Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
India, US and Afghanistan target Pakistan over terrorism at UNSC

ಭಯೋತ್ಪಾದನೆ: ವಿಶ್ವಸಂಸ್ಥೆಯಲ್ಲಿ ಭಾರತ, ಅಮೆರಿಕ, ಅಫ್ಘಾನಿಸ್ತಾನಕ್ಕೆ ಪಾಕಿಸ್ತಾನ ಟಾರ್ಗೆಟ್

Cbi Judge Loya

ಸಿಬಿಐ ವಿಶೇಷ ನ್ಯಾಯಾಧೀಶ ಲೋಯಾ ಅನುಮಾನಾಸ್ಪದ ಸಾವು ಪ್ರಕರಣ: ಸೋಮವಾರ ವಿಚಾರಣೆ

T Suneel Kumar

ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆಗೆ ಮುಂದಾದರೆ ಗುಂಡಿಕ್ಕಿ: ನಗರ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್

India beat Pakistan by two wickets to win Blind Cricket World Cup

ಅಂಧರ ಕ್ರಿಕೆಟ್: ಪಾಕ್ ಮಣಿಸಿ ವಿಶ್ವಕಪ್ ಗೆದ್ದ ಭಾರತ

NEET 2018: Centre goes back on its earlier stance; says syllabus will remain the same

ನೀಟ್ ಪರೀಕ್ಷೆ 2018; ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ: ಯೂಟರ್ನ್ ಹೊಡೆದ ಕೇಂದ್ರ

BJP

ಕೇಂದ್ರದ ರೈತಪರ ಯೋಜನೆಗಳ ಜಾರಿಯಲ್ಲಿ ವೈಫಲ್ಯ, ರೈತರ ಬಗ್ಗೆ ಸಿಎಂ ಸಿದ್ದರಾಮಯ್ಯ ಬದ್ಧತೆ ಪ್ರಶ್ನಿಸಿದ ಬಿಜೆಪಿ

Bharip Bahujan Mahasangh chief and Dalit leader Prakash Ambedkar

ಮೋದಿಯವರ ಕಳಂಕರಹಿತ ವರ್ಚಸ್ಸಿನಿಂದಾಗಿ ಬಿಜೆಪಿ ಸೋಲುವುದು ಅಸಾಧ್ಯ: ಪ್ರಕಾಶ್ ಅಂಬೇಡ್ಕರ್

Donald trump

ಹಣ ಬಿಡುಗಡೆಗೆ ಸಿಗದ ಅನುಮೋದನೆ, ಅಮೆರಿಕ ಸರ್ಕಾರ ಸ್ಥಗಿತ!

Andre Krog

ನಿರ್ಲಕ್ಷ್ಯಕ್ಕೊಳಗಾದ ಆಫ್ರಿಕಾ ತಂಡದ ಬಸ್ ಚಾಲಕನಿಗೆ ನೆರವಾದ ಭಾರತೀಯ ಕ್ರಿಕೆಟಿಗರು!

You can soon surf internet mid-air, Trai gives approval for in-flight Wi-Fi

ಶೀಘ್ರದಲ್ಲೇ ವಿಮಾನದಲ್ಲೂ ವೈಫೈ ಸೌಲಭ್ಯ

JP Duminy

1 ಓವರ್‌ನಲ್ಲಿ 37 ರನ್ ಸಿಡಿಸಿ ವಿಶ್ವ ದಾಖಲೆ ಬರೆದ ಜೆಪಿ ಡುಮಿನಿ

Anant Kumar Hegde

ನಾಯಿಗಳು ಬೊಗಳಿದರೆ ತಲೆ ಕೆಡಿಸಿಕೊಳ್ಳುವುದಿಲ್ಲ: ಅನಂತ್ ಕುಮಾರ್ ಹೆಗಡೆ

29 year Old Man Murdered In Bengaluru Over Garbage Clash

ಬೆಂಗಳೂರು: ಕಸದ ಜಗಳ ಕೊಲೆಯಲ್ಲಿ ಅಂತ್ಯ, ಕಟ್ಟಡದಿಂದ ತಳ್ಳಿ ಯುವಕನ ಹತ್ಯೆ

ಮುಖಪುಟ >> ರಾಜ್ಯ

ತಂದೆ ಸಾವಿನ ಸುದ್ದಿ ತಿಳಿಸಲು ಜೈಲಿಗೆ ಆಗಮಿಸಿದ ಮಹಿಳೆ ತಡೆದ ಕಾರಾಗೃಹ ಸಿಬ್ಬಂದಿ!

Aruna, wife of inmate Rajanna, and her sister Prema (right) waiting outside Parappana Agrahara prison on Sunday.

ಪತಿ ಭೇಟಿಗಾಗಿ ಜೈಲಿನ ಬಳಿ ಕಾದು ಕುಳಿತಿರುವ ಅರುಣಾ ಹಾಗೂ ಆಕೆಯ ಸಹೋದರಿ ಪ್ರೇಮಾ

ಬೆಂಗಳೂರು: ಜೈಲಿನಲ್ಲಿ ನಾಲ್ಕು ದಿನಗಳಿಂದ ಗಲಾಟೆಗಳು ಹಾಗೂ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಕೈದಿಗಳನ್ನು ನೋಡಲು ಬಂದಿದ್ದ ಸಂಬಂಧಿಕರಿಗೆ ಭಾನುವಾರ ಅವಕಾಶ ನಿರಾಕರಿಸಲಾಗಿತ್ತು. 

ಈ ನಡುವೆ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯೊಬ್ಬರ ತಂದೆಯ ಸಾವಿನ ಸುದ್ದಿ ತಿಳಿಸಲು ಪತ್ನಿ ಬಂದಿದ್ದರು. ಆದರೆ, ಕೈದಿಯ ಭೇಟಿಗೆ ಅವಕಾಶ ನೀಡದೆ ಕಾರಾಗೃಹ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದಾರೆಂಬ ಆರೋಪಗಳು ಕೇಳಿ ಬರತೊಡಗಿವೆ. 

ತುಮಕೂರು ಜಿಲ್ಲೆ ಬೆಳ್ಳಾವಿ ಗ್ರಾಮದ ರಾಜಣ್ಣ ಎಂಬುವವರು ಕೊಲೆ ಪ್ರಕರಣವೊಂದರಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರಾಜಣ್ಣ ಅವರ ತಂದೆ ಲಕ್ಷ್ಮೀ ನರಸಯ್ಯ (68) ಭಾನುವಾರ ಮೃತಪಟ್ಟಿದ್ದು, ಪತಿಗೆ ವಿಷಯ ತಿಳಿಸಲು ರಾಜಣ್ಣ ಅವರ ಪತ್ನಿ ಅರುಣಾ ತಮ್ಮ ಸಂಬಂಧಿಕರೊಂದಿಗೆ ಭಾನುವಾರ ಬೆಳಿಗ್ಗೆ ಕಾರಾಗೃಹದ ಬಳಿ ಬಂದಿದ್ದರು. 

ಬೆಳಿಗ್ಗೆ 9.30ರ ಸುಮಾರಿಗೆ ತುಮಕೂರಿನಿಂದ ಅರುಣಾ ಅವರು ಸಂಬಂಧಿಕರೊಂದಿಗೆ ಜೈಲಿಗೆ ಬಂದಿದ್ದರು. ಜೈಲಿನ ಮುಖ್ಯದ್ವಾರದ ಬಳಿಯೇ ಹಲವು ಗಂಟೆಗಳು ಕಾದರೂ ರಾಜಣ್ಣ ಅವರನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ. ಅರುಣಾ ಅವರೊಂದಿಗೆ ಅಮಾನವೀಯವಾಗಿ ನಡೆದುಕೊಂಡಿರುವ ಜೈಲಿನ ಮಹಿಳಾ ಸಿಬ್ಬಂದಿಗಳು ಹಾಗೂ ಜೈಲಾಧಿಕಾರಿಗಳು ಜೈಲಿನ ಮುಖ್ಯದ್ವಾರದಿಂದ ಮುಖ್ಯರಸ್ತೆಯವರೆಗೂ ತಳ್ಳಿದ್ದಾರೆ. ತನ್ನ ಮಾವ ಮೃತಪಟ್ಟಿದ್ದು, ಪತಿಗೆ ವಿಷಯ ತಿಳಿಸಬೇಕೆಂದು ಕಾರಾಗೃಹ ಸಿಬ್ಬಂದಿ ಬಳಿ ಎಷ್ಟು ಕೇಳಿಕೊಂಡರೂ ಭೇಟಿಗೆ ಅವಕಾಶ ನೀಡಿಲ್ಲ. ಇದಾದ ಬಳಿಕ ಜೈಲಿನ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲು ಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ನಂತರ ಕಣ್ಣೀರು ಹಾಕುತ್ತಾ ಸಂಬಂಧಿಕರೊಂದಿಗೆ ಅರುಣಾ ಅವರು ಹೊರಬಂದಿದ್ದಾರೆ. 

ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಸಂಜೆ ವೇಳೆಗೆ ಅರುಣಾ ಅವರಿಗೆ ಪತಿ ರಾಜಣ್ಣನನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಜೈಲಿನಿಂದ ಕೈದಿಯನ್ನು ಕಳುಹಿಸಿಕೊಡಲು ನ್ಯಾಯಾಲಯದಿಂದ ಅನುಮತಿ ಬೇಕು. ನ್ಯಾಯಾಲಯದಿಂದ ಅನುಮತಿ ಪತ್ರ ತನ್ನಿ ಎಂದು ಹೇಳಿ ಕೈದಿಯ ಪತ್ನಿಯನ್ನು ಜೈಲು ಅಧಿಕಾರಿಗಳು ಮರಳಿ ಕಳುಹಿಸಿದ್ದಾರೆ. ಈ ಬಗ್ಗೆ ಜೈಲಿನ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನ ನಡೆಸಲಾಗಿತ್ತಾದರೂ, ಯಾವ ಅಧಿಕಾರಿಗಳು ಸಂಪರ್ಕಕ್ಕೆ ಸಿಗಲಿಲ್ಲ. 

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ತಮಿಳುನಾಡಿನ ಪ್ರಭಾವಿ ರಾಜಕಾರಣಿ ಶಶಿಕಲಾ, ವಿ.ನಟರಾಜನ್ ಸೇರಿದಂತೆ ಕೆಲ ಗಣ್ಯ ಕೈದಿಗಳಿಗೆ ಹಣ ಪಡೆದು ವಿಶೇಷ ಸೌಲಭ್ಯ ಕಲ್ಪಿಸಿದ್ದಾರೆಂದು ಬಂದೀಖಾನೆ ಇಲಾಖೆ ಮುಖ್ಯಸ್ಥರ ವಿರುದ್ಧವೇ ಡಿಐಜಿ ರೂಪಾ ವರದಿ ಸಲ್ಲಿಸಿದ್ದರು. ರೂಪಾ ಅವರ ಈ ವರದಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಇದಾದ ಬಳಿಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ 2ನೇ ವರದಿ ಸಲ್ಲಿಸಿದ್ದರು. 
Posted by: MVN | Source: TNIE

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Bengaluru, Central jail, Parappana Agrahara, Father, Death, Rajanna, Prison, ಬೆಂಗಳೂರು, ಕೇಂದ್ರ ಕಾರಾಗೃಹ, ಪರಪ್ಪನ ಅಗ್ರಹಾರ, ತಂದೆ, ಸಾವು, ರಾಜಣ್ಣ, ಕೈದಿ
English summary
The relatives of the prisoners have been denied permission on Sunday for the four days in jail and the protesters are on the run.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement