Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Rafale Controversy Can Affect Ties, Says France Government After Hollande

ರಾಫೆಲ್ ವಿವಾದದಿಂದ ಭಾರತ-ಫ್ರಾನ್ಸ್ ಸಂಬಂಧಕ್ಕೆ ಧಕ್ಕೆ: ಫ್ರಾನ್ಸ್ ಆತಂಕ

Darshan

ಕಾರು ಅಪಘಾತ; ನಟ ದರ್ಶನ್, ದೇವರಾಜ್ ಸೇರಿ ನಾಲ್ವರಿಗೆ ಗಾಯ

K.C VenuGopal

ಬೆದರಿಕೆ ಬ್ಲಾಕ್‌ಮೇಲ್ ತಂತ್ರ ಸಹಿಸಲಾಗದು: ವೇಣುಗೋಪಾಲ್ ವಾರ್ನಿಂಗ್

B S Yedyurappa

2019ರ ಲೋಕಸಭೆ ಚುನಾವಣೆ ನಂತರ ಯಡಿಯೂರಪ್ಪ ಮೂಲೆಗುಂಪು?

Shivananda Patil

ಹೈಕಮಾಂಡ್ ಸೂಚಿಸಿದ್ರೆ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜಿನಾಮೆ: ಶಿವಾನಂದ ಪಾಟೀಲ್

K.C VenuGopal

ಲೋಕಸಭೆ ಚುನಾವಣೆಗೆ ಸಿದ್ದತೆ: ದೇಣಿಗೆ ಸಂಗ್ರಹಕ್ಕಾಗಿ ಮನೆ ಮನೆಗೆ ಕಾಂಗ್ರೆಸ್

Mohammed Sameer

ಮಂಗಳೂರು: ಕಾಣೆಯಾಗಿದ್ದ ವ್ಯಕ್ತಿಯ ಶವ ತಮಿಳು ನಾಡಿನಲ್ಲಿ ಪತ್ತೆ

H D Kumaraswamy...

ಸರ್ಕಾರ ನಿಮ್ಮೊಂದಿಗಿದೆ, ದುಡುಕಿನ ನಿರ್ಧಾರ ಬೇಡ: ರೈತರಿಗೆ ಸಿಎಂ ಭರವಸೆ

Pothole in Bengaluru

ಶೇ.95ರಷ್ಟು ಗುಂಡಿಗಳನ್ನು ಮುಚ್ಚಿದ್ದೇವೆ; ಬಿಬಿಎಂಪಿ ಹೇಳಿಕೆ

Duniya Viji

ನಟ ದುನಿಯಾ ವಿಜಿಗೆ 14 ದಿನಗಳ ನ್ಯಾಯಾಂಗ ಬಂಧನ :8ನೇ ಎಸಿಎಂಎಂ ಕೋರ್ಟ್ ಆದೇಶ!

PM Narendra Modi

ಅನಿಲ್ ಅಂಬಾನಿಗೆ ಮಾಹಿತಿ ಸೋರಿಕೆ ಮೂಲಕ ಗೌಪ್ಯತೆ ಉಲ್ಲಂಘಿಸಿದ ಪ್ರಧಾನಿ :ಕಾಂಗ್ರೆಸ್ ಆರೋಪ

Imran Khan , PM Modi

ಭಾರತಕ್ಕೆ'ಸ್ನೇಹ 'ದ ಆಪರ್ :ದೌರ್ಬಲ್ಯವೆಂದು ಪರಿಗಣಿಸಬಾರದು:ಇಮ್ರಾನ್ ಖಾನ್

Casual Photo

ಕುಪ್ವಾರದಲ್ಲಿ ಎನ್ ಕೌಂಟರ್ :2 ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ!

ಮುಖಪುಟ >> ರಾಜ್ಯ

ಸುಪ್ರೀಂ ಸೂಚನೆಯವರೆಗೆ ಎಲ್ಲಾ ಭಡ್ತಿಗಳನ್ನು ತಡೆಯಲು ರಾಜ್ಯ ಸರ್ಕಾರ ತೀರ್ಮಾನ

Reservation in promotions: Karnataka puts all promotions on hold; waits for clarity from Supreme Court

ಸುಪ್ರೀಂ ಸೂಚನೆಯವರೆಗೆ ಎಲ್ಲಾ ಭಡ್ತಿಗಳನ್ನು ತಡೆಯಲು ರಾಜ್ಯ ಸರ್ಕಾರ ತೀರ್ಮಾನ

ಬೆಂಗಳೂರು: ಸುಪ್ರೀಂ ಕೋರ್ಟ್ ನ ಸ್ಪಷ್ಟನೆ ದೊರಕುವವರೆಗೆ ಎಲ್ಲ ಪ್ರಕಾರದ ಭಡ್ತಿಗಲನ್ನು ತಡೆಹಿಡಿಯುವುದಾಗಿ ಕರ್ನಾಟಕ ಸರ್ಕಾರ ಹೇಳಿದೆ. ಭಡ್ತಿಗಳಲ್ಲಿ ಪರಿಣಾಮಕಾರಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.

ಇದೇ 27ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬರಲಿದೆ.ಹಿರಿತನದ ಆಧಾರದ ಮೇಲೆ ರಾಜ್ಯ ಸರ್ಕಾರಿ ನೌಕರರ ಭಡ್ತಿ ಕಾಯ್ದೆ 2017ರ ಅನುಷ್ಠಾನದ ವಿಳಂಬದ ಕುರಿತಂತೆ ಬಿಜೆಪಿ ಶಾಸಕ ಪಿ. ರಾಜೀವ್ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ  ಕೃಷ್ಣ ಬೈರೆಗೌಡ ಉತ್ತರಿಸಿದ್ದಾರೆ.

ಕಳೆದ ತಿಂಗಳು ರಾಷ್ಟ್ರಪತಿ ರಾಮನಾಥ್ ಅಕೋವಿಂದ್ ಮಸೂದೆಗೆ ಅನುಮತಿ ನೀಡಿದ್ದರು.

ವಿಧಾನಸಭೆಯಲ್ಲಿ ಈ ವಿಚಾರವನ್ನು ಎತ್ತಿಕೊಳ್ಳುವ ಮೂಲಕ ರಾಜೀವ್ ಅವರು ಸರ್ಕಾರದಿಂದ ವಿಳಂಬ ಧೋರಣೆಗೆ ಕಾರಣ ತಿಳಿಯಲು ಯತ್ನಿಸಿದ್ದಾರೆ."ಸಂಸತ್ತಿನ ಎರಡೂ ಸದನಗಳು ಮಸೂದೆಗೆ ಅನುಮತಿಸಿದೆ, ರಾಷ್ಟ್ರಪತಿಗಳು ಸಹ ಸಹಿ ಮಾಡಿದ್ದಾರೆ ಆದರೂ ಮಸೂದೆ ಜಾರಿಯಾಗಿಲ್ಲವೇಕೆ" ಅವರು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿದ ಕೃಷ್ಣ ಭೈರೇಗೌಡ ಸರ್ಕಾರವು ಮಸೂದೆ ಅನುಷ್ಠಾನಗೊಳಿಸುವ ಬಗ್ಗೆ ಹಿಂಜರಿಯುತ್ತಿಲ್ಲ.ಹಾಗೆಯೇ ಮಸೂದೆ ವಾಪಸಾತಿ ಪ್ರಶ್ನೆ ಇಲ್ಲ. ಆದರೆ ಸದ್ಯ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದೆ.ಪ್ರಕರಣದ ಫಲಿತಾಂಶದ ಮೇಲೆ ಸರ್ಕಾರದ ಕ್ರಮ ಜರುಗಬೇಕೆಂದು ಅಡ್ವೊಕೇಟ್ ಜನರಲ್ ಅಭಿಪ್ರಾಯಪಟ್ಟಿದ್ದಾರೆ ಎಂದರು.

ಈ ವೇಳೆ ಮಧ್ಯ ಪ್ರವೇಶಿಸಿದ ವಿಧಾನಸಭೆಪ್ರತಿಪಕ್ಷದ ಉಪಾಧ್ಯಕ್ಷ ಗೋವಿಂದ ಕಾರಜೋಳ ಡಿಪಿಸಿ(ಡಿಪಾರ್ಟ್ಮೆಂಟ್ ಪ್ರೋಮೋಷನ್ ಕಮಿಟಿಗಳು) ಗಳ ಮೂಲಕ ನಿಗದಿತ ಸಮಯದವರೆಗೆ ಭಡ್ತಿ ನೀಡಲ್ಪಟ್ಟ ಅನೇಕ ಪ್ರಕರಣಗಳು ಇದೆ ಎಂದರು."ಇದಕ್ಕಾಗಿ ನೀವು ಏನು ಮಾಡುತ್ತೀರಿ? ಈಗ ಈ ಭಡ್ತಿಗಳಿಂದ ಎಸ್ಸಿ / ಎಸ್ಟಿ ಅವರುಗಳಿಗೆ ಏನು ಲಾಭವಾಗಲಿದೆ" ಎಂದಾಗ ಸಮಾಜ ಕಲ್ಯಾಣ ಸಚಿವ ಪ್ರಿಯಾಂ ಖರ್ಗೆ ಕಾಯ್ದೆ ಯಲ್ಲಿ ಎಲ್ಲವೂ ಅಡಕವಾಗಿದೆ ಎಂದರು.

ಈ ವೇಳೆ ಸಭಾಧ್ಯಕ್ಷ ರಮೇಶ್ ಕುಮಾರ್ ಮಾತನಾಡಿ ಸರ್ಕಾರ ಕಾಯ್ದೆ ಅನುಷ್ಠಾನ ಕುರಿತಂತೆ ಜುಲೈ 27ನ್ನು ಅಂತಿಮ ಗಡುವಾಗಿಸಿಕೊಳ್ಳಬೇಕು. ಹಾಗೊಂದು ವೇಳೆ ಕೋರ್ಟ್ ನಿಂದ ಯಾವ ಸೂಚನೆ ಬರದೆ ಹೋದಲ್ಲಿ ಕಾಯ್ದೆ ಅನುಷ್ಠಾನವಾಗಲಿ ಎಂದು ಸಲಹೆ ನಿಡಿದರು.

ಸುಪ್ರೀಂ ಕೋರ್ಟ್ ವಿಚಾರಣೆಯ ಫಲಿತಾಂಶದ ತನಕ ಯಾವ ಮುಂಭಡ್ತಿಯನ್ನು  ಮಾಡಲಾಗುವುದಿಲ್ಲ ಎಂದು ಸಚಿವ ಭೈರೇಗೌಡ ಪುನರುಚ್ಚರಿಸಿದರು.
Posted by: RHN | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Karnataka government, Reservation in promotion, Supreme Court, Krishna Byre Gowda, ಕರ್ನಾಟಕ ಸರ್ಕಾರ, ಭಡ್ತಿಯಲ್ಲಿ ಮೀಸಲಾತಿ, ಸುಪ್ರೀಂ ಕೋರ್ಟ್, ಕೃಷ್ಣ ಬೈರೇಗೌಡ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS