Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
PM Modi

ಅಭಿವೃದ್ಧಿಯೇ ನಮ್ಮ ಸರ್ಕಾರದ ಏಕೈಕ ಅಜೆಂಡಾ: ನರೇಂದ್ರ ಮೋದಿ

IPL 2018: Gautam Gambhir to give up his entire salary of ₹2.8 cr

ಕಳಪೆ ಪ್ರದರ್ಶನ: ಐಪಿಎಲ್ ಸಂಭಾವನೆ ಪಡೆಯದಿರಲು ಗಂಭೀರ್​ ನಿರ್ಧಾರ

Chennai Railway cop jumps out of moving train to change coach, prevents rape bid on woman

ಚಲಿಸುತ್ತಿದ್ದ ರೈಲಿನಿಂದ ಹಾರಿ, ಅತ್ಯಾಚಾರದಿಂದ ಮಹಿಳೆಯ ರಕ್ಷಿಸಿದ ತಮಿಳುನಾಡು ರೈಲ್ವೇ ಪೊಲೀಸ್

If We Not Sent Jail under False case, will break the back of the BJP in Gujarat: Jignesh Mewani

ಸುಳ್ಳು ಕೇಸು ದಾಖಲಿಸಿ ನಮ್ಮನ್ನು ಜೈಲಿಗಟ್ಟದೇ ಇದ್ದರೆ, ಖಂಡಿತ ಬಿಜೆಪಿ ಸೊಂಟ ಮುರಿಯುತ್ತೇವೆ: ಜಿಗ್ನೇಶ್ ಮೇವಾನಿ

Virat Kohli

ಸಿಎಸ್ ಕೆ ವಿರುದ್ಧ ನಿಧಾನಗತಿ ಬೌಲಿಂಗ್: ವಿರಾಟ್ ಕೊಹ್ಲಿಗೆ 12 ಲಕ್ಷ ರೂ. ದಂಡ

'ಭಾರತದ ಮೊದಲ ಪ್ರಧಾನಿ ನೆಹರೂ ಬದಲಿಗೆ ಮೋದಿ ಚಿತ್ರ'; ಗೂಗಲ್ ವಿರುದ್ದ ರಮ್ಯಾ ಆಕ್ರೋಶ

RJ Rohith

ಜೀವನದಲ್ಲಿ ಹಣದ ಸುತ್ತಲೇ ಎಲ್ಲವೂ ಸುತ್ತುತ್ತಿದೆ: ’ಬಕಾಸುರ” ನಟ ರೋಹಿತ್

13 school children killed in a bus-train collision in Uttar Pradesh

ಭೀಕರ ಅಪಘಾತ: ಶಾಲಾ ವಾಹನಕ್ಕೆ ರೈಲು ಢಿಕ್ಕಿ, 13 ಮಕ್ಕಳ ದುರ್ಮರಣ

ಸಂಗ್ರಹ ಚಿತ್ರ

ನಮ್ಮ ಭಾವನೆ 'ಅವರ' ಬಂಡವಾಳ!

A scene from Dwaja movie

ಚುನಾವಣೆಯ ಹೊಸ್ತಿಲಲ್ಲಿ ನಾಳೆ 3 ರಾಜಕೀಯ ವಿಷಯ ಆಧಾರಿತ ಚಿತ್ರಗಳು ತೆರೆಗೆ

Representational image

ಬೆಂಗಳೂರಿನ ಮಕ್ಕಳಿಗೆ ಉತ್ತರ ಕರ್ನಾಟಕ ಶಾಲೆಗಳಲ್ಲಿ ಸೀಟು: ಇದು ಆರ್ ಟಿಇ ಅವಾಂತರ!

IPL 2018: Chennai Super Kings beat Royal Challengers Bangalore by five wickets

ಐಪಿಎಲ್: ಧೋನಿ, ರಾಯುಡು ಅಬ್ಬರದಾಟ, ಆರ್ ಸಿಬಿ ವಿರುದ್ಧ ಸಿಎಸ್ ಕೆಗೆ 5 ವಿಕೆಟ್ ಜಯ

ICC calls it a day for women’s Test cricket, considers it commercially unviable

ಮಹಿಳಾ ಟೆಸ್ಟ್ ಕ್ರಿಕೆಟ್ ರದ್ದು ಮಾಡಲು ಮುಂದಾದ ಐಸಿಸಿ!

ಮುಖಪುಟ >> ರಾಜ್ಯ

ರಾಷ್ಟ್ರಪತಿ ಚುನಾವಣೆಗೆ ಬೆಂಗಳೂರಿನಲ್ಲೂ ಸಕಲ ಸಿದ್ಧತೆ ಪೂರ್ಣ

ಚುನಾವಣೆ ಪ್ರಕ್ರಿಯೆ ವೀಕ್ಷಕರಾಗಿ ಕೇಂದ್ರದ ಐಎಎಸ್ ಅಧಿಕಾರಿ ಅರುಣ್ ಸಿಂಘಾಲ್ ನೇಮಕ
Vidhana Soudha all set for presidential elections

ವಿಧಾನಸೌಧದಲ್ಲಿ ಸಿದ್ಧತೆ

ಬೆಂಗಳೂರು: ರಾಷ್ಟ್ರಪತಿ ಚುನಾವಣೆಗೆ ರಾಜಧಾನಿ ಬೆಂಗಳೂರಿನಲ್ಲೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿಧಾನಸೌಧದಲ್ಲಿ ಚುನಾವಣಾ ಆಯೋಗ ಮತದಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ರಾಷ್ಟ್ರಪತಿ ಚುನಾವಣೆಯ ನಿಮಿತ್ತ ಜನಪ್ರತಿನಿಧಿಗಳ ಮತದಾನಕ್ಕಾಗಿ ವಿಧಾನಸೌಧದ ಮೊದಲನೆ ಮಹಡಿಯಲ್ಲಿರುವ 106ನೇ ಕೊಠಡಿಯಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕಳೆದ ವಾರವಷ್ಟೆೇ ನವದೆಹಲಿಯಿಂದ ತಂದಿರುವ  ಮತಪೆಟ್ಟಿಗೆಯನ್ನು 107ನೇ ಕೊಠಡಿಯಲ್ಲಿ(ಸ್ಟ್ರಾಂಗ್ ರೂಂ) ಭದ್ರವಾಗಿರಿಸಲಾಗಿತ್ತು. ಇದೀಗ ಮತಪೆಟ್ಟಿಗೆಯನ್ನು ಮತದಾನಕ್ಕಾಗಿ ಕೊಠಡಿಸಂಖ್ಯೆ 106ಕ್ಕೆ ತಂದಿರಿಸಲಾಗಿದೆ. ದೇಶಾದ್ಯಂತ ನಡೆಯುವ ಚುನಾವಣೆ ಪ್ರಕ್ರಿಯೆಗೆ  ಲೋಕಸಭೆ ಕಾರ್ಯದರ್ಶಿ ಅನೂಪ್ ಮಿಶ್ರಾ ಅವರು ಮುಖ್ಯ ಚುನಾವಣಾಧಿಕಾರಿಯಾಗಿದ್ದು, ಎಲ್ಲ ರಾಜ್ಯಗಳ ವಿಧಾನಸಭೆ ಕಾರ್ಯದರ್ಶಿಗಳನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ.

ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ಅವರ ಉಸ್ತುವಾರಿಯಲ್ಲಿ ಸೋಮವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಚುನಾವಣೆ ನಡೆಯಲಿದೆ.

ಈ ಕುರಿತು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಬೆ ಕಾರ್ಯದರ್ಶಿ ಎಸ್. ಮೂರ್ತಿಯವರು, ಪರೋಕ್ಷ ಚುನಾವಣೆ ಮೂಲಕ ರಾಷ್ಟ್ರಪತಿ ಆಯ್ಕೆ ನಡೆಯುತ್ತದೆ. ಜನರು ತಮ್ಮ ಪ್ರತಿನಿಧಿಗಳ ಮೂಲಕ ಆಯ್ಕೆ  ಮಾಡುತ್ತಾರೆ. ರಾಜ್ಯದ ಶಾಸಕರೊಬ್ಬರಿಗೆ 131 ಹಾಗೂ ಸಂಸದರೊಬ್ಬರಿಗೆ 708 ಮತ ಮೌಲ್ಯ ನಿಗದಿಯಾಗಿದೆ. ಪಾರದರ್ಶಕವಾಗಿ ಚುನಾವಣೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಚುನಾವಣಾ ವೀಕ್ಷಕರ ನೇಮಕ

ಚುನಾವಣೆ ಪ್ರಕ್ರಿಯೆ ಗಮನಿಸಲು ಕೇಂದ್ರದ ಐಎಎಸ್ ಅಧಿಕಾರಿ ಅರುಣ್ ಸಿಂಘಾಲ್ ಅವರನ್ನು ವೀಕ್ಷಕರಾಗಿ ಕರ್ನಾಟಕಕ್ಕೆ ನೇಮಿಸಲಾಗಿದ್ದು, ಶನಿವಾರವೇ ಆಗಮಿಸಿರುವ ಸಿಂಘಾಲ್, ಈಗಾಗಲೇ ಮತಗಟ್ಟೆಗೆ ತೆರಳಿ ಸಿದ್ಧತೆ  ಪರಿಶೀಲಿಸಿದ್ದಾರೆ. ಚುನಾವಣೆ ಪ್ರಕ್ರಿಯೆ ಮುಗಿದು ರಾಜ್ಯದಿಂದ ಮತಪೆಟ್ಟಿಗೆ ತೆರಳುವವರೆಗೂ ಅಗತ್ಯ ಭದ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ವಿಧಾನಸೌಧ ಭದ್ರತೆ ವಿಭಾಗದ ಡಿಸಿಪಿ ಯೋಗೇಶ್ ತಿಳಿಸಿದ್ದಾರೆ.

224+1 ಸದಸ್ಯರ ಮತದಾನ

ಯಾವುದೇ ರಾಜ್ಯದ ಶಾಸಕ, ಸಂಸದರು ತಮಗಿಷ್ಟದ ರಾಜ್ಯದಲ್ಲಿ ಮತದಾನ ಮಾಡಬಹುದಾಗಿದೆಯ ಇದು ರಾಷ್ಟ್ರಪತಿ ಚುನಾವಣೆಯ ವಿಶೇಷತೆಯಾಗಿದ್ದು,  ಈ ಕುರಿತು ವಾರದ ಮೊದಲು ತಮ್ಮ ರಾಜ್ಯದ ವಿಧಾನಸಭೆಗೆ  ತಿಳಿಸಿದರೆ ಅವರಿಗಿಷ್ಠದ ರಾಜ್ಯದ ವಿಧಾನಸಭೆಗೆ ಮತಪತ್ರ ಹಾಗೂ ಮತಮೌಲ್ಯವನ್ನು ವರ್ಗಾವಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಕರ್ನಾಟಕದಲ್ಲಿ ಮತದಾನ ಮಾಡುವುದಾಗಿ ಯಾವುದೇ ರಾಜ್ಯದ ಜನಪ್ರತಿನಿಧಿಗಳಾಗಲಿ,  ಬೇರೆ ರಾಜ್ಯ ಬೇಕು ಎಂದು ರಾಜ್ಯದ ಜನಪ್ರತಿನಿಧಿಗಳ್ಯಾರೂ ತಿಳಿಸಿಲ್ಲ. ಹೀಗಾಗಿ ರಾಜ್ಯದ 28 ಸಂಸದರು ಹಾಗೂ 12 ರಾಜ್ಯಸಭೆ ಸದಸ್ಯರ ಪೈಕಿ ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ ಮಾತ್ರ ಬೆಂಗಳೂರಿನಲ್ಲಿ ಮತ  ಚಲಾಯಿಸುವುದಾಗಿ ತಿಳಿಸಿದ್ದಾರೆ. ಉಳಿದ 39 ಸದಸ್ಯರೂ ನವದೆಹಲಿಯಲ್ಲಿ ಮತದಾನ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 225 ಜನಪ್ರತಿನಿಧಿಗಳು ಮತದಾನ ಮಾಡಲು ಅರ್ಹರಾಗಿದ್ದಾರೆ.

ಸಂಬಂಧಿಸಿದ್ದು...
Posted by: SVN | Source: Online Desk

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : Bengaluru, Presidential Elections, Congress, BJP, Meira kumar, Ramanath kovind, Vidhana soudha, ಬೆಂಗಳೂರು, ರಾಷ್ಟ್ರಪತಿ ಚುನಾವಣೆ, ಕಾಂಗ್ರೆಸ್, ಬಿಜೆಪಿ, ಮೀರಾ ಕುಮಾರ್, ರಾಮನಾಥ್ ಕೋವಿಂದ್, ವಿಧಾ
English summary
Preparations for the presidential elections were on in full swing at Vidhana Soudha on Saturday, where the elections are scheduled to be held on Monday.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement