Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
GSAT-17  Photo credits : www.isro.gov.in

ಫ್ರಾನ್ಸ್ ನ ಗಯಾನಾದಿಂದ ಸಂವಹನ ಉಪಗ್ರಹ ಜಿಸ್ಯಾಟ್-17 ಯಶಸ್ವಿ ಉಡಾವಣೆ: ಇಸ್ರೊ

File photo

ದಶಕಗಳ ಕನಸು ನನಸು: ಯೋಧರಿಗೆ ಅಂತೂ ಬಂತು ಗುಂಡು ನಿರೋಧಕ ಹೆಲ್ಮೆಟ್

Siddaramaih

ಮೌಢ್ಯ ನಿಷೇಧ ಕಾಯ್ದೆಗೆ ಮುಕ್ತಿ: ಮುಂದಿನ ಅಧಿವೇಶನದಲ್ಲಿ ಜಾರಿ

Representational image

ವೈದ್ಯಕೀಯ ಶಿಕ್ಷಣ ಮತ್ತಷ್ಟು ದುಬಾರಿ: ಶೇ. 10 ರಷ್ಟು ಪ್ರವೇಶ ಶುಲ್ಕ ಏರಿಕೆ

representational Image

ಕೈಕೊಟ್ಟ ಮುಂಗಾರು- ಮೋಡ ಬಿತ್ತನೆಗೆ ಸರ್ಕಾರದ ಸಿದ್ಧತೆ: ಕಾಗೋಡು ತಿಮ್ಮಪ್ಪ

File photo

ಉಗ್ರರ ಬೆದರಿಕೆ ನಡುವೆಯೂ ಬಿಗಿ ಭದ್ರತೆಯೊಂದಿಗೆ ಅಮರನಾಥ ಯಾತ್ರೆ ಆರಂಭ

Ravi Shastri- Sachin Tendulkar

ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ರವಿ ಶಾಸ್ತ್ರಿ ಮನವೊಲಿಸಿದ್ದು ಸಚಿನ್ ತೆಂಡೂಲ್ಕರ್?: ವರದಿ

Namma Metro

ಫೀಡರ್ ಬಸ್ ಸೇವೆಯನ್ನು ಬಿಎಂಆರ್ ಸಿಎಲ್ ಗೆ ವಹಿಸಲು ಚಿಂತನೆ

Prime minister Narendra Modi disembark from aeroplane while on foreign tour

ಮೂರು ದೇಶಗಳ ನಾಲ್ಕು ದಿನಗಳ ಪ್ರವಾಸದಲ್ಲಿ ಪ್ರಧಾನಿ ಮೋದಿ ವಿಮಾನ ಕಳೆದದ್ದು ಕೇವಲ 33 ಗಂಟೆ!

File photo

ಜಮ್ಮು; ಗಡಿಯಲ್ಲಿ ಪಾಕ್'ನಿಂದ ಅಪ್ರಚೋದಿತ ಗುಂಡಿನ ದಾಳಿ, 2 ಯೋಧರಿಗೆ ಗಾಯ

Samajwadi Party (SP) leader Azam Khan

ಸೇನಾ ಯೋಧರು ಅತ್ಯಾಚಾರಿಗಳು: ಅಜಂಖಾನ್ ಗಂಭೀರ ಆರೋಪ

File photo

ಛತ್ತೀಸ್ಗಢದಲ್ಲಿ ಎನ್'ಕೌಂಟರ್: ಇಬ್ಬರು ನಕ್ಸಲರ ಹತ್ಯೆ

China bulldozes Indian bunker in Sikkim: Sources

ಸಿಕ್ಕಿಂನಲ್ಲಿ ಚೀನಾ ಪಡೆಗಳಿಂದ ಭಾರತೀಯ ಬಂಕರ್ ಗಳ ನೆಲಸಮ!

ಮುಖಪುಟ >> ರಾಜ್ಯ

ಭೀಕರ ಅಪಘಾತ: ಬೈಕಿಗೆ ಬಸ್ ಡಿಕ್ಕಿಯಾಗಿ ಇಬ್ಬರು ಸಹೋದರರ ಸಾವು!

ಶಿವಮೊಗ್ಗ- ಸಾಗರ ರಸ್ತೆಯಲ್ಲಿ ಘಟನೆ, ಮಗಳ ನಾಮಕರಣಕ್ಕೆ ತೆರಳಿದ್ದ ತಂದೆ ಮತ್ತು ಅವರ ಸಹೋದರ
Two Dies in accident while returning from babys naming ceremony in Shivamogga

ಅಪಘಾತಕ್ಕೀಡಾದ ಬಸ್

ಶಿವಮೊಗ್ಗ: ಮಗಳ ನಾಮಕರಣಕ್ಕೆಂದು ಬೈಕ್ ನಲ್ಲಿ ತೆರಳಿ ಹಿಂದಿರುಗುವ ವೇಳೆ ಬಸ್ ಢಿಕ್ಕಿಯಾದ ಪರಿಣಾಮ ತಂದೆ ಮತ್ತು ಅವರ ಸಹೋದರ ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ.

ಮೃತರನ್ನು ಜಗದೀಶ್ ಹಾಗೂ ಲೋಕೇಶ್ ಎಂದು ಗುರುತಿಸಲಾಗಿದ್ದು, ಮೂಲಗಳ ಪ್ರಕಾರ ಲೋಕೇಶ್ ಎಂಬವರ ಮೂರು ತಿಂಗಳ ಮಗುವಿನ ನಾಮಕರಣಕ್ಕಾಗಿ ವೀರಗೊಂಡನ ಹಳ್ಳಿಯಲ್ಲಿರುವ ಹೆಂಡತಿ ಮನೆಗೆ ಇಬ್ಬರು  ಸಹೋದರರು ಹೋಗಿದ್ದರು. ನಾಮಕರಣ ಮುಗಿಸಿಕೊಂಡು ಶಿವಮೊಗ್ಗಕ್ಕೆ ಬೈಕ್ ನಲ್ಲಿ ವಾಪಸ್ ಆಗುತ್ತಿದ್ದಾಗ ಶಿವಮೊಗ್ಗ- ಸಾಗರ ರಸ್ತೆಯ ಮುದ್ದಿನಕೊಪ್ಪ ಎಂಬಲ್ಲಿ ಶಿಕಾರಿಪುರಕ್ಕೆ ಹೋಗುತ್ತಿದ್ದ ಬಸ್ ಬೈಕಿಗೆ ಡಿಕ್ಕಿ ಹೊಡೆದಿದೆ.  ಪರಿಣಾಮ ಇಬ್ಬರೂ ಸಹೋದರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಡಿಕ್ಕಿಯಾದ ರಭಸಕ್ಕೆ ಬಸ್ಸಿನ ಟ್ಯಾಂಕರ್ ಗೆ ಬೈಕ್ ತಗುಲಿ ಬೆಂಕಿ ಹೊತ್ತಿದೆ. ಹೀಗಾಗಿ ಬಸ್ ಸಂಪೂರ್ಣ ಸುಟ್ಟು ಹೋಗಿದ್ದು, ಬಸ್ಸಿಗೆ ಬೆಂಕಿ ತಗುಲಿದ ತಕ್ಷಣ ಪ್ರಯಾಣಿಕರು ಕೆಳಗಿಳಿದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಶಿವಮೊಗ್ಗ ಎಸ್‍ಪಿ ಅಭಿನವ್ ಖರೆ ಹಾಗೂ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Shivamogga, Accident, Karnataka, ಶಿವಮೊಗ್ಗ, ಅಪಘಾತ, ಕರ್ನಾಟಕ
English summary
the daughter of namakaranakkendu on the bike to skip the bus crash returning to his father and his brother died as a result of the incident occurred in Shimoga on Tuesday night

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement