Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Won

ಅಯ್ಯಪ್ಪನ ದರ್ಶನವಾಗದ ಹೊರತು ವಾಪಸ್ ತೆರಳುವ ಮಾತೇ ಇಲ್ಲ: ತೃಪ್ತಿ ದೇಸಾಯಿ

Trees uprooted damaged in Nagapattinam in the overnight rainfall and strong winds which hit the town. NDRF team carrying out clearance work in the area.

ತಮಿಳುನಾಡು: 'ಗಜ'ದ ಅಬ್ಬರಕ್ಕೆ 11 ಮಂದಿ ಬಲಿ

BS Yeddyurappa

4 ಕ್ಷೇತ್ರ ಸೋತಿದ್ದಕ್ಕೆ ಬಿಜೆಪಿ 104 ಸೀಟು ಗೆಲ್ಲಿಸಿದ್ದ ಬಿಎಸ್ ವೈ ಮರೆಯಿತೇ: ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ?

Janardhana Reddy,

ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಜನಾರ್ಧನ ರೆಡ್ಡಿಯ ಈ ಹೇಳಿಕೆ!

Cauvery statue ( File Image)

ಕೆಆರ್ ಎಸ್ ನಲ್ಲಿ ಅತಿ ಎತ್ತರವಾದ ಕಾವೇರಿ ಪ್ರತಿಮೆ: ರಾಜಕೀಯ ಗಿಮಿಕ್, ನೆಟ್ಟಿಗರ ಟ್ವಿಟ್ಟರಾರತಿ!

India seeks to buy US helicopters worth Rs 13,500 crore: Sources

ರಷ್ಯಾ ಬಳಿಕ ಇದೀಗ ಅಮೆರಿಕದಿಂದ 13,500 ಕೋಟಿ ರೂ. ವೆಚ್ಚದ ಹೆಲಿಕಾಪ್ಟರ್ ಖರೀದಿಗೆ ಮುಂದಾದ ಭಾರತ

Nithyananda Swamy

ಗಾಂಜಾ ಬಗ್ಗೆ ಭಾಷಣ; ಸ್ವಾಮಿ ನಿತ್ಯಾನಂದಗೆ ಸಿಸಿಬಿ ಅಧಿಕಾರಿಗಳಿಂದ ನೊಟೀಸ್

Mithali Raj Ahead Of Rohit Sharma, Virat Kohli As Highest T20I Run-Scorer In India

ಕೊಹ್ಲಿ, ರೋಹಿತ್ ಶರ್ಮಾ ದಾಖಲೆ ಧೂಳಿಪಟ ಮಾಡಿದ ಮಹಿಳಾ ಕ್ರಿಕೆಟ್ ನ 'ಸಚಿನ್' ಮಿಥಾಲಿ ರಾಜ್!

Merely crying out "Bharat Mata ki Jai" not Patriotism: VP Venkaiah Naidu

ಭಾರತ​ ಮಾತಾಕೀ ಜೈ, ಜೈ ಹಿಂದ್​ ಎಂದು ಕಿರುಚುವುದಷ್ಟೇ ದೇಶಭಕ್ತಿಯಲ್ಲ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

Pakistani Fan Reacts to KGF Official Trailer

ಪಾಕಿಸ್ತಾನಕ್ಕೂ ತಟ್ಟಿದ ಸ್ಯಾಂಡಲ್ ವುಡ್ ಹವಾ, ಕೆಜಿಎಫ್ ಟ್ರೈಲರ್ ನೋಡಿದ ಅಭಿಮಾನಿ ಹೇಳಿದ್ದೇನು ಗೊತ್ತಾ?

T10 League 2018: Zaheer Khan to sport jersey No. 34

ಟಿ10 ಲೀಗ್ 2018: ಜೆರ್ಸಿ ನಂಬರ್​ 7 ತಿರಸ್ಕರಿಸಿದ ಜಹೀರ್ ಖಾನ್, ಕಾರಣ ಕೇಳಿದರೆ ಅಚ್ಚರಿ ಪಡ್ತೀರಾ!

Representational image

ಮಟನ್ ಸಾಂಬರ್ ಮಾಡಲು ವಿಳಂಬ ಮಾಡಿದ ಪತ್ನಿ: ಕ್ರೋಧಗೊಂಡ ಅಪ್ಪನಿಂದ 4 ವರ್ಷದ ಮಗಳ ಹತ್ಯೆ!

India could have built more schools, homes than host Formula One: Lewis Hamilton

ಫಾರ್ಮುಲಾ ಒನ್ ಆಯೋಜಿಸುವ ಬದಲು ಭಾರತ ಹೆಚ್ಚು ಮನೆ, ಶಾಲೆಗಳನ್ನು ನಿರ್ಮಿಸಬಹುದಿತ್ತು: ಹ್ಯಾಮಿಲ್ಟನ್

ಮುಖಪುಟ >> ಜೀವನಶೈಲಿ

ಕ್ಯಾನ್ಸರ್ ವಿರುದ್ಧ ಹೋರಾಟ? ಕುಟುಂಬದ ಬೆಂಬಲ ಅತ್ಯಂತ ಮುಖ್ಯ!

ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಲು ದೈಹಿಕ ಆರೋಗ್ಯವಷ್ಟೇ ಅಲ್ಲ ಮಾನಸಿಕ ಆರೋಗ್ಯ ಕೂಡ ಮುಖ್ಯ
file photo

ಸಂಗ್ರಹ ಚಿತ್ರ

ಕ್ಯಾನ್ಸರ್ ಎಂದಾಕ್ಷಣ ಭಯ ಪಡುವ ಜನರೇ ಹೆಚ್ಚು. ಕೆಲ ವರ್ಷಗಳಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿರುವ ಜನರ ಸಂಖ್ಯೆ ಕೂಡ ಹೆಚ್ಚಾಗತೊಡಗಿವೆ. ವಿಶ್ವದೆಲ್ಲೆಡೆ ಲಕ್ಷಾಂತರ ಜನರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. 

ಕ್ಯಾನ್ಸರ್ ನಲ್ಲಿಯೂ ಹಲವಾರು ರೀತಿಯ ರೋಗಗಳಿವೆ. ಅದರಲ್ಲಿಯೂ ಹೈಗ್ರೇಡ್ ಕ್ಯಾನ್ಸರ್ ಅಂತೂ ದೇಹದ ಮೇಲೆ ಗಂಭೀರ ರೀತಿಯ ಪರಿಣಾಮ ಬೀರುತ್ತದೆ. ಇದರಲ್ಲಿ ಕೋಶಗಳ ಒಂದು ಸಮೂಹವು ಅನಿಯಂತ್ರಿತ ಬೆಳವಣಿಗೆಯನ್ನು ತೋರಿಸುತ್ತವೆ. ಆದರೆ, ಸಾಮಾನ್ಯಕ್ಕಿಂತಲೂ ಮಿತಿ ಮೀರಿದ ಕೋಶಗಳ ವಿಭಜನೆಯಾಗುತ್ತವೆ. ಶರೀರದ ಒಂದು ಭಾಗದಲ್ಲಿ ಒಂದು ಕಡೆ ಕಾಣಿಸಿಕೊಂಡರೆ, ಅಕ್ಕಪಕ್ಕದ ಕೋಶಗಳನ್ನೂ ಕೂಡ ನಾಶಪಡಿಸುತ್ತದೆ. ದೇಹದ ಇತರೆ ಭಾಗಗಳಿಗೆ ವೇಗವಾಗಿ ಪಸರಿಸುತ್ತದೆ. ಸಾಮಾನ್ಯವಾಗಿ ಕ್ಯಾನ್ಸರ್ ಎಂಬುದು ದೇಹದ ಯಕೃತ್, ಶ್ವಾಸಕೋಶಗಳು, ದುಗ್ಧರಸ ಗ್ರಂಥಿಗಳು ಹಾಗೂ ಮೂಳೆಗಳಲ್ಲಿ ಕಾಣಿಸಿಕೊಳ್ಳುತ್ತವೆ. 

ಕ್ಯಾನ್ಸರ್ ನಲ್ಲಿ ಅನೇಕ ವಿಧದ ಕ್ಯಾನ್ಸರ್ ಗಳಿದ್ದು, ಒಂದು ರೀತಿಯ ಕ್ಯಾನ್ಸರ್'ಗೂ ವಿಭಿನ್ನ ರೀತಿಯ ಚಿಕಿತ್ಸೆಗಳಿವೆ. ಟ್ಯೂಮರ್ ಎಲ್ಲಿದೆ. ಯಾವ ಹಂತದಲ್ಲಿದೆ ಎಂಬುದನ್ನು ಅರಿತು ವೈದ್ಯರು ಚಿಕಿತ್ಸೆಗಳನ್ನು ನೀಡುತ್ತಾರೆ. ಕ್ಯಾನ್ಸರ್ ರೋಗಕ್ಕೆ ವಿಕಿರಣ, ಜೈವಿಕ ಮತ್ತು ಶಸ್ತ್ರಚಿಕಿತ್ಸೆ ಎಂಬ ಮೂರು ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. 

ಸಾಮಾನ್ಯವಾಗಿ ಕ್ಯಾನ್ಸರ್ ರೋಗ ದೈಹಿಕಕ್ಕಿಂತಲೂ ಮಾನಸಿಕ ರೋಗದ ಮೇಲೆಯೇ ಹೆಚ್ಚು ಪರಿಣಾಮ ಬೀರುವುದುಂಟು. ಕ್ಯಾನ್ಸರ್ ಇದೆ ಎಂದು ಗೊತ್ತಾದ ಕೂಡಲೇ ಜನರು ಅಘಾತ, ಅಪನಂಬಿಕೆ, ಕೋಪ, ದುಃಖ ಮತ್ತು ಆಯಾಸದ ಭಾವನೆಗಳಲ್ಲಿರುತ್ತಾರೆ. ಇದು ಆರೋಗ್ಯದ ಮೇಲೆ ಮತ್ತಷ್ಟು ಗಂಭೀರ ಪರಿಣಾಮ ಬೀರುತ್ತವೆ. 

ಕ್ಯಾನ್ಸರ್ ಎಂಬುದು ಒಬ್ಬ ವ್ಯಕ್ತಿಯ ಮೇಲಷ್ಟೇ ಅಲ್ಲದ ಕುಟುಂಬ ಹಾಗೂ ಸಂಬಂಧಗಳ ಮೇಲೂ ಗಂಭೀರ ಪರಿಣಾಮ ಬೀರುತ್ತವೆ. ಈ ರೋಗಕ್ಕೆ ಗುರಿಯಾದ ವ್ಯಕ್ತಿ ಜೀವನ ಶೈಲಿ, ಕೆಲಸ ಮತ್ತು ಕುಟುಂಬದ ಜವಾಬ್ದಾರಿಗಳ ಜೊತೆಗೆ ಅನೇಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. 

ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇರುತ್ತದೆ. ಅವೆರಡನ್ನೂ ಸಮಾನವಾಗಿ ನಿಭಾಯಿಸಬೇಕು. ಕೇವಲ ವೈದ್ಯರು ನೀಡುವ ಚಿಕಿತ್ಸೆಯಷ್ಟೇ ಅಲ್ಲ, ಕುಟುಂಬದ ಬೆಂಬಲ ಹಾಗೂ ಪ್ರೀತಿ ಕೂಡ ಇಲ್ಲಿ ಮುಖ್ಯವಾಗುತ್ತದೆ. 

ರೋಗದ ವಿರುದ್ಧ ಹೋರಾಡಲು ನಿರ್ಧರಿಸುವವರು ಹೆಚ್ಚಿನ ಆರೋಗ್ಯಯುತ, ಪರಿಪೂರ್ಣ ಆಹಾರವನ್ನು ಜೀವನ ಶೈಲಿಯಲ್ಲಿ ಸೇರಿಸಿಕೊಳ್ಳಲು ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಬೇಕು. ದಿನಚರಿಗಳಲ್ಲಿ ವ್ಯಾಯಾಮಕ್ಕೂ ಸಮಯವನ್ನು ಮೀಸಲಿಡಬೇಕು. 

ನಿದ್ರೆಯ ಅಭ್ಯಾಸಗಳನ್ನು ಬದಲಿಸಿಕೊಂಡು, ರಾತ್ರಿ ಪೂರ್ತಿ ನಿದ್ರೆ ಮಾಡಬೇಕು. ಇದರಿಂದ ಮಾನಸಿಕ ಆರೋಗ್ಯ ಸುಧಾರಿಸಿ, ಭಾವನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಖುಷಿ ಕೊಡುವ ಕೆಲಸಗಳು ಹಾಗೂ ಹವ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ಒತ್ತಡಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳಬೇಕು. ಭಾವನಾತ್ಮಕ ಬೆಂಬಲಕ್ಕಾಗಿ ಕುಟುಂಬ, ಸ್ನೇಹಿತರು ಹಾಗೂ ನೆರೆಹೊರೆಯವರ ಬೆಂಬಲ ಪಡೆಯಬೇಕು. 
Posted by: MVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Fighting cancer, Cancer, Family support, Health, ಕ್ಯಾನ್ಸರ್ ವಿರುದ್ಧ ಹೋರಾಟ, ಕ್ಯಾನ್ಸರ್, ಕುಟುಂಬ ಬೆಂಬಲ, ಆರೋಗ್ಯ, ಮಾನಸಿಕ ಆರೋಗ್ಯ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS