Kannadaprabha The New Indian Express
ರಷ್ಯಾದಲ್ಲಿ ಭೀಕರ ಅಪಘಾತ: ಬಸ್‍ಗೆ ರೈಲು ಡಿಕ್ಕಿ, 19 ಸಾವು 
By select 
06 Oct 2017 02:00:00 AM IST

ಮಾಸ್ಕೋ(ರಷ್ಯಾ): ಮಾಸ್ಕೋದ ವಾಲ್ಡೀಮಿರ್ ಪ್ರದೇಶದಲ್ಲಿ ಪ್ರಯಾಣಿಕರ ಬಸ್ ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 19 ಮಂದಿ ದಾರುಣ ಸಾವನ್ನಪ್ಪಿದ್ದಾರೆ. 

ರೈಲ್ವೆ ಕ್ರಾಸಿಂಗ್ ಬಳಿ ಹಳಿ ಮೇಲೆ ಬಸ್ ಬಂದಾಗ ರೈಲು ಡಿಕ್ಕಿ ಹೊಡೆದಿದೆ. ಬಸ್ ಚಾಲಕರು ಖಜಕಿಸ್ತಾನದ ಮೂಲದ ಡ್ರೈವರ್ಗಳು ಆಗಿದ್ದು ಇವರಿಬ್ಬರ ಪೈಕಿ ಒಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಖಜಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ಅನವರ್ ಝೈನಾಕೊವ್ ಹೇಳಿದ್ದಾರೆ. 

ಬಸ್ ಕಜಕಿಸ್ತಾನದ ಪರವಾನಗಿಯನ್ನು ಹೊಂದಿದ್ದು ಪ್ರಯಾಣಿಕರು ಉಜ್ಬೇಕಿಸ್ತಾನ ಮೂಲದವರು ಎಂದು ತಿಳಿದುಬಂದಿದೆ. 

Copyright � 2012 Kannadaprabha.com