Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Arun Jaitley

ರಾಹುಲ್ ಗಾಂಧಿ ಟ್ವೀಟ್ , ಫ್ರಾಂಕೊಯಿಸ್ ಹೊಲಾಂಡ್ ಹೇಳಿಕೆ ಸಂಘಟಿತ ಪಿತೂರಿಯೇ?; ಅರುಣ್ ಜೇಟ್ಲಿ ಸಂದೇಹ

File photo

ಯುದ್ಧಕ್ಕೆ ಸಿದ್ಧ, ಆದರೂ ಜನರ ಹಿತಾಸಕ್ತಿಗಾಗಿ ಶಾಂತಿ ಮಾರ್ಗ ಅನುಸರಿಸುತ್ತೇವೆ: ರಾವತ್ ಹೇಳಿಕೆಗೆ ಪಾಕಿಸ್ತಾನ

Filmmaker Kalpana Lajmi, Director Of Acclaimed Film

ಖ್ಯಾತ ಚಲನಚಿತ್ರ ನಿರ್ದೇಶಕಿ ಕಲ್ಪನಾ ಲಜ್ಮಿ ನಿಧನ

PM Narendra Modi inaugarated health programme

ವಿಶ್ವದ ಅತಿದೊಡ್ಡ ಆರೋಗ್ಯ ಸೇವೆ 'ಆಯುಷ್ಮಾನ್ ಭಾರತ್'ಗೆ ಪ್ರಧಾನಿ ಮೋದಿ ಚಾಲನೆ

Bengaluru: High Grounds Police Arrests Actor Duniya vijay Over Kidnap And Assault case

ಮಧ್ಯರಾತ್ರಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ, ನಟ ದುನಿಯಾ ವಿಜಿ ಬಂಧನ

Sarveswara Rao

ಮಾವೋವಾದಿಗಳಿಂದ ಆಂಧ್ರ ಶಾಸಕನ ಸರ್ವೇಶ್ವರ್ ರಾವ್ ಹತ್ಯೆ

America president Donald Trump

ಸರ್ಕಾರಿ ಸೌಲಭ್ಯ ಪಡೆಯುವ ವಲಸಿಗರಿಗೆ ಗ್ರೀನ್ ಕಾರ್ಡು ನಕಾರ; ಅಮೆರಿಕಾ ಸರ್ಕಾರ ಕಾನೂನು ಜಾರಿ?

Fuel prices up again: Check out prices for petrol and diesel in major cities

ತೈಲ ಬೆಲೆ ಮತ್ತೆ ಹೆಚ್ಚಳ: ಯಾವ ನಗರದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟು?

Police May lodge Rowdy Sheet Against Actor Duniya Vijay

ನಟ ದುನಿಯಾ ವಿಜಯ್ ವಿರುದ್ಧ ಪೊಲೀಸರಿಂದ ರೌಡಿ ಶೀಟರ್?

Incumbent mayor Sampath Raj riding a scooter while inspecting roads

ಬಿಬಿಎಂಪಿ: ನೂತನ ಮೇಯರ್ ಗೆ ಸಿಗಲಿದೆ 'ಬೆಳ್ಳಿಯ ಕೀ' ಜೊತೆಗೆ ಹತ್ತು ಹಲವು ಸವಾಲು

Representational image

ಕೆಎಸ್ಒಯುನಲ್ಲಿ ಯುಜಿ, ಪಿಜಿ ಪ್ರವೇಶಕ್ಕೆ ವಯಸ್ಸು ಆಧರಿತ ಪ್ರವೇಶ ರದ್ದು

Meet the Pakistani man who sang Indian national anthem at Asia Cup

ಭಾರತ-ಪಾಕ್​ ಏಕದಿನ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಹಾಡಿದ ಪಾಕಿಸ್ತಾನಿ ಯುವಕ ಹೇಳಿದ್ದೇನು?

Cow Urine, Dung-Based Soaps And Face Packs Soon A Click Away On Amazon

ಗಂಜಳ, ಸಗಣಿಯಿಂದ ತಯಾರಾದ ಸೋಪು, ಫೇಸ್ ಪ್ಯಾಕ್ ಅಮೇಜಾನ್ ನಲ್ಲಿ ಲಭ್ಯ!

ಮುಖಪುಟ >> ರಾಷ್ಟ್ರೀಯ

ಪಾಸ್'ಪೋರ್ಟ್ ವಿವಾದ: ಆಕ್ಷೇಪ ವ್ಯಕ್ತಪಡಿಸಿದ್ದ ಅಭಿಮಾನಿಯನ್ನು ಬ್ಲಾಕ್ ಮಾಡಿದ ಸುಷ್ಮಾ ಸ್ವರಾಜ್

ಪಾಸ್'ಪೋರ್ಟ್ ವಿವಾದ: ಆಕ್ಷೇಪ ವ್ಯಕ್ತಪಡಿಸಿದ್ದ ಅಭಿಮಾನಿಯನ್ನು ಬ್ಲಾಕ್ ಮಾಡಿದ ಸುಷ್ಮಾ ಸ್ವರಾಜ್

ಬೆಂಗಳೂರು: ಹಿಂದೂ-ಮುಸ್ಲಿಂ ದಂಪತಿಗೆ ಪಾಸ್'ಪೋರ್ಟ್ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅಭಿಮಾನಿಯೊಬ್ಬರನ್ನು ಬ್ಲಾಕ್ ಮಾಡುವ ಮೂಲಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 

ಪೊಲೀಸ ವರದಿಗಳನ್ನು ಕಡೆಗಣಿಸಿ ದಂಪತಿಗಳಿಗೆ ಪಾಸ್'ಪೋರ್ಟ್ ನೀಡಲಾಗಿದೆ. ಉತ್ತಮ ಆಡಳಿತ ನೀಡಲು ಬಂದಿದ್ದರು. ನೋಡಿ, ಉತ್ತಮ ದಿನಗಳು ಬಂದಿವೆ. ಸುಷ್ಮಾ ಅವರೇ, ನಾನು ನಿಮ್ಮ ಅಭಿಮಾನಿ. ನಿಮ್ಮನ್ನು ಅವಹೇಳನ ಮಾಡುವವರನ್ನು ವಿರೋಧಿಸುತ್ತೇನೆ. ಈಗ ನೀವು ನನ್ನನ್ನು ಟ್ವಿಟರ್ ನಲ್ಲಿ ಬ್ಲಾಕ್ ಮಾಡುವ ಮೂಲಕ ಪೀರಿತೋಷಕವನ್ನು ನೀಡಿ. ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿರುತ್ತೇನೆಂದು ಸೋನಮ್ ಎಂಬುವವರು ಟ್ವೀಟ್ ಮಾಡಿ ಅದನ್ನು ಸುಷ್ಮಾ ಅವರಿಗೆ ಟ್ಯಾಗ್ ಮಾಡಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಅವರು, ಕಾಯುವುದು ಏಕೆ? ಇದೋ ನಿಮ್ಮನ್ನು ಬ್ಲಾಕ್ ಮಾಡಿದ್ದೇನೆಂದು ಹೇಳಿದ್ದಾರೆ. ಈ ಮೂಲಕ ಟ್ರೋಲ್ ಮಾಡುತ್ತಿರುವವರಿಗೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಹಿಂದೂ-ಮುಸ್ಲಿಂ ದಂಪತಿಗೆ ಅಧಿಕಾರಿಯೊಬ್ಬರು ಪಾಸ್'ಪೋರ್ಟ್ ನಿರಾಕರಿಸಿದ್ದರಲ್ಲದೆ, ದಂಪತಿಗಳಿಗೆ ಅವಮಾನ ಮಾಡಿದ್ದರು. ಈ ಪ್ರಕರಣ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಬಳಿಕ ಅಧಿಕಾರಿವಿರುದ್ಧ ಕ್ರಮಕೈಗೊಂಡಿದ್ದ ಸುಷ್ಮಾ ಸ್ವರಾಜ್ ಅವರು ಅಧಿಕಾರಿಯನ್ನು ವರ್ಗಾವಣೆ ಮಾಡಿ, ಹಿಂದೂ-ಮುಸ್ಲಿಂ ದಂಪತಿಗೆ ಪಾಸ್'ಪೋರ್ಟ್ ನೀಡಿದ್ದರು. 

ಈ ಘಟನೆಗೆ ಸುಷ್ಮಾ ಸ್ವರಾಜ್ ವಿರುದ್ಧ ಹಲವರು ಟೀಕೆಗಳನ್ನು ಮಾಡಿದ್ದರು. ಅಲ್ಲದೆ, ಕೆಟ್ಟ ಪದಗಳಿಂದ ನಿಂದಿಸಿದ್ದರು. ಅಧಿಕಾರಿ ತಮ್ಮ ಕರ್ತವ್ಯವನ್ನು ಮಾಡಿದ್ದು, ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದರು. ಇದರಂತೆ ಸುಷ್ಮಾ ಸ್ವರಾಜ್ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದರು. 

ಬಳಿಕ ಟ್ರೋಲ್ ಆಗುತ್ತಿರುವ ಕುರಿತಂತೆ ಟ್ವಿಟರ್ ನಲ್ಲಿ ಪೋಲ್ ವೊಂದರಲ್ಲಿ ಸುಷ್ಮಾ ಅವರು ಜನರ ಅಭಿಪ್ರಾಯವನ್ನು ಕೇಳಿದ್ದರು. ಅದರಲ್ಲಿ ಶೇ.43ರಷ್ಟು ಜನರು ನಿಂದನೀಯ ಟ್ವೀಟ್ ಗಳನ್ನು ಸಮರ್ಥಿಸಿಕೊಂಡಿದ್ದರೆ, ಶೇ.57ರಷ್ಟು ಜನರು ಸರಿಯಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು. 

ಶೇ.43ರಷ್ಟು ಮಂದಿ ನಿಂದನೀಯ ಟ್ವೀಟ್ ಸಮರ್ಥಿಸಿಕೊಂಜಿರುವುದನ್ನು ಒಮರ್ ಅಬ್ದುಲ್ಲಾ ಅವರು ಖಂಡಿಸಿದ್ದರಲ್ಲದೆ, ನಿಂದನೀಯ ಟ್ವೀಟ್'ಗಳನ್ನು ಸಮರ್ಥಿಸಿಕೊಳ್ಳುತ್ತಿರುವ ಜನರಿಗೆ ನಾಚಿಕೆಯಾಗಬೇಕೆಂದು ಸುಷ್ಮಾ ಸ್ವರಾಜ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. 
Posted by: MVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Sushma swaraj, Twitter, Troll, Pass port, Fan, Block, ಸುಷ್ಮಾ ಸ್ವರಾಜ್, ಟ್ವಿಟರ್, ಟ್ರೋಲ್, ಪಾಸ್'ಪೋರ್ಟ್, ಅಭಿಮಾನಿ, ಬ್ಲಾಕ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS