೋಟಿ, ಭಾನುವಾರ 14.33 ಕೋಟಿ, ಸೋಮವಾರ 4.35 ಕೋಟಿ, ಮಂಗಳವಾರ 4.03 ಕೋಟಿ ಗಳಿಸಿದೆ. 

ಭಾರತದ ಕುಸ್ತಿಪಟು ಮಹಿವೀರ್ ಸಿಂಗ್ ಪೋಗಟ್ ಅವರ ಜೀವನಾಧಾರಿತ ಚಿತ್ರಕಥೆ ಹೊಂದಿದ್ದು ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಸಿದ್ದರು. 

ಕಳೆದ ಡಿಸೆಂಬರ್ 23ರಂದು ತೆರೆಕಂಡಿದ್ದ ಚಿತ್ರ ಮೊದಲ ವಾರದಲ್ಲೇ 106.95 ಕೋಟಿ ಹಣ ಗಳಿಕೆ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು. 

Copyright � 2012 Kannadaprabha.com