Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Team India

ಕ್ರಿಕೆಟ್ ಪ್ರೇಮಿಗಳಿಗೆ ಯುಗಾದಿ ಗಿಫ್ಟ್: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ

state government hikes dearness allowance by 3 Percent

ಯುಗಾದಿ ಕೊಡುಗೆ: ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ

Air India Cancels Another Ticket For ShivSena MP R Gaikwad

ಮತ್ತೆ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಟಿಕೆಟ್ ರದ್ದು ಮಾಡಿದ ಏರ್ ಇಂಡಿಯಾ

I don

ವಿದೇಶಿ ನೆಲದಲ್ಲೂ ಪ್ರಶಸ್ತಿ ಗೆಲ್ಲಲು ಟೀಂ ಇಂಡಿಯಾ ಸಮರ್ಥ: ಕೋಚ್ ಅನಿಲ್ ಕುಂಬ್ಳೆ

Budgam encounter: 2 civilians, one militant killed

ಬದ್ಗಾಮ್: ಸೇನಾಪಡೆ-ಉಗ್ರರ ನಡುವೆ ಗುಂಡಿನ ಚಕಮಕಿ; ಓರ್ವ ಉಗ್ರ, ಇಬ್ಬರು ನಾಗರಿಕರ ಸಾವು

KL Rahul

ಒಂದೇ ಸರಣಿ, 4 ಪಂದ್ಯ: ಕನ್ನಡಿಗ ಕೆಎಲ್ ರಾಹುಲ್ 6 ಅರ್ಧ ಶತಕದ ಸಾಧನೆ

To face summer rush of pilgrims, no VIP darshan at Tirumala Tirupati temple: Sources

ಬೇಸಿಗೆ ಜನಸಂದಣಿ ತಡೆಯಲು ಟಿಟಿಡಿ ಮಾಸ್ಟರ್ ಪ್ಲಾನ್; ವಾರದ ವಿಐಪಿ ದರ್ಶನ ರದ್ದು!

File photo

ಮಹಿಳೆಯರಿಗೆ ರಾತ್ರಿ ಪಾಳಿ ಬೇಡ: ಸದನ ಸಮಿತಿ ಶಿಫಾರಸು

Appointment of Lokpal not possible in current scenario: Centre tells Supreme Court

ಪ್ರಸ್ತುತ ಪರಿಸ್ಥಿತಿಯಲ್ಲಿ ಲೋಕಪಾಲ್ ನೇಮಕ ಸಾಧ್ಯವಿಲ್ಲ: ಸುಪ್ರೀಂಗೆ ಕೇಂದ್ರ ಸರ್ಕಾರದ ಹೇಳಿಕೆ

Off-spinner Ravichandran Ashwin receives Sir Garfield Sobers Trophy

ಆರ್ ಅಶ್ವಿನ್ ಗೆ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ಪ್ರದಾನ

Australia captain Steve Smith

ಮುರಳಿ ವಿಜಯ್ ವಿರುದ್ಧ ಅಶ್ಲೀಲ ಶಬ್ಧ ಬಳಕೆ: ಕ್ಷಮೆಯಾಚಿಸಿದ ಸ್ಟೀವನ್ ಸ್ಮಿತ್

A man checks out a natural compost making process at an exhibition outside Vidhana Soudha in Bengaluru on Monday

ಹಸಿ ತ್ಯಾಜ್ಯಗಳಿಂದ ಗೊಬ್ಬರ ತಯಾರಿಸಿ ಹಣ ಸಂಪಾದಿಸಿ: ಬಿಬಿಎಂಪಿ ಹೊಸ ಯೋಜನೆ

Mamata Kulkarni and Vicky Goswami

ನಟಿ ಮಮತಾ ಕುಲಕರ್ಣಿ, ವಿಕಿ ಗೋಸ್ವಾಮಿ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿ

ಮುಖಪುಟ >> ರಾಷ್ಟ್ರೀಯ

ಆದಿತ್ಯನಾಥ್ ಬದಲು ಬೇರೊಬ್ಬರನ್ನು ಸಿಎಂ ಮಾಡಲು ಮೋದಿ ಇಚ್ಛಿಸಿದ್ದರು!

ಉತ್ತರ ಪ್ರದೇಶದ ನಿತಿನ್ ಪಟೇಲ್ ಆದ್ರಾ ಮನೋಜ್ ಸಿನ್ಹಾ?
Narendra Modi

ನರೇಂದ್ರ ಮೋದಿ

ನವದೆಹಲಿ: ಉತ್ತರ ಪ್ರದೇಶದಲ್ಲಿ ಯೋಗಿಯ ಆಡಳಿತ ಪರ್ವ ಪ್ರಾರಂಭವಾಗಿದೆ. ಈ ಹಂತದಲ್ಲಿ ಮತ್ತೊಂದು ಪ್ರಶ್ನೆ ಉದ್ಭವಿಸಿದ್ದು, ಯೋಗಿ ಆದಿತ್ಯನಾಥ್ ನಿಜಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರ ಆಯ್ಕೆಯ ಸಿಎಂ ಅಭ್ಯರ್ಥಿಯಾಗಿದ್ದರಾ? ಎಂಬ ಪ್ರಶ್ನೆ ಮೂಡಿದೆ. 

ಮುಖ್ಯಮಂತ್ರಿಯ ಆಯ್ಕೆ ವೇಳೆಯಲ್ಲಿ ಮನೋಜ್ ಸಿನ್ಹಾ ಅವರ ಹೆಸರು ಮುಂಚೂಣಿಯಲ್ಲಿತ್ತು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಥಮ ಆದ್ಯತೆಯೂ ಮನೋಜ್ ಸಿನ್ಹಾ ಅವರೇ ಆಗಿದ್ದರು, ಆದರೆ ಅಂದುಕೊಂಡಂತೆ ಆಗದೇ ಮನೋಜ್ ಸಿನ್ಹಾ ಉತ್ತರ ಪ್ರದೇಶದ ನಿತಿನ್ ಪಟೇಲ್ ಆದರೆಂದು ವಿಶ್ಲೇಷಿಸಲಾಗುತ್ತಿದೆ. 

ಗುಜರಾತ್ ನಲ್ಲಿ ಆನಂದಿ ಬೆನ್ ಪಟೇಲ್ ಸಿಎಂ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ ಬಳಿಕ ನಿತಿನ್ ಪಟೇಲ್ ಗುಜರಾತ್ ನ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿತ್ತು. ಆದರೆ ಕೊನೆ ಘಳಿಗೆಯಲ್ಲಿ ವಿಜಯ್ ರುಪಾನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಉತ್ತರ ಪ್ರದೇಶದಲ್ಲಿಯೂ ಇದೇ ಮಾದರಿಯಲ್ಲಿ ಕೊನೆ ಘಳಿಗೆಯಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಬೇಕಿದ್ದ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಮನೋಜ್ ಸಿನ್ಹಾ ಅವರು ಕಾಶಿ ವಿಶ್ವನಾಥ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಂದ ಬಳಿಕ ಅವರೇ ಸಿಎಂ ಆಗಲಿದ್ದಾರೆ ಎಂದು ಮಾಧ್ಯಮಗಳು ವಿಶ್ಲೇಷಣೆ ಮಾಡಿದ್ದವು. ಆದರೆ ಇದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ ಅಸಮಾಧಾನಗೊಂಡು ಅಮಿತ್ ಷಾ ಬಳಿ ಪ್ರತಿಭಟನೆ ವ್ಯಕ್ತಪಡಿಸಿದರು. ಇದರಿಂದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಮಸ್ಯೆ ಉಂಟಾಗಲಿತ್ತು ಎಂಬ ಸಂದೇಶ ಅಮಿತ್ ಷಾ ಅವರಿಗೆ ರವಾನೆಯಾಗಿತ್ತು. ಶುಕ್ರವಾರದ ವರೆಗೂ ಮನೋಜ್ ಸಿನ್ಹಾ ಅವರೇ ಸಿಎಂ ಆಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಶನಿವಾರ ನಡೆದ ಬೆಳವಣಿಗೆಯಲ್ಲಿ ಕೇಶವ್ ಪ್ರಸಾದ್ ಮೌರ್ಯ ಯೋಗಿ ಆದಿತ್ಯನಾಥ್ ಸಿಎಂ ಆಗುವುದಾದರೆ ಒಪ್ಪುವುದಾಗಿ ತಿಳಿಸಿದರು. ಅಷ್ಟೇ ಅಲ್ಲದೇ ಈ ಷರತ್ತಿಗೆ ಆರ್ ಎಸ್ಎಸ್ ನ ಹಿರಿಯ ನಾಯಕರು ಹಾಗೂ ಪಕ್ಷದ ಒಳಗಿನಿಂದಲೇ ಬೆಂಬಲ ಪಡೆಯುವಲ್ಲಿ ಯಶಸ್ವಿಯೂ ಆದರು. ಕೇಶವ್ ಪ್ರಸಾದ್ ಮೌರ್ಯ ಸೇರಿದಂತೆ ಪಕ್ಷದಲ್ಲಿನ ಬೆಂಬಲ ಹಾಗೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಕಾರ್ಯಸೂಚಿಗಳನ್ನು ಜಾರಿಗೊಳಿಸುವುದಕ್ಕೆ ಸಮರ್ಥವಾದ ವ್ಯಕ್ತಿತ್ವ ಹೊಂದಿದ್ದರಿಂದ ಯೋಗಿ ಆದಿತ್ಯನಾಥ್ ಅವರನ್ನು ಕೊನೆ ಘಳಿಗೆಯಲ್ಲಿ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡಲಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ. 
ಸಂಬಂಧಿಸಿದ್ದು...
Posted by: SBV | Source: TNIE

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Uttar Pradesh CM, Yogi Adityanath, Narendra Modi, Manoj Sinha, ಉತ್ತರ ಪ್ರದೇಶ ಸಿಎಂ, ಯೋಗಿ ಆದಿತ್ಯನಾಥ್, ನರೇಂದ್ರ ಮೋದಿ, ಮನೋಜ್ ಸಿನ್ಹಾ
English summary
Was Yogi Adityanath the first choice of Prime Minister Narendra Modi for the Uttar Pradesh crown? The question continues to haunt a number of BJP leaders, even after the firebrand Gorakhpur MP took command of India’s politically most crucial State

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement