Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Trupti Desai

ಹೋರಾಟಗಾರ್ತಿ ತೃಪ್ತಿ ದೇಸಾಯಿ ಶಬರಿಮಲೆ ಅಯ್ಯಪ್ಪ ದರ್ಶನ ಪಡೆಯದೆ ಪುಣೆಗೆ ಹಿಂದಿರುಗುವ ಸಾಧ್ಯತೆ!

AP CM Chandhrababu Naidu bars CBI from carrying out probes in Andhra Pradesh

ಕೇಂದ್ರಕ್ಕೆ ಸಿಎಂ ಚಂದ್ರಬಾಬು ನಾಯ್ಡು ಭರ್ಜರಿ ಟಾಂಗ್; ಆಂಧ್ರ ಪ್ರದೇಶದಲ್ಲಿ ಸಿಬಿಐ ತನಿಖೆಗಳಿಗೆ ತಡೆ!

Govt proposes to bear cost of 7 out of 14 weeks extended maternity leave: Sources

ಸರ್ಕಾರದಿಂದಲೇ 7 ವಾರದ ಹೆರಿಗೆ ರಜೆ ಸಂಬಳ; 'ಪ್ರಸೂತಿ ರಜೆ' ಬಗ್ಗೆ ಕೇಂದ್ರದ ಮಹತ್ವದ ಪ್ರಸ್ತಾವನೆ

Cyclone Gaja: 13 dead, over 81,000 people evacuated to 471 relief centres in Tamil Nadu

'ಗಜ' ಅಬ್ಬರಕ್ಕೆ ತಮಿಳುನಾಡಿನಲ್ಲಿ 13 ಮಂದಿ ಬಲಿ, 81 ಸಾವಿರ ಜನರ ಸ್ಥಳಾಂತರ

Tamil Nadu  lovers belong to different caste killed by family in Shivanasamudra

ಮರ್ಯಾದಾ ಹತ್ಯೆ: ಪ್ರೇಮಿಗಳನ್ನು ಶಿವನಸಮುದ್ರಕ್ಕೆ ಕರೆತಂದು ಕೊಂದ ತಮಿಳುನಾಡು ಕುಟುಂಬ!

PM Modi

ಕನಿಷ್ಟ 5 ವರ್ಷ ಗಾಂಧಿ ಕುಟುಂಬಕ್ಕೆ ಹೊರತಾದವರು ಕಾಂಗ್ರೆಸ್ ಅಧ್ಯಕ್ಷರಾಗಲಿ: ಕೈ ನಾಯಕರಿಗೆ ಮೋದಿ ಸವಾಲು

Arvind Kejriwal backs Chandrababu Naidu on barring CBI; also advises IT ban

ಸಿಬಿಐ ತನಿಖೆಗೆ ತಡೆ: ನಾಯ್ಡು ಬೆಂಬಲಕ್ಕೆ ನಿಂತ ಕೇಜ್ರಿವಾಲ್, ಐಟಿ ನಿಷೇಧಕ್ಕೆ ಸಲಹೆ

File Image

ಅಪರಿಚಿತರಿಗಿಂತಲೂ ಆನ್ ಲೈನ್ ಮೂಲಕ ಪರಿಚಯವಾದ ವ್ಯಕ್ತಿಗಳಿಂದ ಹೆಚ್ಚು ಅಪಾಯವಿದೆ: ಮೈಕ್ರೋಸಾಫ್ಟ್ ಅದ್ಯಯನ

Mithali Raj Ahead Of Rohit Sharma, Virat Kohli As Highest T20I Run-Scorer In India

ಕೊಹ್ಲಿ, ರೋಹಿತ್ ಶರ್ಮಾ ದಾಖಲೆ ಧೂಳಿಪಟ ಮಾಡಿದ ಮಹಿಳಾ ಕ್ರಿಕೆಟ್ ನ 'ಸಚಿನ್' ಮಿಥಾಲಿ ರಾಜ್!

Former army officer forays into Bollywood to tell

ಯುದ್ಧ ವೀರರ 'ಕಳೆದುಹೋದ ಕಥೆ'ಗಳನ್ನು ಹೇಳಲು ಬಾಲಿವುಡ್ ಗೆ ಮಾಜಿ ಸೇನಾಧಿಕಾರಿ ಎಂಟ್ರಿ

Deputy Cm Dr.g.Parameswar

ಇಂದಿರಾ ಕ್ಯಾಂಟೀನ್ ಗಳಲ್ಲಿ ಜನವರಿಯಿಂದ ಕಾಫಿ, ಟೀ ಲಭ್ಯ- ಡಾ. ಜಿ. ಪರಮೇಶ್ವರ್

CM HD Kumaraswamy launches Karnataka government

ಕಾವೇರಿ ಆನ್‌ಲೈನ್ ಸೇವೆಗೆ ಸಿಎಂ ಕುಮಾರಸ್ವಾಮಿ ಚಾಲನೆ

Ajith, Harbhajan, Vijay

ಅಜಿತ್ ಟು ವಿಜಯ್: ಕಾಲಿವುಡ್ ಶೈಲಿಯಲ್ಲಿ ಸಿಎಸ್ ಕೆ ಆಟಗಾರ ಹರ್ಭಜನ್ ಸಿಂಗ್ ಟ್ವೀಟ್!

ಮುಖಪುಟ >> ರಾಜ್ಯ

ತೈಲ ಬೆಲೆ ಏರಿಕೆ ವಿರೋಧಿಸಿ ಭಾರತ್‌ ಬಂದ್‌: ನಾಳೆ ಯಾವ ಸೇವೆ ಉಂಟು, ಏನಿರಲ್ಲ?

ಕೆಎಸ್ ಆರ್ ಟಿಸಿ ಬೆಂಬಲ ಹಿನ್ನಲೆ ಬಸ್ ಸಂಚಾರ ಸ್ಥಗಿತ, ಓಲಾ, ಉಬರ್ ಸೇವೆ ಕೂಡ ಬಂದ್
Bharat Bandh: Set to Hit Services in Tomorrow; Schools Likely to be Shut, Buses to Remain Off Roads

ಸಂಗ್ರಹ ಚಿತ್ರ

ಬೆಂಗಳೂರು: ತೈಲೋತ್ಪನ್ನಗಳ ದರ ಏರಿಕೆ ವಿರೋಧಿಸಿ ನಾಳೆ ನಡೆಯಲಿರುವ ಭಾರತ್ ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಹಲವು ಸೇವೆಗಳು ವ್ಯತ್ಯಯವಾಗಲಿದೆ.

ಪ್ರಮುಖವಾಗಿ ಬಂದ್ ಕರೆಗೆ ಎಐಟಿಯುಸಿ ಸಂಯೋಜಿತ ಕೆಎಸ್ಆರ್'ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್, ಓಲಾ-ಉಬರ್ ಟ್ಯಾಕ್ಸಿ ಫಾರ್ ಶೂರ್ ಮಾಲೀಕರ ಸಂಘ, ಕೆಲ ಆಟೋ ಚಾಲಕರನ ಸಂಘಗಳು ಬಂದ್'ಗೆ ಬೆಂಬಲ ಘೋಷಿಸಿದ್ದು, ನಾಳೆ ಬೆಳಿಗ್ಗೆ 10ರಿಂದ ಸಂಜೆ 6ರವರೆಗೂ ವಾಹನಗಳನ್ನು ರಸ್ತೆಗೆ ಇಳಿಸದಿರಲು ತೀರ್ಮಾನಿಸಿವೆ. 

ಇನ್ನು ಲಾರಿ ಮಾಲೀಕರು ಮತ್ತು ಏಜೆಂಟರುಗಳ ಸಂಘದ ಒಕ್ಕೂಟ, ಆಟೊ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ, ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ ಮತ್ತು ಖಾಸಗಿ ಬಸ್‌ ಮಾಲೀಕರ ಸಂಘವು ಬಂದ್‌ಗೆ ಪರೋಕ್ಷ ಬೆಂಬಲ ಘೋಷಿಸಿವೆಯಾದರೂ ವಾಹನ ಸೇವೆ ಸ್ಥಗಿತಗೊಳಿಸಿಲ್ಲ. ಹೀಗಾಗಿ, ಆಟೊ, ಖಾಸಗಿ ಬಸ್‌, ಸರಕು ಸಾಗಣೆ ವಾಹನಗಳು ಎಂದಿನಂತೆ ಸಂಚರಿಸಲಿವೆ. ವಿಮಾನ ನಿಲ್ದಾಣ, ಐಟಿ-ಬಿಟಿ ಕಂಪನಿಗಳು ಮತ್ತು ಇತರೆ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಸೇವೆ ಒದಗಿಸುತ್ತಿರುವ ವಾಹನಗಳು ಕೂಡ ಪ್ರತಿ ದಿನದಂತೆ ಕಾರ್ಯಾಚರಣೆಗೊಳ್ಳಲಿವೆ. ಹೂವು, ಹಣ್ಣು, ತರಕಾರಿ, ಅಡುಗೆ ಅನಿಲ, ಸಿಮೆಂಟ್‌, ಸ್ಟೀಲ್‌, ಮರಳು, ಜಲ್ಲಿ ಮತ್ತು ಇನ್ನಿತರೆ ಸರಕುಗಳ ಸಾಗಣೆಯಲ್ಲೂ ಯಾವುದೇ ವ್ಯತ್ಯಯವಾಗುವುದಿಲ್ಲ. 

ಗೈರಾದರೆ ಶಿಸ್ತು ಕ್ರಮ : ನೌಕರರಿಗೆ ಕೆಎಸ್‌ಆರ್‌ಟಿಸಿ ಎಚ್ಚರಿಕೆ
ಸಾರಿಗೆ ಸಂಸ್ಥೆಯ ನೌಕರರು ಬಸ್‌ ಸೇವೆ ಸ್ಥಗಿತಗೊಳಿಸಿ, ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ. ಈ ಮಧ್ಯೆ 'ಸೆ. 10ರಂದು ಕರ್ತವ್ಯಕ್ಕೆ ಗೈರಾಗುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಹಾಗೆಯೇ, ಸಂಬಳ ಕಡಿತ ಮಾಡಲಾಗುವುದು' ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಇದಕ್ಕೆ ತದ್ವಿರುದ್ಧ ಎಂಬಂತೆ  ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕಸ್ಸ್‌ರ್‍ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಅನಂತಸುಬ್ಬರಾವ್‌ ಹೇಳಿಕೆ ನೀಡಿದ್ದು, 'ಕೇಂದ್ರ ಸರ್ಕಾರವು ಇಂಧನ ಬೆಲೆ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ದಾಳಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ್‌ ಬಂದ್ ಗೆ ಬೆಂಬಲ ನೀಡಲಾಗಿದೆ. ಹೀಗಾಗಿ ಬಸ್‌ಗಳು ರಸ್ತೆಗಿಳಿಯುವುದಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಹೀಗಾಗಿ ಕೆಎಸ್ ಆರ್ ಟಿಸಿ ನೌಕರರ ಪರಿಸ್ಥಿತಿ ಇದೀಗ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

ಮೆಟ್ರೊ, ರೈಲು ಸಂಚಾರ ಸ್ಥಗಿತವಿಲ್ಲ 
ರೈಲುಗಳ ಸೇವೆ ಎಂದಿನಂತಿರಲಿದ್ದು, ಆದರೆ, ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಪರಿಸ್ಥಿತಿ ಆಧರಿಸಿ, ರೈಲುಗಳನ್ನು ಓಡಿಸಲು ತೀರ್ಮಾನಿಸಿದೆ. 
ಸಂಬಂಧಿಸಿದ್ದು...
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : New Delhi, Bharat Bandh, Petrol rate hike, KSRTC, Congress, ನವದೆಹಲಿ, ಭಾರತ್ ಬಂದ್, ಪೆಟ್ರೋಲ್ ದರ, ಕೆಎಸ್ ಆರ್ ಟಿಸಿ, ಕಾಂಗ್ರೆಸ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS