Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Indo-china border

ಭಾರತದ ಅತಿಕ್ರಮ ಪ್ರವೇಶ ಆರೋಪಿಸಿ ಚೀನಾದಿಂದ ರಾಜತಾಂತ್ರಿಕ ದೂರು

Karnataka Government decides to celebrate Every June 27 as Kempegowda Jayanthi

ಪ್ರತಿ ವರ್ಷ ಜೂ. 27ರಂದು ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲು ಸರ್ಕಾರ ಆದೇಶ

Ravi Shastri to apply for coach’s job, And he’s the favourite

ಟೀಂ ಇಂಡಿಯಾ ಕೋಚ್ ಹುದ್ದೆಗೆ ರವಿ ಶಾಸ್ತ್ರಿ ಅರ್ಜಿ, ಆಯ್ಕೆ ಬಹುತೇಕ ಖಚಿತ!

Narendra Modi world

ನರೇಂದ್ರ ಮೋದಿ ವಿಶ್ವದ ಅತ್ಯಂತ ಪ್ರಮುಖ ಪ್ರಧಾನಿ: ಇಸ್ರೇಲಿ ದೈನಿಕ

BS Yeddyurappa strongly condemns the eating beef food inside Mysuru Kalamandira

ಗೋಮಾಂಸ ತಿನ್ನುವವರು ಮನೆಯಲ್ಲಿ ತಿಂದು ಸಾಯಲಿ: ಬಿಎಸ್ ವೈ ಆಕ್ರೋಶ

ಜಿಎಸ್ ಟಿ ಗೊಂದಲ ಪರಿಹಾರಕ್ಕೆ 'ವಾರ್ ರೂಂ' ಸ್ಥಾಪಿಸಿದ ಕೇಂದ್ರ

US designating Salahuddin as global terrorist

ಅಮೆರಿಕ ಸಲಾವುದ್ದೀನ್ ಜಾಗತಿಕ ಉಗ್ರ ಎಂದು ಘೋಷಿಸಿರುವುದು 'ದೊಡ್ಡ ಅನ್ಯಾಯ': ಪಾಕ್

Mumbai jail riot: Indrani Mukerjea was beaten and threatened with sexual assault in jail, says lawyer

ಪೊಲೀಸರಿಂದ ಇಂದ್ರಾಣಿ ಮುಖರ್ಜಿ ಮೇಲೆ ಹಲ್ಲೆ, ಸಹಖೈದಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ

Supreme Court refuses interim order against Centre

ಅಧಾರ್ ಕಡ್ಡಾಯ ವಿರುದ್ಧ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದ 'ಸುಪ್ರೀಂ'

Donald Trump

ಮತ್ತೊಮ್ಮೆ ಅಮೆರಿಕಾಗೆ ಭೇಟಿ ನೀಡಿ; ನಿಮ್ಮ ನಿರೀಕ್ಷೆಯಲ್ಲಿ... ಟ್ರಂಪ್

Narendra Modi-Donald Trump

ಉಗ್ರವಾದ ಕೊನೆಗೊಳಿಸಲು ಪಾಕ್ ಗೆ ಪ್ರಧಾನಿ ಮೋದಿ ಟ್ರಂಪ್ ಕರೆ: ನೆರೆ ರಾಷ್ಟ್ರದ ಮೇಲೆ ಹೆಚ್ಚಿದ ಒತ್ತಡ

Sourav Ganguly

ಬಿಸಿಸಿಐ ಹೊಸ 7 ಸದಸ್ಯರ ಸಮಿತಿಯಲ್ಲಿ ಗಂಗೂಲಿಗೆ ಸ್ಥಾನ

Rape

4 ತಿಂಗಳಿಂದ ಅಂಕಲ್‌ನಿಂದ ಅತ್ಯಾಚಾರ: ಸಾಯುವ ಮುನ್ನ ಪೊಲೀಸರಿಗೆ ಮೃತ ಬಾಲಕಿ ಹೇಳಿಕೆ

ಮುಖಪುಟ >> ರಾಜ್ಯ

ಇಂಜಿನಿಯರಿಂಗ್ ಪ್ರವೇಶಕ್ಕೆ ಸಿಇಟಿ ಅಂಕ ಮಾತ್ರ ಪರಿಗಣನೆ?

ಭಾರಿ ಚರ್ಚೆಗೆ ಕಾರಣವಾದ ಉನ್ನತ ಶಿಕ್ಷಣ ಇಲಾಖೆಯ ನಡೆ, ಪೋಷಕ ವರ್ಗದಿಂದ ಬೆಂಬಲ
Only CET marks for engineering seats?

ಸಂಗ್ರಹ ಚಿತ್ರ

ಬೆಂಗಳೂರು: ಎಂಜಿನಿಯರಿಂಗ್ ಸಿಇಟಿ ಪ್ರವೇಶ ಪರೀಕ್ಷೆಗೆ ಇನ್ನು ಮುಂದೆ ಪಿಯುಸಿ ಅಂಕಗಳಿಕೆಯನ್ನು ಪರಿಗಣಿಸದಿರಲು ರಾಜ್ಯ  ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಉನ್ನತ ಶಿಕ್ಷಣ ಇಲಾಖೆ ಎಂಜಿನಿಯರಿಂಗ್ ಮತ್ತು ಇತರೆ ವೃತ್ತಿಪರ ಪ್ರವೇಶ ಪರೀಕ್ಷೆಯಲ್ಲಿ ಜೆಇಇ ಮಾದರಿಯ ರ್ಯಾಂಕಿಂಗ್ ವ್ಯವಸ್ಥೆ ಜಾರಿ ಮಾಡಲು ಮುಂದಾಗಿದ್ದು, ಪರೀಕ್ಷೆಯಲ್ಲಿ ಗಳಿಸುವ ಅಂಕಗಳನ್ನು  ಮಾತ್ರ ಸೀಟು ಹಂಚಿಕೆಗೆ ಪರಿಗಣಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಬಂದ ಹಲವಾರು ಅಹವಾಲುಗಳ ಅನ್ವಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ನೂತನ ಪ್ರಸ್ತಾಪವನ್ನು  ಉನ್ನತ ಶಿಕ್ಷಣ ಇಲಾಖೆಯ ಮುಂದಿಟ್ಟಿದ್ದು, ಇಲಾಖೆ ಅನುಮೋದನೆ ದೊರೆಯುತ್ತಿದ್ದಂತೆಯೇ ಸಿಇಟಿ ಪ್ರವೇಶ ಪರೀಕ್ಷೆಯ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಇಲಾಖೆ ಉನ್ನತ ಮೂಲಗಳು ತಿಳಿಸಿರುವಂತೆ ಪ್ರಸಕ್ತ ಸಾಲಿನಿಂದಲೇ ಅಂದರೆ 2017ರ ವೃತ್ತಿಪರ ಪ್ರವೇಶ ಪರೀಕ್ಷೆಯಲ್ಲೇ ಈ ನೂತನ ಜೆಇಇ ಮಾದರಿ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಜಾರಿಗೆ ತರಲಾಗುತ್ತದೆ ಎಂದು  ಹೇಳಲಾಗುತ್ತಿದೆ. ಈಗಾಗಲೇ ಇಲಾಖೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಉನ್ನತ ಮಟ್ಟದ ಚರ್ಚೆ ನಡೆಸುತ್ತಿದ್ದು, ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಪ್ರಸ್ತುತ ಇರುವ ಸಿಇಟಿ ಪರೀಕ್ಷಾ ನಿಯಮಾವಳಿಗಳಂತೆ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶಾತಿ ಬಯಸುವ ವಿದ್ಯಾರ್ಥಿ ಪಿಯುಸಿಯಲ್ಲಿ ಗಳಿಸಿದ ಅಂಕಗಳು ಹಾಗೂ ಸಿಇಟಿ ಪರೀಕ್ಷೆಯಲ್ಲಿ ಗಳಿಸಿದ ಎರಡೂ ಅಂಕಗಳನ್ನು  ಪರಿಗಣಿಸಲಾಗುತ್ತಿತ್ತು. ನೂತನ ವಿಧಾನದಿಂದ ಇನ್ನು ಮುಂದೆ ವಿದ್ಯಾರ್ಥಿ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಇಲಾಖೆಯ ಈ ನಿರ್ಧಾರ  ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಮತ್ತೊಂದೆಡೆ ಸರ್ಕಾರದ ನಿರ್ಧಾರಕ್ಕೆ ಪೋಷಕರ ವಲಯದಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಸರ್ಕಾರದ ನಿರ್ಧಾರದಿಂದ ಟ್ಯೂಷನ್ ಮಾಫಿಯಾ ಹಾಗೂ ಪೇಪರ್ ಲೀಕ್ ಮಾಫಿಯಾಗೆ ಬ್ರೇಕ್ ಬೀಳಲಿದೆ ಎಂದು ಅಭಿಪ್ರಾಯ  ವ್ಯಕ್ತವಾಗುತ್ತಿದೆ.

Posted by: SVN | Source: TNIE

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Bengaluru, Department of Higher Education, CET, Karnataka Examinations Authority, ಬೆಂಗಳೂರು, ಉನ್ನತ ಶಿಕ್ಷಣ ಇಲಾಖೆ, ಸಿಇಟಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ
English summary
Second-year Pre-University scores may not be counted for allotting rankings for undergraduate professional courses from this year. The state higher education department plans to adopt the JEE model to allot rankings for engineering and other professional courses by considering only marks obtained in the Common Entrance Test (CET). Considering the request by students and parents, the Karnataka Examinations Authority (KEA) has submitted a proposal to the Department of Higher Education to implement it from CET 2017. The department has decided to take the discussion to higher level officials. According to sources in the department, an announcement in this regard will be made soon.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement