Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಜಲ್ಲಿಕಟ್ಟು ವಿಧೇಯಕಕ್ಕೆ ತಮಿಳುನಾಡು ವಿಧಾಸಭೆಯಲ್ಲಿ ಒಮ್ಮತದ ಅಂಗೀಕಾರ

ಜಲ್ಲಿಕಟ್ಟು ವಿಧೇಯಕಕ್ಕೆ ತಮಿಳುನಾಡು ವಿಧಾಸಭೆಯಲ್ಲಿ ಸರ್ವಾನುಮತದ ಅಂಗೀಕಾರ

Arun jaitley

ಫೆ.1ರಂದೇ ಕೇಂದ್ರ ಬಜೆಟ್ ಮಂಡನೆಗೆ ಸುಪ್ರೀಂ ಅಸ್ತು

Supreme Court

ಬಜೆಟ್ ಮುಂದೂಡಲು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Virat Kohli

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ, ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾಗಲು ಉತ್ತಮ ವೇದಿಕೆ: ಕೊಹ್ಲಿ

ಬೇರೆ ಪಕ್ಷಗಳಿಂದ ಲಂಚ ಪಡೆಯುವ ಹೇಳಿಕೆ ಪುನರುಚ್ಛರಿಸಲು ಚು.ಆಯೋಗದ ಅನುಮತಿ ಕೇಳಿದ ಕೇಜ್ರಿವಾಲ್

CBI ex chief Ranjit Sinha

ಕಲ್ಲಿದ್ದಲು ಹಗರಣ: ಮಾಜಿ ಸಿಬಿಐ ಮುಖ್ಯಸ್ಥ ರಂಜಿತ್ ಸಿನ್ಹಾ ತನಿಖೆ ನಡೆಸುವಂತೆ ಸಿಬಿಐಗೆ ಸುಪ್ರೀಂ ಆದೇಶ

Mahadayi River

ಮಹದಾಯಿ ವಿವಾದ: ರಾಜ್ಯದ ರೈತರ ಪ್ರತಿಭಟನೆ ತೀವ್ರ

Xi Jinping

ಅಗತ್ಯವಿದ್ದಲ್ಲಿ ವಿಶ್ವದ ನಾಯಕತ್ವ ವಹಿಸಿಕೊಳ್ಳುತ್ತೇವೆ: ಚೀನಾ

Ashwin, Jadeja

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ: ಅಶ್ವಿನ್, ಜಡೇಜಾ ವಿಶ್ರಾಂತಿ, ಮಿಶ್ರಾ, ರಸೂಲ್‌ಗೆ ಸ್ಥಾನ

Aparna Yadav

ಮುಲಾಯಂ ಕಿರಿ ಸೊಸೆ ಅಪರ್ಣಾ ಯಾದವ್ ಲಖನೌ ಕಂಟೋನ್ಮೆಂಟ್ ನಿಂದ ಸ್ಪರ್ಧೆ

ವಾಯುದಾಳಿ

ಆಫ್ಘಾನಿಸ್ತಾನ್‌ನಲ್ಲಿ ವಾಯುದಾಳಿ: 21 ಇಸಿಸ್ ಉಗ್ರರು ಸಾವು

Accident

ಭಯಾನಕ ಅಪಘಾತ: ವ್ಯಕ್ತಿಯೊಬ್ಬನಿಗೆ ಗುದ್ದಿ ಆತನ ಎದೆ ಮೇಲೆ ಬಿದ್ದ ಆಟೋ

Taslima Nasrin

ಭಾರತಕ್ಕೆ ತುರ್ತಾಗಿ ಏಕರೂಪ ನಾಗರಿಕ ಸಂಹಿತೆ ಅಗತ್ಯವಿದೆ: ತಸ್ಲಿಮಾ ನಸ್ರಿನ್

ಮುಖಪುಟ >> ರಾಷ್ಟ್ರೀಯ

2019ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ ಮಾತ್ರ ಅಚ್ಛೇ ದಿನ್ ಬರುತ್ತದೆ: ರಾಹುಲ್ ಗಾಂಧಿ

ದೆಹಲಿಯಲ್ಲಿ ಜನ್ ವೇದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ
Acche din will only come in 2019 when Congress comes back to power: Rahul Gandhi

ಜನ್ ವೇದನಾ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ

ನವದೆಹಲಿ: 2019ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ದೇಶದ ಜನರಿಗೆ ಒಳ್ಳೆಯ ದಿನಗಳು ಬರುತ್ತವೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಬುಧವಾರ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಜನ್ ವೇದನಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ಸರ್ಕಾರದ ಹುಳುಕುಗಳನ್ನು ಮುಚ್ಚಿಕೊಳ್ಳಲು ನರೇಂದ್ರ ಮೋದಿ ನೋಟು ನಿಷೇಧವನ್ನು  ಮುಂದಿಟ್ಟುಕೊಂಡಿದ್ದಾರೆ. ನೋಟು ನಿಷೇಧ ಎನ್ ಡಿಎ ಸರ್ಕಾರದ ಅಸಮರ್ಥ ನಿರ್ಧಾರವಾಗಿದ್ದು, ಸರ್ಕಾರದ ನಿರ್ಧಾರದ ಮೂಲಕ ದೇಶದ ಪ್ರತಿಯೊಂದು ಸಂಸ್ಥೆಗಳನ್ನೂ ಮೋದಿ ದುರ್ಬಲಗೊಳಿಸಿದ್ದಾರೆ ಎಂದು ಕಿಡಿ ಕಾರಿದರು.

ಇದೇ ವೇಳೆ ಪ್ರಧಾನಿ ಮೋದಿ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಹೈಜಾಕ್ ಮಾಡಿ ಅದಕ್ಕೆ ಮರು ನಾಮಕರಣ ಮಾಡಿ ಜಾರಿಗೆ ತರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯೋಗಸಾನವನ್ನು ಬಹಳ ಚೆನ್ನಾಗಿ ಮಾಡಬಹುದು  ಆದರೆ ಅವರು ಪದ್ಮಾಸನ ಹಾಕುವುದಿಲ್ಲ. ಇದನ್ನು ಯಾರಾದರೂ ಗಮನಿಸಿದ್ದೀರಾ..? ಕ್ಲೀನ್ ಇಂಡಿಯಾ ಯೋಜನೆಗಾಗಿ ಪೊರಕೆ ಹಿಡಿದು ಪೋಸ್ ಕೊಡುವ ಪ್ರಧಾನಿ ಮೋದಿ ಅಲ್ಲಿ ಏನನ್ನೂ ಶುಚಿಗೊಳಿಸುವುದಿಲ್ಲ. ಕೇವಲ  ಕ್ಯಾಮೆರಾಗಳಿಗೆ ಪೋಸ್ ಕೊಡವುದಷ್ಟೇ ಅವರ ಕೆಲಸ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಆರ್ ಎಸ್ ಎಸ್ ವಿರುದ್ಧವೂ ಕಿಡಿಕಾರಿದ ರಾಹುಲ್ ಗಾಂಧಿ, ಆರ್ ಎಸ್ ಎಸ್ ಏಕಪಕ್ಷೀಯವಾಗಿ ವರ್ತಿಸುತ್ತಿದ್ದು, ಸರ್ವೋಚ್ಛ ಅಧಿಕಾರಿಯಂತೆ ಸೂಚನೆ ನೀಡುತ್ತಿದೆ. ಬಿಜೆಪಿ ಹೇಳಿದ್ದು ನಿಜ ನಾವು 7 ವರ್ಷಗಳಲ್ಲಿ  ಮಾಡಲಾಗದ್ದನ್ನು ಮೋದಿ ಸರ್ಕಾರ ಕೇವಲ 2.5 ವರ್ಷಗಳಲ್ಲಿ ಮಾಡಿ ತೋರಿಸಿದೆ. ಅದೇನೆಂದರೆ ಆರ್ ಬಿಐ, ನ್ಯಾಯಾಂಗದಂತಹ ದೇಶದ ಪ್ರಮುಖ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ಮತ್ತು ಆರ್ ಎಸ್ ಎಸ್ ಇಂದು  ದುರ್ಬಲಗೊಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ನೋಟು ನಿಷೇಧದ ಸಾಧಕ-ಬಾಧಕಗಳ ಕುರಿತಂತೆ ತಮ್ಮನ್ನು ತಾವೇ ಪ್ರಶ್ನಿಸಿಕೊಂಡರೆ ಉತ್ತರ ಸಿಗುತ್ತದೆ. ದೇಶದಲ್ಲಿನ ಹಳ್ಳಿಯ ಜನತೆ, ಕಾರ್ಮಿಕ ವರ್ಗ, ರೈತಾಪಿ ವರ್ಗಗಳು ಹೇಗೆ ಆರ್ಥಿಕ  ಬಿಕ್ಕಟ್ಟಿನಿಂದ ಭವಣೆ ಪಡುತ್ತಿವೆ ಎಂದು ತಿಳಿಯುತ್ತದೆ. 2019ರಲ್ಲಿ ದೇಶದ ಜನತೆಗೆ ಖಂಡಿತಾ ಅಚ್ಚೇದಿನ್ ಬರುವ ವಿಶ್ವಾಸ ತಮಗಿದ್ದು, ಕಾಂಗ್ರೆಸ್ ಪಕ್ಷವನ್ನು ಜನ ಬೆಂಬಲಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದರು.

ಸಂಬಂಧಿಸಿದ್ದು...
Posted by: SVN | Source: ANI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : New Delhi, Demonetization, Rahul Gandhi, Congress, PM Modi, ನವದೆಹಲಿ, ನೋಟು ನಿಷೇಧ, ರಾಹುಲ್ ಗಾಂಧಿ, ಕಾಂಗ್ರೆಸ್, ಪ್ರಧಾನಿ ಮೋದಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement