Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Mehbooba Mufti submits resignation to Governor after BJP pulls out from Jammu and Kashmir coalition government

ಕಾಶ್ಮೀರ: ರಾಜ್ಯಪಾಲರಿಗೆ ರಾಜಿನಾಮೆ ಸಲ್ಲಿಸಿದ ಸಿಎಂ ಮುಫ್ತಿ, ರಾಷ್ಟ್ರಪತಿ ಆಡಳಿತ ಜಾರಿ ಸಾಧ್ಯತೆ

Fuel tanker topples over and catches fire near Kadur in Chikmagalur district

ಚಿಕ್ಕಮಗಳೂರು: ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ 15 ಮನೆಗಳಿಗೆ ಬೆಂಕಿ, ಓರ್ವ ಸಜೀವ ದಹನ

Kumara swamy

ಕುಮಾರಸ್ವಾಮಿಯವರೇ ರಾಜಿನಾಮೆ ಯಾವಾಗ? ಫೇಸ್ ಬುಕ್ ಪೋಸ್ಟ್ ಶೇರ್ ಮಾಡಿದ್ದ ಪೇದೆ ಅಮಾನತು!

AAP MLAs forced out of L-G

ದೆಹಲಿ ಲೆಫ್ಟಿನೆಂಟ್ ಗವರ್ನರ್ ನಿವಾಸದಿಂದ ಆಪ್ ಶಾಸಕರನ್ನು ಬಲವಂತವಾಗಿ ಹೊರಹಾಕಿದ ಪೊಲೀಸರು

India opener Shikhar Dhawan moves to career-best 24th place in ICC Test rankings

ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ವೃತ್ತಿಜೀವನದ ಶ್ರೇಷ್ಠ 24 ನೇ ಸ್ಥಾನಕ್ಕೇರಿದ ಶಿಖರ್ ಧವನ್

Dineshwar Sharma may be next Kashmir goveror

ಕಾಶ್ಮೀರ ನೂತನ ರಾಜ್ಯಪಾಲರಾಗಿ ದಿನೇಶ್ವರ್ ಶರ್ಮಾ ನೇಮಕ ಸಾಧ್ಯತೆ

HD Kumaraswamy

ಕಾವೇರಿ ನೀರು ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಕರ್ನಾಟಕ ಧಿಕ್ಕರಿಸುವುದಿಲ್ಲ: ಸಿಎಂ ಕುಮಾರಸ್ವಾಮಿ

Air India

ಸದ್ಯಕ್ಕೆ ಏರ್ ಇಂಡಿಯಾ ಪಾಲು ಮಾರಾಟದ ಪ್ರಯತ್ನ ಕೈಬಿಟ್ಟ ಕೇಂದ್ರ ಸರ್ಕಾರ

Representative image

ಬೆಂಕಿ ಬಿದ್ದು ನಾಶಗೊಂಡಿದ್ದ ಹಿಂದುಗಳ ಮನೆಗಳನ್ನು ಪುನರ್ ನಿರ್ಮಿಸಿ ಮುಸ್ಲಿಮರ ಕೋಮು ಸೌಹಾರ್ದತೆ!

Mars to come closest to Earth in 15 years

ಬಾಹ್ಯಾಕಾಶ ವಿಸ್ಮಯ: 15 ವರ್ಷಗಳ ಬಳಿಕ ಭೂಮಿಯ ಸಮೀಪಕ್ಕೆ ಮಂಗಳ

N Mahesh  placed the slippers of a seer on his shoulders

ಅಮ್ಮ ಭಗವಾನ್​ ಪಾದುಕೆಯನ್ನು ಮೈಗೆ ಸವರಿಕೊಂಡ ಶಿಕ್ಷಣ ಸಚಿವ ಎನ್.ಮಹೇಶ್: ವಿಡಿಯೋ ವೈರಲ್

Travel to Sirsi in Uttara Kannada district and get Blessed with divine bounty

ಈ ಮಳೆಗಾಲದಲ್ಲಿ ಶಿರಸಿಗೆ ಬನ್ನಿ, ದೈವಿಕ ನಿಸರ್ಗ ಸೌಂದರ್ಯವನ್ನು ಆನಂದಿಸಿ

D Jayakumar, Tamil Nadu Minister

ಕಾವೇರಿ ಕುರಿತು 'ಸುಪ್ರೀಂ' ಸ್ಪಷ್ಟ ನಿರ್ದೇಶನ, ಹೆಚ್'ಡಿಕೆ-ಮೋದಿ ಭೇಟಿ ವ್ಯರ್ಥ ಸಮಯ: ತಮಿಳುನಾಡು ಸಚಿವ

ಮುಖಪುಟ >> ರಾಜ್ಯ

ನೀರಿನ ಬಿಲ್ ಪಾವತಿ ಮಾಡುವಂತೆ ನಾಲ್ಕು ದಿನದಿಂದ ಉಪವಾಸ ಸತ್ಯಾಗ್ರಹ!

65 ವರ್ಷದ ಆರ್ ಮುರಳೀಧರನ್ ರ ಸತ್ಯಾಗ್ರಹಕ್ಕೆ ಆರಂಭಿಕ ಜಯ, 21 ಮಂದಿಯ ಪೈಕಿ ಐವರಿಂದ ಪಾವತಿಗೆ ನಿರ್ಧಾರ
It’s 5 out of 21 so far for fasting crusader

ಸತ್ಯಾಗ್ರಹ ನಿರತ ಮುರಳೀಧರನ್

ಬೆಂಗಳೂರು: ಬಾಕಿ ಉಳಿಸಿಕೊಂಡಿರುವ ನೀರಿನ ಬಿಲ್ ಪಾವತಿ ಮಾಡುವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಹಿರಿಯ ನಾಗರಿಕರೊಬ್ಬರು ಕಳೆದ ನಾಲ್ಕು ದಿನಗಳ ಹಿಂದೆ ಆರಂಭಿಸಿರುವ ಉಪವಾಸ ಸತ್ಯಾಗ್ರಹಕ್ಕೆ ಆರಂಭಿಕ  ಜಯ ದೊರೆತಿದೆ.

ಬಿಲ್ ಪಾವತಿ ಬಾಕಿ ಉಳಿಸಿಕೊಂಡಿರುವ 21 ಮನೆಗಳ ಪೈಕಿ ಐದು ಮನೆ ಮಾಲೀಕರು ಬಿಲ್ ಪಾವತಿಗೆ ಮುಂದಾಗಿದ್ದು, ಉಳಿದವರೂ ಕೂಡ ಶೀಘ್ರದಲ್ಲೇ ಬಿಲ್ ಪಾವತಿ ಮಾಡಲಿದ್ದಾರೆ ಎಂದು ಮುರಳೀಧರನ್ ವಿಶ್ವಾಸ  ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಹಲಸೂರು ಕರೆ ಸಮೀಪದ ಕಲಹಳ್ಳಿ 2ನೇ ಹಂತದಲ್ಲಿರುವ ಬಿಡಿಎ ಅಪಾರ್ಟ್ ಮೆಂಟ್ ನ ಸುಮಾರು 21 ಮನೆಗಳ ನಿವಾಸಿಗಳು 40 ತಿಂಗಳಿನಿಂದ ಬಿಲ್ ಬಾಕಿ ಉಳಿಸಿಕೊಂಡಿದ್ದು, 2.69 ಲಕ್ಷ ಹಣ  ಪಾವತಿಯಾಗಬೇಕಿದೆ.

ಇದೇ ಕಾರಣಕ್ಕಾಗಿ ಕಳೆದ ಮಾರ್ಚ್ 16ರಂದು 65 ವರ್ಷದ ಆರ್ ಮುರಳೀಧರನ್ ಅವರು ಬಿಲ್ ಪಾವತಿ ಮಾಡುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಇಂದಿಗೆ ಉಪವಾಸ ಸತ್ಯಾಗ್ರಹ ಐದನೇ ದಿನಕ್ಕೆ  ಕಾಲಿಟ್ಟಿದ್ದು, ಇದೀಗ ಆಪಾರ್ಟ್ ಮೆಂಟ್ ನ 5 ಮನೆಗಳ ಮಾಲೀಕರು ಮುರಳೀ ಧರನ್ ಅವರ ಸತ್ಯಾಗ್ರಹಕ್ಕೆ ಸೋತು ಬಿಲ್ ಪಾವತಿಗೆ ನಿರ್ಧರಿಸಿದ್ದಾರೆ. ಅದರಂತೆ 2.69 ಲಕ್ಷ ರುಗಳ ಪೈಕಿ ಈಗಾಗಲೇ ಸುಮಾರು 44 ಸಾವಿರ ರು.ಬಿಲ್  ಪಾವತಿ ಹಣ ಮುರಳೀಧರನ್ ಅವರ ಕೈ ಸೇರಿದ್ದು, ಉಳಿದವರೂ ಕೂಡ ಬಿಲ್ ಪಾವತಿ ಮಾಡುವವರೆಗೂ ತಾವು ಸತ್ಯಾಗ್ರಹ ಕೈ ಬಿಡುವುದಿಲ್ಲ ಎಂದು ಮುರಳೀಧರನ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮುರಳೀಧರನ್ ಅವರು, ಎಲ್ಲರೂ ಬಿಲ್ ಪಾವತಿ ಮಾಡುವವರೆಗೂ ನಾನು ನನ್ನ ಸತ್ಯಾಗ್ರಹ ಕೈ ಬಿಡುವುದಿಲ್ಲ. ನನ್ನ ಸತ್ಯಾಗ್ರಹಕ್ಕೆ ಇಲ್ಲಿನ ನಿವಾಸಿಗಳು ಕೂಡ ಕೈ ಜೋಡಿಸಿದ್ದಾರೆ. ನಿತ್ಯ ವಾಟ್ಸಪ್ ಮತ್ತು  ದೂರವಾಣಿ ಮೂಲಕ ಹಲವರು ಕರೆ ಮಾಡಿ ನನ್ನನ್ನು ಹುರಿದುಂಬಿಸುತ್ತಾರೆ. ಸಾಲದು ಎಂಬಂತೆ ಇಲ್ಲಿನ ಕೆಲ ಯುವಕರು ರಾತ್ರಿ ವೇಳೆ ನನ್ನ ಟೆಂಟ್ ಗೆ ಆಗಮಿಸಿ ಸೊಳ್ಳೆ ಬತ್ತಿಗಳನ್ನು ಹಚ್ಚುತ್ತಾರೆ. ಇದರಿಂದ ನಾನು ರಾತ್ರಿ ವೇಳೆ  ಸೊಳ್ಳೆ ಕಾಟವಿಲ್ಲದೇ ನಿದ್ರಿಸಬಹುದು. ಅಂತೆಯೇ ನನ್ನೊಂದಿಗೆ ಸ್ಥಳೀಯ ನಿವಾಸಿಗಳು ಕೂಡ ನನ್ನ ಜೊತೆ ಟೆಂಟ್ ನಲ್ಲಿ ಮಲಗುತ್ತಾರೆ. ಹಗಲು ಹೊತ್ತಿನಲ್ಲಿ ನನ್ನ ಬಳಿ ಬರುವ ಹಲವರು ನನಗೆ ಮಜ್ಜಿಗೆ ಹಾಲು ನೀಡುತ್ತಾರೆ.  ಉಪವಾಸದಿಂದ ನನ್ನ  ಆರೋಗ್ಯ ಕೆಡದಿರಲಿ ಎಂಬ ಉದ್ದೇಶದಿಂದ. ಇವರೆಲ್ಲರ ಪ್ರೀತಿಯಿಂದ ನಾನು ಈ ಕೆಲಸದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ಎಲ್ಲ ನಿವಾಸಿಗಳು ಖಂಡಿತಾ ಬಿಲ್ ಪಾವತಿ ಮಾಡುತ್ತಾರೆ ಎಂದು  ಮುರಳೀಧರನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಬಿಲ್ ಪಾವತಿ ಮಾಡದೇ ಸರ್ಕಾರವನ್ನು ಹೇಗೆ ವಂಚಿಸಬೇಕು ಎನ್ನುವ ಮಂದಿಯೊಟ್ಟಿಗೆ ಮುರಳೀಧರನ್ ರಂತಹ ವ್ಯಕ್ತಿಗಳು ಇರುವುದು ನಿಜಕ್ಕೂ ಶ್ಲಾಘನೀಯವೇ...

Posted by: SVN | Source: TNIE

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Topics : Bengaluru, BDA, BWSSB, Karnataka Government, ಬೆಂಗಳೂರು, ಬಿಡಿಎ, ಬಿಡಬಲ್ಯೂ ಎಸ್ ಎಸ್ ಬಿ, ಕರ್ನಾಟಕ ಸರ್ಕಾರ
English summary
the 65-year-pass Muralitharan for the same footnote that they'on the subject of started a hunger strike demanding to be paid the report

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement