Kannadaprabha The New Indian Express
ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಪ್ರಕರಣ ದಾಖಲಿಸಿದ ಪತ್ನಿ 
By select 
09 Mar 2018 02:00:00 AM IST

ನವದೆಹಲಿ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರು ಅಕ್ರಮ ಸಂಬಂಧ ಹೊಂದಿದ್ದು, ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದ ಅವರ ಪತ್ನಿ ಹಸೀನ್ ಜಹಾನ್ ಅವರು ಇದೀಗ ಶಮಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ. 

ಮೊಹಮ್ಮದ್ ಶಮಿ ವಿರುದ್ದ ಬರವಣಿಗೆ ದೂರು ಬರೆದಿರುವ ಹಸೀನ್ ಜಹಾನ್ ಅವರು, ಕೋಲ್ಕತಾ ಜಂಟಿ ಪೊಲೀಸರ್ ಅಧಿಕಾರಿ ಸಿಪಿ ಪ್ರವೀಣ್ ತ್ರಿಪಾಠಿಯವರಿಗೆ ಸಲ್ಲಿಸಿದ್ದಾರೆ. ದೂರನ್ನು ಎಫ್ಐಆರ್ ನಂತೆ ನೋಡಲಾಗುತ್ತದೆ ಎಂತು ತ್ರಿಪಾಠಿಯವರು ಹೇಳಿದ್ದಾರೆ. 

ಕ್ರಿಕೆಟಿಗ ಶಮಿ ಪತ್ನಿಯವರಿಂದ ದೂರನ್ನು ಪಡೆದುಕೊಂಡಿದ್ದೇವೆ. ದೂರಿನಲ್ಲಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದಾಗಿ ಶಮಿ ಪತ್ನಿ ತಿಳಿಸಿದ್ದಾರೆ. 

ಶಮಿ ವಿರುದ್ಧ ಯಾವ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಬೇಕೆಂಬುದನ್ನು ನಿರ್ಧರಿಸಬೇಕಿದೆ. ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. 

ಶಮಿ ಪತ್ರಿ ಹಸೀನ್ ಜಹಾನ್ ಅವರು ಮಾತನಾಡಿ, ಅಧಿಕಾರಿಯನ್ನು ಭೇಟಿ ಮಾಡಿದ್ದೇನೆ. ಶಮಿ ನನಗೆ ನೀಡಿದ್ದ ಕಿರುಕುಳ ಕುರಿತಂತೆ ಎಲ್ಲಾ ವಿಚಾರವನ್ನು ಅಧಿಕಾರಿಗೆ ತಿಳಿಸಿದ್ದೇನೆ. ಅಲ್ಲದೆ. ನನ್ನನ್ನು ಮದುವೆಯಾಗಿದ್ದರೂ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವಿಚಾರವನ್ನೂ ತಿಳಿಸಿದ್ದೇನೆಂದು ಹೇಳಿದ್ದಾರೆ. 

Copyright � 2012 Kannadaprabha.com