Kannadaprabha The New Indian Express
ಮುಖ್ಯ ಚುನಾವಣಾ ಆಯುಕ್ತರಾಗಿ ಅಚಲ್‌ ಕುಮಾರ್‌ ಜ್ಯೋತಿ ಅಧಿಕಾರ ಸ್ವೀಕಾರ 
By select 
06 Jul 2017 02:00:00 AM IST

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರಾಗಿ ಅಚಲ್‌ ಕುಮಾರ್‌ ಜ್ಯೋತಿ ಇಂದು ಅಧಿಕಾರ ಸ್ವೀಕರಿಸಿದರು. 

ಗುಜರಾತ್ ನ ನಿವೃತ್ತ ಮುಖ್ಯ ಕಾರ್ಯದರ್ಶಿ ಅಚಲ್ ಕುಮಾರ್ ಜ್ಯೋತಿ ಇಂದು ಸಿಇಸಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.  

ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ ಅವರು ಇದೇ ಜುಲೈ 6ರಂದು ನಿವೃತ್ತರಾದ ಹಿನ್ನೆಲೆಯಲ್ಲಿ ಇಂದು 64 ವರ್ಷ ವಯಸ್ಸಿನ ಅಚಲ್‌ ಕುಮಾರ್‌ ಜ್ಯೋತಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ,

1975ರ ಬ್ಯಾಚ್‌ನ ಗುಜರಾತ್‌ ಕೇಡರ್‌ನ ಭಾರತೀಯ ಆಡಳಿತಾತ್ಮಕ ಸೇವೆ(ಐಎಎಸ್) ಅಧಿಕಾರಿಯಾಗಿದ್ದ ಅಚಲ್‌ ಕುಮಾರ್‌ ಅವರು ಗುಜರಾತ್‌ನ ವಿಚಕ್ಷಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. 2013 ರಲ್ಲಿ ಗುಜರಾತ್ ನ ಮುಖ್ಯ ಕಾರ್ಯದರ್ಶಿ  ಹುದ್ದೆಯಿಂದ ನಿವೃತ್ತರಾದರು. 

ರಾಜ್ಯ ಕಂದಾಯ, ನೀರು ಪೂರೈಕೆ ಮತ್ತು ಕೈಗಾರಿಕಾ ಇಲಾಖೆಗಳ ಕಾರ್ಯದರ್ಶಿಯಾಗಿ ಕೂಡ ಕೆಲಸ ನಿರ್ವಹಿಸಿದ್ದಾರೆ.  

Copyright � 2012 Kannadaprabha.com