Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Karnataka: HD. Kumaraswamy to be inducted as CM today

ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ ಆರಂಭ; ವಿಧಾನಸೌಧ ಸಂಪೂರ್ಣ ಸಜ್ಜು

File photo

ಹೆಚ್'ಡಿ. ಕುಮಾರಸ್ವಾಮಿ ಶಪಥ ಹಿನ್ನಲೆಯಲ್ಲಿ, ಸಂಚಾರದಲ್ಲಿ ಭಾರೀ ಬದಲಾವಣೆ

BSY, Sriramulu

ಲೋಕಸಭಾ ಸಂಸದ ಸ್ಥಾನಕ್ಕೆ ಬಿಎಸ್'ವೈ, ಶ್ರೀರಾಮುಲು ಸಲ್ಲಿಸಿದ್ದ ರಾಜಿನಾಮೆ ಅಂಗೀಕಾರ

Sterlite Protest

ಕನಿಷ್ಟ ಒಬ್ಬರಾದರೂ ಸಾಯಬೇಕು: ಸ್ಟರ್ಲೈಟ್ ಪ್ರತಿಭಟನೆ ವೇಳೆ ಪೊಲೀಸ್ ಅಧಿಕಾರಿ

K.S.Eshwarappa(File photo)

ಕುಮಾರಸ್ವಾಮಿಯಿಂದ ರೈತ ಸಮುದಾಯಕ್ಕೆ ದ್ರೋಹ: ಕೆ.ಎಸ್.ಈಶ್ವರಪ್ಪ

Chennai Super Kings

ಐಪಿಎಲ್ 2018: ಹೈದರಾಬಾದ್ ವಿರುದ್ಧ ಗೆದ್ದ ಚೆನ್ನೈ ಫೈನಲ್‌ಗೆ ಲಗ್ಗೆ

Samajwadi Party

ಭಾರತದ ಅತೀ ಶ್ರೀಮಂತ ಪ್ರಾದೇಶಕ ಪಕ್ಷ ಸಮಾಜವಾದಿ ಪಕ್ಷ!

LeT has developed an untraceable mobile, trains terrorists in underground facility, claims captured militant

ಲಷ್ಕರ್ ಉಗ್ರ ಸಂಘಟನೆಯಿಂದ ಗುಪ್ತಚರ ಇಲಾಖೆಯೂ ಬೇಧಿಸಲಾಗದ ಮೊಬೈಲ್ ಅಭಿವೃದ್ಧಿ!

ಸಂಗ್ರಹ ಚಿತ್ರ

ವಾರಣಾಸಿ: ಅತ್ಯಾಚಾರ ಆರೋಪ, ಬಿಜೆಪಿ ಮುಖಂಡನ ಬಂಧನ

Two suspected NIPAH virus cases reported in Mangaluru city

ಮಂಗಳೂರಿನಲ್ಲಿ ಎರಡು ಶಂಕಿತ ನಿಫಾ ಪ್ರಕರಣ ಪತ್ತೆ

Flight

ಪ್ರಯಾಣಿಕರಿಗೆ ಸಿಹಿ ಸುದ್ದಿ; ರದ್ದತಿ ಶುಲ್ಕವಿಲ್ಲ, ವಿಮಾನ ವಿಳಂಬವಾದರೆ ಪರಿಹಾರ!

Kerala Nurse Died After Treating Nipah Virus Patient, Left Heartbreaking Note

'ನಿಪಾಹ್' ಮಾರಿಗೆ ನರ್ಸ್ ಬಲಿ, ಕುಟುಂಬಸ್ಥರ ಆಗಮನಕ್ಕೂ ಕಾಯದೇ ವೈದ್ಯರೇ ಅಂತ್ಯಕ್ರಿಯೆ ಮಾಡಿದ್ದೇಕೆ?

ಸಂಗ್ರಹ ಚಿತ್ರ

ಆಫ್ಘಾನಿಸ್ತಾನ: ಬಾಂಬ್ ನಿಷ್ಕ್ರಿಯ ವೇಳೆ ಸ್ಫೋಟ; 16 ಸಾವು

ಮುಖಪುಟ >> ರಾಜ್ಯ

ಬೆಂಗಳೂರು ಬಿಟಿಎಂ ಲೇಔಟ್: ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ; ನಾಲ್ವರ ಬಂಧನ

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳು

ಬೆಂಗಳೂರು: ನಗರದ ಬಿಟಿಎಂ ಲೇಔಟ್'ನ ಬಂಗಲೆಯೊಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನಾಲ್ವರು ಮಧ್ಯವರ್ತಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. 

ಬಂಧಿತರನ್ನು ಉಸ್ಮಾನ್, ನರೇಶ್ ಸಿಂಗ್, ಪರ್ವೇಜ್ ಖಾನ್ ಮತ್ತು ಶರವಣ ಎಂದು ಗುರ್ತಿಸಲಾಗಿದೆ. ತಮ್ಮ ದಂಧೆಗೆ  ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಮುಖ್ಯ ಪೇದೆಯೊಬ್ಬರು ಸಹಾಯ ಮಾಡುತ್ತಿದ್ದರು ಎಂದು ವಿಚಾರಣೆ ಆರೋಪಿಗಳು ಹೇಳಿದ್ದಾರೆ. 

ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಆರೋಪಿಗಳು ಗ್ರಾಹಕರಿಂದ ರೂ.25,000 ರಿಂದ 30,000 ಹಣವನ್ನು ಪಡೆಯುತ್ತಿದ್ದರು. ಆನ್ ಲೈನ್ ಮುಖಾಂತರ ಗ್ರಾಹಕರಿಂದ ರೂ.67,000 ಹಣವನ್ನು ಸಂಗ್ರಹಿಸಿದ್ದಾರೆ. ಇದಲ್ಲದೆ, ಸ್ವೈಪಿಂಗ್ ಯಂತ್ರಗಳನ್ನು ಹೊಂದಿದ್ದ ಆರೋಪಿಗಳು ಗ್ರಾಹಕರಿಂದ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳ ಮೂಲಕವೂ ಹಣವನ್ನು ಪಡೆಯುತ್ತಿದ್ದರು. ದಾಳಿ ವೇಳೆ ನಾಲ್ಕು ಸ್ವೈಪಿಂಗ್ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ. 

ಉಸ್ಮಾನ್ ಪ್ರಮುಖ ಆರೋಪಿಯಾಗಿದ್ದು, ಈತನೇ ವೆಬ್ ಸೈಟ್ ವೊಂದನ್ನು ತೆರೆದು, ಈ ಮೂಲಕ ಶ್ರೀಮತರು, ದೊಡ್ಡ ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ಟೆಕ್ಕಿಗಳನ್ನು ಸಂಪರ್ಕಿಸುತ್ತಿದ್ದ. ಸಿಇಒಗಳು, ಕಂಪನಿಯ ಅತಿಥಿಗಳು ಮಾತ್ರ ಮನೆಗೆ ಬರುತ್ತಾರೆಂದು ಹೇಳಿದ್ದ ಆರೋಪಿ ಉದ್ಯಮಿಯೊಬ್ಬರಿಂದ ಬಂಗಲೆಯನ್ನು ಬೋಗ್ಯಕ್ಕೆ ಪಡೆದುಕೊಂಡಿದ್ದ. ಬಂಗಲೆಯನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ವಿಚಾರ ಮನೆಯ ಮಾಲೀಕನಿಗೆ ತಿಳಿದಿಲ್ಲ. 

ವಾರಾಂತ್ಯಗಳಲ್ಲಿ ಉಸ್ಮಾನ್ ಮುಂಬೈನಿಂದ ಮಹಿಳೆಯರನ್ನು ಕರೆತರುತ್ತಿದ್ದ. ವಿಮಾನದ ಟಿಕೆಟ್ ಗಳನ್ನು ಈತನೇ ಖರೀದಿಸುತ್ತಿದ್ದ. ಯುವತಿಯರ ಫೋಟೋ ಹಾಗೂ ಫೋನ್ ನಂಬರ್ ನ್ನು ವೆಬ್ ಸೈಟ್ ಗಳಲ್ಲಿ ಹಾಕುತ್ತಿದ್ದ ಆರೋಪಿ ಆನ್ ಲೈನ್ ಮೂಲಕವೇ ಹಣವನ್ನು ಕಟ್ಟುವಂತೆ ಗ್ರಾಹಕರಿಗೆ ತಿಳಿಸುತ್ತಿದ್ದ. ಇದಲ್ಲದೆ, ಸಾಮಾನ್ಯವಾಗಿ ಪ್ರತೀನಿತ್ಯ ಬರುವ ಗ್ರಾಹಕರಿಗೆ ವಾಟ್ಸ್ ಅಪ್ ನಲ್ಲೂ ಯುವತಿಯರ ಫೋಟೋಗಳನ್ನು ಕಳುಹಿಸುತ್ತಿದ್ದ. 

ಮಹಿಳೆಯೊಬ್ಬರನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ಬರುವ ಕುರಿತಂತೆ ಖಚಿತ ಮಾಹಿತಿ ತಿಳಿದುಬಂದಿತ್ತು. ಈ ವೇಳೆ ಮನೆಯ ಮೇಲೆ ದಾಳಿ ಮಾಡಲಾಗಿತ್ತು. ವಿಚಾರಣೆ ವೇಳೆ ದಂಧೆಗೆ 3 ವರ್ಷಗಳಿಂದಲೂ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಮುಖ್ಯ ಪೇದೆ ಕರಿಬಸಪ್ಪ ಸಹಾಯ ಮಾಡುತ್ತಿದ್ದರು ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ. 

ಆರೋಪಿಗಳ ಹೇಳಿಕೆಯ ಆಧಾರದ ಮೇರೆಗೆ ಆಂತರಿಕ ತನಿಖೆಗೆ ಆದೇಶಿಸಲಾಗಿದೆ. ಆರೋಪಿಗಳ ಬಳಿಯಿದ್ದ ಕಾಲ್ ರೆಕಾರ್ಡ್ ಗಳನ್ನು ಪರಿಶೀಲಿಸಲಾಗುತ್ತಿದೆ. ಕರಿಬಸಪ್ಪ ಅವರು ಪ್ರಕರಣದಲ್ಲಿ ಭಾಗಿಯಾಗಿರುವುದು ನಿಜವೇ ಆಗಿದ್ದರೆ, ಕ್ರಮಕೈಗೊಳ್ಳಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 
Posted by: MVN | Source: TNIE

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : Crime, BTM Layout, Prostitution racket, Arrest, ಅಪರಾಧ, ಬಿಟಿಎಂ ಲೇಔಟ್, ವೇಶ್ಯಾವಾಟಿಕೆ ಅಡ್ಡೆ, ಬಂಧನ
English summary
Mico Layout police on Monday raided a luxury villa in BTM Layout and busted a hi-tech prostitution racket with the arrest of a gang of 4 men.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ವಿಧಾನಸಭೆ ಚುನಾವಣೆ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement