Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Team India

ಭಾರತ-ಶ್ರೀಲಂಕಾ ನಡುವಣ ಮೊದಲ ಟೆಸ್ಟ್ ರೋಚಕ ಡ್ರಾನಲ್ಲಿ ಅಂತ್ಯ

Virat Kohli

50 ಶತಕ ನಿಜಕ್ಕೂ ಸಂತೋಷ, ಆದರೆ ಸಾಧನೆಯ ಹಾದಿ ಇನ್ನೂ ಇದೆ: ವಿರಾಟ್ ಕೊಹ್ಲಿ

New long-range missile may be inducted into PLA next year: Report

ಚೀನಾ ಸೇನೆ ಸೇರಲಿದೆ ವಿಶ್ವದ ಯಾವುದೇ ಗುರಿ ಹೊಡೆದುರುಳಿಸಬಲ್ಲ ಹೊಸ ಕ್ಷಿಪಣಿ!

Dalveer Bhandari

ಐಸಿಜೆ ಚುನಾವಣೆ: ಭಾರತದ ಅಭ್ಯರ್ಥಿಗೆ ಜಯ ಸಾಧ್ಯತೆ; ಯುಎನ್ಎಸ್ ಸಿ ಖಾಯಂ ಸದಸ್ಯ ರಾಷ್ಟ್ರಗಳು ಕಂಗಾಲು

Ganapathi suicide: Karnataka doctors statement rocks state assembly

ವಿಧಾನಸಭೆಯಲ್ಲಿ ಗಣಪತಿ ಗದ್ದಲ: ಸಿಎಂ, ಜಾರ್ಜ್ ರಾಜಿನಾಮೆಗೆ ಬಿಜೆಪಿ ಒತ್ತಾಯ

Indian Army

ಜಮ್ಮು ಮತ್ತು ಕಾಶ್ಮೀರ: ಓರ್ವ ಉಗ್ರನನ್ನು ಹೊಡೆದುರುಳಿಸಿದ ಸೇನೆ

Aadhaar data is fully safe, assures UIDAI

ಆಧಾರ್ ಮಾಹಿತ ಸಂಪೂರ್ಣ ಸುರಕ್ಷಿತ: ಯುಐಡಿಎಐ

Vijay Mallya extradition hearing confirmed for 8 days from December 4

ಲಂಡನ್ ಕೋರ್ಟ್ ಗೆ ವಿಜಯ್ ಮಲ್ಯ ಹಾಜರು, ಡಿ. 4ರಿಂದ 8 ದಿನ ಹಸ್ತಾಂತರ ಕುರಿತು ವಿಚಾರಣೆ

ಸಂಗ್ರಹ ಚಿತ್ರ

ತಾಯಿ ಟಿವಿ ನೋಡಬೇಡ ಅಂದಿದ್ದಕ್ಕೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಬಾಲಕಿ

ಆಹಾರ

ಆಹಾರವನ್ನು ನಿಧಾನವಾಗಿ ಸೇವಿಸುವುದು ಒಳ್ಳೆಯದೇ? ಇಲ್ಲಿದೆ ಸಂಶೋಧನಾ ವರದಿ

I became Chief Minister because of Sonia Gandhi

ಸೋನಿಯಾ ಗಾಂಧಿ ಕೃಪಾಕಟಾಕ್ಷದಿಂದ ನಾನು ಸಿಎಂ ಆದೆ: ಸಿದ್ದರಾಮಯ್ಯ

Representative image

ಬೆಂಗಳೂರು: ಸೊಂಟ ಮುಟ್ಟಿ ಪರಾರಿಯಾಗುತ್ತಿದ್ದ ಕಾಮುಕನನ್ನು ಬೆನ್ನಟ್ಟಿ ಹಿಡಿದ ಮಹಿಳೆ

Congress CWC passes resolution to make Rahul Gandhi party President

ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಿರ್ಣಯ

ಮುಖಪುಟ >> ರಾಜ್ಯ

ಕುದುರೆ ಬಾಲಕ್ಕೆ ದುಡ್ಡು ಕಟ್ಟುವ ಮುನ್ನ ಎಚ್ಚರಿಕೆ; ಕುದುರೆಗೆ ಡ್ರಗ್ಸ್ ನೀಡಿದ ಆರೋಪದ ಮೇಲೆ ಟರ್ಫ್ ಕ್ಲಬ್ ಸಿಇಒ ವಿರುದ್ಧ ದೂರು!

ರೇಸ್ ಗೆಲ್ಲಲು ಪಂದ್ಯಕ್ಕೂ ಮುನ್ನ ಕುದುರೆಗೆ ಉದ್ದೀಪಮನ ಮದ್ದು ನೀಡಿದ ಗಂಭೀರ ಆರೋಪ, ದೂರು ದಾಖಲು
Bengaluru Turf Club CEO, employee booked for doping horses before race

ಸಂಗ್ರಹ ಚಿತ್ರ

ಬೆಂಗಳೂರು: ಪಂದ್ಯ ಗೆಲ್ಲಲೇಬೇಕು ಎಂಬ ಕಾರಣಕ್ಕೆ ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವಿಸಿದ ಹಲವು ಪ್ರಕರಣಗಳನ್ನು ನಾವು ನೋಡಿದ್ದೇವೆ. ಆದರೆ ಸ್ಪರ್ಧೆ ಗೆಲ್ಲಬೇಕು ಎಂಬ ಕಾರಣಕ್ಕೆ ಕುದುರೆಗೆ ಉದ್ದೀಪನ ಔಷಧಿ  ನೀಡಿರುವ ಆಘಾತಕಾರಿ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ದೇಶವ್ಯಾಪಿ ಖ್ಯಾತಿ ಗಳಿಸಿರುವ ಬೆಂಗಳೂರು ಟರ್ಫ್ ಕ್ಲಬ್ ನಲ್ಲೇ ಇಂತಹುದೊಂದು ಗಂಭೀರ ಆರೋಪ ಕೇಳಿಬಂದಿದ್ದು,  ರೇಸ್​ನ ಫಲಿತಾಂಶವನ್ನು ಏರುಪೇರು ಮಾಡಲು ಕುದುರೆಗಳಿಗೂ ಉದ್ದೀಪನ ಮದ್ದು ನೀಡುತ್ತಿರುವ  ಆಘಾತಕಾರಿ ಪ್ರಕರಣ ಕ್ಲಬ್​ ನಲ್ಲಿ ಬೆಳಕಿಗೆ ಬಂದಿದೆ. ಕುದುರೆಗಳಿಗೆ ಉದ್ಧೀಪನ ಮದ್ದು ನೀಡಿರುವ ಕುರಿತು ವೈದ್ಯಕೀಯ ಪರೀಕ್ಷೆಗಳಿಂದ ಸಾಬೀತಾಗಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಕುದುರೆ ಮಾಲೀಕರಾದ ರಾಜಾಜಿ ನಗರ  ನಿವಾಸಿ ಎಚ್.ಎಸ್. ಚಂದ್ರೇಗೌಡ ಎಂಬುವರು ಟರ್ಫ್ ಕ್ಲಬ್ ಸಿಇಒ ನಿರ್ಮಲ್ ಪ್ರಸಾದ್, ಚೀಫ್ ಸ್ಟೈಪೆಂಡರಿ ಆಫೀಸರ್ ಪ್ರದ್ಯುಮ್ನ ಸಿಂಗ್, ವಿವೇಕ್ ಉಬಯ್ಕರ್, ಅರ್ಜುನ್ ಸಜ್ನಾನಿ ಮತ್ತು ನೀಲ್ ದ್ರಷ್ ಮತ್ತಿತರರ ವಿರುದ್ಧ  ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇತ್ತೀಚೆಗೆ ಟರ್ಫ್ ಕ್ಲಬ್​ ನಲ್ಲಿ ಕರ್ನಾಟಕ ರೇಸ್ ಹಾರ್ಸ್ ಓನರ್ಸ್ ಅಸೋಸಿಯೇಷನ್ ಮಿಲೇನಿಯಮ್ ಕಪ್​ನ ಮೊದಲ ಹಂತದ ಇನ್ವಿಟೇಷನ್ ಕಪ್ ರೇಸ್ ನಡೆದಿತ್ತು. ಇದರಲ್ಲಿ ಮೂರು ವರ್ಷದ ಹೆಣ್ಣು ಕುದುರೆ ಕ್ವೀನ್ ಲತೀಫಾ  ಮೊದಲ ಸ್ಥಾನ ಗಳಿಸಿತ್ತು. ರೇಸ್ ನ ಬಳಿಕ ಕುದುರೆಯ ಮೂತ್ರ ಮತ್ತು ರಕ್ತದ ಮಾದರಿಯನ್ನು ದೆಹಲಿಯಲ್ಲಿರುವ ನ್ಯಾಷನಲ್ ಉದ್ದೀಪನ ಮದ್ದು ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ಕ್ವೀನ್ ಲತೀಫಾ  ಕುದುರೆಗೆ ಉದ್ದೀಪನ ಮದ್ದು ನೀಡಿರುವುದು ಖಚಿತಪಟ್ಟಿತ್ತು. ಈ ಬಗ್ಗೆ ಟರ್ಫ್ ಕ್ಲಬ್​ಗೆ ಮಾಹಿತಿ ಸಿಕ್ಕಿದರೂ, ಸಿಇಒ ನಿರ್ಮಲ್ ಪ್ರಸಾದ್ ಮಾಹಿತಿ ಮುಚ್ಚಿಟ್ಟು ಅಕ್ರಮ ಎಸಗಿದ್ದಾರೆ ಎಂದು ಚಂದ್ರೇಗೌಡ ತಮ್ಮ ದೂರಿನಲ್ಲಿ  ಆರೋಪಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಚಂದ್ರೇಗೌಡ ಅವರು, "ರೇಸ್ ಕುದುರೆಗಳಿಗೆ ಸಾಮಾನ್ಯವಾಗಿ ಎರಡು ದಿನಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. 15 ದಿನಗಳಿಗೊಮ್ಮೆ ಉದ್ದೀಪನ ಮದ್ದು ಪರೀಕ್ಷೆ ಮಾಡಲಾಗುತ್ತದೆ. ಆದರೆ  ಕಳೆದ 3 ವರ್ಷಗಳಿಂದ ಟರ್ಫ್ ಕ್ಲಬ್​ ನಲ್ಲಿ ಕುದುರೆಗಳಿಗೆ ಉದ್ದೀಪನ ಮದ್ದು ನೀಡಲಾಗುತ್ತಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ವೈದ್ಯಕೀಯ ಪರೀಕ್ಷೆ ವೇಳೆ ಇದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ. ಚಂದ್ರೇಗೌಡ ಅವರ  ದೂರನ್ನು ಆಧರಿಸಿ ಹೈಗ್ರೌಂಡ್ಸ್ ಪೊಲೀಸರು ಆರೋಪಿತ ಐದು ಮಂದಿ ವಿರುದ್ಧ ಉದ್ದೇಶಪೂರ್ವಕವಾಗಿ ಮಾಹಿತಿ ಮುಚ್ಚಿಟ್ಟಿರುವುದು, ತಪ್ಪು ಮಾಡಿದ ವ್ಯಕ್ತಿಯ ರಕ್ಷಣೆ, ಪ್ರಾಣಿಗಳಿಗೆ ವಿಷಾಹಾರ ಕೊಡುವುದು, ವಂಚನೆ, ಪಿತೂರಿ,  ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಗಟ್ಟುವ ಕಾಯ್ದೆಗಳ ಅಡಿಯಲ್ಲಿ ಎಫ್​ ಐಆರ್ ದಾಖಲಿಸಿಕೊಂಡಿದ್ದಾರೆ.

Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ಉಚಿತ ನೋಂದಣಿ !

Topics : Bengaluru, Crime, Horse Race, Bengaluru Turf Club, Drugs, ಬೆಂಗಳೂರು, ಅಪರಾಧ, ಕುದುರೆ ರೇಸ್, ಬೆಂಗಳೂರು ಟರ್ಫ್ ಕ್ಲಬ್, ಉದ್ದೀಪನ ಮದ್ದು
English summary
The Chief Executive Officer and an employee of the Bangalore Turf Club Ltd have been booked for giving performance-enhancing drugs to race horses. H S Chandre Gowda, a member of the managing committee of Karnataka Racehorse Owners Association, filed a complaint with the High Grounds police against them on Wednesday. He alleged that Nirmal Prasad, CEO of the turf club, and Padman Singh, an official, misused their power and made trainers G Sandu, Neel Darasha and S Dominic dope the horses. They have violated the procedures and codes of the National Anti Doping Agency and Prevention of Cruelty to Animals Act, he added.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement