Kannadaprabha The New Indian Express
ಶಶಿಕಲಾ ಜೀವನಚರಿತ್ರೆ ಊಹೆಗೂ ನಿಲುಕದಷ್ಟು ಆಘಾತಕಾರಿಯಾಗಿದೆ: ರಾಮ್ ಗೋಪಾಲ್ ವರ್ಮಾ 
By select 
17 Feb 2017 02:00:00 AM IST

ಚೆನ್ನೈ: ಹೆಸರಾಂತ ಬಾಲಿವುಡ್ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಜಯಾಲಲಿತಾ ಆಪ್ತೆ ವಿ.ಕೆ ಶಶಿಕಲಾ ಅವರ ಜೀವನಾಧಾರಿತ ಸಿನಿಮಾ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು ಶಶಿಕಲಾ ಜೀವನ ಚರಿತ್ರೆ ಊಹೆಗೂ ನಿಲುಕದಂತೆ ಆಘಾತಕಾರಿಯಾಗಿದೆ ಎಂದು ಹೇಳಿದ್ದಾರೆ.

ಸದ್ಯ ವಿ.ಕೆ ಶಶಿಕಲಾ ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. ಶಶಿಕಲಾ ಸಿನಿಮಾದಲ್ಲಿ ಶಶಿಕಲಾ ಹಿಂದಿನ ಹಾಗೂ ಮುಂದೆ ಏನಾಯಿತು ಎಂಬುದರ ಬಗ್ಗೆ ತಿಳಿಸುತ್ತದೆ. ಇದು ಕೇವಲ ಮನ್ನಾರ್ ಗುಡಿ ಮಾಫಿಯಾ ಸದಸ್ಯರಿಗೆ ಮಾತ್ರ ಅರ್ಥವಾಗುತ್ತದೆ ಎಂದು ಬರೆದಿದ್ದಾರೆ.

ಶಶಿಕಲಾ ಮನ್ನಾರ್ ಗುಡಿ ಮಾಫಿಯಾ ಕುಟುಂಬದ ಡಾನ್ ವಿಟೋ ಕ್ಯಾರೋಲಿನ್  ಎಂದು ಆರ್ ಜಿವಿ ಹೇಳಿದ್ದಾರೆ.
ಜಯಲಲಿತಾ ಮತ್ತು ಶಶಿಕಲಾ ನಡುವಿನ ನಿಜವಾದ ಸಂಬಂಧದ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗುತ್ತದೆ.

ಶಶಿಕಲಾ ಮತ್ತು ಜಯಲಲಿತಾ ನಡುವಿನ ಸಂಬಂಧದ ಬಗ್ಗೆ ಪೋಯಸ್ ಗಾರ್ಡನ್ ಕೆಲಸದವರು ಏನು ಹೇಳಿದ್ದಾರೆ ಅದು ಕಲ್ಪನೆಗೂ ನಿಲುಕದಂತೆ ಆಘಾತಕಾರಿಯಾಗಿದೆ. ಅದನ್ನೆಲ್ಲಾ ಸಿನಿಮಾದಲ್ಲಿ ತೋರಿಸಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಶಶಿಕಲಾ ಹೃದಯದಿಂದ ತುಂಬಾ ತುಂಬಾ ಪ್ರಾಮಾಣಿಕರು, ಇದೊಂದು ತಮಿಳು ಪ್ರೇಮಕಥೆ ಮತ್ತು ಇದರಲ್ಲಿ ಯಾವುದೇ ಕಾಲ್ಪನಿಕ ಕಥೆಯಲ್ಲ ಹಾಗೂ ರಾಜಕೀಯ ಸೇರಿಲ್ಲ ಎಂದು ಈ ಹಿಂದೆ ಆರ್ ಜಿವಿ ಹೇಳಿದ್ದರು.

ಸದ್ಯ ಸರ್ಕಾರ್ ಸಿನಿಮಾ ನಿರ್ದೇಶನದಲ್ಲಿ ರಾಮ್ ಗೋಪಾಲ್ ವರ್ಮಾ ಬ್ಯುಸಿಯಾಗಿದ್ದಾರೆ.

Copyright � 2012 Kannadaprabha.com