Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
CAG

ಮೋದಿಗೆ ಮುಜುಗರ ತಪ್ಪಿಸಲು ರಾಫೆಲ್, ನೋಟ್ ಬ್ಯಾನ್ ಬಗ್ಗೆ ಸಿಎಜಿ ವರದಿ ಉದ್ದೇಶಪೂರ್ವಕ ವಿಳಂಬ: ಮಾಜಿ ಅಧಿಕಾರಿಗಳು

'ದುರ್ವರ್ತನೆ ಆರೋಪ'ದಿಂದ ಆಘಾತವಾಗಿದೆ: ಬಿನ್ನಿ ಬನ್ಸಾಲ್‌

Sabarimala Ayyappa Temple

ಶಬರಿಮಲೆ ವಿವಾದ: ತೀರ್ಪು ಮರುಪರಿಶೀಲನೆಗೆ 'ಸುಪ್ರೀಂ' ಒಪ್ಪಿಗೆ, ಅರ್ಜಿಗಳ ವಿಚಾರಣೆ ಜನವರಿ 22ಕ್ಕೆ

ಅಮೆರಿಕಾ ಚುನಾವಣೆಯಲ್ಲಿ ಅರಳುತ್ತಾ ಕಮಲ?

Sanjana, Ravi Srivatsa

#MeToo ಆರೋಪ: ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ ಸಂಜನಾ ಹೇಳಿದ್ದೇನು?

Mumbai: Two dead after fire breaks out in Slum Rehabilitation Authority building

ಮುಂಬೈ: ಪುನರ್ವಸತಿ ಪ್ರಾಧಿಕಾರದ ಕಟ್ಟಡದಲ್ಲಿ ಅಗ್ನಿ ಅವಘಡ, ಇಬ್ಬರು ಸಾವು

Soundarya Rajinikanth gears up for second wedding in January 2019

ಜನವರಿಯಲ್ಲಿ 2ನೇ ಮದುವೆಗೆ ಸಿದ್ಧವಾದ ರಜನಿ ಪುತ್ರಿ ಸೌಂದರ್ಯ

AI pilot Arvind Kathpalia relieved from Director (Operations) post

ಮದ್ಯಪಾನ ಸೇವನೆ: ನಿರ್ದೇಶಕ ಹುದ್ದೆಯಿಂದ ಏರ್ ಇಂಡಿಯಾ ಕ್ಯಾಪ್ಟನ್ ಅರವಿಂದ್ ಕಠ್ಪಲಿಯಾ ವಜಾ

130 candidates facing criminal cases in fray for Chhattisgarh elections

ಛತ್ತೀಸ್ ಗಢ ಚುನಾವಣೆ ಕಣದಲ್ಲಿದ್ದಾರೆ 130 ಕ್ರಿಮಿನಲ್ ಅಭ್ಯರ್ಥಿಗಳು!

Sri Lankan crisis takes dramatic turn as Supreme Court overturns dissolution of parliament

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು: ಸಂಸತ್ ವಿಸರ್ಜನೆಗೆ ಸುಪ್ರೀಂ ತಡೆ

CPM and DMK announce anti-BJP alliance for 2019 Lok Sabha elections

2019ರ ಲೋಕಸಭೆ ಚುನಾವಣೆ: ಬಿಜೆಪಿ ವಿರೋಧಿ ಮೈತ್ರಿ ಘೋಷಿಸಿದ ಸಿಪಿಎಂ, ಡಿಎಂಕೆ

Sadananda Gowda-Narendra Singh Tomar

ಅನಂತ್ ಕುಮಾರ್ ನಿರ್ವಹಿಸುತ್ತಿದ್ದ 2 ಖಾತೆಗಳು ಡಿವಿಎಸ್, ನರೇಂದ್ರ ಸಿಂಗ್ ತೋಮರ್ ಗೆ ವರ್ಗಾವಣೆ

Tricolours

75 ರೈಲ್ವೆ ನಿಲ್ದಾಣಗಳಲ್ಲಿ 100 ಅಡಿ ಎತ್ತರದ ತ್ರಿವರ್ಣ ಧ್ವಜಸ್ತಂಭ ಸ್ಥಾಪನೆಗೆ ಇಲಾಖೆ ಆದೇಶ

ಮುಖಪುಟ >> ರಾಜ್ಯ

ಏರೋ ಇಂಡಿಯಾ: ಬೆಂಗಳೂರು ಅಥವಾ ಲಖನೌ? ಗೊಂದಲಕ್ಕೆ ತೆರೆ ಎಳೆಯಿರಿ: ಕೇಂದ್ರಕ್ಕೆ ರಾಜ್ಯಸರ್ಕಾರದ ಮನವಿ

2019ರ ಲೋಕಸಭಾ ಚುನಾವಣೆ ಮೇಲೆ ಕಣ್ಣು: ಏರೋ ಇಂಡಿಯಾ ಷೋವನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆಯೇ ಯೋಗಿ ಸರ್ಕಾರ
Aero India to be shifted? Karnataka asks Centre to clarify

ಸಂಗ್ರಹ ಚಿತ್ರ

ಬೆಂಗಳೂರು: ಇದೇ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ನಡೆಯಬೇಕಿರುವ ಏರೋ ಇಂಡಿಯಾ ಕಾರ್ಯಕ್ರಮ ಸ್ಥಳಾಂತರ ವಿವಾದದ ಕುರಿತು ಎದ್ದಿರುವ ಗೊಂದಲಗಳಿಗೆ ಕೂಡಲೇ ತೆರೆ ಎಳೆಯುವಂತೆ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ.

ಕಳೆದೊಂದು ವಾರದಿಂದ ಏರೋ ಇಂಡಿಯಾ ಕಾರ್ಯಕ್ರಮ ಸ್ಥಳಾಂತರ ಕುರಿತು ಭಾರಿ ಚರ್ಚೆಗಳಾಗುತ್ತಿದ್ದು, ಇತ್ತೀಚೆಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್ ರನ್ನು ಭೇಟಿ ಮಾಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರು ಏರ್ ಷೋವನ್ನು ಲಖನೌಗೆ ಸ್ಥಳಾಂತರ ಮಾಡಲು ಮನವಿ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರವಾಗಲಿ ಅಥವಾ ಉತ್ತರ ಪ್ರದೇಶ ಸರ್ಕಾರವಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೂ ಊಹಾಪೋಹಗಳು ಮುಂದುವರೆದಿದ್ದು, ಇದೇ ಕಾರಣಕ್ಕೆ ಈ ಕುರಿತ ಗೊಂದಲಕ್ಕೆ ತೆರೆ ಎಳೆಯುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಆಗ್ರಸಿಹಿಸಿದೆ.

ಈ ಬಗ್ಗೆ ಮಾತನಾಡಿರುವ ರಾಜ್ಯ ಗೃಹ ಸಚಿವ ಜಿ ಪರಮೇಶ್ವರ ಅವರು, ಎನ್ ಡಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕದ ಸಾಕಷ್ಚು ರಕ್ಷಣಾ ಯೋಜನೆಗಳು ಕೈ ತಪ್ಪಿ ಹೋಗುತ್ತಿವೆ. ಈ ಹಿಂದೆ ಹೆಚ್ ಎಎಲ್ ವಿಮಾನ ತಯಾರಿಕಾ ಯೋಜನೆ ಕೈ ತಪ್ಪಿತ್ತು, ಇದೀಗ ಏರೋ ಇಂಡಿಯಾ ಕಾರ್ಯಕ್ರಮ ಸ್ಥಳಾಂತರವಾಗುವ ಭೀತಿ ಎದುರಾಗಿದೆ. ಈ ಬಗ್ಗೆ ರಾಜ್ಯದ ಜನತೆ ಗೊಂದಲದಿಂದಿದ್ದು, ಈ ಬಗ್ಗೆ ಕೂಡಲೇ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ಬಾರಿ ಏರ್ ಇಂಡಿಯಾ ಷೋಗೆ ಬೆಂಗಳೂರು ಯಶಸ್ವಿಯಾಗಿ ಆತಿಥ್ಯವಹಿಸಿತ್ತು. ಈ ಬಾರಿಯೂ ಬೆಂಗಳೂರಿನಲ್ಲೇ ಕಾರ್ಯಕ್ರಮ ನಡೆಯಲಿದೆ ಎಂಬ ವಿಶ್ವಾಸವಿತ್ತಾದರೂ ಅಂತಿಮ ಕ್ಷಣದ ಬೆಳವಣಿಗೆಗಳು ಇದಕ್ಕೆ ವ್ಯತಿರಿಕ್ತವಾಗಿವೆ. ಒಂದು ವೇಳೆ ಇದು ನಿಜವೇ ಆದರೆ 1996ರ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಹೊರಗೆ ಏರೋ ಇಂಡಿಯಾ ಕಾರ್ಯಕ್ರಮ ಆಯೋಜನೆಯಾದಂತಾಗುತ್ತದೆ.

ಏರೋ ಇಂಡಿಯಾ ಷೋವನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆಯೇ ಎನ್ ಡಿಎ ಸರ್ಕಾರ
ಇನ್ನು ಏರೋ ಇಂಡಿಯಾ ಷೋವನ್ನೂ ಎನ್ ಡಿಎ ಸರ್ಕಾರ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಮಧ್ಯ ಪ್ರದೇಶ, ರಾಜಸ್ತಾನ, ಛತ್ತೀಸ್ ಘಡದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅಲ್ಲದೆ ಮುಂದಿನ ವರ್ಷ ಲೋಕಸಭಾ ಚುನಾವಣೆ ಇದ್ದು, ಇದೇ ಕಾರಣಕ್ಕೆ ಏರ್ ಷೋವನ್ನು ಲಖನೌಗೆ ಸ್ಥಳಾಂತರ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಸಂಬಂಧಿಸಿದ್ದು...
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Bengaluru, Aero India 2018, Karnataka Government, G Parameshwar, ಬೆಂಗಳೂರು, ಏರ್ ಇಂಡಿಯಾ 2018, ಕರ್ನಾಟಕ ಸರ್ಕಾರ, ಜಿ ಪರಮೇಶ್ವರ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS