Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Prime Minister Narendra Modi (File photo)

ಭಾರತದ ಶಕ್ತಿ ಪ್ರದರ್ಶಿಸಲು 'ಮನ್ ಕಿ ಬಾತ್' ಪರಿಣಾಮಕಾರಿ ಮಾರ್ಗ: ಪ್ರಧಾನಿ ಮೋದಿ

Sushma Swaraj and Dr Maliha Lodhi

ದಕ್ಷಿಣ ಏಷ್ಯಾದಲ್ಲಿ ಭಾರತ ಭಯೋತ್ಪಾದಕರ ತಾಯ್ನಾಡು: ಭಾರತಕ್ಕೆ ಪಾಕ್

Sushma Swaraj

ನಾವು ವೈದ್ಯರು, ಎಂಜಿನಿಯರ್, ವಿಜ್ಞಾನಿಗಳನ್ನು ಸೃಷ್ಟಿಸಿದರೆ ಪಾಕ್ ಉಗ್ರರು, ಜಿಹಾದಿಗಳನ್ನು ಹುಟ್ಟು ಹಾಕುತ್ತಿದೆ: ಸುಷ್ಮಾ ಸ್ವರಾಜ್

ಪ್ರಧಾನಿ ಮೋದಿ

ಸೋನಿಪತ್ ವಿದ್ಯಾರ್ಥಿನಿ ಗ್ಯಾಂಗ್‍ರೇಪ್: ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ ಅತ್ಯಾಚಾರ ಸಂತ್ರಸ್ತೆ

Mary Kom

ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸಭೆಗೆ ಬಾಕ್ಸಿಂಗ್ ಪ್ರತಿನಿಧಿಯಾಗಿ ಮೇರಿಕೋಮ್ ಆಯ್ಕೆ

External Affairs Minister Sushma Swaraj and Congress vice-president Rahul Gandhi (File photo)

ವಿಶ್ವಸಂಸ್ಥೆಯಲ್ಲಿ ಕಾಂಗ್ರೆಸ್ ಸಾಧನೆ ಹೊಗಳಿದ ಸುಷ್ಮಾ ಸ್ವರಾಜ್'ಗೆ ಧನ್ಯವಾದ: ರಾಹುಲ್ ಗಾಂಧಿ

India vs Australia 3rd ODI: Australia win the toss, elect to bat first

3ನೇ ಏಕದಿನ ಪಂದ್ಯ: ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ

Orouba Barakat, Halla

ಟರ್ಕಿ: ಕತ್ತು ಸೀಳಿ ಸಿರಿಯಾ ಪ್ರತಿಪಕ್ಷ ನಾಯಕಿ, ಪುತ್ರಿಯ ಭೀಕರ ಕೊಲೆ

File photo

ಜಮ್ಮು-ಕಾಶ್ಮೀರ: ಉಗ್ರರ ಅಡಗುತಾಣಗಳ ಮೇಲೆ ದಾಳಿ, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ವಶಕ್ಕೆ

Watch: Ahead Of 3rd ODI Against Australia, Team India Finds Another Mystery Spinner

ಭಾರತದ ಬತ್ತಳಿಕೆಗೆ ಮತ್ತೊಂದು 'ಮಿಸ್ಟ್ರಿ ಸ್ಪಿನ್' ಅಸ್ತ್ರ!

Hindu goddess Durga

ದೇವಿ ದುರ್ಗಾ ಮಾತೆಯನ್ನು ವೇಶ್ಯೆಯೆಂದ ದೆಹಲಿ ವಿವಿ ಪ್ರಾಧ್ಯಾಪಕ: ಪ್ರಕರಣ ದಾಖಲು

Representational image

ಡಿಗ್ರಿ ಕಾಲೇಜುಗಳಲ್ಲಿ ರೆಮೆಡಿಯಲ್ ತರಗತಿಗಳು ಕಡ್ಡಾಯ: ಇಲಾಖೆಯ ಸುತ್ತೋಲೆ

File photo

ಉರಿ ಸೆಕ್ಟರ್'ನಲ್ಲಿ ಎನ್'ಕೌಂಟರ್: ಓರ್ವ ಉಗ್ರನನ್ನು ಸದೆಬಡಿದ ಸೇನೆ, ಮುಂದುವರೆದ ಕಾರ್ಯಾಚರಣೆ

ಮುಖಪುಟ >> ರಾಷ್ಟ್ರೀಯ

ಅಲ್ವಾರ್ ಹತ್ಯೆ ಪ್ರಕರಣ: 6 ಗೋ ರಕ್ಷಕರಿಗೆ ಕ್ಲೀನ್‌ ಚಿಟ್‌ ನೀಡಿದ ರಾಜಸ್ತಾನ ಪೊಲೀಸರು

Alwar lynching: Rajasthan Police give clean chit to cow vigilantes named by Pehlu Khan

ಹತ್ಯೆ ಖಂಡಿಸಿ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೆಹ್ಲೂ ಖಾನ್ ಪುತ್ರ ಇರ್ಷಾದ್

ಅಲ್ವಾರ್: ಹೈನುಗಾರಿಕೆ ರೈತ ಪೆಹ್ಲೂ ಖಾನ್(55) ಹತ್ಯೆ ಪ್ರಕರಣದ ಆರೋಪಿಗಳಾದ ಆರು ಗೋ ರಕ್ಷಕರಿಗೆ ಕ್ಲೀನ್ ಚಿಟ್ ನೀಡುವ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಮುಂದಾಗಿರುವ ರಾಜಸ್ತಾನ ಸರ್ಕಾರದ ನಿರ್ಧಾರದ ವಿರುದ್ಧ ಹಲವು ಕಾರ್ಯಕರ್ತರು ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೆಹ್ಲೂ ಖಾನ್ ತನ್ನ ಇಬ್ಬರು ಮಕ್ಕಳೊಂದಿಗೆ ಜೈಪುರದ ಜಾನುವಾರು ಸಂತೆಯಲ್ಲಿ ಹಸುಗಳನ್ನು ಖರಿದೀಸಿ ಹರಿಯಾಣದ ಸ್ವಗ್ರಾಮ ನುಹ್ ಗೆ ಸಾಗಿಸುತ್ತಿದ್ದ ವೇಳೆ ಗೋ ರಕ್ಷಕರು ಅವರ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪೆಹ್ಲೂ ಖಾನ್ ಅವರು ಎರಡು ದಿನಗಳ ಬಳಿಕ ಮೃತಪಟ್ಟಿದ್ದರು. ಆದರೆ ಸಾಯುವ ಮುನ್ನ ತಮ್ಮ ಮೇಲೆ ದಾಳಿ ಮಾಡಿದ ಆರು ಗೋರಕ್ಷಕರ ಹೆಸರು ಹೇಳಿದ್ದರು. ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ ರಾಜಸ್ತಾನ ಪೊಲೀಸರು ಈಗ ತನಿಖೆ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.

ಪೆಹ್ಲೂ ಖಾನ್ ಹೆಸರಿಸಿದ್ದ ಆರು ಆರೋಪಿಗಳಿಗೂ ರಾಜಸ್ತಾನ ಪೊಲೀಸರು ಕ್ಲೀನ್‌ ಚಿಟ್‌ ನೀಡಿದ್ದಾರೆ. ಇವರಲ್ಲಿ ಮೂವರು ಹಿಂದೂ ಪರಿವಾರದ  ಜತೆ ಗುರುತಿಸಿಕೊಂಡಿದ್ದರು ಎಂದು ವರದಿ ಮಾಡಲಾಗಿದೆ.

ಆರೋಪಿಗಳ ಮೊಬೈಲ್‌ ಸಂಖ್ಯೆ ಹಾಗೂ ಘಟನೆ ನಡೆದ ಸ್ಥಳದಲ್ಲಿನ ಮೊಬೈಲ್‌ ಟವರ್‌ ಮತ್ತು ಮೊಬೈಲ್‌ ವಿಡಿಯೊ ಪರಿಶೀಲಿಸಲಾಗಿದ್ದು ಇವುಗಳಲ್ಲಿ ಬಲವಾದ ಸಾಕ್ಷ್ಯ ಸಿಗದ ಕಾರಣ ಆರೋಪಿಗಳಿಗೆ ಕ್ಲೀನ್‌ ಚಿಟ್‌ ನೀಡಲಾಗಿದೆ ಎಂದು ಪೊಲೀಸ್‌ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಈ  ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರನ್ನು ಬಂಧಿಸಿದ ಬಳಿಕ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Posted by: LSB | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Alwar lynching, Rajasthan Polic, cow vigilantes, clean chit, ಅಲ್ವಾರ್ ಹತ್ಯೆ ಪ್ರಕರಣ, ರಾಜಸ್ತಾನ ಪೊಲೀಸರು, ಗೋ ರಕ್ಷಕರು, ಕ್ಲೀನ್‌ ಚಿಟ್‌

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement