Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Rescuers search for survivors amid the rubble of a collapsed building after a powerful quake in Mexico City on September 19, 2017.

ಮೆಕ್ಸಿಕೊ ನಗರದಲ್ಲಿ ಭೂಕಂಪ: 139 ಮಂದಿ ಸಾವು, ಅನೇಕ ಕಟ್ಟಡಗಳು ನಾಶ

Heavy rain In Mumbai

ಮತ್ತೆ ಮುಂಬೈನಲ್ಲಿ ಮಹಾಮಳೆ: 24 ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

Honeypreet

ನೇಪಾಳದಲ್ಲಿ ಹನಿಪ್ರೀತ್ ಸುತ್ತಾಟದ ಸುಳಿವು: ತೀವ್ರ ಶೋಧ

Representational image

ಪ್ರಧಾನಿ ಬೆಳೆ ವಿಮಾ ಯೋಜನೆಯಡಿ ಮಧ್ಯ ಪ್ರದೇಶದ ಈ ರೈತನಿಗೆ ಸಿಕ್ಕಿದ ಪರಿಹಾರ ಮೊತ್ತ ಕೇವಲ 4 ರೂ.

Gateshwar Panth Canal Project

ಬಿಹಾರದಲ್ಲಿ ಉದ್ಘಾಟನೆಗೊಳ್ಳಬೇಕಿದ್ದ ಅಣೆಕಟ್ಟು ಕುಸಿತ

West Indies

2019ರ ವಿಶ್ವಕಪ್ಗೆ ನೇರ ಅರ್ಹತೆ ಕಳೆದುಕೊಂಡ ವಿಂಡೀಸ್, ಶ್ರೀಲಂಕಾ ಲಗ್ಗೆ

Siddaramaiah

224 ಕ್ಷೇತ್ರಗಳಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸಿ ಗೆಲ್ಲುತ್ತೇನೆ: ಸಿದ್ದರಾಮಯ್ಯ

US President Donald Trump

ಉತ್ತರ ಕೊರಿಯಾವನ್ನು ಸಂಪೂರ್ಣ ನಾಶ ಮಾಡುತ್ತೇವೆ: ಟ್ರಂಪ್ ಎಚ್ಚರಿಕೆ

Rahul Gandhi, MS Dhoni

ಎಂಎಸ್ ಧೋನಿಗೂ ರಾಹುಲ್ ಗಾಂಧಿಗೂ ಇರುವ ಸಾಮ್ಯತೆ ಏನು? ರಮ್ಯಾ ಫೇಸ್ ಬುಕ್ ಪೋಸ್ಟ್, ಟ್ರೋಲ್

Gauri Lankesh

ಗೌರಿ ಲಂಕೇಶ್ ಮರ್ಡರ್ ಕೇಸ್: ಹತ್ಯೆಗೆ ಬಳಸಿದ್ದ ಬುಲೆಟ್ಸ್ ತಯಾರಾಗಿದ್ದು ಮಹಾರಾಷ್ಟ್ರದಲ್ಲಿ

The condom ad hoarding

ವಿವಾದ ಹೊತ್ತಿಸಿದ ಸನ್ನಿಲಿಯೋನ್ ನವರಾತ್ರಿ ಕಾಂಡೋಮ್ ಜಾಹೀರಾತು ಫಲಕ!

Now, pressure on CM Siddaramaiah to contest from North Karnataka

ಬಿಎಸ್ ವೈ ಆಯ್ತು, ಈಗ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ

Virat kohli-AB de villiers

ಜ.5ರಿಂದ ಟೀಂ ಇಂಡಿಯಾ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ?

ಮುಖಪುಟ >> ರಾಷ್ಟ್ರೀಯ

ಶಿಂಜೋ ಅಬೆ ಭಾರತ ಪ್ರವಾಸ: ಮಹತ್ವದ ಯುಎಸ್-2 ವಿಮಾನ ಖರೀದಿ ಒಪ್ಪಂದ ಅಂತಿಮ ಸಾಧ್ಯತೆ!

ಜಪಾನ್ ನಿಂದ 12 ಯುದ್ಧ ವಿಮಾನ ಖರೀದಿ, 18 ಯುದ್ಧ ವಿಮಾನಗಳು ಭಾರತದಲ್ಲೇ ತಯಾರಿ
India, Japan to finalise US-2 amphibious aircraft deal during Shinzo Abe

ಯುಎಸ್-2 ಯುದ್ಧ ವಿಮಾನ

ಅಹ್ಮದಾಬಾದ್: ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಗುಜರಾತ್ ನ ಅಹ್ಮದಾಬಾದ್ ಗೆ ಭೇಟಿ ನೀಡಿರುವ ಬೆನ್ನಲ್ಲೇ ಭಾರತದ ಮಹತ್ವಾಕಾಕ್ಷಿ ಯುಎಸ್-2  ವಿಮಾನ ಖರೀದಿ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಹತ್ವಾಕಾಕ್ಷಿ ಯುಎಸ್-2  ವಿಮಾನ ಖರೀದಿ ಒಪ್ಪಂದದ ಕುರಿತು ಮಾತುಕತೆ ನಡೆಸಿದ್ದರು. ಇದೀಗ ಶಿಂಜೋ ಅಬೆ ಅವರು ಭಾರತಕ್ಕೆ  ಭೇಟಿ ನೀಡಿದ್ದು, ಈ ಭೇಟಿ ಸಂದರ್ಭದಲ್ಲೇ ಈ ಮಹತ್ವಾಕಾಂಕ್ಷಿ ಯೋಜನೆ ಅಂತಿಮ ರೂಪ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಜಪಾನ್ ನೊಂದಿಗಿನ ಒಪ್ಪಂದದಂತೆ ಭಾರತ 12 ಯುಎಸ್-2  ವಿಮಾನಗಳನ್ನು ಖರೀದಿ ಮಾಡುತ್ತಿದ್ದು, 18 ವಿಮಾನಗಳನ್ನು ಜಪಾನ್ ಸಹಯೋಗದೊಂದಿಗೆ ಭಾರತದಲ್ಲೇ ನಿರ್ಮಾಣ ಮಾಡುವಂತೆ ಒಪ್ಪಂದ ರೂಪಿಸಲಾಗಿದೆ ಎನ್ನಲಾಗಿದೆ.

ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯ ಸೇನೆಗೆ ಬಲ ತುಂಬುವುದಷ್ಟೇ ಅಲ್ಲದೇ ಅವರ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾಗೂ ಒತ್ತು ನೀಡಿದ್ದಾರೆ ಎಂದು ಹೇಳಲಾಗಿದೆ. ಜಪಾನ್ ಯುಎಸ್-2  ವಿಮಾನಗಳು ಯಾವುದೇ ರೀತಿಯ ಹವಾಮಾನದಲ್ಲೂ ತಡೆ ಇಲ್ಲದೇ ಹಾರಾಡಬಲ್ಲ ಸಾಮರ್ಥ್ಯವನ್ನು ಹೊಂದಿವೆ. ಪ್ರಮುಖವಾಗಿ ಸಮುದ್ರದ ಮೇಲೆ ಹಾರಡಬಲ್ಲ ಮತ್ತು ಸಮುದ್ರದಲ್ಲೇ ಇಳಿಯಬಲ್ಲ ವಿಮಾನವಾಗಿದ್ದು, ಸೇನೆಯ  ಸರಕು ಸಾಗಾಣಿಕೆಗೆ ಈ ವಿಮಾನಗಳು ಬಹಳ ಉಪಕಾರಿಯಾಗಿರುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದೇ ಕಾರಣಕ್ಕೆ ಭಾರತ ಈ ಪ್ರಬಲ ಯುದ್ಧ ವಿಮಾನಗಳನ್ನ  ಖರೀದಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಇದಕ್ಕೆ ಇಂಬು ನೀಡುವಂತೆ ಭಾರತದ ಈ ಹಿಂದಿನ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರು ಕಳೆದ ಸೆಪ್ಟೆಂಬರ್ 5ರಂದು ನಡೆದ ಭಾರತ-ಜಪಾನ್ ವಾರ್ಷಿಕ ರಕ್ಷಣಾ ಸಚಿವರ ಭೇಟಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಜಪಾನ್ ರಕ್ಷಣಾ  ಸಚಿವ ಇಟ್ಸುನೋರಿ ಒನೊಡೆರಾ ಅವರೊಂದಿಗೆ ಚರ್ಚೆ ಮಾಡಿದ್ದರು. ಈ ವೇಳೆ ಜಪಾನ್ ಹಲವು ಶಸ್ತ್ರಾಸ್ತ್ರಗಳ ಖರೀದಿಯೊಂದಿಗೆ ಯುಎಸ್-2 ವಿಮಾನ ಖರೀದಿ ಕುರಿತೂ ಅರುಣ್ ಜೇಟ್ಲಿ ಮಾತುಕತೆ ನಡೆಸಿದ್ದರು ಎಂದು  ತಿಳಿದುಬಂದಿದೆ.

ಸಂಬಂಧಿಸಿದ್ದು...
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Ahmadabad, Shinzo Abe India Visit, Japan, PM Modi, US-2 aircraft, ಅಹ್ಮದಾಬಾದ್, ಜಪಾನ್, ಶಿಂಜೋ ಅಬೆ ಭಾರತ ಪ್ರವಾಸ, ಪ್ರಧಾನಿ ಮೋದಿ, ಯುಎಸ್-2 ವಿಮಾನ
English summary
India is expected to seal the deal to buy the US-2 amphibious aircraft from Japan during Shinzo Abe visit. India will buy 12 US-2 ShinMaywa aircrafts in flyway condition and another 18 will be jointly manufactured in India. Notably, last year, China had reacted angrily to reports that Japan plans to sell weapons to India at cheaper prices, saying that such a move is disgraceful.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement