Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Karnatakta CM Siddaramaiah accuses centre of misusing I-T Department, minister Denies Raids

ಐಟಿ ದಾಳಿ ನಡೆದಿಲ್ಲ: ಹೆಚ್‏ಸಿ ಮಹದೇವಪ್ಪ ಹೇಳಿಕೆ; ಕೇಂದ್ರದಿಂದ ಐಟಿ ಇಲಾಖೆ ದುರ್ಬಳಕೆ: ಸಿಎಂ

Sushma Swaraj

ರಾಷ್ಟ್ರ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲು ಯುಎನ್ಎಸ್‏ಸಿಗೆ ಸುಷ್ಮಾ ಸ್ವರಾಜ್ ಒತ್ತಾಯ

Bihar, UP, MP, Rajastan, Chhattishgarh pulling down India

ಬಿಹಾರ, ಯುಪಿ, ರಾಜಸ್ತಾನ ಸೇರಿ ಐದು ರಾಜ್ಯಗಳಿಂದ ಭಾರತದ ಸಾಮಾಜಿಕ ಅಭಿವೃದ್ಧಿ ಕುಂಠಿತ: ನೀತಿ ಆಯೋಗ ಮುಖ್ಯಸ್ಥ

Salman Khurshid

ನಮ್ಮ ಪಕ್ಷದ ’ಕೈ’ಗೆ ಮುಸ್ಲಿಮರ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್

Pm narendra modi

ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಚಾಲನೆ

visa photo

ಹೆಚ್-1ಬಿ ಪತಿ , ಪತ್ನಿ ವೀಸಾ ಅನುಮತಿ ರದ್ದುಗೊಳಿಸಲು ಡೊನಾಲ್ಡ್ ಟ್ರಂಪ್ ಆಡಳಿತ ಚಿಂತನೆ

Susma swaraj, Chinese Foreign Minister Wang Yi

ಒನ್ ಬೆಲ್ಟ್ ಮತ್ತು ಒನ್ ರಸ್ತೆ ಯೋಜನೆಗೆ ಭಾರತದ ಬೆಂಬಲ ಪಡೆಯುವಲ್ಲಿ ಚೀನಾ ವಿಫಲ

Prajwal Devaraj

ನಿದ್ರಾರೋಗಿ ಪಾತ್ರದಲ್ಲಿ ಪ್ರಜ್ವಲ್ ದೇವರಾಜ್!

Saroj Khan

ಕಾಸ್ಟಿಂಗ್ ಕೌಚ್ ನ್ನು ಸಮರ್ಥಿಸಿಕೊಂಡ ನೃತ್ಯ ನಿರ್ದೇಶಕಿ ಸರೋಜ್ ಖಾನ್!

Vijayendra

ವರುಣಾ ಕ್ಷೇತ್ರದ ಟಿಕೆಟ್ ವಂಚಿತ ವಿಜಯೇಂದ್ರಗೆ ಬಿಜೆಪಿ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ಹುದ್ದೆ

Now, a male contraceptive pill successfully limits sperm activity without side effects

ವೀರ್ಯಾಣು ಚಟುವಟಿಕೆ ನಿಯಂತ್ರಿಸುವ ಪುರುಷರ ಗರ್ಭನಿರೋಧಕ ಮಾತ್ರೆ ಪರೀಕ್ಷೆ ಯಶಸ್ವಿ!

After howlers, umpires told to be more vigilant in IPL 2018: Sources

ತೀರ್ಪು ನೀಡುವಾಗ ಹೆಚ್ಚು ಜಾಗರೂಕರಾಗಿರಿ: ಅಂಪೈರ್ ಗಳಿಗೆ ರಾಜೀವ್ ಶುಕ್ಲಾ ಎಚ್ಚರಿಕೆ

Gadchiroli encounter: 11 more dead Maoists found in Maharashtra river; toll reaches 33

ಗಡ್ ಚಿರೋಲಿ ಎನ್ ಕೌಂಟರ್: ಮಹಾರಾಷ್ಟ್ರ ನದಿಯಲ್ಲಿ 11 ನಕ್ಸಲರ ಶವ ಪತ್ತೆ, ಸಾವಿನ ಸಂಖ್ಯೆ 33ಕ್ಕೆ ಏರಿಕೆ

ಮುಖಪುಟ >> ರಾಷ್ಟ್ರೀಯ

ಇಸ್ರೋ ಮತ್ತೊಂದು ಮೈಲಿಗಲ್ಲು: ಕಾರ್ಟೋಸ್ಯಾಟ್-2 ಸೇರಿದಂತೆ 31 ಉಪಗ್ರಹಗಳ ಉಡಾವಣೆ ಯಶಸ್ವಿ

Image for representational purpose only

ಸಾಂದರ್ಭಿಕ ಚಿತ್ರ

ನವದೆಹಲಿ: ಐತಿಹಾಸಿಕ ದಾಖಲೆಗಳ ಮೂಲದ ಇಡೀ ವಿಶ್ವದ ಗಮನ ಸೆಳೆಯುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಶುಕ್ರವಾರ ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾಗಿದ್ದು, ವಾತಾವರಣದ ಮೇಲೆ ನಿಗಾವಹಿಸುವ ಕಾರ್ಟೋಸ್ಯಾಟ್-2 ಉಪಗ್ರಹ ಸೇರಿದಂತೆ ಇತರ 31 ಉಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. 

ಕಾರ್ಟೋಸ್ಯಾಟ್-2 ಇಸ್ರೋದ 100ನೇ ಉಪಗ್ರಹವಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಡಾವಣಾ ನೆಲೆಯಿಂದ ಉಪಗ್ರಹಗಳನ್ನು ಹೊತ್ತು ಪಿಎಸ್ಎಲ್'ವಿ-ಸಿ40 ರಾಕೆಟ್ ನಭಕ್ಕೆ ಹಾರಿದೆ. 

ಇಂದು ಬೆಳಿಗ್ಗೆ 5.29ರಿಂದ ಉಪಗ್ರಹ ಉಡಾವಣೆ ಕಾರ್ಯ ಆರಂಭಗೊಂಡು, 9.29ಕ್ಕೆ ಸರಿಯಾಗಿ ಕಾರ್ಟೋಸ್ಯಾಟ್-2 ಸರಣಿಯ ಉಪ್ರಗ್ರಹವನ್ನು ಇಸ್ರೋ ಕಕ್ಷೆಗೆ ಹಾರಿಬಿಟ್ಟಿದೆ. 

ಇಸ್ರೋ ಉಡಾವಣೆ ಮಾಡಿರುವ ಉಪಗ್ರಹಗಳಲ್ಲಿ ಭಾರತದ 3, ಕೆನಡಾ, ಫಿನ್'ಲ್ಯಾಂಡ್, ಫ್ರಾನ್ಸ್, ಕೊರಿಯಾ, ಬ್ರಿಟನ್, ಅಮೆರಿಕದ ಒಟ್ಟು 28 ಉಪಗ್ರಹಗಳು ಸೇರಿವೆ. 

ಕಳೆದ ಬಾರಿ ಉಪಗ್ರಹ ಉಡಾವಣೆ ವೇಳೆ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿ ಇಂದು ಮತ್ತೆ ಉಪಗ್ರಹಮವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು. ದೇಶಕ್ಕೆ ಹೊಸ ವರ್ಷದ ಉಡುಗೊರೆ ನೀಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷ ಎ.ಎಸ್ ಕಿರಣ್ ಕುಮಾರ್ ಅವರು ಹೇಳಿದ್ದಾರೆ. 

ಆ.31ರಂದು ಪಿಎಸ್ಎಲ್'ವಿ ರಾಕೆಟ್ ಮೂಲಕ ಇಸ್ರೋ ನಡೆಸಿದ್ದ ಉಡಾವಣೆ ವಿಫಲಗೊಂಡಿತ್ತು. ಆ ಬಳಿಕ ಇದೀಗ ಮತ್ತೆ ಪಿಎಸ್ಎಲ್'ವಿ ಸರಣಿ ರಾಕೆಟ್ ನಲ್ಲಿಯೇ ಉಡಾವಣೆಗೆ ಮುಂದಾಗಿದ್ದರಿಂದಾಗಿ ಇದು ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. ಕಕ್ಷೆ ಸೇರಲಿರುವ ಉಪಗ್ರಹ ಕಾರ್ಟೋಸ್ಯಾಟ್2ಎಸ್; ಕಾರ್ಟೋಸ್ಯಾಟ್2ಎಸ್ ಇದೀಗ ಉಡಾವಣೆಯಾದ ಉಪಗ್ರಹವಾಗಿದೆ. ಈ ಸರಣಿಯಲ್ಲಿ ಉಡಾವಣೆಯಾಗುತ್ತಿರುವ ಏಲನೇ ಉಪಗ್ರಹ ಇದಾಗಿದೆ. 

ಪ್ರಸ್ತುತ ಉಡಾವಣೆಗೊಂಡು ಬಾಹ್ಯಾಕಾಶ ಸೇರಿರುವ ಉಪಗ್ರಹಳು ಭಾರತದ ವಿವಿಧ ಕ್ಷೇತ್ರಗಳ ಸಂವಹನಕ್ಕೆ ದೊಡ್ಡ ಶಕ್ತಿಯನ್ನು ನೀಡಲಿದೆ. ಹೆಚ್ಚು ಗುಣಮಟ್ಟದ ಫೋಟೋಗಳ ರವಾನೆ, ಶರವೇಗದ ಮಾಹಿತಿ ವಿನಿಮಯ, ಕಾಟೋಗ್ರಾಫಿಕ್ಸ್ ಅಪ್ಲಿಕೇಷನ್ಸ್, ಅರ್ಬನ್ ಮತ್ತು ರೂರಲ್ ಅಪ್ಲಿಕೇಷನ್ಸ್, ಕರಾವಳಿ ಭೂ ಬಳಕೆ ಹಾಗೂ ನಿಯಂತ್ರಣ, ನೀರು ಬಳಕೆ ರಸ್ತೆ ಸಂಪರ್ಕ ನಿಯಂತ್ರಣ ಹೀಗೆ ನಾನಾ ರೀತಿಯ ಅಧ್ಯಯನಕ್ಕೆ ಇದು ಸಹಕಾರಿಯಾಗಲಿದೆ. 
ಸಂಬಂಧಿಸಿದ್ದು...
Posted by: MVN | Source: The New Indian Express

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : ISRO, Sriharikota, Satellite, Cartosat-2, ಇಸ್ರೋ, ಶ್ರೀಹರಿಕೋಟಾ, ಸ್ಯಾಟಲೈಟ್, ಕಾರ್ಟೋಸ್ಯಾಟ್-2
English summary
India is all set to launch its 100th satellite ‘Cartosat-2 Series’ on Today from Andhra Pradesh's Sriharikota.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement