Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Vishal Sikka

ಇನ್ಫೋಸಿಸ್ ಸಿಇಒ, ಎಂಡಿ ವಿಶಾಲ್ ಸಿಕ್ಕಾ ರಾಜೀನಾಮೆ

Barcelona terror attack: 13 killed in Spain

ಸ್ಪೇನ್ ಉಗ್ರ ದಾಳಿ: ವಾಹನ ನುಗ್ಗಿಸಿ 13 ಮಂದಿಯ ಹತ್ಯೆ, 100 ಮಂದಿಗೆ ಗಾಯ

Barcelona Terror attack: Spain Police announced the arrest of two suspects

ಬಾರ್ಸಿಲೋನಾ ಉಗ್ರ ದಾಳಿ: ಸ್ಪೇನ್ ಪೊಲೀಸರಿಂದ ಇಬ್ಬರು ಶಂಕಿತ ಉಗ್ರರ ಬಂಧನ

Prime minister Narendra Modi

ಮೋದಿ ಸಂಪುಟ ವಿಸ್ತರಣೆ: ಕರ್ನಾಟಕದ ಬಿಜೆಪಿ ಸಂಸದರಿಗೆ ಹೆಚ್ಚಿನ ಸ್ಥಾನ?

File photo

"ಡೊಕ್ಲಾಮ್ ನಲ್ಲಿ ಭಾರತೀಯ ಸೈನಿಕರ ಸ್ಥಿತಿ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ": ಭಾರತಕ್ಕೆ ಜಪಾನ್ ಬೆಂಬಲ

BJP chief Amit Shah

ಲೋಕಸಭಾ ಚುನಾವಣೆಗೆ 'ಮಿಷನ್ 350', ಅಮಿತ್ ಶಾ ಕಾರ್ಯತಂತ್ರ

File photo

ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್: ಯೋಧನೊಂದಿಗೆ ತಂದೆಗೂ ಗಾಯ

National Conference ( NC) supremo Farooq Abdullah

ಫರೂಕ್ ಅಬ್ದುಲ್ಲಾ ಬೇಜವಾಬ್ದಾರಿತನದಿಂದ ಹೇಳಿಕೆ ನೀಡಬಾರದು: ಬಿಜೆಪಿ

Congress vice president Rahul Gandhi

ಪ್ರಧಾನಿ ಮೋದಿ ಜನಪ್ರಿಯತೆ ಜೀರ್ಣಿಸಿಕೊಳ್ಳಲಾಗದ ರಾಹುಲ್'ರಿಂದ ಅಸಂಬದ್ಧ ಹೇಳಿಕೆ: ಬಿಜೆಪಿ

Jayalalithaa

ಜಯಲಲಿತಾ ಸಾವು ನ್ಯಾಯಾಂಗ ತನಿಖೆಗೆ; ಪೋಯಸ್ ಗಾರ್ಡನ್ ನಿವಾಸ ಸ್ಮಾರಕ: ತಮಿಳುನಾಡು ಸಿಎಂ

Chief minister Siddaramaiah

ಸಂಪುಟ ವಿಸ್ತರಣೆಗೆ ಸಜ್ಜಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ

Haratalu Halappa

ಅತ್ಯಾಚಾರ ಪ್ರಕರಣದಿಂದ ಮಾಜಿ ಸಚಿವ ಹರತಾಳು ಹಾಲಪ್ಪ ಖುಲಾಸೆ

Rahul Gandhi

ಪ್ರಧಾನಿಗೆ ಸ್ವಚ್ಛ ಭಾರತ ಬೇಕು, ಆದರೆ ನಮಗೆ "ಸಚ್" ಭಾರತ ಬೇಕಾಗಿದೆ: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಮುಖಪುಟ >> ಆರೋಗ್ಯ

ಸಣ್ಣ ಜ್ವರ ಬಂದರೂ ನಿರ್ಲಕ್ಷ್ಯ ಬೇಡ, ಎಚ್‌1ಎನ್‌1 ಆಗಿರುವ ಸಾಧ್ಯತೆ!

ಮಳೆಗಾಲ ಸೊಳ್ಳೆ ಉತ್ಪತ್ತಿಗೆ ಪೂರಕ ವಾತಾವರಣ, ಸತತ ಜ್ವರ, ಭೇದಿ ಇದ್ದರೆ ಕೂಡಲೇ ವೈದ್ಯರ ಸಂಪರ್ಕ ಮಾಡಿ
Beware, mild fever may also be H1N1 symptom

ಸಂಗ್ರಹ ಚಿತ್ರ

ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಸಾಂಕ್ರಾಮಿತ ರೋಗಗಳ ದಾಳಿ ಹೆಚ್ಚಾಗಿದ್ದು, ಮಹಾಮಾರಿ ಎಚ್ 1 ಎನ್ 1, ಚಿಕುನ್ ಗುನ್ಯಾ ಹಾಗೂ  ಡೆಂಘೀ ಜ್ವರಗಳ ಹಾವಳಿ ರಾಜ್ಯದಲ್ಲಿ ಹೆಚ್ಚಾಗಿದೆ.

ಮಳೆಗಾಲದ ವಾತಾವರಣ ಸೊಳ್ಳೆ ಉತ್ಪತ್ತಿಗೆ ಪೂರಕವಾಗಿದ್ದು, ತೀವ್ರ ಚಳಿ ಹಾಗೂ ಕಡಿಮೆ ಬಿಸಿಲು ಸೋಂಕು ವೃದ್ಧಿಗೆ ಕಾರಣವಾಗುತ್ತದೆ. ಮಳೆಗಾಲದಲ್ಲಿ ಸೊಳ್ಳೆಗಳ ಲಾರ್ವಾ ಹೆಚ್ಚಾಗಿ ಉತ್ಪತ್ತಿ ಆಗುವುದರಿಂದ ಡೆಂಘೀ, ಚಿಕೂನ್‌ಗುನ್ಯಾ, ಮಲೇರಿಯಾ ರೋಗಗಳು ಹೆಚ್ಚಾಗಿವೆ. ಮನೆ ಸುತ್ತಮುತ್ತ, ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ ಸ್ವಚ್ಛತೆ ಕಾಪಾಡುವಲ್ಲಿ ಪ್ರಯತ್ನ ಪಟ್ಟರೂ ಸೊಳ್ಳೆ ಕಡಿಮೆಯಾಗುತ್ತಿಲ್ಲ. ಅವು ಶುದ್ಧ ನೀರಿನಲ್ಲಿ ಹರಡುವುದರಿಂದ ಉತ್ಪತ್ತಿ ಆಗದಂತೆ ನಿರ್ಮೂಲನೆ ಕುರಿತಂತೆ ಜನರು ಜಾಗೃತರಾಗಬೇಕು ಎಂದು ಆರೋಗ್ಯಾಧಿಕಾರಿಗಳು ಹೇಳುತ್ತಿದ್ದಾರೆ.

ಡೆಂಘೀ ಹಾಗೂ ಚಿಕೂನ್‌ ಗುನ್ಯಾ ಕಾಯಿಲೆ ಈಡಿಸ್‌ ಸೊಳ್ಳೆ ಕಡಿತದಿಂದ ಬರುವುದರಿಂದ ಡೆಂಘೀ ಜತೆಗೆ ಚಿಕೂನ್‌ ಗುನ್ಯಾ ರೋಗವೂ ನಿಧಾನವಾಗಿ ಹರಡುತ್ತಿದೆ. ಬೀದಿ ಬದಿ ವ್ಯಾಪಾರಿಗಳು, ಮಾರುಕಟ್ಟೆ, ಹೋಟೆಲ್‌-ಕ್ಯಾಂಟೀನ್‌ ಗಳಲ್ಲಿ ಹೊರಗೆ ಎಸೆಯುತ್ತಿರುವ ತ್ಯಾಜ್ಯ, ಜತೆಗೆ ನಗರದಲ್ಲಿ ಸರಿಯಾಗಿ ಆಗದ ಕಸ ವಿಲೇವಾರಿ, ಅಲ್ಲಲ್ಲಿ ಗುಂಡಿಮಯವಾದ ರಸ್ತೆಗಳಲ್ಲಿ ನಿಂತ ನೀರು, ಖಾಲಿ ನಿವೇಶನಗಳಲ್ಲಿ ಕಂಡುಬರುತ್ತಿರುವ ಕಸದ ರಾಶಿಗಳ ವಸ್ತುಗಳಲ್ಲಿ ನೀರು ನಿಂತು ಡೆಂಘೀ ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿ ಪರಿವರ್ತನೆಗೊಂಡಿವೆ.

ಹೀಗಾಗಿ ಜನರು ಹೆಚ್ಚು ಜಾಗೃತರಾಗಿರಬೇಕಾಗಿದ್ದು, ಸಣ್ಣ ಜ್ವರ ಕೂಡ ಎಚ್ 1ಎನ್ 1 ಆಗಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ಆಗ್ಗಿಂದಾಗಲೇ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆಯುವುದು ಉತ್ತಮ. ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ರಾಜೀವ್ ಗಾಂಧಿ ಎದೆರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಶಶಿಧರ್ ಬುಗ್ಗಿ ಅವರು, ಈ ಹಿಂದೆ ಆಸ್ಪತ್ರೆಗೆ ಸಣ್ಣ ಮಗುವೊಂದು ದಾಖಲಾಗಿತ್ತು. ಸಣ್ಣ ಪ್ರಮಾಣದ ಜ್ವರದಿಂದ ಮಗುವನ್ನು ಆಸ್ಪತ್ರೆಗೆ ದಾಖಲಾಗಿತ್ತು. ಮಗು ಸತತ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿತ್ತು. ಸತತ ಮೂರು ದಿನಗಳ ಚಿಕಿತ್ಸೆ ಬಳಿಕವೂ ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ. ಹೀಗಾಗಿ ಮಗುವನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಮಗು ಎಚ್ 1 ಎನ್ 1 ವೈರಾಣು ಸೋಂಕಿನಿಂದ ಬಳಲುತ್ತಿದ್ದ ವಿಚಾರ ಬೆಳಕಿಗೆ ಬಂತು ಎಂದು ಹೇಳಿದ್ದಾರೆ.

ಇನ್ನು ಕೆಲವು ಪ್ರಕರಣಗಳಲ್ಲಿ ಡಯೇರಿಯಾ (ಅತಿಸಾರ-ಬೇದಿ)ದಂತಹ ಸಮಸ್ಯೆಗಳು ಕಂಡುಬಂದಿದೆ. ಎಚ್ 1ಎನ್ 1 ಮೇಲ್ನೋಟಕ್ಕೆ ಕಾಣಿಸುವ ಕಾಯಿಲೆಯಲ್ಲ.  ಈ ವೈರಾಣುಗಳನ್ನು ಪರೀಕ್ಷೆಗಳಿಂದ ಮಾತ್ರ ಪತ್ತೆ ಹಚ್ಚಬಹುದು ಎಂದು ಬುಗ್ಗಿ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸುದರ್ಶನ್ ಬಳ್ಳಾಲ ಅವರು, ಎಚ್ 1ಎನ್ 1 ನಂತಹ ಮಾರಣಾಂತಿಕ ಕಾಯಿಲೆಗಳನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆಯುವುದು ಉತ್ತಮ. ಜ್ವರ ಸಣ್ಣ ಪ್ರಮಾಣದಲ್ಲಿರುವಾಗಲೇ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಪರೀಕ್ಷೆಗಳನ್ನು ಮತ್ತು ಚಿಕಿತ್ಸೆ ಪಡೆದರು ಅವುಗಳನ್ನು ತಡೆಯಬಹುದು ಎಂದು ಹೇಳಿದ್ದಾರೆ.

Posted by: SVN | Source: TNIE

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Bengaluru, Health, Rain, Fever, Karnataka, ಬೆಂಗಳೂರು, ಆರೋಗ್ಯ, ಮಳೆ, ಜ್ವರ, ಕರ್ನಾಟಕ
English summary
With H1N1 now being noticed with atypical symptoms across the country, doctors in Bengaluru give a word of caution to get tested for the flu if fever lasts long. Even if it is mild fever. Cases are now being reported where patients have mild fever and diarrhoea, which were not seen as symptoms in the past. Though this might not be a cause for concern, doctors say having a differential diagnosis is important.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement