Kannadaprabha The New Indian Express
ಕ್ರಿಕೆಟ್‌ಗೆ ವಿದಾಯ ಹೇಳಿದ ಆಸೀಸ್ ವೇಗಿ ಜಾನ್ ಹೇಸ್ಟಿಂಗ್ಸ್ 
By select 
06 Oct 2017 02:00:00 AM IST

ಮೆಲ್ಬೋರ್ನ್: ಗಾಯದ ಮೇಲೆ ಬರೆ ಎಳೆದಂತೆ ಬ್ಯಾಕ್ ಟು ಬ್ಯಾಕ್ ಗಾಯದ ಸಮಸ್ಯೆಗೆ ತುತ್ತಾಗುತ್ತಿರುವ ಆಸ್ಟ್ರೇಲಿಯಾ ವೇಗಿ ಜಾನ್ ಹೇಸ್ಟಿಂಗ್ಸ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. 

2010ರಲ್ಲಿ ಏಕದಿನ ಕ್ರಿಕೆಟ್ ಬದುಕಿಗೆ ಪಾದಾರ್ಪಣೆ ಮಾಡಿದ್ದ ಜಾನ್ ಹೇಸ್ಟಿಂಗ್ಸ್ ಒಂದಿಲ್ಲೊಂದು ಗಾಯದ ಸಮಸ್ಯೆಗೆ ತುತ್ತಾಗುತ್ತಿದ್ದರು. ಈ ಹಿನ್ನಲೆಯಲ್ಲಿ ಏಕದಿನ ಮತ್ತು ಫಸ್ಟ್ ಕ್ಲಾಸ್ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದು ಟಿ20 ಕ್ರಿಕೆಟ್ ನಲ್ಲಿ ಆಡಲಿದ್ದಾರೆ. 

ಜಾನ್ ಹೇಸ್ಟಿಂಗ್ಸ್ 2012ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದು 1 ವಿಕೆಟ್ ಮಾತ್ರ ಪಡೆದಿದ್ದರು. ಇನ್ನು 29 ಏಕದಿನ ಪಂದ್ಯಗಳನ್ನು ಆಡಿರುವ ಅವರು 42 ವಿಕೆಟ್ ಗಳನ್ನು ಪಡೆದಿದ್ದಾರೆ.

Copyright � 2012 Kannadaprabha.com