Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
India announce squad for T20I series against New Zealand, first two Tests against Sri Lanka

ಶ್ರೀಲಂಕಾ ಟೆಸ್ಟ್, ಕಿವೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ!

wedding

ನೋಟು ನಿಷೇಧ, ಜಿಎಸ್ ಟಿಯಿಂದ ಮದುವೆ ಸೀಸನ್ ವ್ಯಾಪಾರದ ಮೇಲೆ ಶೇ.10-15 ರಷ್ಟು ಪರಿಣಾಮ!

I Was offered Rs 1 crore to join BJP: Patel leader

ಬಿಜೆಪಿ ಸೇರಲು 1 ಕೋಟಿ ರು. ಆಮಿಷ ಒಡ್ಡಲಾಗಿತ್ತು: ಪಟೇಲ್ ಸಮುದಾಯದ ಮುಖಂಡನ ಆರೋಪ

ಸಂಗ್ರಹ ಚಿತ್ರ

ಅಪಘಾತದಲ್ಲಿ ಪೋಷಕರ ಸಾವು: 7 ವರ್ಷಗಳ ಬಳಿಕ ನಿರುದ್ಯೋಗಿ ಮಗನಿಗೆ 1.2 ಕೋಟಿ ರುಪಾಯಿ ಪರಿಹಾರ

Two girls drown to death in a lake while fetching water at Devanahalli

ದೇವನಹಳ್ಳಿ: ಕೆರೆಯಲ್ಲಿ ನೀರು ತರಲು ಹೋಗಿದ್ದ ಇಬ್ಬರು ಬಾಲಕಿಯರು ಸಾವು

BJP

ಒಂದು ಪಕ್ಷದ ಬಳಿ ಅನಿಯಮಿತ ಹಣ ಇದೆ: ಬಿಜೆಪಿ ವಿರುದ್ಧ ಶಿವಸೇನೆ ಆರೋಪ

Congress vice president Rahul Gandhi

ಗುಜರಾತ್ ಅತ್ಯಂತ ಅಮೂಲ್ಯ, ಎಂದಿಗೂ ಅದರ ಖರೀದಿ ಅಸಾಧ್ಯ: ಬಿಜೆಪಿ ವಿರುದ್ಧ ರಾಹುಲ್ ವಾಗ್ದಾಳಿ

Sherin Mathews, and her father Wesley Mathews

ಅಮೆರಿಕ: ಕಣ್ಮರೆಯಾಗಿದ್ದ ಭಾರತೀಯ ಮೂಲದ ಬಾಲಕಿ ಶವ ಪತ್ತೆ?

Indian Army

ಬದಲಾವಣೆಗಳೊಂದಿಗೆ 'ಅರ್ಜುನ್ ಮಾರ್ಕ್ 2' ಟ್ಯಾಂಕರ್ ಸಮರಕ್ಕೆ ಸಿದ್ಧ: ಡಿಆರ್ ಡಿಒ

Akhilesh Yadav

ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸಮಾಜವಾದಿ ಪಕ್ಷ ಬೆಂಬಲ: ಅಖಿಲೇಶ್ ಯಾದವ್

Bilkis Bano

ಬಿಲ್ಕಿಸ್ ಬಾನೊ ಕೇಸ್: ದೋಷಿಗಳ ವಿರುದ್ಧ ಕೈಗೊಂಡ ಕ್ರಮದ ವಿವರ ತಿಳಿಸಿ- ಗುಜರಾತ್ ಗೆ ಸುಪ್ರೀಂ

BBMP smells conspiracy in Indira Canteen video, FIR lodged

ಇಂದಿರಾ ಕ್ಯಾಂಟೀನ್‌ ತಿಂಡಿಯಲ್ಲಿ ಜಿರಳೆ; ಷಡ್ಯಂತ್ರ ಎಂದ ಬಿಬಿಎಂಪಿ, ನಾಲ್ವರ ವಿರುದ್ಧ ಎಫ್‌ಐಆರ್

Prabhas

ಪ್ರಬಾಸ್ ಹುಟ್ಟುಹಬ್ಬದ ದಿನವೇ ಸಾಹೋ ಮೊದಲ ಪೋಸ್ಟರ್ ಬಿಡುಗಡೆ

ಮುಖಪುಟ >> ಆರೋಗ್ಯ

ಅಸಮರ್ಪಕ ಸ್ತನ್ಯಪಾನದಿಂದ ಅತಿ ಹೆಚ್ಚು ಶಿಶುಗಳು ಮರಣ ಹೊಂದುವ ರಾಷ್ಟ್ರಗಳಲ್ಲಿ ಭಾರತವೂ ಒಂದು!

Representational image

ಸಾಂದರ್ಭಿಕ ಚಿತ್ರ

ನವದೆಹಲಿ: ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಎದೆಹಾಲು ಅತ್ಯಂತ ಅವಶ್ಯಕ. ಹುಟ್ಟಿದ ಮೊದಲ ಆರು ತಿಂಗಳು ತಾಯಿಯ ಹಾಲು ಕಾಲಕಾಲಕ್ಕೆ ಕಡ್ಡಾಯವಾಗಿ ಶಿಶುಗಳಿಗೆ ಸಿಗಬೇಕಾಗುತ್ತದೆ.

ಪೋಷಕಾಂಶಗಳು ಮತ್ತು ಪ್ರತಿಕಾಯಗಳಿಂದ ತುಂಬಿರುವ ತಾಯಿಯ ಎದೆಹಾಲು ನೀಡಿದರೆ ಕೇವಲ ಮಗುವಿಗೆ ಮಾತ್ರವಲ್ಲದೆ ತಾಯಿಯ ಆರೋಗ್ಯ ದೃಷ್ಟಿಯಿಂದಲೂ ಉತ್ತಮ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಹೇಳುತ್ತದೆ.

ಆದರೆ ವಿಶ್ವಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ಹೊಸ ವರದಿಯಲ್ಲಿ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಚೀನಾ, ಭಾರತ, ನೈಜೀರಿಯಾ, ಮೆಕ್ಸಿಕೊ ಮತ್ತು ಇಂಡೊನೇಷಿಯಾಗಳಲ್ಲಿ ಪ್ರತಿವರ್ಷ ತಾಯಿಯ ಎದೆಹಾಲು ಸರಿಯಾಗಿ ಸಿಗದೆ 2,36,000ಕ್ಕೂ ಅಧಿಕ ಶಿಶುಗಳು ಸಾಯುತ್ತಿದ್ದಾರಂತೆ. 

ಭಾರತದಲ್ಲಿ ಪ್ರತಿವರ್ಷ ಸುಮಾರು 1 ಲಕ್ಷ ಶಿಶುಗಳು ಸಾಯುತ್ತಿದ್ದಾರೆ. ತಾಯಿಯ ಎದೆಹಾಲು ಸರಿಯಾದ ಪ್ರಮಾಣದಲ್ಲಿ ಸಿಕ್ಕಿದರೆ ಶಿಶಿಗಳು ಸಾಯುವುದನ್ನು ತಡೆಗಟ್ಟಬಹುದು ಎನ್ನುತ್ತದೆ ವಿಶ್ವಸಂಸ್ಥೆ ವರದಿ. ಮರಣ ಮತ್ತು ಇತರ ನಷ್ಟಗಳಿಂದ ಅಸಮರ್ಪಕ ಹಾಲುಣಿಸುವಿಕೆಯ ಕಾರಣದಿಂದಾಗಿ ದೇಶದ ಆರ್ಥಿಕತೆ 14 ಬಿಲಿಯನ್ ಡಾಲರ್ ಗಳಷ್ಟು ವೆಚ್ಚವಾಗಬಹುದು ಎನ್ನುತ್ತದೆ ವರದಿ.

ವಿಶ್ವಸಂಸ್ಥೆ ಮಕ್ಕಳ ನಿಧಿ, ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ತಯಾರಿಸಿದ ಹೊಸ ವರದಿ ಗ್ಲೋಬಲ್ ಬ್ರೆಸ್ಟ್ ಫೀಡಿಂಗ್ ಸ್ಕೋರ್ ಕಾರ್ಡ್ ಪ್ರಕಾರ, ತಾಯಿಯ ಎದೆಹಾಲು ಶಿಶುಗಳನ್ನು ಅತಿಸಾರ ಮತ್ತು ನ್ಯುಮೋನಿಯಾದಂತಹ ಖಾಯಿಲೆಗಳಿಂದ ಸಹ ತಡೆಯುತ್ತದೆ. ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗಿ ಕಾಣುವ ಅಂಡಾಶಯ ಮತ್ತು ಸ್ತನ ಕ್ಯಾನ್ಸರ್ ನಂತಹ ರೋಗಗಳನ್ನು ಕೂಡ ಎದೆಹಾಲು ಉಣಿಸುವುದರಿಂದ ತಡೆಗಟ್ಟಬಹುದು.

ತಾಯಿಯ ಎದೆಹಾಲು ಶಿಶುಗಳಿಗೆ ಸರಿಯಾಗಿ ದೊರಕದೆ ಮುಂದಿನ ವರ್ಷಗಳಲ್ಲಿ ಈ ನಾಲ್ಕು  ದೇಶಗಳಲ್ಲಿ ಶಿಶುಗಳ ಮರಣ ಪ್ರಮಾಣ  ಹೆಚ್ಚಾಗಬಹುದು. ಅಲ್ಲದೆ ಮಕ್ಕಳ ಆರೋಗ್ಯ ವೆಚ್ಚಕ್ಕೆ ಪ್ರತಿವರ್ಷ 119 ಶತಕೋಟಿ ಡಾಲರ್ ಬೇಕಾಗಬಹುದು ಎಂದು ವರದಿ ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ.
Posted by: SUD | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ಉಚಿತ ನೋಂದಣಿ !

Topics : United nations, Breastfeed, India, Babies, Mortality, ವಿಶ್ವಸಂಸ್ಥೆ, ವರದಿ, ಸ್ತನ್ಯಪಾನ, ಭಾರತ, ಶಿಶುಗಳು, ಮರಣ
English summary
Mother breastfeeding is essential for baby development. The mother's milk should be mandatory for infants for the first six months of birth.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement