Kannadaprabha The New Indian Express
ಅರುಣಾಚಲ ಪ್ರದೇಶದಲ್ಲಿ ವಾಯುಪಡೆ ಹೆಲಿಕಾಪ್ಟರ್ ಪತನ, ಏಳು ಸಾವು 
By select 
06 Oct 2017 02:00:00 AM IST

ಇಟಾ ನಗರ: ಬಾರತೀಯ ವಾಯುಸೇವನೆಗೆ ಸೇರಿದ ಹೆಲಿಕಾಪ್ಟರ್ ಪತನಗೊಂಡು ಏಳು ಮಂದಿ ಸಾವಿಗೀಡಾಗಿರುವ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ. 

ವಾಯುಪಡೆಗೆ ಸೇರಿದ Mi17 v5ಹೆಲಿಕಾಪ್ಟರ್ ಪತನಗೊಂಡಿದೆ. ಓರ್ವ ಅಧಿಕಾರಿಯೂ ಸೇರಿ ಏಳುಮಂದಿ ಮೃತಪಟ್ಟಿದ್ದಾರೆ.

ಹೆಲಿಕಾಪ್ಟರ್ ನಲ್ಲಿ ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದರು.

ಅಪಘಾತಕ್ಕೆ ಖಚಿತ ಕಾರಣವನ್ನು ಪತ್ತೆ ಮಾಡಲು ವಿಚಾರಣೆ ನಡೆಸುವುದಾಗಿ ವಾಯು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

Copyright � 2012 Kannadaprabha.com