Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
CM Pinarayi Vijayan requests Tamil Nadu to reduce Mullaperiyar Dam

ಕೇರಳ ಪ್ರವಾಹ: ಸಾವಿನ ಸಂಖ್ಯೆ 67ಕ್ಕೆ ಏರಿಕೆ, ಮುಲ್ಲಾಪೆರಿಯಾರ್ ಡ್ಯಾಂ ನೀರಿನ ಪ್ರಮಾಣ ತಗ್ಗಿಸಿ; ತಮಿಳುನಾಡಿಗೆ ವಿಜಯನ್ ಮನವಿ

Times Now Opinion Poll: BJP projected to win 227 seats in Lok Sabha 2019 polls

2019ರ ಲೋಕಸಭೆ ಚುನಾವಣೆ; ಬಿಜೆಪಿಗೆ 227, ಕಾಂಗ್ರೆಸ್ ಗೆ 78 ಸ್ಥಾನ: ಟೈಮ್ಸ್‌ ನೌ ಸಮೀಕ್ಷೆ

WATCH Visuals of Jog falls in Karnataka

ವಿಡಿಯೋ: ಭೋರ್ಗರೆಯುತ್ತಿರುವ ಜೋಗ ಜಲಪಾತದ ರುದ್ರರಮಣೀಯ ದೃಶ್ಯ ನೋಡಿ!

Atal Bihari Vajpayee

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರ: ಏಮ್ಸ್ ಪ್ರಕಟಣೆ

Ajit Wadekar,

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ ನಿಧನ

Sultan Garh Waterfalls

ಮಧ್ಯ ಪ್ರದೇಶ: ಪ್ರವಾಹಕ್ಕೆ ಸಿಕ್ಕು 11 ಮಂದಿ ಸಾವು,, 30ಕ್ಕೂ ಹೆಚ್ಚು ಜನರು ಅಪಾಯದಲ್ಲಿ!

Actress Anu Prabhakar given birth to a baby girl!

ಹೆಣ್ಣು ಮಗುವಿನ ತಾಯಿಯಾದ ನಟಿ ಅನುಪ್ರಭಾಕರ್

Armies of India and China express mutual desire for peace along LaC

ಗಡಿಯಲ್ಲಿ ಪರಸ್ಪರ ಶಾಂತಿಯ ಆಶಯ ವ್ಯಕ್ತಪಡಿಸಿದ ಭಾರತ-ಚೀನಾ ಸೇನೆ

Ambarish and Maharaja of Mysore - Yaduveer visited to KRS today

ಕೆಆರ್‌ಎಸ್‌ ಭರ್ತಿ:ಸುಂದರ ದೃಶ್ಯಗಳ ಕಣ್ತುಂಬಿಕೊಂಡ ಅಂಬರೀಶ್, ಮೈಸೂರು ಮಹಾರಾಜ ಯದುವೀರ್

Arvind Kejriwal refuses to accept Ashutosh

ಅಶುತೋಷ್ ರಾಜಿನಾಮೆ ಅಂಗೀಕರಿಸಲು ಕೇಜ್ರಿವಾಲ್ ನಕಾರ

File Image

ಕಾಬೂಲ್ ನಲ್ಲಿ ಆತ್ಮಾಹುತಿ ದಾಳಿ: ಕನಿಷ್ಟ 25 ಸಾವು, 35 ಮಂದಿಗೆ ಗಾಯ

PM Modi

ಮೋದಿ ತಮ್ಮ ಕೊನೆಯ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸತ್ಯ ಮಾತನಾಡಬೇಕಿತ್ತು: ಕಾಂಗ್ರೆಸ್

Harmanpreet Kaur

ಮಹಿಳಾ ಸೂಪರ್ ಲೀಗ್: ಹರ್ಮನ್​ಪ್ರೀತ್ ಸ್ಪೋಟಕ ಆಟ, ಲಂಕಾಶೈರ್ ತಂಡ ಫೈನಲ್ ಪ್ರವೇಶ

ಮುಖಪುಟ >> ರಾಜ್ಯ

ಜ್ಯೋತಿಷಿ ಮಾತು ಕೇಳಿ ರೂ.60 ಲಕ್ಷ ಬೆಲೆಯ ಸರಕು ಕದ್ದ ವ್ಯಕ್ತಿ; ಈಗ ಇಬ್ಬರೂ ಜೈಲು ಪಾಲು!

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳು

ಬೆಂಗಳೂರು: ಕಳ್ಳತನ ಮಾಡಿದರೆ ಲಕ್ಷ್ಮೀ ದೇವಿ ಬೇಗ ಒಲಿಯುತ್ತಾಳೆಂಬ ಭವಿಷ್ಯವಾಣಿ ನಂಬಿಕೊಂಡು ಕಳ್ಳತನ ಮಾಡಿದ್ದ ಆರೋಪಿ ಹಾಗೂ ಸಲಹೆ ನೀಡಿದ್ದ ಜ್ಯೋತಿಷಿ ಇದೀಗ ಜೈಲು ಪಾಲಾಗಿದ್ದಾರೆ. 

ಜ್ಯೋತಿಷಿ ಮಾತು ಕೇಳಿ ತಾನು ಕೆಲಸ ಮಾಡುತ್ತಿದ್ದ ಕಂಪನಿಯ 1,000 ಮಾನಿಟರ್ ಗಳನ್ನು ಬೇರೆಯವರಿಗೆ ಮಾರಿದ್ದ ದಾಮೋದರ್ (42) ಎಂಬಾತ ಈಗ ಸಿದ್ಧಾಪುರ ಪೊಲೀಸರಿಗೆ ಸಿಕ್ಕಿಬಿದ್ದು ಪರಪ್ಪನ ಅಗ್ರಹಾರ ಕಾರಾಗೃಹದ ಅತಿಥಿಯಾಗಿದ್ದಾನೆ. 

ದಾಮೋದರ್ ಮಾತ್ರವಲ್ಲದೆ, ಕಂಪನಿಗೆ ವಂಚಿಸುವಂತೆ ಆತನಿಗೆ ಪ್ರಚೋದನೆ ನೀಡಿದ್ದ ಜ್ಯೋತಿಷಿ ಕೃಷ್ಣರಾಜು ಅಲಿಯಾಸ್ ಸ್ವಾಮಿ (58), ಕೃತ್ಯಕ್ಕೆ ನೆರವಾಗಿದ್ದ ಜಯನಗರದ ಶರವಣ (40), ಶ್ರೀನಿವಾಸ್ ಅಲಿಯಾಸ್ ಸೀನು (34) ಹಾಗೂ ಸಿದ್ಧಾಪುರದ ರಾಮ್ ದಾಸ್ (38) ಕೂಡ ಜೈಲಿನ ಅತಿಥಿಗಳಾಗಿದ್ದಾರೆ. 

ದಾಮೋದರನ್'ಗೆ ವಿವಾಹವಾಗಿದ್ದು, ಕುಟುಂಬ ಸಮೇತ ಕೆ.ಎಸ್ ಗಾರ್ಡನ್ ನಲ್ಲಿ ವಾಸವಿದ್ದ ಆರೋಪಿ ಕಳೆದ 7 ವರ್ಷಗಳಿಂದ ಹೊಸೂರು ಮುಖ್ಯರಸ್ತೆಯಲ್ಲಿರುವ 'ಸೂಪರ್ ಟ್ರಾನ್ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್' (ಡೆಲ್ ಕಂಪನಿಯ ಟಿಎಫ್'ಟಿ ಮಾನಿಟರ್ ಹಂಚಿಕೆಮತ್ತು ಮಾರಾಟ ಕಂಪನಿ) ಕಂಪನಿಯಲ್ಲಿ ಸ್ಟೋರ್ ಇನ್ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದ. 

ದಾಮೋದರ್ ಹೃದಯ ಸಂಬಂಧಿ ಕಾಯಿಲೆ ಹಾಗೂ ಆಗಾಗ್ಗೆ ಕಾಣಿಸಿಕೊಳ್ಳುವ ಕೈ ಕಾಲು ನೋವಿನಿಂದ ಬಳಲುತ್ತಿದ್ದ. ಅಲ್ಲದೆ, ಆರ್ಥಿಕವಾಗಿ ತುಸು ಸಂಕಷ್ಟಕ್ಕೆ ಒಳಗಾಗಿದ್ದ. ಹೀಗಾಗಿ ತನ್ನ ಕಷ್ಟ ನಿವಾರಣೆಗಾಗಿ ಜ್ಯೋತಿಷಿ ಮೊರೆ ಹೋಗಿದ್ದ ಸಿದ್ದಾಪುರದ ಮಲ್ಲಿಗೆ ಆಸ್ಪತ್ರೆ ಬಳಿ 7-8 ವರ್ಷಗಳಿಂದ ಜ್ಯೋತಿಷ್ಯ ಹೇಳುವ ಹಾಗೂ ಕೆಲ ರೋಗಗಳಿಂಗ ಗಿಡಮೂಲಿಕೆ ಔಷಧ ನೀಡುತ್ತಿದ್ದ ಕೃಷ್ಣರಾಜು ಎಂಬಾತನನ್ನು ದಾಮೋದರನ್ ಸಂಪರ್ಕಿಸಿದ್ದ. 

ದಾಮೋದರನ್ ಕಷ್ಣ ನಿವಾರಣೆಗೆ ಜ್ಯೋತಿಷಿ ನಿಂಬೆಹಣ್ಣು ಮಂತ್ರಿಸಿ ನೀಡಿದ್ದ. ಆಗ್ಗಾಗ್ಗೆ ಜ್ಯೋತಿಷಿ ಬಳಿ ದಾಮೋದರನ್ ಬಂದು ಹೋಗುತ್ತಿದ್ದ. ದಾಮೋದರನ್ ಕೆಲಸ ಮಾಡುವ ಕಂಪನಿ ಹಾಗೂ ಆತನ ವೈಯಕ್ತಿಕ ವಿಚಾರಗಳನ್ನು ಜ್ಯೋತಿಷಿ ಹಾಗೂ ಜ್ಯೋತಿಷಿಗೆ ಪರಿಚಯವಿರುವ ರಾಜೇಂದ್ರ ಬಳಿ ಹೇಳಿಕೊಂಡಿದ್ದ. 

ಈ ವೇಳೆ ಜ್ಯೋತಿಷಿ ಆಷಾಢ ಮಾಸ ಕಳೆದ ಮೇಲೆ ಶ್ರಾವಣದಲ್ಲಿ ನಿನಗೆ ಒಳ್ಳೆ ಭವಿಷ್ಯ ಬರುತ್ತದೆ. ಕಳ್ಳತನ ಮಾಡಿದರೆ ಜೀವನದಲ್ಲಿ ಬೇಗ ಲಕ್ಷ್ಮೀ ಒಲಿಯುತ್ತಾಳೆ ಎಂದು ಹೇಳಿದ್ದಾರೆ. 

ಜ್ಯೋತಿಷಿ ಕೃಷ್ಣರಾಜು ಮತ್ತು ಈತನಿಗೆ ಪರಿಚಯಸ್ಥನಾಗಿರುವ ರಾಜೇಂದ್ರ ಇಬ್ಬರು ಸೇರಿ ದಾಮೋದರನ್'ಗೆ ತಾನು ಕೆಲಸ ಮಾಡುವ ಕಂಪನಿಯಲ್ಲಿ ಕಳ್ಳತನ ಮಾಡಲು ಐಡಿಯಾ ನೀಡಿದ್ದರು. ಕಂಪನಿಗೆ ಬರುವ ಮಾನಿಟರ್ ಗಳನ್ನು ಮಾರಾಟ ಮಾಡು. ಅದರಿಂದ ಬರುವ ಹಣದಲ್ಲಿ ಮೂವರು ಹಂಚಿಕೊಳ್ಳೋಣ. ಯಾರಿಗೂ ಗೊತ್ತಾಗುವುದಿಲ್ಲ ಎಂದು ನಿನ್ನ ಭವಿಷ್ಯವಾಣಿ ನುಡಿಯುತ್ತಿದೆ ಎಂದು ನಿಂಬೆಹಣ್ಣುಗಳನ್ನು ಮಂತ್ರಿಸಿ ದಾಮೋದರನ್ ಗೆ ಕೊಟ್ಟಿದ್ದಾನೆ. ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದ ದಾಮೋದರನ್ ಕಳ್ಳತನ ಮಾಡಲು ನಿರ್ಧರಿಸಿದ್ದಾನೆ. 

ಈ ನಡುವೆ ಕಂಪನಿಯ ಬೇಡಿಕೆ ಮೇರೆಗೆ ತಮಿಳುನಾಡಿನ ಪೆರಂಬದೂರಿನಿಂದ ಆ.3 ಹಾಗೂ ಆ.11 ರಂದು 1,000 ಮಾನಿಟರ್ ಗಳನ್ನು ಬ್ಲೂ ಡಾರ್ಟ್ ಕೊರಿಯರ್ ಕಂಪನಿಯ ವಾಹನದಲ್ಲಿ ಕಳುಹಿಸಲಾಗಿತ್ತು. ಆ ಮಾನಿಟರ್ ಗಳನ್ನು ಗೆಳೆಯನ ಮನೆಗೆ ಡೆಲಿವರಿ ಮಾಡಿಸಿದ್ದ ದಾಮೋದರ್, ನಂತರ ಸಹಚರರ ಮೂಲಕ ಎಸ್.ಪಿ ರಸ್ತೆಯ ಅಂಗಡಿಗಳಲ್ಲಿ ಅವುಗಳನ್ನು ಮಾರಾಟ ಮಾಡಿಸಿದ್ದ. 

ಮಾನಿಟರ್ ಗಳನ್ನು ಕಳುಹಿಸಿದ ಕೆಲ ದಿನಗಳ ನಂತರ ಡೆಲ್ ಕಂಪನಿಯ ಬಿಲ್ ಪಾವತಿಸುವಂತೆ ಇ-ಮೇಲ್ ಮೂಲಕ ಸೂಪರ್ ಟ್ರಾನ್ ಎಲೆಕ್ಟ್ರಾನಿಕ್ಸ್ ಆಡಳಿತ ಮಂಡಳಿಯನ್ನು ಕೋರಿತ್ತು. ಅದಕ್ಕೆ ಮಾನಿಟರ್ ಗಳೇ ಬಂದಿಲ್ಲ. ಬಿಲ್ ಹೇಗೆ ಕಟ್ಟುವುದು ಎಂದು ಆಡಳಿತ ಮಂಡಳಿ ಪ್ರತಿಕ್ರಿಯಿಸಿದೆ. 

ಇದರಿಂದ ಗಾಬರಿಗೊಂಡ ಡೆಲ್ ಕಂಪನಿ ಸಿಬ್ಬಂದಿ ಬ್ಲೂ ಡಾರ್ಟ್ ಮೂಲಕ ಮಾನಿಟರ್ ಗಳನ್ನು ಕಳುಹಿಸಿರುವ ಹಾಗೂ ಸರಕನ್ನು ಸ್ವೀಕರಿಸಿರುವುದಾಗಿ ತಮ್ಮ ಸಿಬ್ಬಂದಿಯೇ ಸಹಿ ಮಾಡಿರುವ ವಿಚಾರವನ್ನು ತಿಳಿಸಿದ್ದರು. ಆ ನಂತರ ಆಡಳಿತ ಮಂಡಳಿಯವರು ಸಿದ್ದಾಪುರ ಠಾಣೆಗೆ ದೂರು ಕೊಟ್ಟಿದ್ದರು. 

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಂಪನಿಯ ಎಲ್ಲಾ ನೌಕರರನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ದಾಮೋದರ್ ಮೇಲೆ ಅನುಮಾನಗಳು ಹೆಚ್ಚಾಗಿದೆ. ಇದರಂತೆ ದಾಮೋದರ್ ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆಂದು ತಿಳಿದುಬಂದಿದೆ. 

ಆರೋಪಿ ನೀಡಿದ ಮಾಹಿತಿ ಆಧರಿಸಿ ಉಳಿದ ಆರೋಪಗಳನ್ನು ಪೊಲೀಸರು ಬಂಧಕ್ಕೊಳಪಡಿಸಿದ್ದು, 671 ಮಾನಿಟರ್ ಗಳು ಹಾಗೂ ರೂ. 10 ಲಕ್ಷ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 
Posted by: MVN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Crime, Bengaluru, Astrologer, Arrest, ಅಪರಾಧ, ಬೆಂಗಳೂರು, ಜ್ಯೋತಿಷಿ, ಬಂಧನ
English summary
An astrologer’s advice to a client that ‘good times’ would come if he stole electronic goods worth nearly Rs 60 lakh, has on Yesterday landed the client, his three accomplices and the astrologer in jail.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS