Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Sridevi

ಬಾಲಿವುಡ್ ಹಿರಿಯ ನಟಿ, ಮೋಹಕ ತಾರೆ ಶ್ರೀದೇವಿ ಇನ್ನಿಲ್ಲ

Sridevi

4ನೇ ವರ್ಷಕ್ಕೆ ಸಿನಿಮಾರಂಗಕ್ಕೆ ಪಾದಾರ್ಪಣೆ: ಕನ್ನಡದ 6 ಚಿತ್ರಗಳಲ್ಲಿ ಶ್ರೀದೇವಿ ನಟನೆ

CM Siddaramaiah, Congress president Rahul Gandhi at Janaashirwada Yatre

ಬಸವಣ್ಣನವರ 'ನುಡಿದಂತೆ ನಡೆ' ತತ್ವ ಪಾಲಿಸದ ಮೋದಿ: ರಾಹುಲ್ ಗಾಂಧಿ ವ್ಯಂಗ್ಯ

Rahul Gandhi, Shobha Karandlaje

ಕಾಂಗ್ರೆಸ್ ಗೂಂಡಾರಾಜ್ ಬಗ್ಗೆ ನಿಮ್ಮ ನಿಲುವೇನು: ರಾಹುಲ್ ಗೆ ಶೋಭಾ ಪ್ರಶ್ನೆ?

Congress president Rahul Gandhi, Chief Minister Siddaramaiah and other Congress leaders having tea at a roadside stall in Vijayapura on Saturday

ಪ್ರಧಾನಿಯ ಪರೋಕ್ಷ ಬೆಂಬಲವಿಲ್ಲದೆ ವಂಚನೆ ಪ್ರಕರಣ ನಡೆಯಲು ಸಾಧ್ಯವಿಲ್ಲ-ಸಿದ್ದರಾಮಯ್ಯ

Amit shah

ಅಮಿತ್ ಶಾ-ಬಂಡಲ್ ಶಾ: ಪೋಸ್ಟ್ ಹಾಕಿದ್ದ ವಿದ್ಯಾರ್ಥಿ ಪುತ್ತೂರು ವಿವಿಎಸ್ ಕಾಲೇಜಿನಿಂದ ಸಸ್ಪೆಂಡ್

Aicc president rahulgandhi photo

ಮಹಿಳಾ ಉದ್ಯಮಿಗಳಿಗೆ ಕೈಗಾರಿಕಾ ಪಾರ್ಕ್ ಸ್ಥಾಪಿಸಿದ ಮೊದಲ ರಾಜ್ಯ ಕರ್ನಾಟಕ: ರಾಹುಲ್ ಗಾಂಧಿ

India beat South Africa by 7 runs

ಅಂತಿಮ ಟಿ20ಯಲ್ಲಿ ಭಾರತಕ್ಕೆ 7 ರನ್ ಗಳ ಜಯ, 2-1ರಿಂದ ಸರಣಿ ಕೈವಶ

niravmodi photo

ಬ್ಯಾಂಕ್ ವಂಚನೆ ಹಗರಣ: 16 ಬ್ಯಾಂಕುಗಳಿಂದ ಸಾಲ ಪಡೆದಿದ್ದ ನೀರವ್ ಮೋದಿ,ಮೆಹುಲ್ ಚೋಕ್ಸಿ

Shikhar Dhawan

ಅಂತಿಮ ಟಿ20: ಭಾರತ 172/7, ಉತ್ತಮ ರನ್ ಸಿಡಿಸಿದ ಧವನ್, ರೈನಾ

artillery fire to home demolish by pak photo

ಕಾಶ್ಮೀರದಲ್ಲಿ ಪಾಕ್ ನಿಂದ ಫಿರಂಗಿ ಶೆಲ್ ದಾಳಿ : ಗ್ರಾಮಸ್ಥರ ಸ್ಥಳಾಂತರ

Major Kumud Dogra

ಪತಿಯ ಅಂತ್ಯ ಸಂಸ್ಕಾರಕ್ಕೆ ಐದು ದಿನಗಳ ಕಂದನೊಡನೆ ಆಗಮಿಸಿದ ಮಹಿಳಾ ಸೇನಾಧಿಕಾರಿ

Sohrabuddin case: Bombay High Court judge

ಸೊಹ್ರಾಬುದ್ದೀನ್ ಪ್ರಕರಣ: ಬಾಂಬೆ ಹೈಕೋರ್ಟ್ ನೂತನ ಏಕಸದಸ್ಯ ಪೀಠಕ್ಕೆ ವರ್ಗಾವಣೆ

ಮುಖಪುಟ >> ರಾಜ್ಯ

ಬೆಂಗಳೂರು: ಹೆಣ್ಣುಮಗು ಹುಟ್ಟಿದ್ದಕ್ಕೆ ಪತ್ನಿಯ ಬೆನ್ನು ಮುರಿದ ಸಾಫ್ಟ್ ವೇರ್ ಎಂಜಿನೀಯರ್!

Harshitha And  Chetan,

ಹರ್ಷಿತಾ ಮತ್ತು ಚೇತನ್

ಬೆಂಗಳೂರು: ಹೆಣ್ಣು ಮಗು ಜನಿಸಿದ ಕಾರಣಕ್ಕೆ ಅತ್ತೆ ಮನೆಯವರು ಮಾಡಿದ ಹಲ್ಲೆಯಿಂದಾಗಿ 29 ವರ್ಷದ ಮಹಿಳೆಯೊಬ್ಬರು ಬೆನ್ನು ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹರ್ಷಿತಾ ಆಸ್ಪತ್ರೆ ಸೇರಿರುವ ಮಹಿಳೆ, ಕಳೆದ ಮೂರು ವರ್ಷಗಳ ಹಿಂದೆ ಹರ್ಷಿತಾ ಮತ್ತು ಚೇತನ್ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಅಂದಿನಿಂದ ಇಂದಿನವರೆಗೆ ಪ್ರತಿನಿತ್ಯ ಅತ್ತೆ ಮನೆಯವರು ಆಕೆಗೆ ಕಿರುಕುಳ ನೀಡುತ್ತಿದ್ದು, ಈ ಸಂಬಂಧ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಹರ್ಷಿತಾ ಪತಿ ನಗರದ ಪ್ರಮುಖ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಚೇತನ್ ಸೇರಿದಂತೆ ಐವರ ವಿರುದ್ಧ ದೂರು ದಾಖಲಿಸಲಾಗಿದೆ.

ಜಾಲಹಳ್ಳಿ ನಿವಾಸಿಯಾದ ಹರ್ಷಿತಾ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಈ ಹಿಂದೆ ಹಲವು ಬಾರಿ ತನ್ನ ಮೇಲೆ ಅತ್ತೆಮನೆಯವರಿಂದ ಹಲ್ಲೆ ನಡೆದಿದ್ದು, ನಾಲ್ಕು ಬಾರಿ ಪೊಲೀಸರ ಸಹಾಯಕ್ಕಾಗಿ ಮನವಿ ಮಾಡಿದ್ದೆ, ಆದರೆ ಇದು ಕೌಟುಂಬಿಕ ವಿಷಯ ಎಂದು ಪೋಲೀಸರು ನಿರ್ಲಕ್ಷ್ಯಿಸಿದರು ಎಂದು ಆಕೆ ಆರೋಪಿಸಿದ್ದಾರೆ. ಚೇತನ್ ಮತ್ತು ಆತನ ಪೋಷಕರಾದ ನಾಗರಾಜ್ ಮತ್ತು ನಾಗವೇಣಿ ನ್ಯೂ ತಿಪ್ಪಸಂದ್ರದಲ್ಲಿ ವಾಸಿಸುತ್ತಿದ್ದಾರೆ.

ಮೂರು ವರ್ಷದ ಹಿಂದೆ ನನ್ನ ಸಹೋದರಿ ಹರ್ಷಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆಕೆಯ ಅತ್ತೆ ಮಾವನ ಕೋಪಕ್ಕೆ ಕಾರಣವಾಯಿತು. ತಮ್ಮ ಸಂಬಂಧಿಕರ ಮಗುವೊಂದನ್ನು ದತ್ತು ಪಡೆಯಲು ಚೇತನ್ ನಿರ್ಧರಿಸಿದ್ದ, ಆದರೆ ಇದಕ್ಕೆ ಹರ್ಷಿತಾ ಒಪ್ಪಲಿಲ್ಲ, ಅಂದಿನಿಂದ ನನ್ನ ಸಹೋದರಿಗೆ ಕಿರುಕುಳ ನೀಡಲು ಆರಂಭಿಸಿದರು. ಕೆಲ ತಿಂಗಳ ಹಿಂದೆ ಆಕೆಗೆ ನಿದ್ರೆ ಮಾತ್ರೆ ಸೇವಿಸುವಂತೆ ಬಲವಂತ ಮಾಡಿದ್ದರು, ಅಕ್ಟೋಬರ್ 29 ರಂದು ಹರ್ಷಿತಾ ಮೇಲೆ ಹಲ್ಲೆ ನಡೆಸಿ ಆಕೆಯ ಬೆನ್ನು ಮೂಳೆ ಮುರಿದಿದ್ದಾರೆ ಎಂದು ಹರ್ಷಿತಾ ಸಹೋದರ ಮಿಥುನ್ ಆರೋಪಿಸಿದ್ದಾರೆ.

ಹರ್ಷಿತಾ ಬೆನ್ನು ಮೂಳೆ ಸ್ಥಳಾಂತರಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನವೆಂಬರ್ 5 ರಂದು ಪೊಲೀಸರಿಗೆ ದೂರು ನೀಡಿ ಚೇತನ್ ತಂದೆ ನಾಗರಾಜ್, ನಾಗವೇಣಿ, ಚೇತನ್, ಆತನ ಸಹೋದರಿ ಚಿತ್ರ ಮತ್ತು ಆಕೆಯ ಪತಿ ವೇಣುಗೋಪಾಲ್ ವಿರುದ್ಧ ದೂರು ದಾಖಲಾಗಿದೆ, ಪೊಲೀಸ್ ಅಧಿಕಾರಿಗಳು  ಆಸ್ಪತ್ರೆಗೆ ಆಗಮಿಸಿ ಹರ್ಷಿತಾ ಹೇಳಿಕೆ ಪಡೆದಿದ್ದಾರೆ, ಆದರೆ ಇದುವರೆಗೆ ಅವರ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ. ತಮಗಿರುವ ಶಿಫಾರಸು ಬಳಸಿ ಪೊಲೀಸರು ತನಿಖೆ ನಡೆಸದಂತೆ ಒತ್ತಡ ಹೇರುತ್ತಿದ್ದಾರೆ ಎಂದು ಮಿಥುನ್ ಆರೋಪಿಸಿದ್ದಾರೆ.

ಹರ್ಷಿತಾ ರ ಮೂರು ವರ್ಷದ ಮಗಳಾದ ಗಣಿಕಾ ಹೆಸರಲ್ಲಿ  20 ಲಕ್ಷ ಫಿಕ್ಸೆಡ್ ಡಿಪಾಸಿಟ್ ಇಡುವಂತೆ ಚೇತನ್ ಪೋಷಕರು ತಮ್ಮ ಮೇಲೆ ಒತ್ತಡ ಹಾಕುತ್ತಿದ್ದರು. ಜೊತೆಗೆ ಮಗುವಿನ ಎಲ್ಲಾ ಖರ್ಚು ವೆಚ್ಚಗಳನ್ನು ನಾವೇ ಭರಿಸುವಂತೆ ಒತ್ತಾಯ ಮಾಡುತ್ತಿದ್ದರು ಎಂದು ಮಿಥುನ್ ದೂರಿದ್ದಾರೆ, ಈ ಸಂಬಂಧ ದೂರು ದಾಖಲಿಸಿಕೊಂಡಿದ್ದು ಎಫ್ಐಆರ್ ಹಾಕಲಾಗಿದ್ದು, ಬಂಧಿಸಲು ಹಿರಿಯ ಅಧಿಕಾರಿಗಳು ಅನುಮತಿಗಾಗಿ ಕಾಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Posted by: SD | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Bengaluru, Crime, Husband, Wife, girl child, ಬೆಂಗಳೂರು, ಅಪರಾಧ, ಪತಿ, ಪತ್ನಿ, ಹೆಣ್ಣು ಮಗು
English summary
: A 29-year-old woman was hospitalised with a broken back after an alleged assault by her husband and in-laws. The victim Harshitha said they had been harassing her for the past three years ever since she gave birth to a girl child. Jeevan Bima Nagar police are yet to arrest the five persons, including her husband Chetan, an employee with a major software firm

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement