Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Supreme Court

ಚುನಾವಣೆಯಲ್ಲಿ ಕಳಂಕಿತರ ಸ್ಪರ್ಧೆ ನಿರ್ಬಂಧಿಸಲಾಗದು: ಸಂಸತ್ತಿನಲ್ಲಿ ನೀವೇ ಕಾನೂನು ರೂಪಿಸಿ ಎಂದ 'ಸುಪ್ರೀಂ'

ಸಂಗ್ರಹ ಚಿತ್ರ

ಹೃದಯ ವಿದ್ರಾವಕ ಘಟನೆ: ಅಪಘಾತವಾಗಿ ರಕ್ತದ ಮಡುವಿನಲ್ಲಿದ್ದ ಗಂಡನಿಗೆ ಪತ್ನಿ(ನರ್ಸ್)ಯಿಂದಲೇ ಚಿಕಿತ್ಸೆ, ಸಾವು!

ಬಾಲಭಾಸ್ಕರ್ ಕುಟುಂಬ

ಭೀಕರ ಅಪಘಾತ: ಖ್ಯಾತ ಗಾಯಕ ಬಾಲಭಾಸ್ಕರ್, ಪತ್ನಿ ಸ್ಥಿತಿ ಚಿಂತಾಜನಕ, ಮುದ್ದಾದ ಮಗು ದುರ್ಮರಣ!

ಸರ್ಫರಾಜ್-ಪಾಕ್ ಯುವತಿ

ಪಾಕ್ ವಿರುದ್ಧದ ಗೆಲುವನ್ನು ಭಾರತೀಯರಷ್ಟೇ ಅಲ್ಲ, ಪಾಕ್‌ನವರು ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದ್ದೇಕೆ ಗೊತ್ತ?

Rahul gandhi

ರಫೇಲ್ ಒಪ್ಪಂದ ವಿಷಯ ಕೇವಲ ಆರಂಭವಷ್ಟೇ: ಪ್ರಧಾನಿ ಮೋದಿಗೆ ಕಠಿಣ ಸಂದೇಶ ರವಾನಿಸಿದ ರಾಹುಲ್

NASA to conduct contest to name next Mars rover in 2019

ಮುಂದಿನ ಮಾರ್ಸ್ ರೋವರ್ ಹೆಸರಿಸಲು ನಾಸಾದಿಂದ ವಿದ್ಯಾರ್ಥಿಗಳಿಗೆ ಸ್ಪರ್ಧೆ

Heggodu Prasanna

ರಂಗಕರ್ಮಿ ಹೆಗ್ಗೋಡು ಪ್ರಸನ್ನಗೆ 'ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿ'

File Image

ತನ್ನ ಸಲಿಂಗಿ ಸಹವರ್ತಿಯೊಡನೆ ವಾಸಿಸಲು ಮಹಿಳೆಗೆ ಕೇರಳ ಹೈಕೋರ್ಟ್ ಅನುಮತಿ

Instagram founders Mike Krieger (L) and Kevin Systrom. (Photo | File/ Reuters)

ಫೇಸ್ ಬುಕ್ ಸಂಸ್ಥೆ ತೊರೆದ ಇನ್ಸ್ಟಾಗ್ರಾಮ್ ಸಹ ಸಂಸ್ಥಾಪಕರಾದ ಕೆವಿನ್ ಸಿಸ್ಟ್ರೋಮ್, ಮೈಕ್ ಕ್ರೆಗರ್

Cricket is a captain

ಇದು ಕ್ರಿಕೆಟ್.. ಫುಟ್ಬಾಲ್ ಅಲ್ಲ.. ಕೋಚ್ ಗೆ ಹಿಂದಿನ ಕುರ್ಚಿಯೇ ಉತ್ತಮ: ಸೌರವ್ ಗಂಗೂಲಿ ಹೇಳಿದ್ದು ಯಾರಿಗೆ?

Luka Modric ends Ronaldo-Messi era to be crowned FIFA

ಮೆಸ್ಸಿ, ರೊನಾಲ್ಡೋ ದಶಕದ ಪಾರಮ್ಯ ಮುರಿದ ಲೂಕಾ ಮೋಡ್ರಿಕ್!

Manohar Parrikar

ಅನಾರೋಗ್ಯಕ್ಕೀಡಾದ ಪರಿಕ್ಕರ್ ಅವರನ್ನೇ ಗೋವಾ ಸಿಎಂ ಆಗಿಸುವುದು ಬಿಜೆಪಿಯ ಆಮಾನವೀಯ ರಾಜಕೀಯದಾಟ: ಶಿವಸೇನಾ

Lance Naik Sandeep Singh

ಉಗ್ರರ ಜೊತೆ ಕಾದಾಟ: ಸರ್ಜಿಕಲ್ ಸ್ಟ್ರೈಕ್ ಹೀರೋ ಲಾನ್ಸ್ ನಾಯಕ್ ಸಂದೀಪ್ ಸಿಂಗ್ ಹುತಾತ್ಮ

ಮುಖಪುಟ >> ರಾಜ್ಯ

ಗೌರಿ ಹತ್ಯೆ ಪ್ರಕರಣ: ಹತ್ಯೆಗೆ ಬಳಸಲಾಗಿದ್ದ ಬೈಕ್ ಪತ್ತೆ ಹಚ್ಚಿದ ಎಸ್ಐಟಿ

ಮಹಾರಾಷ್ಟ್ರ ರಾಜ್ಯದ ನಾಂದೇಡ್ ಎಂಬಲ್ಲಿ ಬೈಕ್ ಪತ್ತೆ: ಎಸ್ಐಟಿ ಅಧಿಕಾರಿಗಳು
Gauri Lankesh

ಗೌರಿ ಲಂಕೇಶ್

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೆ ಹಂತಕರು ಬಳಸಿದ್ದ ಬೈಕ್ ಮಹಾರಾಷ್ಟ್ರ ರಾಜ್ಯದಲ್ಲಿ ಪತ್ತೆ ಹಚ್ಚಲಾಗಿದೆ. 

ಮಹಾರಾಷ್ಟ್ರದ ಉಗ್ರ ನಿಗ್ರಹ ದಳ (ಎಟಿಎಸ್) ನೀಡಿದ ಮಾಹಿತಿ ಆಧರಿಸಿ ಮಹಾರಾಷ್ಟ್ರದ ನಾಂದೇಡ್ ಎಂಬಲ್ಲಿ ಕರ್ನಾಟಕ ವಿಶೇಷ ತನಿಖಾ ದಳ (ಎಸ್ಐಟಿ) ಪೊಲೀಸರು ಬೈಕ್ ಹತ್ತೆ ಹಚ್ಚಿದ್ದಾರೆ. 

ಹತ್ಯೆಗೆ ಬಳಸಲಾಗಿದ್ದ ಕಪ್ಪು ಬಣ್ಣದ ಫ್ಯಾಷನ್ ಬೈಕ್'ನ್ನು ಮಹಾರಾಷಅಟ್ರದ ಉಗ್ರ ನಿಗ್ರಹ ದಳದ ಅಧಿಕಾರಿಗಳು ಬಂಧಿತ ಶರತ್ ಕಸಲ್ಕರ್ ನಿಂದ ವಶಕ್ಕೆ ಪಡೆದುಕೊಂಡಿದ್ದರು. ಇದೇ ಫ್ಯಾಷನ್ ಬೈಕ್'ನ್ನು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದ 2017ರ ಸೆಪ್ಟೆಂಬರ್ 5 ರಂದು ಶಂಕಿತ ಶೂಟರ್ ಪರಶುರಾಮ್ ವಾಗ್ಮೋರೆ ಮತ್ತು ಗಣೇಶ್ ಮಿಸ್ಕಿನ್ ಅವರು ಕೃತ್ಯಕ್ಕೆ ಬಳಸಿದ್ದಾರೆಂದು ಎಸ್ಐಟಿ ಮೂಲಗಳು ಮಾಹಿತಿ ನೀಡಿವೆ. 

ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಶಂಕಿತ ಆರೋಪಿಯಾಗಿರುವ ಶಿವಸೇನೆಯ ಮಾಜಿ ಕಾರ್ಪೊರೇಟರ್ ಶ್ರೀಕಾಂತ್ ಪಂಗರ್ಕರ್ ನೀಡಿದ ಮಾಹಿತಿಯನ್ನು ಮಹಾರಾಷ್ಟ್ರ ಎಟಿಎಸ್ ಕರ್ನಾಟಕ ಪೊಲೀಸರಿಗೆ ನೀಡಿತ್ತು. ಅದರ ಆಧಾರದಲ್ಲಿ ಬೈಕ್ ಪತ್ತೆ ಹಚ್ಚಲಾಗಿದೆ. 

ಗೌರಿ ಲಂಕೇಶ್ ಅವರ ಹತ್ಯೆಗೂ ಮುನ್ನ ಸೆ.5ರ ಸಂಜೆ 4 ಗಂಟೆ ಸುಮಾರಿಗೆ ಸುಧನ್ವಗೊಂದಲೇಕರ್ ಗೌರಿ ಲಂಕೇಶ್ ಮನೆಯ ಅಕ್ಕ-ಪಕ್ಕದ ರಸ್ತೆಗಳಲ್ಲಿ ಸುತ್ತಾಡುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಮೂಲಕ ಹತ್ಯೆ ನಡೆದ ದಿನ ಗೊಂದಲೇಕರ್ ಬೆಂಗಳೂರಿನಲ್ಲಿದ್ದ ಎಂಬುದನ್ನೂ ಮೂಲಗಳು ಖಚಿತಪಡಿಸಿದ್ದವು.
 
ಹತ್ಯೆ ಬಳಿಕ ನೇರವಾಗಿ ಗಣೇಶ್ ಮಿಸ್ಕಿನ್ ಮತ್ತು ವಾಗ್ಮೋರೆ ಬೈಕರನ್ನು ಕುಂಬಳಗೊಡಿನಲ್ಲಿದ್ದ ಮೋಹನ್ ನಾಯಕ್ ಮನೆಯ ಬಳಿ ಹೋಗಿ ನಲ್ಲಿಸಿದ್ದರು. 15 ದಿನಗಳ ಬಳಿಕ ಮತ್ತೊಬ್ಬ ವ್ಯಕ್ತಿ ನಗರಕ್ಕೆ ಬಂದು ಬೈಕ್ ತೆಗೆದುಕೊಂಡು ಹೋಗಿದ್ದಾನೆ. ಇದಕ್ಕೂ ಮುನ್ನ ನಗರಕ್ಕೆ ಬಂದಿದ್ದ ಗೊಂದಲೇಕರ್ ರೈಲಿನ ಮೂಲಕ ನಗರಕ್ಕೆ ಬೈಕ್ ತಂದಿರುವ ಸಾಧ್ಯತೆಗಳಿವೆ. 

ಗೌರಿ ಹತ್ಯೆ ಪ್ರಕರಣದಲ್ಲಿ ಗೊಂದಲೇಕರ್ ಪಾತ್ರ ಇರುವುದು ಸ್ಪಷ್ಟವಾಗಿದೆ. ಈ ಎಲ್ಲಾ ಅಂಶಗಳನ್ನು ಅಲ್ಲಿನ ಅಧಿಕಾರಿಗಳ ಜೊತೆ ವಿನಿಮಯ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಆರೋಪಿ ಗೊಂದಲೇಕರ್ ಅಲ್ಲಿನ ಪೊಲೀಸರ ವಶದಲ್ಲಿದ್ದು, ಆತನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುವುದು ಎಂದು ಎಸ್ಐಟಿ ಮೂಲಗಳು ಮಾಹಿತಿ ನೀಡಿವೆ. 
Posted by: MVN | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Gauri Lankesh, Murder, Bike, Maharashtra, SIT, ಗೌರಿ ಲಂಕೇಶ್, ಕೊಲೆ, ಬೈಕ್, ಮಹಾರಾಷ್ಟ್ರ, ಎಸ್ಐಟಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS