Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
PM Modi delivers keynote address at Singapore Fintech Festival

ಫಿನ್ ಟೆಕ್ ಫೆಸ್ಟಿವಲ್: ಡಿಜಿಟಲ್‌ ಪೇಮೆಂಟ್‌ನಿಂದ ಸಮಯ, ದೇಶಕ್ಕೆ ಹಣ ಉಳಿತಾಯ: ಪ್ರಧಾನಿ ಮೋದಿ

Indian-Origin Pregnant Woman Killed In Arrow Attack In UK; Baby Survives

ಬಾಣದಿಂದ ದಾಳಿ, ಭಾರತೀಯ ಮೂಲದ ಗರ್ಭಿಣಿ ಸಾವು, ಅಚ್ಚರಿ ರೀತಿಯಲ್ಲಿ ಹೊಟ್ಟೆಯಲ್ಲಿದ್ದ ಮಗು ರಕ್ಷಣೆ

Representational image

ಯೂ ಟರ್ನ್ ಹೊಡೆದ 'ಗಜ' ಚಂಡಮಾರುತ: ಚೆನ್ನೈಯಲ್ಲಿ ಭಾರೀ ಮಳೆ ಸಾಧ್ಯತೆ

President Kovind, PM Modi

ಚಾಚಾ ನೆಹರು 129ನೇ ಜನ್ಮದಿನ: ದೇಶದ ಮೊದಲ ಪ್ರಧಾನಿ ಸ್ಮರಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್

Representational image

ಇನ್ಮುಂದೆ ನಾಗರಿಕರಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ದಾಖಲಾತಿ ಹೊತ್ತೊಯ್ಯಲು ಅವಕಾಶ

Mystery lung problem forces Australian Cricketer Hastings to retirey

ಬೌಲಿಂಗ್ ವೇಳೆ ಶ್ವಾಸಕೋಶದಿಂದ ರಕ್ತ ಸ್ರಾವ, ಕ್ರಿಕೆಟ್ ಗೆ ವಿದಾಯ ಹೇಳಿದ ಜಾನ್​ ಹೇಸ್ಟಿಂಗ್ಸ್

CAG

ಮೋದಿಗೆ ಮುಜುಗರ ತಪ್ಪಿಸಲು ರಾಫೆಲ್, ನೋಟ್ ಬ್ಯಾನ್ ಬಗ್ಗೆ ಸಿಎಜಿ ವರದಿ ಉದ್ದೇಶಪೂರ್ವಕ ವಿಳಂಬ: ಮಾಜಿ ಅಧಿಕಾರಿಗಳು

'ದುರ್ವರ್ತನೆ ಆರೋಪ'ದಿಂದ ಆಘಾತವಾಗಿದೆ: ಬಿನ್ನಿ ಬನ್ಸಾಲ್‌

karnataka High court

ಸುಪ್ರೀಂ ಕೋರ್ಟ್, ಹೈ ಕೋರ್ಟ್ ತೀರ್ಪುಗಳ ಸಂಗ್ರಹ ಪುಸ್ತಕ ಬಿಡುಗಡೆ

Sabarimala Ayyappa Temple

ಶಬರಿಮಲೆ ವಿವಾದ: ತೀರ್ಪು ಮರುಪರಿಶೀಲನೆಗೆ 'ಸುಪ್ರೀಂ' ಒಪ್ಪಿಗೆ, ಅರ್ಜಿಗಳ ವಿಚಾರಣೆ ಜನವರಿ 22ಕ್ಕೆ

ಅಮೆರಿಕಾ ಚುನಾವಣೆಯಲ್ಲಿ ಅರಳುತ್ತಾ ಕಮಲ?

Sanjana, Ravi Srivatsa

#MeToo ಆರೋಪ: ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ ಸಂಜನಾ ಹೇಳಿದ್ದೇನು?

Mumbai: Two dead after fire breaks out in Slum Rehabilitation Authority building

ಮುಂಬೈ: ಪುನರ್ವಸತಿ ಪ್ರಾಧಿಕಾರದ ಕಟ್ಟಡದಲ್ಲಿ ಅಗ್ನಿ ಅವಘಡ, ಇಬ್ಬರು ಸಾವು

ಮುಖಪುಟ >> ರಾಜ್ಯ

ಉತ್ತರ ಕರ್ನಾಟಕದ ಗನ್ ಮಾಫಿಯಾದ ಕರಾಳ ಮುಖ ತೋರಿಸುವ ಗೌರಿ ಲಂಕೇಶ್ ಹತ್ಯೆ

Representational image

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಗೌರಿ ಲಂಕೇಶ್ ಹತ್ಯೆಯ ಪ್ರಕರಣವನ್ನು ಭೇದಿಸುತ್ತಾ ಹೋದಂತೆ ತನಿಖಾಧಿಕಾರಿಗಳಿಗೆ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ವಿಜಯಪುರ, ಹುಬ್ಬಳ್ಳಿಗಳಲ್ಲಿ ಶಸ್ತ್ರಾಸ್ತ್ರ ಮಾಫಿಯಾಯ ಕರಾಳ ಮುಖವನ್ನು ತೆರೆದುಕೊಳ್ಳುತ್ತದೆ. ಹಲವು ದಶಕಗಳವರೆಗೆ ವಿಜಯಪುರದಲ್ಲಿ ಗ್ಯಾಂಗ್ ನಾಯಕರು ಮಹಾರಾಷ್ಟ್ರದ ಕಳ್ಳಸಾಗಣೆದಾರರನ್ನು ಶಸ್ತ್ರಾಸ್ತ್ರ ಪೂರೈಕೆಗೆ ಅವಲಂಬಿಸಿಕೊಂಡಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ವಿಜಯಪುರ ಮತ್ತು ಇಂಡಿ ತಾಲ್ಲೂಕಿನ ಸ್ಥಳೀಯರು ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಸುವ ಉದ್ಯಮದಲ್ಲಿ ತೊಡಗಿದ್ದಾರೆ.

ರಾಜ್ಯದ ಅನೇಕ ಕೊಲೆ ಕೇಸುಗಳು ನಾಡಪಿಸ್ತೂಲ್ ಗಳ ಮೂಲಕ ನಡೆಯುತ್ತಿವೆ. ವಿಜಯಪುರ ಮತ್ತು ಇಂಡಿ ಭಾಗಗಳಲ್ಲಿ ಈ ಪಿಸ್ತೂಲ್ ಮಾರಾಟಗಾರರು ಸಕ್ರಿಯವಾಗಿದ್ದಾರೆ ಎನ್ನುತ್ತಾರೆ ಪೊಲೀಸರು. ಇವರು ನೆರೆಯ ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕಗಳಿಂದ ದೇಶಿ ನಿರ್ಮಿತ ಪಿಸ್ತೂಲ್ ಗಳನ್ನು ಖರೀದಿಸುತ್ತಾರೆ. ಇವರು ದೊಡ್ಡ ದೇಶದ ವಿವಿಧ ಭಾಗಗಳಿಂದ ಪಿಸ್ತೂಲ್ ನ್ನು ಭಾರೀ ಪ್ರಮಾಣದಲ್ಲಿ ಖರೀದಿಸುವವರಾಗಿದ್ದಾರೆ. ಡಜನ್ ಗಟ್ಟಲೆ ಪಿಸ್ತೂಲ್ ಗಳನ್ನು ಖರೀದಿಸುವ ವಿಜಯಪುರದ ವ್ಯಾಪಾರಿಗಳು ಪ್ರತಿ ಪಿಸ್ತೂಲ್ ಗೆ 15ರಿಂದ 20 ಸಾವಿರದವರೆಗೆ ನೀಡಿ ಅದನ್ನು 60 ಸಾವಿರಕ್ಕೆ ಮಾರಾಟ ಮಾಡುತ್ತಾರೆ ಎನ್ನುತ್ತಾರೆ ಪೊಲೀಸರು.

ಇತ್ತೀಚಿನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಪರವಾನಗಿ ಹೊಂದಿದ ಗನ್ ಮಾಲಿಕರಿಗೆ ತಮ್ಮ ಪಿಸ್ತೂಲ್ ಗಳನ್ನು ಪೊಲೀಸರಿಗೆ ನೀಡುವಂತೆ ಸೂಚಿಸಲಾಗಿತ್ತು. ನಂತರ ಪೊಲೀಸರು ಕೆಲವು ಕಡೆಗಳಲ್ಲಿ ದಾಳಿ ನಡೆಸಿದ್ದ ಸಂದರ್ಭದಲ್ಲಿ ಹಲವು ನಾಡಪಿಸ್ತೂಲ್ ಗಳು ಸಿಕ್ಕಿವೆ. ಕೌಟುಂಬಿಕ ಕಲಹ, ವಿವಾದ, ಕೊಲೆ, ಗ್ಯಾಂಗ್ ವಾರ್ ಮತ್ತು ಮನೆ ಕಳ್ಳತನಕ್ಕೆ ಸಂಬಂಧಪಟ್ಟಂತೆ ಪಿಸ್ತೂಲ್ ಗಳನ್ನು ಇರಿಸಲಾಗಿದೆ ಎನ್ನುತ್ತಾರೆ ಪೊಲೀಸರು.

ಪಿಸ್ತೂಲ್ ಕಳ್ಳಸಾಗಣೆದಾರರು ಸುಪಾರಿ ಹಂತಕರಾಗಿ ಬದಲಾದ ಉದಾಹರಣೆಗಳಿವೆ. ಒಬ್ಬ ವ್ಯಕ್ತಿ ಯಾರನ್ನಾದರೂ ಕೊಲ್ಲಲು ಅಥವಾ ತನ್ನ ಭದ್ರತೆಗೆ ಪಿಸ್ತೂಲ್ ನ್ನು ಇಟ್ಟುಕೊಂಡಿರಬಹುದು. ಹಲವು ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿ ತನಗೆ ಹಗೆಯಿರುವ ವ್ಯಕ್ತಿಯನ್ನು ಕೊಲ್ಲಲು ಸಾಧ್ಯವಾಗುತ್ತಿಲ್ಲ ಎಂದು ಭಾವಿಸಿದಾಗ ಅಥವಾ ಆತನಿಂದ ಬೆದರಿಕೆ ಬಂದಾಗ ಆಗ ಕಳ್ಳಸಾಗಣೆದಾರರಿಗೆ ಕೆಲಸ ಮಾಡಿಕೊಡಲು ಹೇಳಬಹುದು. ಇದೆಲ್ಲದಕ್ಕೂ ಬಹಳ ಖರ್ಚಾಗುತ್ತದೆ. ಹೀಗಾಗಿ ಗೌರಿ ಲಂಕೇಶ್ ಹತ್ಯೆ ಮತ್ತು ಎಂ ಎಂ ಕಲ್ಬುರ್ಗಿ ಹತ್ಯೆ ಕೇಸಿನಲ್ಲಿ ನಾಡಪಿಸ್ತೂಲ್  ವ್ಯಾಪಾರಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ಪೊಲೀಸರು ಹೇಳುತ್ತಾರೆ.

ಕಳೆದ ಆರು ತಿಂಗಳಲ್ಲಿ ಪೊಲೀಸರು ರೌಡಿ ಶೀಟರ್ ಗಳು ಪೆರೇಡ್ ನಿಲ್ಲಬೇಕೆಂದು ಕಡ್ಡಾಯ ಮಾಡಿದ್ದರು. ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಸಹಿ ಮಾಡುವಂತೆ ಕೂಡ ಹೇಳಲಾಗಿತ್ತು. ಇಂತಹ ಕ್ರಮಗಳು ಭೀಮಾ ನದಿ ತೀರದಲ್ಲಿ ಅಪರಾಧಗಳ ಸಂಖ್ಯೆಯನ್ನು ನಿಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪೊಲೀಸ್ ಮೂಲಗಳು ಹೇಳುತ್ತವೆ.

Posted by: SUD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Arms mafia, Gauri Lankesh murder case, Vijayapura, Indi, Gun supply, ಗನ್ ಮಾಫಿಯಾ, ಗೌರಿ ಲಂಕೇಶ್ ಹತ್ಯೆ ಪ್ರಕರಣ, ವಿಜಯಪುರ, ಇಂಡಿ,

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS