Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
PDP, NC, Congress have agreed to form J&K government, says Altaf Bukhari

ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರ ರಚನೆಗೆ ಪಿಡಿಪಿ, ಎನ್ ಸಿ, ಕಾಂಗ್ರೆಸ್ ಒಪ್ಪಿಕೊಂಡಿವೆ: ಬುಖಾರಿ

India start Australia tour with four-wicket loss in first T20

ಮೊದಲ ಟಿ-20: ಭಾರತದ ವಿರುದ್ಧ ಆಸೀಸ್ ಗೆ 4 ರನ್ ಗಳ ರೋಚಕ ಗೆಲುವು

Amritsar grenade attack: One arrested, search for another accused on, says CM Amarinder Singh

ಅಮೃತಸರ ಗ್ರನೇಡ್ ದಾಳಿ: ಓರ್ವನ ಬಂಧನ, ಪಾಕ್‌ ಐಎಸ್‌ಐ ಕೃತ್ಯ ಎಂದ ಪಂಜಾಬ್ ಸಿಎಂ

File Image

2019ರ ಮಾರ್ಚ್ ಒಳಗೆ ಭಾರತದಲ್ಲಿ ಅರ್ಧದಷ್ಟು ಎಟಿಎಂಗಳ ಕಾರ್ಯನಿರ್ವಹಣೆ ಸ್ಥಗಿತ?

Nearly 400 paramilitary personnel killed in action in 2015-17: MHA

ಭಾರತ-ಪಾಕ್ ಗಡಿಯಲ್ಲಿ 2015-17 ವರೆಗೆ ಅರೆಸೇನಾಪಡೆಯ 400 ಸಿಬ್ಬಂದಿಗಳ ಹತ್ಯೆ!

File Image

ಕಿಡಿಗೇಡಿಗಳ ಬೆದರಿಕೆಗೆ ಹೆದರಿ ವಿಷ ಸೇವಿಸಿದ ಪ್ರೇಮಿಗಳು: ಪ್ರೇಮಿ ಸಾವು, ಪ್ರೇಯಸಿ ಸ್ಥಿತಿ ಗಂಭೀರ

Priyanka Chopra to Have a Christian Wedding with Nick Jonas on December 3

ಡಿ. 2ರಂದು ಹಿಂದೂ, ಡಿ. 3ರಂದು ಕ್ರಿಶ್ಚಿಯನ್ ಶೈಲಿಯಲ್ಲಿ ಪ್ರಿಯಾಂಕಾ - ನಿಕ್‍ ಮದುವೆ

ಸಂಗ್ರಹ ಚಿತ್ರ

ಚೀನಾ ಮಹಾಗೋಡೆಯಂತಹ ಬೃಹತ್ ಯೋಜನೆಗೆ ಕೈ ಹಾಕಿದ ಭಾರತೀಯ ರೈಲ್ವೆ!

BJP leader Surendran

ಶಬರಿಮಲೆ ದೇವಾಲಯದ ಬಳಿ ಹೋಗಬೇಡಿ: ಬಿಜೆಪಿ ನಾಯಕ ಸುರೇಂದ್ರನ್ ಗೆ ಕೋರ್ಟ್ ಸೂಚನೆ

File Image

ವಾಟ್ಸ್ ಅಪ್ ಭಾರತದ ಮುಖ್ಯ್ಸಥನಾಗಿ ಅಭಿಜಿತ್ ಬೋಸ್, ಮುಂದಿನ ವರ್ಷಾರಂಭಕ್ಕೆ ಅಧಿಕಾರ ಸ್ವೀಕಾರ

ಸಂಗ್ರಹ ಚಿತ್ರ

ಅಪ್ಪನ ಜತೆ ತವರಿಗೆ ಹೋಗ್ತೀನಿ ಅಂತ ಗೃಹಿಣಿ ಮಾಡಿದ್ದೇನು ಗೊತ್ತ? ಸುಂದರ ಪತ್ನಿ ಮಾಡಿದ್ದನ್ನು ಕೇಳಿ ಬೆಚ್ಚಿಬಿದ್ದ ಪತಿ!

Somnath Bharti

ಮಹಿಳಾ ಪತ್ರಕರ್ತೆಗೆ ನಿಂದನೆ: ದೆಹಲಿ ಎಎಪಿ ಶಾಸಕ ಸೋಮನಾಥ್ ಭಾರ್ತಿ ವಿರುದ್ಧ ದೂರು ದಾಖಲು

Your free incoming calls facility may stop soon, telecom companies all set to shock you

ಶಾಕಿಂಗ್ ನ್ಯೂಸ್ ಗೆ ಸಿದ್ಧರಾಗಿ, ಉಚಿತ ಇನ್ ಕಮಿಂಗ್ ಕರೆ ಸೇವೆ ಶೀಘ್ರ ಸ್ಥಗಿತ!

ಮುಖಪುಟ >> ರಾಜ್ಯ

ಕೇಂದ್ರದ 2 ತಂಡಗಳಿಂದ ಪ್ರವಾಹ ಪೀಡಿತ ಜಿಲ್ಲೆಗಳ ಅಧ್ಯಯನ

Ex PM H D Deve Gowda met PM Narendra Modi

ಪ್ರಧಾನ ಮಂತ್ರಿಯನ್ನು ಭೇಟಿ ಮಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ

ಬೆಂಗಳೂರು: ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಇತರ ಕೆಲವು ಜಿಲ್ಲೆಗಳಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯ ಮಾಡಲು ಅಗತ್ಯ ಹಣಕಾಸಿನ ನೆರವು ನೀಡುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಇದಕ್ಕಾಗಿ ಕೇಂದ್ರದಿಂದ ಎರಡು ತಂಡಗಳನ್ನು ಕಳುಹಿಸಿ ಪ್ರವಾಹದಿಂದ ಉಂಟಾದ ಹಾನಿ ಮತ್ತು ನಷ್ಟದ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ಕೂಡ ಪ್ರಧಾನ ಮಂತ್ರಿ ತಿಳಿಸಿದ್ದಾರೆ. ನಿನ್ನೆ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿದ್ದ ರಾಜ್ಯ ನಿಯೋಗ ಕೇಂದ್ರದಿಂದ 2 ಸಾವಿರ ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ ನ್ನು ಕೇಳಿತ್ತು.

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ನಿಯೋಗ ನಿನ್ನೆ ದೆಹಲಿಯಲ್ಲಿ ಪ್ರಧಾನ ಮಂತ್ರಿಯನ್ನು ಭೇಟಿ ಮಾಡಿತ್ತು.ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಕಂದಾಯ ಸಚಿವ ಆರ್. ವಿ.ದೇಶಪಾಂಡೆ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮುಖ್ಯಮಂತ್ರಿ ಗಳೊಂದಿಗೆ ನಿಯೋಗದಲ್ಲಿ ಇದ್ದರು.

ಕಳೆದ ಪ್ರವಾಹ ಪೀಡಿತ ಮಳೆಗೆ ರಾಜ್ಯದಲ್ಲಿ ಒಟ್ಟಾರೆ ಸುಮಾರು 8 ಸಾವಿರ ಕೋಟಿ ರೂಪಾಯಿಗಳಷ್ಟು ಆಸ್ತಿಪಾಸ್ತಿ ನಷ್ಟವಾಗಿದ್ದು ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ 2 ಸಾವಿರ ಕೋಟಿ ರೂಪಾಯಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾರ ಕೋರಿದೆ.

ಪ್ರಧಾನಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ 17 ಜಿಲ್ಲೆಗಳ 86 ತಾಲ್ಲೂಕುಗಳಲ್ಲಿನ ಜನರು ಬರಗಾಲಕ್ಕೆ ತುತ್ತಾಗಿ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಕೂಡ ಹೇಳಿತು. ಬರಪೀಡಿತ ಜಿಲ್ಲೆಗಳಿಗೆ ಮೇವು ಮತ್ತು ಕುಡಿಯುವ ನೀರು ಒದಗಿಸಲು ಕೇಂದ್ರದ ನೆರವನ್ನು ಕೂಡ ಇದೇ ಸಂದರ್ಭದಲ್ಲಿ ಕೇಳಿತು.

ಭೇಟಿ ಸಂದರ್ಭದಲ್ಲಿ ಕಾವೇರಿ ತೀರದಲ್ಲಿರುವ ಮೇಕೆದಾಟು ಯೋಜನೆ ಕೂಡ ಚರ್ಚೆಗೆ ಬಂತು. ಈ ಸಂಬಂಧ ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳ ಸಭೆ ಕರೆದು ಮೇಕೆದಾಟು ಯೋಜನೆ ಕುರಿತು ಇರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವಂತೆ ಪ್ರಧಾನ ಮಂತ್ರಿಯವರನ್ನು ಮನವಿ ಮಾಡಲಾಯಿತು.

ಪ್ರಧಾನಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ನಮ್ಮ ಮನವಿಗೆ ಪ್ರಧಾನ ಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೇಂದ್ರದಿಂದ ಅಗತ್ಯ ನೆರವು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ. ನಾವು ಕೇಂದ್ರದಿಂದ 2 ಸಾವಿರ ಕೋಟಿ ರೂಪಾಯಿ ನೆರವು ಕೇಳುತ್ತಿದ್ದೇವೆ ಎಂದರು.

ಕೇಂದ್ರದ ತಂಡ ಇಂದು ನಗರಕ್ಕೆ: ಪ್ರವಾಹ ಪೀಡಿತ ಜಿಲ್ಲೆಗಳ ಪರಿಸ್ಥಿತಿ ಅಧ್ಯಯನ ಮಾಡಲು 6 ಸದಸ್ಯರ  ಕೇಂದ್ರ ತಂಡ ಬೆಂಗಳೂರಿಗೆ ಇಂದು ಆಗಮಿಸಲಿದೆ. ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಅನಿಲ್ ಮಲ್ಲಿಕ್ ಅವರ ನೇತೃತ್ವದ ತಂಡ ಇಂದು ನಗರಕ್ಕೆ ಆಗಮಿಸಲಿದೆ. ನಾಳೆ ಮೂವರು ಸದಸ್ಯರ ತಂಡ ಕೊಡಗು ಜಿಲ್ಲೆಗೆ ಮತ್ತು ಉಳಿದವರು ಉಡುಪಿ, ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಗಳಿಗೆ ಭೇಟಿ ನೀಡಲಿವೆ.

ನಂತರ ತಂಡ  ಇದೇ14ರಂದು ಸಂಬಂಧಪಟ್ಟ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿ ಕೇಂದ್ರ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಿದೆ ಎಂದು ಕಂದಾಯ ಸಚಿವ ಆರ್ ವಿ ದೇಶಪಾಂಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Posted by: SUD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Narendra Modi, H D Deve Gowda, Flood, Central team, ನರೇಂದ್ರ ಮೋದಿ, ಹೆಚ್ ಡಿ ದೇವೇಗೌಡ, ಹೆಚ್ ಡಿ ಕುಮಾರಸ್ವಾಮಿ, ಪ್ರವಾಹ, ಕೇಂದ್ರ ತಂಡ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS