Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Uttar Pradesh chief minister Yogi Adityanath

ರಸ್ತೆಗಳಲ್ಲಿನ ನಮಾಜ್ ತಡೆಯಲಾಗದ ನನಗೆ ಠಾಣೆಗಳಲ್ಲಿ ಜನ್ಮಾಷ್ಟಮಿ ಆಚರಣೆ ತಡೆಯುವ ಹಕ್ಕಿಲ್ಲ: ಸಿಎಂ ಯೋಗಿ

Enagi Balappa

ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ ಇನ್ನಿಲ್ಲ

Rakshit Shetty

'ಥಗ್ಸ್ ಆಫ್ ಮಾಲ್ಗುಡಿ' ಸುದೀಪ್ ಗಾಗಿ ಮಾತ್ರ: ರಕ್ಷಿತ್ ಶೆಟ್ಟಿ

Representational image

2019ರೊಳಗೆ ಡಿ.ಎಡ್ ಕೋರ್ಸ್ ಮಾಡದಿದ್ದರೆ, 9 ಸಾವಿರ ಶಿಕ್ಷಕರ ಕೆಲಸಕ್ಕೆ ಕುತ್ತು!

Ishrat Jahan(File photo)

ಇಶ್ರತ್ ಜಹಾನ್ ಕೇಸ್: ಇಬ್ಬರು ಗುಜರಾತ್ ಪೊಲೀಸ್ ಅಧಿಕಾರಿಗಳಿಗೆ ರಾಜಿನಾಮೆ ನೀಡುವಂತೆ ಸುಪ್ರೀಂ ಆದೇಶ

TMC chief Mamata Banerjee

ಪಶ್ಚಿಮ ಬಂಗಾಳ ಪುರಸಭಾ ಚುನಾವಣೆ: ಎಲ್ಲಾ 7 ಸ್ಥಾನ ಗೆದ್ದ ಟಿಎಂಸಿ, ಬಿಜೆಪಿಗೆ 2 ನೇ ಸ್ಥಾನ

ಭೂಮಿಯ ಮೇಲೆ ಪ್ರಾಣಿಗಳು ಬಂದಿದ್ದು ಹೇಗೆ? ರಹಸ್ಯ ಬಯಲು!

ಭೂಮಿಯ ಮೇಲೆ ಪ್ರಾಣಿಗಳು ಬಂದಿದ್ದು ಹೇಗೆ? ರಹಸ್ಯ ಬಯಲು!

kicha sudeep takes initiality to gives assistance to Popular Kannada actor Sadashiva Brahmavar: Report

ಬೀದಿಗೆ ಬಂದ ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರಗೆ ಕಿಚ್ಚಾ ಸುದೀಪ್ ನೆರವು!

File photo

ಡೋಕ್ಲಾಮ್ ವಿವಾದ: ಟಿಬೆಟ್ ನಲ್ಲಿ ಚೀನಾ ಭಾರೀ ಸಮರಾಭ್ಯಾಸ

Vishal Sikka

ಇನ್ಫೋಸಿಸ್ ಸಿಇಒ, ಎಂಡಿ ವಿಶಾಲ್ ಸಿಕ್ಕಾ ರಾಜೀನಾಮೆ

Barcelona terror attack: 13 killed in Spain

ಸ್ಪೇನ್ ಉಗ್ರ ದಾಳಿ: ವಾಹನ ನುಗ್ಗಿಸಿ 13 ಮಂದಿಯ ಹತ್ಯೆ, 100 ಮಂದಿಗೆ ಗಾಯ

Barcelona Terror attack: Spain Police announced the arrest of two suspects

ಬಾರ್ಸಿಲೋನಾ ಉಗ್ರ ದಾಳಿ: ಸ್ಪೇನ್ ಪೊಲೀಸರಿಂದ ಇಬ್ಬರು ಶಂಕಿತ ಉಗ್ರರ ಬಂಧನ

Prime minister Narendra Modi

ಮೋದಿ ಸಂಪುಟ ವಿಸ್ತರಣೆ: ಕರ್ನಾಟಕದ ಬಿಜೆಪಿ ಸಂಸದರಿಗೆ ಹೆಚ್ಚಿನ ಸ್ಥಾನ?

ಮುಖಪುಟ >> ಆರೋಗ್ಯ

ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ಆಗುವ ಆರೋಗ್ಯಕರ ಲಾಭಗಳು ನಿಮಗೆ ಗೊತ್ತೆ!

ಕ್ಯಾನ್ಸರ್ ನಿಂದ ಮುಕ್ತ, ತೂಕ ಇಳಿಕೆ, ರೋಗ ನಿರೋಧಕ ಶಕ್ತಿ, ಥೈರಾಯ್ಡ್ ಉಪಶಮನದಲ್ಲಿ ಪರಿಣಾಮಕಾರಿ
You Will Always Drink Water In Copper Vessels; After Read This Story!

ಸಂಗ್ರಹ ಚಿತ್ರ

ಬೆಂಗಳೂರು: ಬದಲಾದ ಕಾಲ ಹಾಗೂ ಜೀವನ ಶೈಲಿಯಿಂದಾಗಿ ನಿತ್ಯ ನಾವು ಸ್ಟೀಲ್ ಮತ್ತು ಪ್ಲಾಸ್ಟಿಕ್ ತಟ್ಟೆ, ಲೋಟಗಳ ಮೊರೆ ಹೋಗಿದ್ದೇವೆ. ಆದರೆ ತಾಮ್ರದ ಲೋಟದಲ್ಲಿ ನಿತ್ಯ ನೀರು ಕುಡಿಯುವುದರಿಂದ ಆಗುವ  ಪ್ರಯೋಜನಗಳನ್ನು ತಿಳಿದರೆ ಇನ್ನೆಂದೂ ನೀವು ಸ್ಟೀಲ್ ಲೋಟಗಳ ಕಡೆ ತಿರುಗಿಯೂ ನೋಡುವುದಿಲ್ಲ..

ಹೌದು ನಿತ್ಯ ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ಮಾರಕ ಕ್ಯಾನ್ಸರ್ ರೋಗದಿಂದಲೂ ನಾವು ದೂರವಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಕೇವಲ ಇದು ಮಾತ್ರವಲ್ಲದೇ ಅಜೀರ್ಣ, ಬೊಜ್ಜಿನ ಸಮಸ್ಯೆ ಕೂಡ  ಇದರಿಂದ ಬಗೆಹರಿಯುತ್ತದೆ. ತಾಮ್ರದ ಲೋಟದಲ್ಲಿ ನಿತ್ಯ ನೀರು ಕುಡಿಯುವುದರಿಂದ ಆಗುವ ಪ್ರಮುಖ ಪ್ರಯೋಜನಗಳ ಪಟ್ಟಿ ಇಲ್ಲಿದೆ.

1.ದೇಹದ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಊಟದ ಬಳಿಕ ಅಥವಾ ಇತರೆ ಸಂದರ್ಭಗಳಲ್ಲಿ ತಾಮ್ರದ ಚೊಂಬು ಅಥವಾ ತಾಮ್ರದ ಲೋಟಗಳಲ್ಲಿ ನೀರು ಕುಡಿಯುವುದರಿಂದ ಅದರಲ್ಲಿನ ಅಂಶಗಳು ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಅಂತೆಯೇ  ಹೊಟ್ಟೆಯೊಳಗಿನ ಉರಿಯನ್ನು ನಿಯಂತ್ರಿಸುತ್ತದೆ. ಆ ಮೂಲಕ ದೇಹದ ಜೀರ್ಣ ಕ್ರಿಯೆಯನ್ನು ಇದು ಉತ್ತಮಪಡಿಸುತ್ತದೆ.

2.ಬೊಜ್ಜಿನ ಸಮಸ್ಯೆಯಿಂದ ಮುಕ್ತಿ

ಬೊಜ್ಜಿನಿಂದ ಬಳಲುತ್ತಿರುವ ಮಂದಿ ನಿತ್ಯ ಡಯಟ್ ಹಾಗೂ ವ್ಯಾಯಾಮ ಮಾಡಿದರೂ ತೂಕ ಇಳಿಕೆಯಾಗುತ್ತಿಲ್ಲ ಎಂದು ದುಃಖ ಪಡುತ್ತಾರೆ. ಆದರೆ ತಾಮ್ರದ ಲೋಟದಲ್ಲಿ ನಿತ್ಯ ನೀರು ಕುಡಿಯುವುದರಿಂದ ಅಧಿಕ ಬೊಜ್ಜು ಕೂಡ  ನಿಯಂತ್ರಣಕ್ಕೆ ಬರುತ್ತದೆ. ನೀರಿನಲ್ಲಿರುವ ತಾಮ್ರದ ಅಂಶ ದೇಹದ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸಿ ಬೊಜ್ಜು ಶೇಖರಣೆಯಾಗದಂತೆ ತಡೆಯುತ್ತದೆ. ಆ ಮೂಲಕ ಆಧಿಕ ಬೊಜ್ಜು ಕೂಡ ನಿಯಂತ್ರಣಕ್ಕೆ ಬರುತ್ತದೆ.

3.ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ತಾಮ್ರದ ಅಂಶ ಮಾನವನ ದೇಹದಲ್ಲಿ ರೋಗ ನಿರೋಧಕ ಅಂಶವನ್ನು ಹೆಚ್ಚಿಸುತ್ತದೆ. ಆ ಮೂಲಕ ಯಾವುದೇ ರೋಗಗಳು ಸುಲಭವಾಗಿ ದೇಹಕ್ಕೆ ತಾಗದಂತೆ ನೋಡಿಕೊಳ್ಳುತ್ತದೆ. ಹಿಂದಿನ ಕಾಲದಲ್ಲಿ ಈಗಿನ ಸ್ಟೀಲ್ ನಾಣ್ಯಗಳ  ಬದಲಿಗೆ ತಾಮ್ರ ಮತ್ತು ಚಿನ್ನದ ನಾಣ್ಯಗಳು ಚಾಲ್ತಿಯಲ್ಲಿದ್ದವು. ತಾಮ್ರ ಮತ್ತು ಚಿನ್ನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ತಿಳಿದಿದ್ದ ಅಂದಿನ ವೈದ್ಯರು ಮತ್ತು ಧರ್ಮ ಪ್ರಚಾರಕರು ದೇವಾಲಯಗಳ ಕಲ್ಯಾಣಿ ಹಾಗೂ ಪವಿತ್ರ  ನದಿಗಳಲ್ಲಿ ನಾಣ್ಯವನ್ನು ಹಾಕಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಿದ್ದರು. ಆ ಮೂಲಕ ಕಲ್ಯಾಣಿಯ ನೀರು ಮತ್ತು ನದಿಯ ನೀರು ಕುಡಿಯುವ ಮಂದಿ ಯಾವುದೇ ರೋಗಗಳಿಗೆ ತುತ್ತಾಗುವುದಿಲ್ಲ ಎಂಬುದು ಅವರ  ಭಾವನೆಯಾಗಿತ್ತು.

4.ವಯಸ್ಸನ್ನು ಮರೆಮಾಚುತ್ತದೆ

ತಾಮ್ರದಲ್ಲಿ ಆ್ಯಂಟಿ ಆಕ್ಸಿಂಡೆಂಟ್ ಅಂಶ ಯಥೇಚ್ಛವಾಗಿದ್ದು, ಇದು ದೇಹದ ಅನಾವಶ್ಯಕ ಬೊಜ್ಜಿನ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡುತ್ತದೆ. ಅಂತೆಯೇ ದೇಹ ಮತ್ತು ಮುಖದ ಮೇಲಿನ ಸುಕ್ಕುಗಳನ್ನು ತೊಡೆದು ಹಾಕುವ  ಶಕ್ತಿ ತಾಮ್ರಕ್ಕೆ ಇದ್ದು, ನಿರ್ಜೀವ ಜೀವಕೋಶಗಳನ್ನು ತೊಡೆದುಹಾಕಿ ಹೊಸ ಜೀವಕೋಶಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

5.ಹೃದಯದ ಆರೋಗ್ಯ ಮತ್ತು ಅಧಿಕ ರಕ್ತದೊತ್ತಡ ನಿಯಂತ್ರಿಸುತ್ತದೆ

ತಾಮ್ರದ ಅಂಶ ಹೃದಯಸಂಬಂಧಿ ರೋಗಗಳನ್ನು ದೂರವಿಡುತ್ತದೆ. ಅಧಿಕ ಬೊಜ್ಜು ನಿಯಂತ್ರಣದ ಮೂಲಕ ಮತ್ತು ಹೃದಯದ ರಕ್ತನಾಳಗಳ ಶುದ್ದೀಕರಣದ ಮೂಲತ ಹೃದಯ ಆರೋಗ್ಯವಾಗಿರುವಂತೆ ತಾಮ್ರದ ಅಂಶ  ನೋಡಿಕೊಳ್ಳುತ್ತದೆ. ಅಮೆರಿಕನ್ ವೈದ್ಯರು ಹೇಳಿರುವಂತೆ ತಾಮ್ರ ಬಿಪಿಯನ್ನು ಕೂಡ ನಿಯಂತ್ರಣದಲ್ಲಿಡುತ್ತದೆಯಂತೆ.

6.ಮಾರಕ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಇನ್ನು ತಾಮ್ರದಲ್ಲಿನ ಆ್ಯಂಟಿ ಆಕ್ಸಿಡೆಂಟ್ ಅಂಶ ಮಾರಕ ಕ್ಯಾನ್ಸರ್ ರೋಗವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಅಂತೆಯೇ ಭವಿಷ್ಯದಲ್ಲಿ ಕ್ಯಾನ್ಸರ್ ರೋಗ ಬರದಂತೆಯೂ ಇದು ತಡೆಯುತ್ತದೆ.

7. ಥೈರಾಯ್ಡ್ ಉಪಶಮನದಲ್ಲಿ ಪರಿಣಾಮಕಾರಿ

ಪ್ರಸ್ತುತ ಸಮಾಜದಲ್ಲಿ ಸಾಮಾನ್ಯವಾಗಿರುವ ಥೈರಾಯ್ಡ್ ಸಮಸ್ಯೆಗೆ ಪ್ರಮುಖ ಕಾರಣ ತಿನ್ನುವ ಆಹಾರದಲ್ಲಿ ತಾಮ್ರದ ಅಂಶದ ಕೊರತೆ ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ ನಾವು ನಿತ್ಯ ತಾಮ್ರದ ಲೋಟದಲ್ಲಿ ನೀರು  ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ತಾಮ್ರದ ಅಂಶ ಸೇರುತ್ತದೆ. ಇದು ಥೈರಾಯ್ಡ್ ಸಮಸ್ಯೆ ಪರಿಹರಿಸಲು ನೆರವಾಗುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

8.ಚರ್ಮರೋಗ ಸಮಸ್ಯೆಯಲ್ಲೂ ಪರಿಣಾಮಕಾರಿ

ತಾಮ್ರದಲ್ಲಿರುವ ಅಂಶಗಳು ಮಾನವನ ಚರ್ಮಕ್ಕೆ ಯಾವುದೇ ರೀತಿಯ ಸಮಸ್ಯೆ ಕಾಡದಂತೆ ತಡೆಯುತ್ತದೆ. ಅಂತೆಯೇ ಸಂಧಿವಾತ ಮತ್ತು ಸಂಧಿನೋವಿನಲ್ಲೂ ಇದು ಪರಿಣಾಮಕಾರಿಯಾಗಬಲ್ಲದು ಎಂದು ವೈದ್ಯರು ಹೇಳಿದ್ದಾರೆ.

9.ರಕ್ತ ಹೀನತೆ ಸಮಸ್ಯೆ ದೂರ

ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ಅದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶ ದೇಹದ ಬೊಜ್ಜನ್ನು ನಿಯಂತ್ರಿಸುವ ಮೂಲಕ ದೇಹ ಸದಾಕಾಲ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುತ್ತದೆ. ಅಂತೆಯೇ ಹೃದಯ  ಆರೋಗ್ಯದಲ್ಲೂ ತಾಮ್ರ ಪರಿಣಾಮಕಾರಿಯಾಗಿದ್ದು, ಹೃದಯ ನಾಳಗಳು ಸದಾಕಾಲ ಚಟುವಟಿಕೆಯಿಂದ ನೋಡಿಕೊಳ್ಳುತ್ತದೆ. ಆ ಮೂಲಕ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಪರಿಚಲನೆಯಾಗುವಂತೆ ನೋಡಿಕೊಳ್ಳುತ್ತದೆ.  ಇದರಿಂದ ರಕ್ತ ಹೀನತೆ ಸಮಸ್ಯೆ ಕೂಡ ದೂರಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Bengaluru, Health Tips, Copper Vessels, ಬೆಂಗಳೂರು, ಆರೋಗ್ಯ ಸಲಹೆ, ತಾಮ್ರದ ಲೋಟ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement